#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Health Tips: ಖಾಲಿ ಹೊಟ್ಟೆಗೆ ಹಾಗಲಕಾಯಿ ಜ್ಯೂಸ್​​​ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ?

ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ವೃದ್ದಿಸಲಿದೆ. ಇದು ಯಕೃತ್ತನ್ನು ಶುದ್ಧೀಕರಿಸುವ ಜೊತೆಗೆ ಪಿತ್ತರಸದ ಉತ್ಪಾದನೆಯನ್ನು ಹೆಚ್ಚು ಮಾಡಲು ಸಹಾಯಕವಾಗಲಿದೆ. ಜೀರ್ಣಕ್ರಿಯೆ ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಯಿಂದ ಬಳಲುತ್ತಿದ್ದವರು ಈ ಜ್ಯೂಸ್​ ಕುಡಿಯಬಹುದು. ಹಾಗಿದ್ದರೆ ಹಾಗಲಕಾಯಿ ಜ್ಯೂಸ್‌ ಯಾವ ಬೇರೆ ಯಾವ ಕಾಯಿಲೆಗಳಿಗೆಲ್ಲ ರಾಮಬಾಣ ನೋಡೋಣ ಬನ್ನಿ.

ಹಲವು ರೋಗಗಳಿಗೆ ರಾಮಬಾಣ ಹಾಗಲಕಾಯಿ ಜ್ಯೂಸ್!

ಹಾಗಲಕಾಯಿ ಜ್ಯೂಸ್‌

Profile Pushpa Kumari Feb 13, 2025 6:30 AM

ನವದೆಹಲಿ: ರುಚಿಯಲ್ಲಿ ಕಹಿಯಾದರೂ ಕೂಡ ಹಾಗಲಕಾಯಿ ಆರೋಗ್ಯಕ್ಕೆ ಸಿಹಿ ನೀಡುವ ತರಕಾರಿಗಳಲ್ಲಿ ಒಂದಾಗಿದೆ. ಅದರಲ್ಲೂ ಆಯುರ್ವೇದ ಶಾಸ್ತ್ರದಲ್ಲಿ ಬೆಳಗಿನ ಸಮಯದಲ್ಲಿ ಹಾಗಲ ಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಬಹುತೇಕ ಜನರು ಹಾಗಲಕಾಯಿ ಎಂದಾಗ ದೂರ ಸರಿಯುತ್ತಾರೆ‌. ಆದರೆ ಆರೋಗ್ಯ ತಜ್ಞರ ಪ್ರಕಾರ ಹಲವಾರು ಕಾಯಿಲೆಗಳಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಲ್ಲುಗಳು ಮುಂತಾದ ದೀರ್ಘಕಾಲದ ಆರೋಗ್ಯ ಸ್ಥಿತಿಗಳನ್ನು ಸುಧಾರಿಸಲು ಹಾಗಲಕಾಯಿ ಜ್ಯೂಸ್ ಸಹಾಯಕವಾಗಲಿದ್ದು ಏನೆಲ್ಲಾ ಆರೋಗ್ಯ ಪ್ರಯೋಜನ ಇದೆ? ಇದನ್ನು ಕುಡಿಯುವುದರಿಂದ ಆಗುವ ಲಾಭಗಳೇನು ಎಂಬುದರ ಮಾಹಿತಿ ಇಲ್ಲಿದೆ ನೋಡಿ.(Health Tips)

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ವೃದ್ದಿಸಲಿದೆ. ಇದು ಯಕೃತ್ತನ್ನು ಶುದ್ಧೀಕರಿಸುವ ಜೊತೆಗೆ ಪಿತ್ತರಸದ ಉತ್ಪಾದನೆಯನ್ನು ಹೆಚ್ಚು ಮಾಡಲು ಸಹಾಯಕ ವಾಗಲಿದೆ. ಜೀರ್ಣಕ್ರಿಯೆ ಗ್ಯಾಸ್ಟ್ರಿಕ್‌ ನಂತಹ ಸಮಸ್ಯೆಯಿಂದ ಬಳಲುತ್ತಿದ್ದವರು ಈ ಜ್ಯೂಸ್​ ಕುಡಿಯಬಹುದು.

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯಕ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯ ಈ ಹಾಗಲಕಾಯಿ ಜ್ಯೂಸ್ ಗಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ಬೆಳಗಿನ ದಿನಚರಿಯಲ್ಲಿ ಹಾಗಲಕಾಯಿ ರಸವನ್ನು ಸೇರಿಸುವುದು ನೈಸರ್ಗಿಕ ಮಾರ್ಗವಾಗಿದೆ.

ರೋಗನಿರೋಧಕ ಶಕ್ತಿ ವೃದ್ಧಿ: ಹಾಗಲಕಾಯಿ ಜ್ಯೂಸ್  ರೋಗ ನಿರೋಧಕ ಶಕ್ತಿಯನ್ನು ವೃದ್ಧಿ ಮಾಡಲಿದೆ. ಇದರಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಇರಲಿದ್ದು ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ . ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಯಾವುದೇ ರೋಗ ಹರಡದಂತೆ ಶಕ್ತಿಯುತ ರಕ್ಷಣಾ ಕಾರ್ಯವಿಧಾನಗಳಾಗಿ ಕಾರ್ಯನಿರ್ವಹಿಸುತ್ತವೆ. 

ತೂಕ ನಿಯಂತ್ರಣ: ತೂಕ ನಿಯಂತ್ರಣ ಮಾಡಿಕೊಳ್ಳಬೇಕು ಎಂದು ಇದ್ದವರು ದಿನ ನಿತ್ಯ ಹಾಗಲಕಾಯಿ ಜ್ಯೂಸ್ ಸೇವಿಸಿ. ಹಾಗಲಕಾಯಿ ಜ್ಯೂಸ್ ಕುಡಿಯುವು ದರಿಂದ  ಹಸಿವನ್ನು ನಿಯಂತ್ರಿಸುವ ಶಕ್ತಿ ಹೊಂದಿರಲಿದ್ದು ಇದರಿಂದಾಗಿ ನೀವು ದೀರ್ಘಕಾಲ ಹಸಿವು ಅನುಭವಿಸುವುದಿಲ್ಲ ಮತ್ತು ತೂಕ ಕಡಿಮೆ ಮಾಡಲು ಇದು ಸಹಕಾರಿಯಾಗಿದೆ. 

ರಕ್ತವನ್ನು ಶುದ್ಧೀಕರಿಸುವುದು: ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸವನ್ನು ಸೇವಿಸುವುದರಿಂದ ನಿಮ್ಮ ದೇಹದಿಂದ ಕೆಟ್ಟ ವಿಷಕಾರಿ ಅಂಶವನ್ನು ಹೊರಹಾಕಲು ಸಹಾಯ ಮಾಡಲಿದ್ದು ದೇಹದ ರಕ್ತವನ್ನು ಅಚ್ಚುಕಟ್ಟಾಗಿ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಸ್ವಚ್ಛ ಮಾಡಲು ಸಹಕಾರಿ ಯಾಗಲಿದ್ದು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ: Health Tips: ದೈನಂದಿನ ಆಹಾರದಲ್ಲಿ ಬೀಟ್ರೂಟ್ ಸೇರಿಸಲು ಇಲ್ಲಿವೆ ರುಚಿಕರ ವಿಧಾನ

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ: ಮೊದಲಿಗೆ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಸಣ್ಣ ತುಂಡುಗಳನ್ನಾಗಿ ಮಾಡಿ. ಬಳಿಕ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಬೇಕಾದ ಪ್ರಮಾಣದ ಉಪ್ಪು ಸೇರಿಸಿ 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಹಾಗಲಕಾಯಿ ತುಂಡುಗಳನ್ನು ತೆಗೆದುಕೊಂಡು ಮಿಕ್ಸರ್ ಗೆ ಹಾಕಿ ಅದಕ್ಕೆ ನೀರು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಉಪ್ಪು, ಅರಿಶಿನ ಮತ್ತು ನಿಂಬೆ ರಸವನ್ನು ಸೇರಿಸಿದರೆ ಜ್ಯೂಸ್ ಸವಿಯಲು ಸಿದ್ದ