- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೋಳಿಯ ಸಂಭ್ರಮದ ನಂತರ ತ್ವಚೆ ಹಾಗೂ ಕೂದಲು ಮಾಸುತ್ತದೆ. ನೋಡಲು ನಿಸ್ತೇಜವಾದಂತೆ ಕಾಣಿಸುತ್ತದೆ. ಸೈಡ್ ಎಫೆಕ್ಟ್ ಕಾಣಿಸಲಾರಂಭಿಸುತ್ತದೆ. ಹಾಗಾಗಿ, ಹೆಚ್ಚು ಸಮಯ ವ್ಯಯ ಮಾಡದೇ ಮನೆಯಲ್ಲೆಒಂದಿಷ್ಟು ಕೇರ್ ತೆಗೆದುಕೊಳ್ಳಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ನಿಶಾ. ಈ ಕುರಿತಂತೆ ಒಂದಿಷ್ಟು ಟಿಪ್ಸ್ (Holi Beauty Tips) ನೀಡಿದ್ದಾರೆ. ಹೋಳಿಯಾಟದ ನಂತರ ಮುಖದ ಅಂದ ಕಳೆಗುಂದುತ್ತದೆ. ಬಣ್ಣಗಳು ತ್ವಚೆಯ ಚರ್ಮವನ್ನು ಒರಟುಗೊಳಿಸುತ್ತವೆ. ಸುಕೋಮಲವಾದ ತ್ವಚೆ ಕೊಂಚ ಹಾಳಾಗುತ್ತದೆ. ಜತೆಗೆ ಬಣ್ಣ ಮುಖದಲ್ಲಿನ ರಂಧ್ರದಲ್ಲಿ ಸೇರಿ, ಮೊಡವೆಗಳಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಮುಖದ ಆರೈಕೆ ಅತ್ಯಗತ್ಯ. ಮುಖವನ್ನು ಹೆಚ್ಚು ತೊಳೆಯುವ ಬದಲು, ಸ್ಟೀಮ್ ತೆಗೆದುಕೊಳ್ಳಿ. ಕ್ಲೆನ್ಸಿಂಗ್ ಮಾಡಿ. ಒಂದೆರೆಡು ದಿನ ನಿರಂತರವಾಗಿ ಕ್ಲೆನ್ಸಿಂಗ್ ರೂಢಿಸಿಕೊಳ್ಳಿ. ಹರ್ಬಲ್ ಫೇಶಿಯಲ್ ಮಾಡಿ. ಮುಖ ನಿಧಾನಗತಿಯಲ್ಲಿ ಮತ್ತೊಮ್ಮೆ ಮೊದಲಿನಂತಾಗುತ್ತದೆ.

ಕ್ಲೆನ್ಸಿಂಗ್ ಮಾಡುವುದು ಹೀಗೆ
ಕೊಂಚ ತಣ್ಣೀರಿಗೆ, ಒಂದು ಚಮಚ ಆಲಿವ್ ಆಯಿಲ್, ಸ್ವಲ್ಪ ಹಾಲು ಸೇರಿಸಿ. ಇದರಲ್ಲಿ, ಹತ್ತಿ ಅದ್ದಿ, ಮುಖದ ತ್ವಚೆಯನ್ನು ಸರಿ ಸುಮಾರು 1 ವಾರದ ಕಾಲ ಕ್ಲೆನ್ಸ್ ಮಾಡಿ. ತ್ವಚೆ ಮೃದುವಾಗುವುದು.

ಕೂದಲ ಆರೈಕೆ ಹೀಗೆ
ಹೋಳಿ ಆಡಿದ ನಂತರ ಪ್ರತಿಯೊಬ್ಬರ ಕೂದಲಲ್ಲೂ ಬಣ್ಣದ ಸಣ್ಣ ಸಣ್ಣ ಪುಡಿಯಂತವು ಸೇರಿಕೊಂಡಿರುತ್ತವೆ. ಹಾಗಾಗಿ ಮೊದಲಿಗೆ ತಲೆಕೂದಲನ್ನು ಸಾದಾ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕೊನೆಯಲ್ಲಿ ನಿಂಬೆರಸವನ್ನು ನೀರಿಗೆ ಮಿಕ್ಸ್ ಮಾಡಿ ಕೂದಲನ್ನು ನಾಜೂಕಾಗಿ ತೊಳೆಯಿರಿ. ಹರ್ಬಲ್ ಶಾಂಪೂ ಬಳಸಿ. ಒಂದೆರೆಡು ದಿನ ಹೀಗೆ ಮಾಡಿದಲ್ಲಿ ಕೂದಲು ಮೊದಲಿನಂತಾಗುವುದು. ಒಣಗಿಂತಾಗಿರುವ ಕೂದಲಿಗೆ ಪ್ರತಿ ಬಾರಿ ಕಂಡಿಷನರ್ ಮಾಡುವುದು ಅಗತ್ಯ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ನಿಶಾ.

ಫಾಲೋ ಮಾಡಿ
* ಹೋಳಿಯಾಟದ ನಂತರ ಮುಖವನ್ನು ಉಜ್ಜಬೇಡಿ.
* ಕೂದಲನ್ನು ಪದೇ ಪದೇ ಮೂರ್ನಾಲ್ಕು ಬಾರಿ ಶಾಂಪೂವಿನಿಂದ ತೊಳೆಯಬೇಡಿ.
* ಮುಖದ ಮೇಲಿರುವ ಬಣ್ಣವನ್ನು ಸೋಪಿನಿಂದ ತಿಕ್ಕಬೇಡಿ.
* ಕೆಮಿಕಲ್ ಬಳಸದೇ ಹರ್ಬಲ್ ಕೇರ್ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Holi Dupatta Fashion 2025: ಹೋಳಿ ಫೆಸ್ಟಿವ್ ಸೀಸನ್‌ನಲ್ಲಿ ಡಿಸೈನರ್‌ವೇರ್ಸ್‌ಗೆ ರಂಗುರಂಗಿನ ದುಪಟ್ಟಾ ಸಾಥ್!