Holi Dupatta Fashion 2025: ಹೋಳಿ ಫೆಸ್ಟಿವ್ ಸೀಸನ್‌ನಲ್ಲಿ ಡಿಸೈನರ್‌ವೇರ್ಸ್‌ಗೆ ರಂಗುರಂಗಿನ ದುಪಟ್ಟಾ ಸಾಥ್!
Holi Dupatta Fashion 2025: ಹೋಳಿ ಫೆಸ್ಟಿವ್ ಸೀಸನ್‌ನಲ್ಲಿ ರಂಗು ರಂಗಿನ ಯೂನಿಸೆಕ್ಸ್ ದುಪಟ್ಟಾ ಹಾಗೂ ಮೆನ್ಸ್ ಸ್ಟೋಲ್‌ಗಳು ಟ್ರೆಂಡಿಯಾಗಿವೆ. ರಂಗಿನಾಟಕ್ಕೆ ಧರಿಸುವ ಔಟ್‌ಫಿಟ್ಸ್‌ಗೆ ಇವು ಸಾಥ್ ನೀಡುತ್ತಿವೆ. ಅಂದಹಾಗೆ, ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಹೇಗೆಲ್ಲಾ ಧರಿಸಬಹುದು? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ವಿವರ.
ಚಿತ್ರಕೃಪೆ: ಪಿಕ್ಸೆಲ್ -
ಶೀಲಾ ಸಿ ಶೆಟ್ಟಿ
Mar 13, 2025 8:00 AM
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೋಳಿ ಫೆಸ್ಟಿವ್ ಸೀಸನ್‌ನಲ್ಲಿ ರಂಗು ರಂಗಿನ ಕಲರ್‌ಫುಲ್ ದುಪಟ್ಟಾಗಳು (Holi Dupatta Fashion 2025) ಹೋಳಿ ಸೆಲೆಬ್ರೇಷನ್‌ಗೆ ಜತೆಯಾಗಲು ಮಾರುಕಟ್ಟೆಗೆ ಕಾಲಿಟ್ಟಿವೆ. ಮಲ್ಟಿ ಕಲರ್‌ನ ಈ ದುಪಟ್ಟಾಗಳು ಫೆಸ್ಟೀವ್ ಸೀಸನ್‌ನಲ್ಲಿ ಎಥ್ನಿಕ್ ಲುಕ್ ನೀಡಲು ಸಜ್ಜಾಗಿದ್ದು, ಯುವಕ-ಯುವತಿಯರಿಬ್ಬರಿಗೂ ಮ್ಯಾಚ್ ಆಗುವಂತಹ ಯೂನಿಸೆಕ್ಸ್ ಡಿಸೈನ್‌ನಲ್ಲಿ ಆಗಮಿಸಿವೆ. ಡ್ರೆಸ್‌ಗಳಿಗೆ ಎಥ್ನಿಕ್ ಲುಕ್ ನೀಡಲು ಉಡುಪಿನೊಂದಿಗೆ ರೈನ್ಬೋ ಶೇಡ್ ಅಥವಾ ಮಲ್ಟಿ ಕಲರ್‌ನ ದುಪಟ್ಟಾ ಅಥವಾ ಸ್ಟೋಲ್ ಧರಿಸಬಹುದು. ಇದು ಔಟ್‌ಫಿಟ್‌ನೊಂದಿಗೆ ಧರಿಸಿದಾಗ ಕಲರ್‌ಫುಲ್ ಆಗಿ ಕಾಣಿಸಲು ಸಹಾಯ ಮಾಡುತ್ತವೆ. ರಂಗು ರಂಗಾದ ದುಪಟ್ಟಾ ಹಾಗೂ ಸ್ಟೋಲ್‌ಗಳು ಫೋಟೋಗಳಲ್ಲಿಯೂ ಎದ್ದು ಕಾಣಿಸುತ್ತವೆ. ಹೋಳಿಯಾಡುವಾಗ ಧರಿಸುವ ಔಟ್‌ಫಿಟ್‌ನೊಂದಿಗೆ ಇವನ್ನು ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್.
ಯೂನಿಸೆಕ್ಸ್ ದುಪಟ್ಟಾ ಆಯ್ಕೆ
ಹಳದಿ, ಕೆಂಪು, ಹಸಿರು, ನೀಲಿ ಹೀಗೆ ನಾನಾ ವರ್ಣಗಳು ಮಿಕ್ಸ್ ಮ್ಯಾಚ್ ಆದ ಪ್ರಿಂಟ್‌ನವು, ಬಾಂದನಿ, ಕ್ರಶ್ ಹಾಗೂ ಅರ್ಗಾನ್ಜಾ ಫ್ಯಾಬ್ರಿಕ್‌ನವು, ಬಿಳಿ ಶೇಡ್‌ನ ಯಾವುದೇ ಎಥ್ನಿಕ್ ಔಟ್‌ಫಿಟ್ ಜತೆಗೆ ಮ್ಯಾಚ್ ಮಾಡಬಹುದು.
ದುಪಟ್ಟಾ & ಸ್ಟೋಲ್ ಪ್ರಿಯರಿಗೆ ಟಿಪ್ಸ್
- ಇವನ್ನು ಸೂಕ್ತ ನಿರ್ವಹಣೆ ಮಾಡಿದಲ್ಲಿ ಮರು ಬಳಕೆ ಮಾಡಬಹುದು.
- ಫೋಟೋಶೂಟ್‌ಗಳಲ್ಲಿ ಆಕರ್ಷಕವಾಗಿ ಕಾಣುತ್ತವೆ.
- ಮಲ್ಟಿ ಕಲರ್‌ನದ್ದು ಯಾವ ಉಡುಪಿಗೆ ಬೇಕಾದರೂ ಮ್ಯಾಚ್ ಮಾಡಬಹುದು.
- ಶೆರ್ವಾನಿ ಹಾಗೂ ಕುರ್ತಾಗೂ ಧರಿಸಬಹುದು.
- ಹುಡುಗರಿಗೆ ಸ್ಟೋಲ್ ಉತ್ತಮ. ಯಾಕೆಂದರೆ ದುಪಟ್ಟಾಗಳು ಉದ್ದನಾಗಿರುತ್ತವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Winter Season End Sale 2024: ವಿಂಟರ್ ಸೀಸನ್ ಎಂಡ್ ಸೇಲ್‌ನಲ್ಲಿ ಶಾಪಿಂಗ್ ಮಾಡುವುದು ಹೇಗೆ?