Health Tips: ಆರೋಗ್ಯವಂತ ವ್ಯಕ್ತಿಗೆ ಪ್ರತಿದಿನ ಎಷ್ಟು ಪ್ರಮಾಣದ ಪ್ರೋಟೀನ್ ಅಗತ್ಯ?
ಒಬ್ಬ ಆರೋಗ್ಯವಂತ ವ್ಯಕ್ತಿಗೆ ಎಷ್ಟು ಪ್ರೋಟೀನ್ ಅಗತ್ಯವಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು.ಪ್ರತಿ ಕಿಲೋಗ್ರಾಂ ದೇಹದ ತೂಕಕ್ಕೆ ದಿನಕ್ಕೆ ಕನಿಷ್ಠ 0.8 ಗ್ರಾಂ ಪ್ರೋಟೀನ್ ಅನ್ನು ಪಡೆಯುವುದು ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಒಬ್ಬ ಪುರುಷನು ದಿನಕ್ಕೆ ಕನಿಷ್ಠ 55 ಗ್ರಾಂ ಪ್ರೋಟೀನ್ ಮತ್ತು ಮಹಿಳೆ 45 ಗ್ರಾಂ ಗಳಷ್ಟು ಪ್ರೋಟೀನ್ ಸೇವನೆ ಮಾಡಬೇಕು.
ನವ ದೆಹಲಿ: ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳಲು (Health Tips) ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಬಹಳ ಅಗತ್ಯ. ಅದರ ಲ್ಲೂ ಪ್ರೋಟೀನ್ ಬಹಳ ಅಗತ್ಯ ವಾಗಿದ್ದು ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಸಿಗದೆ ಇದ್ದರೆ ದೇಹದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು. ಪ್ರೋಟೀನ್ ಸೇವನೆಯು ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
ಪ್ರೋಟೀನ್ ಕೊರತೆ ಉಂಟಾದರೆ ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರ ಕೊರತೆಯು ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮೂಳೆಗಳನ್ನು ದುರ್ಬಲ ಗೊಳಿಸಬಹುದು. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಅಗತ್ಯವಾಗಿ ಬೇಕು.
ಇಂದು ಆರೋಗ್ಯಕರ ಜೀವನ ಶೈಲಿಯಲ್ಲಿ ಪ್ರೋಟೀನ್ ಸೇವನೆಯು ವಿಶೇಷವಾಗಿ ಯುವಜನರಲ್ಲಿ ಪ್ರಮುಖ ಚರ್ಚೆಯ ವಿಚಾರ ವಾಗಿದೆ ಒಬ್ಬ ಆರೋಗ್ಯವಂತ ವ್ಯಕ್ತಿಗೆ ಎಷ್ಟು ಪ್ರೋಟೀನ್ ಅಗತ್ಯವಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು.ಪ್ರತಿ ಕಿಲೋಗ್ರಾಂ ದೇಹದ ತೂಕಕ್ಕೆ ದಿನಕ್ಕೆ ಕನಿಷ್ಠ 0.8 ಗ್ರಾಂ ಪ್ರೋಟೀನ್ ಅನ್ನು ಪಡೆಯುವುದು ಮುಖ್ಯ ಎಂದು ತಜ್ಞರು ಹೇಳುತ್ತಾರೆ.ಒಬ್ಬ ಪುರುಷನು ದಿನಕ್ಕೆ ಕನಿಷ್ಠ 55 ಗ್ರಾಂ ಪ್ರೋಟೀನ್ ಮತ್ತು ಮಹಿಳೆ 45 ಗ್ರಾಂ ಗಳಷ್ಟು ಪ್ರೋಟೀನ್ ಸೇವನೆ ಮಾಡಬೇಕು.
ಪ್ರೋಟೀನ್ ಹೆಚ್ಚಿಸಲು ಈ ಆಹಾರ ಬಳಕೆ ಮಾಡಿ:
ಹಾಲು ಮತ್ತು ಮೊಸರು: ಪ್ರೋಟೀನ್ ಕೊರತೆಯನ್ನು ನೀಗಿಸಲು ನೀವು ಹಾಲು ಮತ್ತು ಮೊಸರನ್ನು ಸೇವನೆ ಮಾಡಿದರೆ ಉತ್ತಮ. ಪ್ರತಿದಿನ ಹಾಲು ಕುಡಿಯು ವುದರಿಂದ ಪ್ರೋಟೀನ್ ಕೊರತೆಯನ್ನು ನೀವು ತಪ್ಪಿಸಬಹುದು.
ಮೀನು: ಮೀನು ಪ್ರೋಟಿನ್ ಅಂಶ ವುಳ್ಳ ಅತ್ಯುತ್ತಮ ಆಹಾರ ವಾಗಿದ್ದು ವಿವಿಧ ಪೋಷಕಾಂಶ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ಹಾಗಾಗಿ ಮೀನು ಕೋಳಿ ಮಾಂಸದಂತಹ ಆಹಾರ ಸೇವನೆಯಿಂದ ಪ್ರೋಟೀನ್ ಹೆಚ್ಚಿಸಬಹುದು
ಕಡಲೆಕಾಯಿ: ಕಡಲೆಕಾಯಿಯಲ್ಲಿ ಪ್ರೋಟೀನ್, ಮಿಟಮಿನ್ ಗಳು ಹೆಚ್ಚು ಇರಲಿದ್ದು ಶೇಂಗಾ ಬೀಜವನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಸಿಗಲಿದೆ.
ಇದನ್ನು ಓದಿ:Health Tips: ನಿಯಮಿತವಾಗಿ ಮೊಸರು ಸೇವಿಸಿದ್ರೆ ಆರೋಗ್ಯ ಹಸುರು! ಏನೆಲ್ಲಾ ಪ್ರಯೋಜನಗಳಿವೆ?
ಮೊಟ್ಟೆ ಸೇವನೆ ಮಾಡಿ:
ಮೊಟ್ಟೆ ಅತಿ ಹೆಚ್ಚಿನ ಪ್ರೋಟಿನ್ ಅಂಶವನ್ನು ಹೊಂದಿರುವ ಆಹಾರ ವಾಗಿದ್ದು ಖನಿಜಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶ ಮತ್ತು ದೇಹಕ್ಕೆ ಅಗತ್ಯ ಇರುವ ಆರೋಗ್ಯಕರ ಅಂಶ ಮೊಟ್ಟೆಯಲ್ಲಿದೆ
ಆಲೂಗಡ್ಡೆಯನ್ನು ಸೇವಿಸಿ:
ಆಲೂಗಡ್ಡೆ ಯನ್ನು ಬೇಯಿಸಿ ಮ್ಯಾಶ್ ಮಾಡಿ ತಿಂದರೆ ಹೆಚ್ಚಿನ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಸಿಗಲಿದೆ. ಅಷ್ಟೇ ಅಲ್ಲದೆ ಸೋಯಾಬೀನ್, ಬೇಳೆ ನವಣೆ, ಒಣ ಬೀಜ,ಚಿಯಾ ಬೀಜಗಳು, ಕುಂಬಳಕಾಯಿ ಬೀಜಗಳು ಸೇರಿದಂತೆ ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವನೆ ಮಾಡುವ ಮೂಲಕ ಸಾಕಷ್ಟು ಪ್ರಮಾಣದ ಪ್ರೋಟಿನ್ ಪಡೆಯಬಹುದು.