ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಳಿಗಾಲದ ಸೂಪರ್‌ಫುಡ್ ಗಳ ಪೂರ್ಣ ಲಾಭ ಪಡೆಯಬೇಕೆ? ಈ ರೀತಿಯಾಗಿ ಸೇವಿಸಿ!

Health Tips: ನಮ್ಮ ದೇಹದ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ನಾವು ಕೆಲವೊಂದು ಆಹಾರಗಳನ್ನು ಸೇವನೆ ಮಾಡಬೇಕಾಗಿ ಬರುತ್ತದೆ. ಅದರಲ್ಲೂ ಈ ಸಮಯದಲ್ಲಿ ನಾವು ಆಯ್ಕೆ ಮಾಡಿಕೊಳ್ಳುವ ಪ್ರಮುಖ ಆಹಾರ ಅಂದ್ರೆ ಅರಿಶಿನ, ನೆಲ್ಲಿಕಾಯಿ, ಶುಂಠಿ ಮತ್ತು ಹಸಿರು ಸೊಪ್ಪುಗಳ ಬಳಕೆ ಹೆಚ್ಚಾಗಿರುತ್ತದೆ.

ಚಳಿಗಾಲದ ಆರೋಗ್ಯಕರ ಆಹಾರಗಳನ್ನು ಈ ರೀತಿಯಾಗಿ ಸೇವಿಸಿ!

ಸಂಗ್ರಹ ಚಿತ್ರ -

Profile
Pushpa Kumari Jan 6, 2026 7:00 AM

ದೆಹಲಿ,ಡಿ.5: ಚಳಿಗಾಲ ಬಂತೆಂದರೆ (Winter Tips) ಸಾಕು. ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಡಲು ಆರಂಭವಾಗುತ್ತವೆ. ಹಾಗಾಗಿ ನಮ್ಮ ದೇಹದ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ನಾವು ಕೆಲವೊಂದು ಆಹಾರಗಳನ್ನು ಸೇವನೆ ಮಾಡಬೇಕಾಗಿ ಬರುತ್ತದೆ. ಅದರಲ್ಲೂಈ ಸಮಯದಲ್ಲಿ ನಾವು ಆಯ್ಕೆ ಮಾಡಿಕೊಳ್ಳುವ ಪ್ರಮುಖ ಆಹಾರ ಅಂದ್ರೆ ಅರಿಶಿನ, ನೆಲ್ಲಿಕಾಯಿ, ಶುಂಠಿ ಮತ್ತು ಹಸಿರು ಸೊಪ್ಪುಗಳ ಬಳಕೆ ಹೆಚ್ಚಾಗಿರುತ್ತದೆ. ಇವುಗಳಲ್ಲಿ ರೋಗನಿರೋಧಕ, ಶಕ್ತಿಯನ್ನು ಹೆಚ್ಚಿಸುವ ಅದ್ಭುತ ಗುಣಗಳಿದ್ದು ಕೇವಲ ಇವುಗಳನ್ನು ಸೇವಿಸಿದರೆ ಸಾಲದು. ಅವುಗಳನ್ನು ಸರಿಯಾಗಿ ಬಳಸುವ ಕ್ರಮ ಕೂಡ ತಿಳಿದಿರಬೇಕು. ನಮ್ಮ ದೇಹವು ಇವುಗಳಲ್ಲಿರುವ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಬೇಕಾದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದು ಕೂಡ ಮುಖ್ಯವಾಗಿರುತ್ತದೆ.

ಅರಿಶಿನದ ಜೊತೆ ಕಾಳುಮೆಣಸು ಸೇವಿಸಿ

ಅರಿಶಿನದಲ್ಲಿರುವ ಸಕ್ರಿಯ ಸಂಯುಕ್ತವಾದ ಕರ್ಕ್ಯುಮಿನ್ ಕಡಿಮೆ ನೈಸರ್ಗಿಕ ಜೈವಿಕ ಲಭ್ಯತೆ ಯನ್ನು ಹೊಂದಿದೆ‌. ಹಾಗಾಗಿ ತಜ್ಞರ ಪ್ರಕಾರ, ಅರಿಶಿನದ ಜೊತೆಗೆ ಒಂದು ಚಿಟಿಕೆ ಕಾಳುಮೆಣಸು ಆ್ಯಡ್ ಮಾಡಿ ಸೇವಿಸಿದರೆ ಅದರಲ್ಲಿರುವ 'ಪೈಪರಿನ್' ಅಂಶವು ಅರಿಶಿನದ ಹೀರಿಕೊಳ್ಳುವಿಕೆಯನ್ನು ನೂರರಷ್ಟು ಹೆಚ್ಚಿಸುತ್ತದೆ..ಅದರ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಪ್ರಯೋಜನಗಳನ್ನು ಕೂಡ ದೇಹದಲ್ಲಿ ಹೆಚ್ಚಿಸುತ್ತದೆ.

ಅರಿಶಿನ ಮತ್ತು ತುಪ್ಪದ ಬಳಕೆ

ತುಪ್ಪ, ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯಂತಹ ಆರೋಗ್ಯಕರ ಕೊಬ್ಬಿನೊಂದಿಗೆ ಅರಿಶಿನವನ್ನು ಸೇರಿಸುವುದರಿಂದ ಅದು ಕರುಳಿನ ಒಳಪದರದ ಮೂಲಕ ರಕ್ತಪ್ರವಾಹಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಹಾದುಹೋಗಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಸೇವಿಸುವ ಹಾಲು ಅಥವಾ ಅಡುಗೆಗೆ ಅರಿಶಿನ ಹಾಕುವಾಗ ಸ್ವಲ್ಪ ತುಪ್ಪ ಸೇರಿಸುವುದನ್ನು ಮರೆಯದಿರಿ.

Health Tips: ಮೊಟ್ಟೆಗಳ ಸೇವನೆ ಮಿತವಾಗಿದ್ದರೆ ಸುರಕ್ಷಿತ; ತಜ್ಞರ ಕಿವಿಮಾತು ಇಲ್ಲಿದೆ

ನೆಲ್ಲಿಕಾಯಿ ಮತ್ತು ಕಾಳುಮೆಣಸಿನ ಮಿಶ್ರಣ ಸೇವಿಸಿ

ಆಮ್ಲವು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ‌. ಇದು ರೋಗನಿರೋಧಕ ಶಕ್ತಿ, ಕಬ್ಬಿಣದ ಹೀರಿಕೊಳ್ಳುವಿಕೆ ಮತ್ತು ಚರ್ಮದ ಆರೋಗ್ಯವನ್ನು ಬೆಂಬಲಿಸುತ್ತದೆ. ಹಾಗಾಗಿ ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ಕಾಳುಮೆಣಸಿನೊಂದಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುವ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.

ಕಬ್ಬಿಣಾಂಶದ ಆಹಾರದ ಜೊತೆ ವಿಟಮಿನ್ ಸಿ ಪದಾರ್ಥಗಳನ್ನು ಸೇವಿಸಿ

ಪಾಲಕ್, ಮೆಂತ್ಯ ಮತ್ತು ಬಾಜ್ರಾದಂತಹ ಸಸ್ಯ ಆಹಾರಗಳಲ್ಲಿ ಕಬ್ಬಿಣಾಂಶ ಹೆಚ್ಚಾಗಿರುತ್ತದೆ. ಅದರ ಜೊತೆ ಲಿಂಬೆರಸ ಅಥವಾ ನೆಲ್ಲಿಕಾಯಿಯನ್ನು ಬಳಸಿದರೆ ಕಬ್ಬಿಣಾಂಶವು ದೇಹಕ್ಕೆ ಸರಿಯಾಗಿ ಹೀರಲು ಸಹಾಯ ಮಾಡುತ್ತದೆ.

ಬಿಸಿ ಮಾಡಿ ಸೇವಿಸಿ

ಅಹಾರ ಪದಾರ್ಥಗಳನ್ನಜ ಬೇಯಿಸುವ ಮೊದಲು ಕರಿಮೆಣಸು ಮತ್ತು ಶುಂಠಿಯನ್ನು ಒಟ್ಟಿಗೆ ಲಘುವಾಗಿ ಹುರಿಯುವುದರಿಂದ ಅವುಗಳ ಪ್ರಯೋಜನಕಾರಿ ಸಂಯುಕ್ತಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಕರುಳಿನಲ್ಲಿ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಈ ಸಾಂಬಾರ ಪದಾರ್ಥಗಳ ಬಳಕೆ ಮಾಡಿ

ಜೀರಿಗೆ, ಶುಂಠಿ ಮತ್ತು ಸೋಂಪು ಇವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇವುಗಳನ್ನು ಬಳಸುವುದರಿಂದ ನಾವು ತಿಂದ ಆಹಾರದ ಸತ್ವಗಳು ವ್ಯರ್ಥವಾಗದೆ ಇರಲು ಸಹಾಯ ಮಾಡುತ್ತದೆ.

ಮೊಸರು ಮತ್ತು ಪ್ರೊಬಯಾಟಿಕ್ಸ್ ಸೇವನೆ

ನಮ್ಮ ಆಹಾರದಲ್ಲಿ ಮೊಸರನ್ನು ಬಳಕೆ ಮಾಡುವುದರಿಂದ ಕರುಳಿನ ಆರೋಗ್ಯ ಉತ್ತಮ ವಾಗಿರುತ್ತದೆ. ಕರುಳಿನ ಆರೋಗ್ಯ ಉತ್ತಮವಾಗಿದ್ದರೆ ವಿಟಮಿನ್‌ಗಳು ಮತ್ತು ಮಿನರಲ್ಸ್‌ಗಳನ್ನು ದೇಹವು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.