ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡಾ.ಬಾತ್ರಾಸ್ ನಿಂದ ಚುಚ್ಚದ ಭಾರತದ ಮೊದಲ ಎಕ್ಸೊಸೋಮ್ ಆಧರಿತ ಚರ್ಮದ ಪುನಶ್ಚೇತನ ಚಿಕಿತ್ಸೆ ಪ್ರಾರಂಭ

ಡಾ.ಬಾತ್ರಾಸ್ ಎಕ್ಸ್.ಒ.ಡರ್ಮಾ ಎಕ್ಸೊಸೋಮ್ ಗಳ ವಿಜ್ಞಾನದಿಂದ ಸನ್ನದ್ಧವಾಗಿದ್ದು ಅದು ಆಳವಾದ ಜೀವಕೋಶದ ಮಟ್ಟದಲ್ಲಿ ಜೈವಿಕ ಸಂದೇಶವಾಹಕಗಳನ್ನು ಗುರಿಯಾಗಿಸುತ್ತವೆ. ಈ ಕಿರಿದಾದ ಕಣಗಳು ಚರ್ಮದ ಆಳದ ಪದರಗಳಿಗೆ ವಿಸ್ತರಿಸುತ್ತವೆ ಮತ್ತು ನೈಸರ್ಗಿಕ ರಿಪೇರಿ ಮತ್ತು ಪುನಶ್ಚೇತನ ಪ್ರಕ್ರಿಯೆ ಯನ್ನು ಸಕ್ರಿಯಗೊಳಿಸಿ ದೀರ್ಘಕಾಲ ಉಳಿಯುವ ಫಲಿತಾಂಶಗಳನ್ನು ನೀಡುತ್ತವೆ.

ಮೊದಲ ಎಕ್ಸೊಸೋಮ್ ಆಧರಿತ ಚರ್ಮದ ಪುನಶ್ಚೇತನ ಚಿಕಿತ್ಸೆ ಪ್ರಾರಂಭ

-

Ashok Nayak
Ashok Nayak Dec 16, 2025 2:20 PM

ಬೆಂಗಳೂರು: ಭಾರತದಲ್ಲಿ ಆಧುನಿಕ ಹೋಮಿಯೋಪತಿಯ ಮುಂಚೂಣಿಯಲ್ಲಿರುವ ಡಾ.ಬಾತ್ರಾಸ್ ಚರ್ಮದ ಪುನಶ್ಚೇತನ ಮತ್ತು ಭಾರತದಲ್ಲಿಯೇ ಪ್ರಪ್ರಥಮ ಚಿಕಿತ್ಸೆ ಡಾ.ಬಾತ್ರಾಸ್ ಎಕ್ಸ್.ಒ.ಡರ್ಮಾ ಪರಿಚಯಿಸಿದೆ. ಇದು ವಯಸ್ಸಾಗುವಿಕೆ ಮತ್ತು ಪಿಗ್ಮೆಂಟೇಷನ್ ನಿರೋಧಕ ಆರೈಕೆಗೆ ಹೋಮಿಯೋಪತಿ ಮತ್ತು ಚರ್ಮದ ಎಕ್ಸೊಸೋಮ್ ತಂತ್ರಜ್ಞಾನವನ್ನು ಒಟ್ಟಿಗೆ ತಂದಿದೆ. ಈ ಚುಚ್ಚುಮದ್ದಲ್ಲದ, ಒಳ ಸೇರಿಸುವಿಕೆ ಇಲ್ಲದ ಮತ್ತು ನೋವುರಹಿತ ಚಿಕಿತ್ಸೆಯನ್ನು ಜನರಿಗೆ ವಯಸ್ಸಾಗದ, ಕಲೆಯಿಲ್ಲದೆ ಚರ್ಮವನ್ನು ಸುರಕ್ಷಿತ ಮತ್ತು ಅನುಕೂಲಕರ ವಿಧಾನದಲ್ಲಿ ಸಾಧಿ ಸಲು ನೆರವಾಗುತ್ತಿದೆ, ಕೇವಲ ಮೂರು ಸೆಷನ್ ಗಳನ್ನು ಸುಧಾರಣೆಗಳು ಕಂಡುಬರುತ್ತವೆ.

ಡಾ.ಬಾತ್ರಾಸ್ ಎಕ್ಸ್.ಒ.ಡರ್ಮಾ ಎಕ್ಸೊಸೋಮ್ ಗಳ ವಿಜ್ಞಾನದಿಂದ ಸನ್ನದ್ಧವಾಗಿದ್ದು ಅದು ಆಳವಾದ ಜೀವಕೋಶದ ಮಟ್ಟದಲ್ಲಿ ಜೈವಿಕ ಸಂದೇಶವಾಹಕಗಳನ್ನು ಗುರಿಯಾಗಿಸುತ್ತವೆ. ಈ ಕಿರಿದಾದ ಕಣಗಳು ಚರ್ಮದ ಆಳದ ಪದರಗಳಿಗೆ ವಿಸ್ತರಿಸುತ್ತವೆ ಮತ್ತು ನೈಸರ್ಗಿಕ ರಿಪೇರಿ ಮತ್ತು ಪುನಶ್ಚೇತನ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಿ ದೀರ್ಘಕಾಲ ಉಳಿಯುವ ಫಲಿತಾಂಶಗಳನ್ನು ನೀಡು ತ್ತವೆ. ಈ ಚಿಕಿತ್ಸೆಯು ಕಾಲ ಕಳೆದಂತೆ ಚರ್ಮದ ರಚನೆ, ಛಾಯೆ, ದೃಢತೆ ಮತ್ತು ಸ್ಪಷ್ಟತೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: Bangalore News: ಭವಿಷ್ಯದ ತಂತ್ರಜ್ಞಾನಕ್ಕೆ ವೇದಿಕೆಯಾದ ಮಾಹೆ ಬೆಂಗಳೂರು: 'ಸೂಪರ್‌ಕಂಪ್ಯೂಟಿಂಗ್ ಇಂಡಿಯಾ' ಸಮ್ಮೇಳನಕ್ಕೆ ತೆರೆ

ಈ ಬಿಡುಗಡೆ ಕುರಿತು ಟ್ರೈಕಾಲಜಿಸ್ಟ್, ಫೆಲೋಷಿಪ್ ಇನ್ ಹೋಮಿಯೋಪತಿಕ್ ಕಾಸ್ಮೆಟಾಲಜಿ ಅಂಡ್ ಈಸ್ಥೆಟಿಕ್ಸ್ ಮತ್ತು ಡಾ.ಬಾತ್ರಾಸ್ ಹೆಲ್ತ್ ಕೇರ್ ವ್ಯವಸ್ಥಾಪಕ ನಿರ್ದೇಶಕ ಡಾ. ಅಕ್ಷಯ್ ಬಾತ್ರಾ, “ಡಾ.ಬಾತ್ರಾಸ್ ನಲ್ಲಿ ಆವಿಷ್ಕಾರವು ನಮ್ಮ ಕೆಲಸದ ಕೇಂದ್ರದಲ್ಲಿ ರೋಗಿಗಳಿಗೆ ನಿಜಕ್ಕೂ ಅನುಕೂಲ ಕಲ್ಪಿಸುತ್ತದೆ. ಎಕ್ಸೊಸೋಮ್ ಆಧರಿತ ಚಿಕಿತ್ಸೆಯನ್ನು ಭಾರತದಲ್ಲಿ ಯಶಸ್ವಿಯಾಗಿ ಪರಿಚಯಿಸಿದ ನಂತರ ನಾವು ಜಾಗತಿಕವಾಗಿ ಮಾನ್ಯತೆ ಪಡೆದ ಚರ್ಮದ ಪುನಶ್ಚೇತನ ಚಿಕಿತ್ಸೆ ಯನ್ನು ನಮ್ಮ ರೋಗಿಗಳಿಗೆ ತರುತ್ತಿದ್ದೇವೆ. ಮಾಲಿನ್ಯ, ಒತ್ತಡ, ವಯಸ್ಸಾಗುವಿಕೆ ಮತ್ತು ಒತ್ತಡದ ಜೀವನಶೈಲಿಗಳಿಗೆ ಸಂಪರ್ಕ ಹೊಂದಿದ ಚರ್ಮದ ಕಾಳಜಿಗಳು ಹೆಚ್ಚಾಗುತ್ತಿರುವಾಗ ಜನರು ಇಂದು ತ್ವರಿತ, ಪರಿಣಾಮಕಾರಿ ಮತ್ತು ಸುರಕ್ಷಿತ ಚಿಕಿತ್ಸೆ ಬಯಸುತ್ತಾರೆ. ಎಕ್ಸ್.ಒ.ಡರ್ಮಾ ಕೇವಲ ಮೂರು ಸೆಷನ್ ಗಳಲ್ಲಿ ಸುಧಾರಣೆಗಳನ್ನು ನೀಡುತ್ತದೆ.

ಈ ಚಿಕಿತ್ಸೆಯು ವೈಜ್ಞಾನಿಕ ಬೆಂಬಲ ಪಡೆದ ಚರ್ಮದ ಆಕ್ಟಿವ್ ಗಳ ಶಕ್ತಿಯುತ ಸಂಯೋಜನೆ ಹೊಂದಿದೆ. ಪೆಪ್ಟೈಡ್ ಗಳು ಗೆರೆಗಳನ್ನು ಮೃದುಗೊಳಿಸತ್ತವೆ ಮತ್ತು ಚರ್ಮದ ದೃಢತೆ ಸುಧಾರಿಸು ತ್ತವೆ. ಹೈಯಲ್ಯುರೊನಿಕ್ ಆಮ್ಲವು ಆಳವಾಗಿ ಹೈಡ್ರೇಟ್ ಮಾಡುತ್ತದೆ ಮತ್ತು ಚರ್ಮ ದುಂಡಾಗಿಸು ತ್ತದೆ, ಪಿ.ಡಿ.ಆರ್.ಎನ್ ಕೊಲಾಜೆನ್ ಉತ್ಪಾದನೆ ಉತ್ತೇಜಿಸುತ್ತದೆ ಮತ್ತು ಡಿ.ಎನ್.ಎ. ರಿಪೇರಿಗೆ ನೆರ ವಾಗುತ್ತದೆ. ಅಳವಡಿಕೆಗಳು ಹೊಳಪು ಹೆಚ್ಚಿಸುತ್ತವೆ, ಪಿಗ್ಮೆಂಟೇಷನ್ ಕಡಿಮೆ ಮಾಡುತ್ತವೆ, ದೃಢತೆ ಹೆಚ್ಚಿಸುತ್ತವೆ ಮತ್ತು ಚರ್ಮದ ರಚನೆ ಸುಧಾರಿಸುತ್ತವೆ.

ಪ್ರತಿ ಎಕ್ಸ್.ಒ.ಡರ್ಮಾ ಚಿಕಿತ್ಸೆಯನ್ನೂ ಎಐ ಆಧರಿತ ಚರ್ಮದ ವಿಶ್ಲೇಷಣೆಯಿಂದ ಪ್ರಾರಂಭಿಸ ಲಾಗುತ್ತದೆ. ಇದರಿಂದ ಪ್ರತಿಯೊಬ್ಬರಿಗೂ ವೈಯಕ್ತಿಕಗೊಳಿಸಿದ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ಚಿಕಿತ್ಸೆಯ ಆವರ್ತದ ಅಂತ್ಯಕ್ಕೆ ರೋಗಿಗಳು ಸಂಪೂರ್ಣ ಫಲಿತಾಂಶದ ವರದಿ ಪಡೆಯುತ್ತಾರೆ. ಇದು ಮುಂಚಿನ ಮತ್ತು ನಂತರದ ಚರ್ಮದ ಆರೋಗ್ಯದ ಹೋಲಿಕೆ ನೀಡುತ್ತದೆ.