ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NPPA: ಕ್ಯಾನ್ಸರ್‌, ಶುಗರ್‌ ಸೇರಿ 71 ಔಷಧಗಳ ಬೆಲೆ ಮರುನಿಗದಿಪಡಿಸಿದ ಕೇಂದ್ರ ಸರ್ಕಾರ

ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಮಧುಮೇಹ, ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ 71 ಔಷಧೀಯ ಫಾರ್ಮುಲೇಷನ್‌ಗಳ ಬೆಲೆಗಳನ್ನು ನಿಗದಿಪಡಿಸಿದೆ. ಔಷಧ (ಬೆಲೆ ನಿಯಂತ್ರಣ) ಆದೇಶ (ಡಿಪಿಸಿಒ), 2013ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಸಂಯೋಜನೆಗಳು, ಪ್ರಮಾಣಗಳು ಮತ್ತು ತಯಾರಕರಿಗೆ ಎನ್‌ಪಿಪಿಎ ಪ್ರತ್ಯೇಕವಾಗಿ ಬೆಲೆಗಳನ್ನು ಘೋಷಿಸಿದೆ.

ಇನ್ಮುಂದೆ ಅಗ್ಗವಾಗಲಿದೆ ಈ ಔಷಧಗಳು

ಸಾಂಧರ್ಬಿಕ ಚಿತ್ರ.

Profile Sushmitha Jain Jul 16, 2025 6:51 PM

ನವದೆಹಲಿ: ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (National Pharmaceutical Pricing Authority) ಮಧುಮೇಹ (Diabetes), ಕ್ಯಾನ್ಸರ್ (Cancer) ಚಿಕಿತ್ಸೆಗೆ ಸಂಬಂಧಿಸಿದ 71 ಔಷಧೀಯ ಫಾರ್ಮುಲೇಷನ್‌ಗಳ ಬೆಲೆಗಳನ್ನು ನಿಗದಿಪಡಿಸಿದೆ. ಔಷಧ (ಬೆಲೆ ನಿಯಂತ್ರಣ) ಆದೇಶ (ಡಿಪಿಸಿಒ), 2013ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಸಂಯೋಜನೆಗಳು, ಪ್ರಮಾಣಗಳು ಮತ್ತು ತಯಾರಕರಿಗೆ ಎನ್‌ಪಿಪಿಎ ಪ್ರತ್ಯೇಕವಾಗಿ ಬೆಲೆಗಳನ್ನು ಘೋಷಿಸಿದೆ.

ನಿಗದಿತ ಔಷಧಿಗಳು

ಈ 71 ಫಾರ್ಮುಲೇಷನ್‌ಗಳಲ್ಲಿ ಮಧುಮೇಹ ವಿರೋಧಿ ಔಷಧಗಳು ಮತ್ತು ಅವುಗಳ ಸಂಯೋಜನೆಗಳು ಪ್ರಮುಖವಾಗಿವೆ. ಈ ವರ್ಷ ಆರಂಭದಲ್ಲಿ ಪೇಟೆಂಟ್‌ನಿಂದ ಹೊರಬಂದ ಮಧುಮೇಹ ಔಷಧ ಎಂಪಾಗ್ಲಿಫ್ಲೊಝಿನ್ ಮತ್ತು ಡಿಪಿಸಿಒ ಅಡಿಯಿಂದ ನಿಗದಿತ ಹಳೆಯ ಔಷಧಿಗಳ ಸಂಯೋಜನೆಗಳನ್ನು ಈ ಪಟ್ಟಿ ಒಳಗೊಂಡಿದೆ. ಮಧುಮೇಹ ವಿರೋಧಿ ಸಂಯೋಜನೆಯ ಔಷಧಗಳ ಬೆಲೆಯನ್ನು ಪ್ರತಿ ಮಾತ್ರೆಗೆ 14ರಿಂದ 31 ರೂಪಾಯಿಗಳ ನಡುವೆ ನಿಗದಿಪಡಿಸಲಾಗಿದೆ.

ಕ್ಯಾನ್ಸರ್ ವಿರೋಧಿ ಔಷಧ ಟ್ರಾಸ್ಟುಜುಮಾಬ್‌ನ ಬೆಲೆಯನ್ನು ರಿಲಯನ್ಸ್ ಲೈಫ್ ಸೈನ್ಸಸ್‌ಗೆ ಪ್ರತಿ ಬಾಟಲಿಗೆ 11,966 ರೂ.ಗೆ ನಿಗದಿಪಡಿಸಿದೆ. ಈ ಔಷಧವು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಭಾಗವಾಗಿದ್ದು, ಬೆಲೆ ನಿಯಂತ್ರಣಕ್ಕೆ ಒಳಪಟ್ಟಿದೆ. ಬ್ಯಾಕ್ಟೀರಿಯಾ ವಿರೋಧಿ ಸೆಫ್ಟ್ರಿಯಾಕ್ಸೋನ್ ಸಂಯೋಜನೆಯ ಬೆಲೆಯನ್ನು ಪ್ರತಿ ಬಾಟಲಿಗೆ 515ರಿಂದ 1,036 ರೂ.ಗಳ ನಡುವೆ ಇರಿಸಲಾಗಿದೆ.

ಈ ಸುದ್ದಿಯನ್ನು ಓದಿ: Viral News: ಅರೇ.. ಹೀಗೂ ನಡೆಯುತ್ತಾ ಪ್ರೊಟೆಸ್ಟ್‌! ಲುಂಗಿ-ಬನಿಯನ್‌ ಧರಿಸಿ ಪ್ರತಿಭಟನೆ

ಪ್ಯಾರಸಿಟಮಾಲ್‌ನ ವಿವಿಧ ಫಾರ್ಮುಲೇಷನ್‌ಗಳಿಗೆ ಕೂಡ ಬೆಲೆ ನಿಗದಿಯಾಗಿದೆ. ಉದಾಹರಣೆಗೆ, ಸಸ್ಪೆಂಷನ್ ರೂಪಾಂತರದ ಬೆಲೆಯನ್ನು ಪ್ರತಿ ಮಿ.ಲೀ.ಗೆ 0.66 ರೂ. ನಿಗದಿಪಡಿಸಲಾಗಿದೆ. ಮುಟ್ಟಿನ ನೋವಿಗೆ ಚಿಕಿತ್ಸೆಗೆ ಬಳಸುವ ಮೆಫೆನಾಮಿಕ್ ಆಮ್ಲದ ಸಸ್ಪೆಂಷನ್ ಬೆಲೆಯನ್ನು ಪ್ರತಿ ಮಿ.ಲೀ.ಗೆ 0.94 ರೂ.ಗೆ ಇರಿಸಲಾಗಿದೆ.

ಈ ಕ್ರಮವು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಔಷಧಿಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ. ಎನ್‌ಪಿಪಿಎ ಈ ನಿರ್ಧಾರದಿಂದ ಔಷಧ ಉತ್ಪಾದಕರಿಗೆ ನಿಯಂತ್ರಿತ ಬೆಲೆಯೊಳಗೆ ಗುಣಮಟ್ಟದ ಔಷಧಿಗಳನ್ನು ಒದಗಿಸುವಂತೆ ಸೂಚಿಸಿದೆ.