ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಿಮೋಗ್ಲೋಬಿನ್ ವೇಗವಾಗಿ ಹೆಚ್ಚಿಸಬೇಕೇ? ಈ ಹಣ್ಣುಗಳನ್ನು ಆಯ್ಕೆ ಮಾಡಿ!

Health Tips: ಸರಿಯಾದ ಹಿಮೋಗ್ಲೋಬಿನ್ ಪ್ರಮಾಣ ನಮ್ಮ ಆರೋಗ್ಯವನ್ನು ಸ್ಥಿರವಾಗಿ ಇರಿಸುವಂತೆ ಮಾಡುತ್ತದೆ. ಒಂದು ವೇಳೆ ಇದರ ಪ್ರಮಾಣ ಕಡಿಮೆಯಾದರೆ ಪದೇ ಪದೇ ಆಯಾಸ, ಸುಸ್ತು, ನಿಶ್ಯಕ್ತಿಗೆ ಕಾರಣವಾಗಬಹುದು‌. ಹಿಮೋಗ್ಲೋಬಿನ್ ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುವುದರಿಂದ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನೈಸರ್ಗಿಕವಾಗಿ ಹಿಮೋ ಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಹಣ್ಣುಗಳ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.

ಹಿಮೋಗ್ಲೋಬಿನ್ ಹೆಚ್ಚಿಸಲು ಈ ಹಣ್ಣುಗಳನ್ನು ಸೇವನೆ ಮಾಡಿ!

ಇಂಟರ್ ನೆಟ್ ಚಿತ್ರ -

Profile
Pushpa Kumari Jul 28, 2026 7:02 AM

ನವದೆಹಲಿ,ಜು‌.27: ದೇಹಕ್ಕೆ ಹಿಮೋಗ್ಲೋಬಿನ್ (Hemoglobin) ಎಷ್ಟು ಅವಶ್ಯಕ ಎಂಬುದು ಎಲ್ಲರಿಗೂ ತಿಳಿದಿದೆ. ಸರಿಯಾದ ಹಿಮೋಗ್ಲೋಬಿನ್ ಪ್ರಮಾಣ ನಮ್ಮ ಆರೋಗ್ಯವನ್ನು ಸ್ಥಿರವಾಗಿ ಇರಿಸುವಂತೆ ಮಾಡುತ್ತದೆ. ಒಂದು ವೇಳೆ ಇದರ ಪ್ರಮಾಣ ಕಡಿಮೆಯಾದರೆ ಪದೇ ಪದೇ ಆಯಾಸ, ಸುಸ್ತು, ನಿಶ್ಯಕ್ತಿಗೆ ಕಾರಣವಾಗಬಹುದು‌. ಹಿಮೋಗ್ಲೋಬಿನ್ ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುವುದರಿಂದ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನೈಸರ್ಗಿಕವಾಗಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಹಣ್ಣುಗಳ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.

ದಾಳಿಂಬೆ:

ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ದಾಳಿಂಬೆಯೊಂದು ಪ್ರಮುಖ ಹಣ್ಣಾಗಿದೆ. ಕಬ್ಬಿಣ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿರುವ ಈ ಹಣ್ಣು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ತಾಜಾ ದಾಳಿಂಬೆ ಅಥವಾ ಅದರ ರಸವನ್ನು ಸೇವನೆ ಮಾಡುವುದರಿಂದ ಆರೋಗ್ಯಕರ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚು ಮಾಡಬಹುದು.

ಬಾಳೆಹಣ್ಣುಗಳು:

ಬಾಳೆಹಣ್ಣುಗಳು ಫೋಲೇಟ್‌ನಲ್ಲಿ ಸಮೃದ್ಧವಾಗಿವೆ. ಇದು ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಅಗತ್ಯವಾದ ಬಿ ವಿಟಮಿನ್ ಹೊಂದಿದೆ. ಅದರ ಜೊತೆಗೆ ಕಬ್ಬಿಣ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿದ್ದು ನೈಸರ್ಗಿಕವಾಗಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡಬಹುದು‌.

ಸೇಬುಗಳು:

"ದಿನಕ್ಕೊಂದು ಸೇಬು" ಸೇವನೆ ಮಾಡುವ ಬಗ್ಗೆ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಇವು ಕಬ್ಬಿಣ ಮತ್ತು ವಿಟಮಿನ್ ಸಿ ಅನ್ನು ಹೊಂದಿದ್ದು ಹೀಮೋಗ್ಲೋಬಿನ್ ಮಟ್ಟವನ್ನು ಹೆಚ್ಚು ಮಾಡುತ್ತವೆ. ಅವುಗಳಲ್ಲಿ ಇರುವ ನಾರಿನ ಅಂಶವು ಜೀರ್ಣಕಾರಿ ಪ್ರಯೋಜನ ಗಳನ್ನು ಕೂಡ ನೀಡುತ್ತವೆ‌.

ಕಿತ್ತಳೆ:

ಕಿತ್ತಳೆಗಳು ಹೆಚ್ಚು ಕಬ್ಬಿಣವನ್ನು ಹೊಂದಿರುವುದಿಲ್ಲ, ಆದರೆ ಅವು ವಿಟಮಿನ್ ಸಿ ಯಿಂದ ತುಂಬಿರುತ್ತವೆ, ಇದು ದೇಹವು ಕಬ್ಬಿಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುವಲ್ಲಿ ಪ್ರಮುಖವಾಗುತ್ತದೆ.ಹಾಗಾಗಿ ನಿಮ್ಮ ಆಹಾರದ ಜೊತೆಗೆ ಕಿತ್ತಳೆ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಿ.

Health Tips: ಚಹಾ ಅತಿಯಾಗಿ ಕುದಿಸಬೇಡಿ, ಒಳ್ಳೆಯದಲ್ಲ! ಟೀ ಮಾಡುವ ಪರ್ಫೆಕ್ಟ್‌ ವಿಧಾನ ಇಲ್ಲಿದೆ

ಕಲ್ಲಂಗಡಿ ಹಣ್ಣು:

ಬೇಸಿಗೆಯಲ್ಲಿ ಕಲ್ಲಂಗಡಿಯನ್ನು ಹೆಚ್ಚಿನ ಜನರು ಖರೀದಿ ಮಾಡುತ್ತಾರೆ. ಕಬ್ಬಿಣ ಹಾಗೂ ವಿಟಮಿನ್ 'ಸಿ' ಉತ್ತಮ ಪ್ರಮಾಣ ಇದರಲ್ಲಿದೆ. ನೀರಿನಂಶ ಹೆಚ್ಚಿರುವುದರಿಂದ ದೇಹದಲ್ಲಿ ರಕ್ತದ ಪ್ರಮಾಣವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ‌

ಖರ್ಜೂರ:

ಖರ್ಜೂರವು ನೈಸರ್ಗಿಕವಾಗಿ ಕಬ್ಬಿಣದಿಂದ ಸಮೃದ್ಧವಾಗಿದೆ.ಇದು ತ್ವರಿತ ಶಕ್ತಿಯನ್ನು ಹೆಚ್ಚಿಸುವ ಆಹಾರ. ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಬಯಸುವವರಿಗೆ ಇವು ವಿಶೇಷವಾಗಿ ಹೆಚ್ಚು ಉಪಯುಕ್ತವಾಗಿಸುತ್ತದೆ..

ಒಣ ದ್ರಾಕ್ಷಿ:

ಗಾತ್ರದಲ್ಲಿ ಚಿಕ್ಕದಾಗಿದ್ದರೂ ಒಣ ದ್ರಾಕ್ಷಿಯಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಬೆಳಗಿನ ಉಪಾಹಾರ ದಲ್ಲಿ ಓಟ್ಸ್ ಜೊತೆಗೆ ಒಣ ದ್ರಾಕ್ಷಿಯನ್ನು ನಿಯಮಿತವಾಗಿ ಬಳಸುವುದರಿಂದ ರಕ್ತಹೀನತೆ ಸಮಸ್ಯೆ ತಪ್ಪಿಸಬಹುದು.