ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಕಟ್ಟಿದ ಮೂಗಿನ ಸಮಸ್ಯೆಯಿಂದ ಪರಿಹಾರ ಬೇಕೆ? ಇಲ್ಲಿದೆ ಸೂಪರ್‌ ಟಿಪ್ಸ್‌

Nose Feels Blocked: ವೈರಲ್ ಸೋಂಕಿನ ಬಳಿಕ‌ ಅನೇಕರು ದೀರ್ಘಕಾಲದ ಮೂಗಿನ ಕಟ್ಟುವಿಕೆ ಅಥವಾ ಸೈನಸ್ ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದಾಗಿ ಸರಿಯಾಗಿ ಉಸಿರಾಡಲು ಕೂಡ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಕೆಲವು ಮನೆ ಮದ್ದುಗಳನ್ನು ಬಳಸುವ ಮೂಲಕ ಸಮಸ್ಯೆಯನ್ನು ನಿವಾರಿಸಬಹುದು.

ಕಟ್ಟಿದ ಮೂಗಿನ ಸಮಸ್ಯೆ ನಿವಾರಿಸಲು ಪರಿಹಾರ ಕ್ರಮ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಜ್ವರ ಮತ್ತು ಮೈ -ಕೈ ನೋವು ಕಡಿಮೆಯಾದ ನಂತರವೂ ನಿಮ್ಮ ಮೂಗು ಇನ್ನೂ ಕಟ್ಟಿಕೊಂಡಂತೆ ಅನಿಸುತ್ತಿದೆಯೇ? ಈ ಸಮಸ್ಯೆಯನ್ನು‌ನೀವು ಒಬ್ಬರೇ ಅಲ್ಲ, ಇದನ್ನು ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಾರೆ. ವೈರಲ್ ಸೋಂಕಿನ (Viral Infection) ಬಳಿಕ‌ ಅನೇಕ ಜನರು ದೀರ್ಘಕಾಲದ ಮೂಗಿನ ಕಟ್ಟುವಿಕೆ (Nose Feels Blocked) ಅಥವಾ ಸೈನಸ್ ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದಾಗಿ ಸರಿಯಾಗಿ ಉಸಿರಾಡಲು ಕೂಡ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಕೆಲವು ಮನೆ ಮದ್ದುಗಳನ್ನು ಬಳಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು.

ಇದು ಏಕೆ ಆಗುತ್ತದೆ?

ನೀವು ಜ್ವರ ಅಥವಾ ನೆಗಡಿಗೆ ಒಳಗಾದಾಗ, ವೈರಸ್ ಮೂಗಿನ ಒಳಪದರ ಮತ್ತು ಪಕ್ಕದ ಸೈನಸ್‌ ಗಳಲ್ಲಿ ಉರಿಯೂತವನ್ನು ಪ್ರಚೋದನೆ ಮಾಡುತ್ತದೆ. ಈ ಉರಿಯೂತದಿಂದಾಗಿ ರಕ್ತನಾಳಗಳು ಊದಿಕೊಳ್ಳುತ್ತವೆ. ಹಾಗಾಗಿ ದ್ರವ ಸಂಗ್ರಹವಾಗುತ್ತದೆ. ಇದರಿಂದಾಗಿ ಮೂಗು ಕಟ್ಟಿದಂತೆ ಮತ್ತು ಸರಿಯಾಗಿ ಲೋಳೆ ಹೊರಹೋಗದಂತೆ ಭಾಸವಾಗುತ್ತದೆ.

'ಕಟ್ಟಿದ ಮೂಗನ್ನು' ತೆರವುಗೊಳಿಸಲು ಸುಲಭ ಸಲಹೆಗಳು ಇಲ್ಲಿವೆ:

ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದು: ದಿನಕ್ಕೆ ಎರಡರಿಂದ ಮೂರು ಬಾರಿ ಬಿಸಿ ನೀರಿನ ಹಬೆಯನ್ನು ಉಸಿರಾಡುವುದು ಮೂಗು ಕಟ್ಟು ವಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ತಕ್ಷಣಕ್ಕೆ ನಿಮ್ಮ ಕಟ್ಟಿರುವ ಮೂಗಿನ ಮಾರ್ಗಗಳನ್ನು ತಡೆಯುತ್ತದೆ. ದಿನಕ್ಕೆ 2-3 ಬಾರಿ, 5-10 ನಿಮಿಷಗಳ ಕಾಲ ಹಬೆಯನ್ನು ಉಸಿರಾಡಿ. ಇದು ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನ.

ಇದನ್ನು ಓದಿ:Health Tips: ಚಳಿಗಾಲದಲ್ಲಿ ಈ ಹಣ್ಣುನ್ನು ಸೇವಿಸೋದ್ರಿಂದ ತ್ವಚೆಯು ಕಾಂತಿಯುತವಾಗಿ ಹೊಳೆಯುತ್ತಂತೆ!

ಸಲೈನ್ ಸ್ಪ್ರೇಗಳು: ಮೂಗಿನ ದಟ್ಟಣೆಯನ್ನು ನಿವಾರಿಸಲು ಸಲೈನ್ ಸ್ಪ್ರೇ ಉತ್ತಮ ಮಾರ್ಗ ಎನಿಸಿಕೊಂಡಿದೆ. ಕೆಲವು ದಿನಗಳವರೆಗೆ ಈ ಸ್ಪ್ರೇಗಳನ್ನು ಬಳಸಬಹುದು. ಅದೇ ರೀತಿ ನೀರಿಗೆ ನೀಲಗಿರಿ ಎಣ್ಣೆ , ತುಳಸಿ ಎಲೆ ಅಥವಾ ಮೆಂತೆಯನ್ನು ಸೇರಿಸಿ ಉಸಿರಾಟವನ್ನು ಸರಾಗಗೊಳಿಸುವ ಸಲುವಾಗಿ ಹಬೆ ತೆಗೆದುಕೊಳ್ಳಬಹುದು.

ನೀರು ಕುಡಿಯಿರಿ: ಸಾಕಷ್ಟು ಪ್ರಮಾಣದ ನೀರು ಕುಡಿಯುವುದರಿಂದ ಲೋಳೆ ತೆಳುವಾಗಲಿದ್ದು ಇದರಿಂದ ಉಸಿರು ಕಟ್ಟುವುದನ್ನು ತಪ್ಪಿಸಬಹುದು.

ಆರ್ದ್ರಕ ಬಳಸಿ: ಕೋಣೆಯಲ್ಲಿ ಆರ್ದ್ರಕ ಬಳಸುವುದು ಅಥವಾ ಹೀಟರ್ ಪಕ್ಕದಲ್ಲಿ ನೀರಿನ ಪಾತ್ರೆ ಇಡುವುದರಿಂದ ಮೂಗಿನ ಒಳಪದರ ಒಣಗದಂತೆ ತಡೆಯಬಹುದು.

ಮಲಗುವಾಗ ತಲೆಯನ್ನು ಎತ್ತರಿಸಿ: ನೇರವಾಗಿ ಮಲಗಿದಾಗ ಲೋಳೆ ಸೈನಸ್‌ಗಳಲ್ಲಿ ಸಂಗ್ರಹ ವಾಗಬಹುದು. ಹೆಚ್ಚುವರಿ ದಿಂಬನ್ನು ಬಳಸಿ ತಲೆಯನ್ನು ಸ್ವಲ್ಪ ಎತ್ತರದಲ್ಲಿ ಇರಿಸುವುದರಿಂದ ರಾತ್ರಿಯಿಡೀ ಲೋಳೆ ಹೊರಹೋಗಲು ಸಹಾಯವಾಗುತ್ತದೆ.

ಸೈನಸ್ ಮೇಲೆ ಬಿಸಿ ಕಂಪ್ರೆಸ್: ಮುಖದ ಮೇಲೆ, ಕೆನ್ನೆ, ಹಣೆ ಅಥವಾ ಕಣ್ಣುಗಳ ಕೆಳಗೆ ಒತ್ತಡ ಅನಿಸಿದರೆ ಬೆಚ್ಚಗಿನ, ತೇವಾಂಶವುಳ್ಳ ಬಟ್ಟೆಯನ್ನು ಆ ಜಾಗದ ಮೇಲೆ ದಿನಕ್ಕೆ 2-3 ಬಾರಿ, 5-10 ನಿಮಿಷಗಳ ಕಾಲ ಇರಿಸಿ. ಇದು ಒತ್ತಡವನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ.