ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಚಳಿಗಾಲದಲ್ಲಿ ಈ ಹಣ್ಣುನ್ನು ಸೇವಿಸೋದ್ರಿಂದ ತ್ವಚೆಯು ಕಾಂತಿಯುತವಾಗಿ ಹೊಳೆಯುತ್ತಂತೆ!

ಚಳಿಗಾಲ ಬಂತೆಂದರೆ ಸಾಕು ಆರೋಗ್ಯದಲ್ಲಿ ನಾನಾ ಬದಲಾವಣೆಗಳಾಗುವಂತೆ ನಮ್ಮ ತ್ವಚೆಯಲ್ಲಿಯೂ ಬದಲಾವಣೆಗಳಾಗುವುದು ಸಾಮಾನ್ಯ. ಚಳಿಗಾಳಿಯು ತ್ವಚೆಯನ್ನು ಒಣಗಿಸುತ್ತವೆ ಮತ್ತು ತ್ವಚೆಯ ಹೊಳಪನ್ನು ಹೋಗಲಾಡಿಸುತ್ತವೆ. ಇದಕ್ಕಾಗಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಚಳಿಗಾಲದಲ್ಲಿ ಅತ್ಯಂತ ಮುಖ್ಯವಾಗುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಯಾವ ಹಣ್ಣು ತಿಂದ್ರೆ ಒಳ್ಳೆಯದು ಎಂಬುದನ್ನು ನೋಡೋಣ

ಚಳಿಗಾಲದಲ್ಲಿ ಸೀತಾ ಫಲ ಹಣ್ಣು ತಿನೋದ್ರಿಂದ ಆಗೋ ಪ್ರಯೋಜನ ಇದು

ಚಳಿಗಾಲಕ್ಕೆ ಸೂಕ್ತ ಈ ಹಣ್ಣು -

Profile
Sushmitha Jain Nov 8, 2025 7:00 AM

ಬೆಂಗಳೂರು: ಚಳಿಗಾಲ(Winter) ಬಂತೆಂದರೆ ಅದರ ಹಿಂದೆಯೇ ಹಲವಾರು ರೋಗ ರುಜಿನಗಳು ಬರುತ್ತವೆ. ಧೋ ಎಂದು ಸುರಿದ ಮಳೆಯಿಂದ ಸುಧಾರಿಸಿಕೊಳ್ಳುವ ಅನ್ನುವಷ್ಟರೊಳಗೆ ಈ ಚಳಿ ಪ್ರಾರಂಭವಾಗಿ ಸೋಂಕುಗಳ(Virus) ಕಾಟದ ಜೊತೆ, ಈ ಶೀತ ಕೆಮ್ಮುವಿನ ಭಯವೂ ಆರಂಭವಾಗುತ್ತದೆ. ಇಂತಹ ಸಮಯದಲ್ಲಿ ಆರೋಗ್ಯದ(Health)ನಿಗಾ ಇಡುವುದರ ಜೊತೆ ನಾವು ಸೇವಿಸುವ ಆಹಾರ ಪದಾರ್ಥಗಳ ಮೇಲೆಯೂ ಜಾಗರೂಕತೆ ವಹಿಸಬೇಕಾಗುತ್ತದೆ.

ಅದರಲ್ಲೂ ಚಳಿಗಾಲದಲ್ಲಿ ವಿಟಮಿನ್‌(Vitamin) ಅಂಶ ಇರುವ ಹಣ್ಣುಗಳನ್ನು ಸೇವಿಸುವುದು ಅತ್ಯವಶ್ಯವಾಗಿದ್ದು, ದೇಹಕ್ಕೆ ಈ ಕಾಲದಲ್ಲಿ ಹೆಚ್ಚುವರಿ ವಿಟಮಿನ್‌ ಜೊತೆ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ.

ಹಾಗಾಗಿ ಚಳಿಗಾಲದಲ್ಲಿ ಯಥೇಚ್ಛವಾಗಿ ಸಿಗುವ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಲಿದ್ದು, ಅಂತಹ ಹಣ್ಣುಗಳ ಪೈಕಿ ಸೀತಾಫಲ(Custard Apple) ಕೂಡ ಒಂದಾಗಿದೆ.. ಹಾಗಿದ್ರೆ ಚಳಿಗಾಲದಲ್ಲಿ ನಮ್ಮ ಮನೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿರುವ ಸೀತಾಫಲ ಸೇವಿಸುವುದರಿಂದ ಆಗುವ ಪ್ರಯೋಜನ ಎಂಬುದರ ಬಗ್ಗೆ
ಮಾಹಿತಿ ಇಲ್ಲಿದೆ..

ಈ ಸುದ್ದಿಯನ್ನು ಓದಿ: Viral Post: ಬಿಹಾರದಲ್ಲಿಯೂ ವೋಟ್‌ ಮಾಡಿದ ಪುಣೆ ಮಹಿಳೆ; ರಾಹುಲ್‌ ಹೇಳ್ತಿರೋ ವೋಟ್‌ ಚೋರಿಗೆ ಇದೇ ಸಾಕ್ಷಿ ಎಂದ ಕಾಂಗ್ರೆಸ್‌

ಜೀರ್ಣಕ್ರಿಯೆ ಸರಿಯಾಗುತ್ತದೆ
ಸೀತಾಫಲದಲ್ಲಿ ನಾರಿನ ಪ್ರಮಾಣವು ಹೇರಳವಾಗಿದೆ, ಇದರಿಂದಾಗಿ ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಚಳಿಗಾಲದಲ್ಲಿ ಸೀತಾಫಲವನ್ನು ತಪ್ಪದೇ ಸೇವಿಸಿ. ಈ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಸೀತಾಫಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇವು ಬಹು ಸೋಂಕುಗಳು ಮತ್ತು ರೋಗಗಳನ್ನು ತಡೆಯುತ್ತವೆ. ಇದಲ್ಲದೆ, ಅದರ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಯಾವುದೇ ಸೋಂಕಿಗೆ ಚಿಕಿತ್ಸೆ ನೀಡುವಾಗ ದೇಹದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.


ತ್ವಚೆಯ ಆರೋಗ್ಯಕ್ಕೆ ಸಹಕಾರಿ: ಸೀತಾಫಲದಲ್ಲಿರುವ ಹಲವಾರು ಆ್ಯಂಟಿಆಕ್ಸಿಡೆಂಟ್‌ಗಳು ನಯವಾದ ತ್ವಚೆಯನ್ನು ಪಡೆಯಲು ತುಂಬಾ ಸಹಕಾರಿಯಾಗಿದ್ದು, ಹಾನಿಕಾರಕ ಸ್ವತಂತ್ರ ರಾಡಿಕಲ್ಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಜೊತೆಗೆ ತ್ವಚೆಯ ಕೋಮಲತೆಯನ್ನು ಹೆಚ್ಚಿಸಲಿದ್ದು, ಇದು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಮೊಡವೆಗಳಿಂದ ರಕ್ಷಿಸುತ್ತದೆ.

ಈ ಸುದ್ದಿಯನ್ನು ಓದಿ : Viral News: ತನಗೆ ಕಚ್ಚಿದ ನಾಗರಹಾವಿಗೇ ಕಚ್ಚಿದ ಭೂಪ- ಸತ್ತು ಬಿದ್ದ ವಿಷಸರ್ಪ! ವಿಡಿಯೊ ನೋಡಿ
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ:
ಸೀತಾಫಲ
ಲೈಕೋಪೀನ್ ಉತ್ಕರ್ಷಣ ನಿರೋಧಕವಾಗಿದ್ದು ಅದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದೆ. ಇದು ವಿನಾಶಕಾರಿ ಕೋಶಗಳಿಂದ ಸ್ವತಂತ್ರ ರಾಡಿಕಲ್ಗಳನ್ನು ರಕ್ಷಿಸುತ್ತದೆ. ಆದ್ದರಿಂದ ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ: ಈ ಸೀತಾಫಲ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿದ್ದು, ನಾರಿನಂಶದಿಂದ ತುಂಬಿದೆ. ಇವೆರಡೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ಕಡಿಮೆಯಾಗುತ್ತದೆ
ತೂಕವನ್ನು ಕಡಿಮೆ ಮಾಡಲು ಬಯಸುವವರು ಸೀತಾಫಲ ಅನ್ನು ಸೇವಿಸುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಸೀತಾಫಲದಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆ ಮತ್ತು ಫೈಬರ್ ತುಂಬಾ ಹೆಚ್ಚು. ಮತ್ತೊಂದೆಡೆ, ನೀವು ನಿಮ್ಮ ತೂಕವನ್ನು ಕಡಿಮೆ ಮಾಡಲು ಬಯಸಿದರೆ, ಪ್ರತಿದಿನ ಸೀತಾಫಲವನ್ನು ಸೇವಿಸಿ.