Health Tips: ಒಂದೇ ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಬೇಕೆ? ಇಲ್ಲಿದೆ ತಜ್ಞರ ಸಲಹೆ!
ತೂಕ ಇಳಿಕೆಗಾಗಿ ಹೆಚ್ಚಿನ ಜನರು ಹರಸಾಹಸ ಪಡುವುದು ಇದೆ. ತೂಕ ಇಳಿಕೆಗೆ ಸಾಕಷ್ಟು ಜನರು ತಿನ್ನುವ ವಿಚಾರದಲ್ಲಿ ಕಠಿಣ ನಿಯಮ ಪಾಲಿಸುತ್ತಾರೆ. ಇಲ್ಲವೇ ಜಿಮ್ ಗೆ ಹೋಗಿ ಗಂಟೆಗಟ್ಟಲೆ ವರ್ಕೌಟ್ ಮಾಡಿ ಬೆವರಿಳಿಸುತ್ತಾರೆ. ಆದರೆ ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಸರಳ ಕ್ರಮವನ್ನು ಅಳವಡಿಸುವ ಮೂಲಕ ಮತ್ತು ಆಹಾರದಲ್ಲಿನ ಕೆಲವು ಬದಲಾವಣೆಗಳ ಮೂಲಕ ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರೊಬ್ಬರು ಸಲಹೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ತೂಕ ಹೆಚ್ಚಾಗುವುದು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ ತೂಕ ಇಳಿಕೆಗಾಗಿ ಹೆಚ್ಚಿನ ಜನರು ಹರಸಾಹಸ ಪಡುವುದು ಇದೆ. ತೂಕ ಇಳಿಕೆಗೆ ಸಾಕಷ್ಟು ಜನರು ತಿನ್ನುವ ವಿಚಾರದಲ್ಲಿ ಕಠಿಣ ನಿಯಮ ಪಾಲಿಸುತ್ತಾರೆ(Health Tips). ಇಲ್ಲವೇ ಜಿಮ್‌ಗೆ ಹೋಗಿ ಗಂಟೆಗಟ್ಟಲೆ ವರ್ಕೌಟ್ ಮಾಡಿ ಬೆವರಿಳಿಸುತ್ತಾರೆ. ಆದರೆ ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಸರಳ ಕ್ರಮವನ್ನು ಅಳವಡಿಸುವ ಮೂಲಕ ಮತ್ತು ಆಹಾರ ದಲ್ಲಿನ ಕೆಲವು ಬದಲಾವಣೆಗಳ ಮೂಲಕ ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರೊಬ್ಬರು ಸಲಹೆ ನೀಡಿದ್ದಾರೆ. ಹೀಗಾಗಿ ಆರೋಗ್ಯಕರ ಜೀವನ ಶೈಲಿಯ ಮೂಲಕ ಕೆಲವೇ ದಿನಗಳಲ್ಲಿ ತೂಕವನ್ನು ಇಳಿಸಿಕೊಳ್ಳಲು ಬಯಸುವವರು ಈ ತಜ್ಞರ ಸಲಹೆಯನ್ನು ಪಾಲಿಸಬಹುದು.
ದೈನಂದಿನ ವ್ಯಾಯಾಮ ಅಗತ್ಯ:
ನಮ್ಮ ದಿನಚರಿಯಲ್ಲಿ ಒಂದು ಗಂಟೆಯನ್ನು ನಾವು ವಾಕಿಂಗ್ ಗಾಗಿ ಮೀಸಲಿಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ದೇಹದ ತೂಕ ಏರಿಕೆಯಾಗಿದೆ, ಜಿಮ್‌ಗೆ ಹೋಗಬೇಕು ಎಂದು ತಲೆಕೆಡಿಸಿಕೊಳ್ಳುವ ಬದಲು ದಿನನಿತ್ಯ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ಆರೋಗ್ಯಕರ ಮತ್ತು ನಿರಂತರ ತೂಕ ನಷ್ಟಕ್ಕೆ ದಿನಕ್ಕೆ ಕನಿಷ್ಠ 10 ಸಾವಿರ ಹೆಜ್ಜೆಗಳನ್ನು ಇಡುವುದು ಕಡ್ಡಾಯ. ಅದರ ಜೊತೆ ರಾತ್ರಿ ಸರಿಯಾದ ನಿದ್ರೆ, ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಯೋಗ, ನಡಿಗೆ, ಸೈಕ್ಲಿಂಗ್, ಜಿಮ್, ಸ್ವಿಮ್ಮಿಂಗ್ ಇತ್ಯಾದಿ ಅಭ್ಯಾಸ ಮಾಡಿಕೊಂಡರೆ ತೂಕ ಕಡಿಮೆ ಮಾಡಬಹುದು.
ಸಾಕಷ್ಟು ನೀರು ಕುಡಿಯಿರಿ:
ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ದೇಹ ಹೈಡ್ರೀಕರಿಸುವುದು ಅತ್ಯಗತ್ಯ. ಪ್ರತಿದಿನ ಕನಿಷ್ಠ 3 ಲೀಟರ್ ನೀರನ್ನು ಸೇವಿಸುವುದರಿಂದ ದೇಹವನ್ನು ತೇವಾಂಶದಿಂದ ಇಡಲು ಸಹಾಯಕವಾಗಲಿದೆ. ಪೌಷ್ಟಿಕ ತಜ್ಞರು ಬೆಳಿಗ್ಗೆ ಎದ್ದ ನಂತರ ಬೆಚ್ಚಗಿನ ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ. ಏಕೆಂದರೆ ಇದು ದೇಹದ ಚಯಾಪಚಯವನ್ನು ಕಿಕ್‌ಸ್ಟಾರ್ಟ್ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ತೂಕ ಇಳಿಸುವ ಒಂದು ಮಾರ್ಗವಾಗಿದೆ. ನೀರು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಹಾಗಾಗಿ ಪ್ರತಿದಿನ ಸರಿಯಾದ ಪ್ರಮಾಣದ ನೀರು ಕುಡಿದು ದಿನವಿಡೀ ದೇಹವನ್ನು ಹೈಡ್ರೇಟ್ ಸ್ಥಿತಿಯಲ್ಲಿರಲು ಆದ್ಯತೆ ನೀಡಿ.
ತಾಜಾ ತರಕಾರಿಗಳನ್ನು ಸಲಾಡ್‌ಗಳ ರೂಪದಲ್ಲಿ ಸೇವಿಸಿ:
ತರಕಾರಿಗಳಲ್ಲಿ ಕಡಿಮೆ ಕ್ಯಾಲೋರಿಗಳಿದ್ದು, ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸಲಿದೆ. ಹಾಗಾಗಿ ಹಸಿರು ತರಕಾರಿಗಳನ್ನು ಸೇವಿಸದರೆ ಉತ್ತಮ. ತೂಕನಷ್ಟದ ವೇಳೆ ಪ್ರಮುಖವಾಗಿ ಟೊಮೆಟೋ, ಕ್ಯಾರೆಟ್, ಸೌತೇಕಾಯಿ, ಕ್ಯಾಪ್ಸಿಕಂ, ಕ್ಯಾರೆಟ್, ಬೀಟ್ ರೂಟ್ ಅನ್ನು ಹಸಿಯಾಗಿಯೇ ಬಳಸಿಕೊಳ್ಳಬಹುದು. ಇನ್ನು ಬೇಯಿಸಿದ ತರಕಾರಿಗಳಾಗಿ ಹೂಕೋಸು, ಎಲೆಕೋಸು, ಕುಂಬಳಕಾಯಿ, ಬಟಾಣಿ, ಸಿಹಿಗೆಣಸು ವಿವಿಧ ತರಕಾರಿಗಳನ್ನು ಸೇವಿಸಿ ತೂಕ ಇಳಿಸಿ ಕೊಳ್ಳಬಹುದು.
ಇದನ್ನು ಓದಿ: Wipro GE Healthcare: ವಿಪ್ರೋ ಹೆಲ್ತ್ ಕೇರ್‌ನಿಂದ ರಾಜ್ಯದಲ್ಲಿ 8,000 ಕೋಟಿ ರೂ. ಹೂಡಿಕೆ
ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿ:
ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯಕರ ಪೋಷಕಾಂಶಗಳಿಗೆ ಆಧ್ಯತೆ ನೀಡಲು ಅನಾರೋಗ್ಯಕರ ಸಂಸ್ಕರಿಸಿದ ಆಹಾರ ಸೇವನೆ ಯನ್ನು ಕಡಿಮೆ ಮಾಡಿ. ಹೊರಗಿನ ಆಹಾರಗಳನ್ನು ತಿನ್ನುವುದನ್ನು ತ್ಯಜಿಸಿ ಮನೆಯಲ್ಲೇ ತಯಾರಿಸಿದ ಆಹಾರಗಳಿಗೆ ಹೆಚ್ಚಿನ ಒತ್ತನ್ನು ನೀಡಿರಿ.