ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶ್ವಾಸನಾಳದಲ್ಲಿ ಸಿಲುಕಿದ ಕಡಲೆಕಾಯಿ! ಉಬ್ಬಸದಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿ ಚಿಕಿತ್ಸೆ

ಅಸ್ತಮಾ ಅಥವಾ ಯಾವುದೇ ಅಲರ್ಜಿಯ ಲಕ್ಷಣ ಹೊಂದಿರದ ವ್ಯಕ್ತಿ ರಮೇಶ್‌ 6 ತಿಂಗಳಿನಿಂದ ಉಬ್ಬಸ ಸಮಸ್ಯೆಯಿಂದ ಬಳಲುತ್ತಿದ್ದರು. ಉಬ್ಬಸ ಸಮಸ್ಯೆಯನ್ನು ಅಸ್ತಮಾ ಎಂದು ತಿಳಿದು ಸಾಕಷ್ಟು ಕಡೆ ಚಿಕಿತ್ಸೆ, ಬ್ರೊಂಕೊಡೈಲೇಟರ್‍‌ ಥೆರಪಿ ಪಡೆದರೂ ಸಮಸ್ಯೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರ ಲಿಲ್ಲ

ಉಬ್ಬಸದಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿ ಚಿಕಿತ್ಸೆ

Profile Ashok Nayak Jul 2, 2025 2:50 PM

ಮಂಗಳೂರು: ಹಲವು ತಿಂಗಳಿನಿಂದ ಉಬ್ಬಸದಿಂದ ಬಳಲುತ್ತಿದ್ದ ವ್ಯಕ್ತಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಬಹುಕಾಲದಿಂದ ಅನುಭವಿಸುತ್ತಿದ್ದ ಉಬ್ಬಸವನ್ನು ಅಸ್ತಮಾ ಎಂದು ತಿಳಿದ 50 ವರ್ಷದ ರಮೇಶ್‌ (ಹೆಸರು ಬದಲಾವಣೆ) ಎಂಬುವವರು ಕೊನೆಗೂ ಕೆಎಂಸಿ ಆಸ್ಪತ್ರೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ಅಸ್ತಮಾ ಅಥವಾ ಯಾವುದೇ ಅಲರ್ಜಿಯ ಲಕ್ಷಣ ಹೊಂದಿರದ ವ್ಯಕ್ತಿ ರಮೇಶ್‌ 6 ತಿಂಗಳಿನಿಂದ ಉಬ್ಬಸ ಸಮಸ್ಯೆಯಿಂದ ಬಳಲುತ್ತಿದ್ದರು. ಉಬ್ಬಸ ಸಮಸ್ಯೆಯನ್ನು ಅಸ್ತಮಾ ಎಂದು ತಿಳಿದು ಸಾಕಷ್ಟು ಕಡೆ ಚಿಕಿತ್ಸೆ, ಬ್ರೊಂಕೊಡೈಲೇಟರ್‍‌ ಥೆರಪಿ ಪಡೆದರೂ ಸಮಸ್ಯೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ, ಈ ಸಮಯದಲ್ಲಿ ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್‌ ಮತ್ತು ಹಿರಿಯ ಪಲ್ಮನೊಲಾಜಿಸ್ಟ್‌ ಡಾ. ವಿಶಾಖ ಆಚಾರ್ಯ, ಹಿರಿಯ ಕನ್ಸಲ್ಟೆಂಟ್‌ ಅರವಳಿಕೆತಜ್ಞ ಡಾ ಸುನೀಲ್‌ ಬಿ ವಿ, ಕನ್ಸಲ್ಟೆಂಟ್‌ ಪಲ್ಮೊನೊಲಾಜಿಸ್ಟ್‌ ಡಾ. ಉದಯ, ಅರವಳಿಕೆ ತಜ್ಞ ಡಾ. ಫ್ರೇಡಾ, ಬ್ರೊಂಕೊಸ್ಕಾಪಿ ಅಸಿಸ್ಟೆಂಟ್‌ ಮಗ್ಡೆಲಿನಾ ಪೈಸ್‌, ಮಲ್ಲೇಶ್‌ ಪಿ, ಸುಮಿತ್ರಾ, ರೀಮಾ ಡಿಸೋಜಾ, ಸಂಯೋಜಕಿ ಸೈರಾ ಡಿಸೋಜ ಅವರ ತಂಡ ರೋಗಿಗೆ ಅವರ ಸಾಮಾನ್ಯ ಜೀವನವನ್ನು ಪುನರ್‍‌ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Health Tips: ಆಕಳಿಕೆ ಅತಿಯಾದರೆ ತೊಂದರೆಯೇ?

ಚಿಕಿತ್ಸೆಯ ಭಾಗವಾಗಿ ರೋಗಿಯ ಕುರಿತು ಕೆಲವು ವಿಚಾರಣೆ ನಡೆಸಿದಾಗ, ರೋಗಿಯು ಕೆಲ ತಿಂಗಳ ಹಿಂದೆ ಕಡಲೆಕಾಯಿ ಗಂಟಲಿಗೆ ಸಿಲುಕಿದ್ದ ಬಗ್ಗೆ ಜ್ಞಾಪಿಸಿಕೊಂಡಿದ್ದಾರೆ. ಆದರೆ ನೀರು ಸೇವಿಸಿದ ಬಳಿಕ ಸಮಸ್ಯೆ ಕಡಿಮೆಯಾಯಿತು ಎಂದೂ ತಿಳಿಸಿದ್ದಾರೆ. ಆದರೆ ಈ ಘಟನೆ ಬಳಿಕ ಉಬ್ಬಸ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗಿದೆ. ತಪಾಸಣೆಯಲ್ಲಿ ಅಸ್ತಮಾದಲ್ಲಿ ಕಂಡುಬರುವ ಉಬ್ಬಸದ ಲಕ್ಷಣ ವಲ್ಲ ಎಂದು ತಿಳಿದಿದ್ದು ಎಕ್ಸ್‌ ರೇ ನಡೆಸಿದಾಗ ಬಲ ಡಯಾಫ್ರಾಮ್‌ನಲ್ಲಿ ಉಬ್ಬು ಪತ್ತೆಯಾಗಿದೆ. ಇದರಿಂದ ಗಾಳಿ ಸುಗಮ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ.

ಶ್ವಾಸನಾಳದಲ್ಲಿ ಕಡಲೆಕಾಯಿ ತುಣುಕು

IMG-20250607-WA0485 ok

“ ಫ್ಲೆಕ್ಸಿಬಲ್‌ ಬ್ರೊಂಕೊಸ್ಕಾಪಿ ತಪಾಸಣೆಯಲ್ಲಿ ಶ್ವಾಸನಾಳದಲ್ಲಿ ಕಡಲೆಕಾಯಿಯ ತುಣುಕು ಸಿಲುಕಿರುವುದು ಪತ್ತೆಯಾಗಿದೆ. ಇಂಥದ್ದೊಂದು ಪ್ರಕರಣ ಅಪರೂಪವಾಗಿದ್ದು ಆರೋಗ್ಯವಂತ ವ್ಯಕ್ತಿಯಲ್ಲಿ ಉಬ್ಬಸ, ಉಸಿರಾಟದ ಸಮಸ್ಯೆ ಕಂಡುಬಂದಾಗ ಹೊರಗಿನ ವಸ್ತು ದೇಹದಲ್ಲಿ ಸಿಲುಕಿ ರುವ ಸಾಧ್ಯತೆಯನ್ನು ಪರಿಶೀಲಿಸುವ ಅಗತ್ಯತೆಯನ್ನು ಒತ್ತಿ ಹೇಳುತ್ತದೆ” ಎಂದು ಕೆಎಂಸಿ ಆಸ್ಪತ್ರೆ ಯ ಕನ್ಸಲ್ಟೆಂಟ್‌ ಮತ್ತು ಹಿರಿಯ ಪಲ್ಮನೊಲಾಜಿಸ್ಟ್‌ ಡಾ. ವಿಶಾಖ ಆಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.

ತಪಾಸಣೆಯಲ್ಲಿ ತಜ್ಞರ ತಂಡ ಶ್ವಾಸನಾಳದ ಬಲ ಮಧ್ಯಭಾಗದಲ್ಲಿ ಕಡಲೆಬೀಜದ ತುಣುಕು ಪತ್ತೆ ಹಚ್ಚಿದ್ದು ಫೋರ್ಸೆಪ್ಸ್‌ ಮೂಲಕ ಆಹಾರದ ತುಣುಕನ್ನು ಗಂಟಲಿನವರೆಗೆ ತರಲಾಯಿತು. ಬಳಿಕ ಜಾಗೃತ ಸೆಡೆಶನ್‌ನ ಜೊತೆಗೆ ರೋಗಿಗೆ ಕೆಮ್ಮುವಂತೆ ಮಾಡಿ ತುಣುಕನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.

“ಈ ಪ್ರಕರಣದಲ್ಲಿ ಜಾಗೃತ ಸೆಡೆಶನ್‌ (ನಿದ್ರಾಜನಕ) ವಿಧಾನ ಬಹಳ ಸಹಕಾರಿಯಾಯಿತು. ಅಪಾಯವನ್ನು ತಗ್ಗಿಸಿದ್ದಲ್ಲದೇ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಲು ರೋಗಿಗೆ ನೆರವಾಯಿತು” ಎಂದು ಹಿರಿಯ ಕನ್ಸಲ್ಟೆಂಟ್‌ ಅರವಳಿಕೆತಜ್ಞ ಡಾ ಸುನೀಲ್‌ ಬಿ ವಿ ತಿಳಿಸಿದ್ದಾರೆ.

ಘಟನೆ ಕುರಿತು ಮಾತನಾಡಿದ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಘೀರ್ ಸಿದ್ಧಿಕಿ “" ಈ ಪ್ರಕರಣ ಭೇದಿಸಿದ್ದು ನಮ್ಮ ಬಹುಶಿಸ್ತೀಯ ವಿಧಾನದ ಬಲವನ್ನು ಮತ್ತು ಕೆಎಂಸಿ ಆಸ್ಪತ್ರೆಯಲ್ಲಿ ಅನುಸರಿಸಲಾಗುವ ಉನ್ನತ ಮಟ್ಟದ ಕ್ಲಿನಿಕಲ್ ಜಾಗರೂಕತೆಗೆ ಸಾಕ್ಷಿಯಾಗಿದೆ. ಕೇವಲ ಸುಧಾರಿತ ತಂತ್ರಜ್ಞಾನ ಮಾತ್ರವಲ್ಲ, ಪ್ರತಿಯೊಬ್ಬ ರೋಗಿಗೂ ಸಂಪೂರ್ಣ, ವೈಯಕ್ತಿಕ ಗೊಳಿಸಿದ ಆರೈಕೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಬದ್ಧತೆಯಾಗಿದೆ. ಸಮಯೋಚಿತ ರೋಗ ನಿರ್ಣಯ ಮತ್ತು ತಂಡದ ತಡೆರಹಿತ ಕೆಲಸವು ದೀರ್ಘಕಾಲದ ವೈದ್ಯಕೀಯ ಕ್ಲಿಷ್ಟತೆ ಯನ್ನು ಯಶಸ್ವಿ ಕಥೆಯನ್ನಾಗಿ ಪರಿವರ್ತಿಸಿತು" ಎಂದು ಹೇಳಿದರು.

ಸಮಾಲೋಚಕ ಶ್ವಾಸಕೋಶಶಾಸ್ತ್ರಜ್ಞ ಡಾ.ಉದಯ ಮಾತನಾಡಿ, ಚಿಕಿತ್ಸೆ ಕಾರ್ಯವಿಧಾನಗಳಲ್ಲಿ ಪ್ರಜ್ಞಾಪೂರ್ವಕ ಸೆಡೆಶನ್‌ ಪ್ರಯೋಜನಗಳು ಹಲವು. ಪರಿಹಾರ ಕಂಡುಕೊಳ್ಳುವ ಸಂದರ್ಭ ವಾಯುಮಾರ್ಗ ಚಲನೆಯನ್ನು ಕಡಿಮೆ ಮಾಡುವುದು, ರೋಗಿಯ ಪ್ರತಿಕ್ರಿಯೆಗಳ ಮೇಲೆ ಉತ್ತಮ ನಿಯಂತ್ರಣ ಮತ್ತು ಮೂಗಿನ ಆಘಾತವನ್ನು ತಪ್ಪಿಸುವುದು. ಶ್ವಾಸಕೋಶಶಾಸ್ತ್ರ, ಅರಿವಳಿಕೆ ಮತ್ತು ನರ್ಸಿಂಗ್ ತಂಡಗಳ ನಡುವಿನ ಸುಗಮ ಸಮನ್ವಯವು ರೋಗಿಯ ಸುರಕ್ಷತೆಯನ್ನು ದೀರ್ಘಕಾಲ ದವರೆಗೆ ಖಚಿತಪಡಿಸುತ್ತದೆ” ಎಂದರು.

ರಮೇಶ್ ಅವರು ಉತ್ತಮ ಆರೋಗ್ಯ ಸ್ಥಿತಿಯಲ್ಲಿ ಮನೆಗೆ ಮರಳಿದ್ದು , ಮರೆಯಲಾಗದ ಜೀವನ ಪಾಠವನ್ನೂ ಅರಿತುಕೊಂಡಿದ್ದಾರೆ.