Baby Cream: ವಯಸ್ಕರ ತ್ವಚೆಗೆ ಬೇಬಿ ಪ್ರಾಡಕ್ಟ್ ಬಳಕೆ ಅಪಾಯಕಾರಿ! ಕಾರಣವೇನು ಹೇಗೆ?
ಮೃದುವಾದ ತ್ವಚೆ ಪಡೆಯಲು ಮಗುವಿನ ಆರೈಕೆಯಲ್ಲಿ ಬಳಸುವಂತಹ ಕ್ರೀಂ, ಮಾಯಿಶ್ಚರೈಸರ್ ಬಳಸುವವರು ಇದ್ದಾರೆ. ಹಾಗಾದರೆ ಮಕ್ಕಳ ಚರ್ಮಕ್ಕೆ ಬಳಸುವ ಪ್ರಾಡಕ್ಟ್ ಅನ್ನು ವಯಸ್ಕರು ಬಳಸುವುದು ಉತ್ತಮವೇ? ಅಥವಾ ಇದರಿಂದ ನಿಮ್ಮ ತ್ವಚೆಯ ಮೇಲೆ ಪರಿಣಾಮ ಬೀರಲಿದೆಯೇ? ಮಾಹಿತಿ ಇಲ್ಲಿದೆ.


ನವದೆಹಲಿ: ಸೌಂದರ್ಯದ ಬಗ್ಗೆ ಅಧಿಕ ಕಾಳಜಿ ಇದ್ದವರು ತ್ವಚೆಯ ರಕ್ಷಣೆಗೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿ ಮಾರುಕಟ್ಟೆಯ ವಿವಿಧ ಬ್ರ್ಯಾಂಡ್‌ಗಳ ಕ್ರೀಮ್, ಲೋಶನ್ ಇತ್ಯಾದಿ ಬಳಕೆ ಮಾಡುತ್ತಾರೆ. ಕೆಲವರಂತೂ ಮಗುವಿನಂತಹ ಮೃದುವಾದ ತ್ವಚೆ ಪಡೆಯಲು ಮಗುವಿನ ಆರೈಕೆಯಲ್ಲಿ ಬಳಸುವಂತಹ ಕ್ರೀಂ, ಮಾಯಿಶ್ಚರೈಸರ್(Baby Cream) ಬಳಸುವವರು ಇದ್ದಾರೆ. ಹಾಗಾದರೆ ಮಕ್ಕಳ ಚರ್ಮಕ್ಕೆ ಬಳಸುವ ಪ್ರಾಡಕ್ಟ್ ಅನ್ನು ವಯಸ್ಕರು ಬಳಸುವುದು ಉತ್ತಮವೇ? ಅಥವಾ ಇದರಿಂದ ನಿಮ್ಮ ತ್ವಚೆಯ ಮೇಲೆ ಪರಿಣಾಮ ಬೀರಲಿದೆಯೇ? ಎನ್ನುವ ಗೊಂದಲ ನಿಮ್ಮಲ್ಲಿ ಇರಬಹುದು. ಮಗುವಿನ ತ್ವಚೆಗೂ ದೊಡ್ಡವರ ತ್ವಚೆಗೂ ಬಹಳ ವ್ಯತ್ಯಾಸವಿದ್ದು ವಯಸ್ಕರು ಬಳಸುವ ಕ್ರೀಂಗಿಂತ ಮಕ್ಕಳ ಕ್ರೀಂ ಹೇಗೆ ಭಿನ್ನ ಇರಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಅಲರ್ಜಿ ಉಂಟಾಗುವ ಸಾಧ್ಯತೆ:
ಮಗುವಿನ ಆರೈಕೆಗಾಗಿ ಇರುವ ಕ್ರೀಮ್ ,ಲೋಶನ್ ಗಳಲ್ಲಿ ಚರ್ಮದ ಆರೈಕೆಗೆ ಬೇಕಾದ ಪೋಷಕಾಂಶ ಇದ್ದರೂ ಅದು ವಯಸ್ಕರ ತ್ವಚೆ ಮೇಲೆ ಪರಿಣಾಮ ಬೀರುವುದಿಲ್ಲ. ಕೆಲವರಿಗೆ ಇದು ಬಹಳ ಉತ್ತಮ ಲೋಶನ್ ಆದರೆ ಇನ್ನು ಕೆಲವರಿಗೆ ಚರ್ಮದ ದದ್ದು, ಅಲರ್ಜಿ ಉಂಟಾಗಬಹುದು. ಶಿಶುವಿನ ಸೂಕ್ಷ್ಮ ಚರ್ಮಕ್ಕೆ ಸೂಕ್ತವಾಗುವ ಪೋಷಕಾಂಶ ನಿಮಗೆ ಹೊಂದದೇ ಇರುವುದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರಲಿದೆ.
ಬೇಬಿ ಕ್ರೀಮ್‌ಗಳಲ್ಲಿ pH ಬ್ಯಾಲೆನ್ಸ್ ಇರಲಿದೆ:
ದೊಡ್ಡವರ ತ್ವಚೆಗೆ ಹೋಲಿಸಿದರೆ ಮಕ್ಕಳ ತ್ವಚೆ ತುಂಬಾ ಸೂಕ್ಷ್ಮ ವಾಗಿ ರುತ್ತದೆ .ಬೇಬಿ ಕ್ರೀಮ್ ನಲ್ಲಿ ಶಿಶುಗಳ ಚರ್ಮಕ್ಕೆ ಅಗತ್ಯವಾದ ಪೋಷ ಕಾಂಶ ಮಾತ್ರವೇ ಇರಲಿದೆ. ಮಗುವಿನ ತ್ವಚೆ ಬಹಳ ಕೋಮಲ ಮತ್ತು ಎಳೆ ಚರ್ಮದಲ್ಲಿ ಎಣ್ಣೆ ಅಂಶವು ಬಹಳ ಕಡಿಮೆ ಇರಲಿದೆ. ಹಾಗಾಗಿ ಬೇಬಿ ಕ್ರೀಮ್‌ಗಳಲ್ಲಿ pH ಬ್ಯಾಲೆನ್ಸ್ ಇರುವಂತೆ ಇಡಲಾಗಿರುತ್ತದೆ. ಆದ್ದರಿಂದ ಇದನ್ನು ವಯಸ್ಕರು ಹಚ್ಚುದರಿಂದ ಹೆಚ್ಚಿನ ಪರಿಣಾಮ ಬೀರಲ್ಲ.
ತೇವಾಂಶ ಕಡಿಮೆ ಆಗಲಿದೆ:
ವಯಸ್ಕರ ತ್ವಚೆಗೆ ಮಕ್ಕಳ ತೆಳುವಾದ ಕ್ರೀಮ್ ಗಳ ಬಳಕೆ ಮಾಡಿದಾಗ ತ್ವಚೆಯ ತೇವಾಂಶ ಬೇಗನೆ ಕಳೆದುಕೊಳ್ಳಲಿದೆ. ವಯಸ್ಕರ ತ್ವಚೆಗೆ ಹೈಲು ರಾಮ್ಲಿಕ್ ಆಮ್ಲ, ಸೆರಮೈಡ್, ಪಪ್ಟೈಡ್‌ಗಳಂತಹ ಅಂಶಗಳು ಬೇಬಿ ಕ್ರೀಮ್ ನಲ್ಲಿ ಇರಲಾರದು. ಅಷ್ಟು ಮಾತ್ರವಲ್ಲದೆ ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುವಂತಹ ಎಸ್ ಪಿಎಫ್, ಎಹೆಚ್ಎ, ಬಿಎಚ್ ಎ ಗಳಂತಹ ಎಕ್ಸ್ ಪೋಲಿಯಂಟ್ ಗಳು ಕೂಡ ಬೇಬಿ ಕ್ರೀಂ ನಲ್ಲಿ ಇರುವುದಿಲ್ಲ.
ಇದನ್ನು ಓದಿ: Beauty Tips: ಆರೋಗ್ಯಕರ ಚರ್ಮದ ಆರೈಕೆಗೆ ಇಲ್ಲಿದೆ ಟಿಪ್ಸ್
ಮೊಡವೆ ಹೆಚ್ಚಾಗಲಿದೆ:
ಮಕ್ಕಳ ಕ್ರೀಮ್ ಅನ್ನು ದೊಡ್ಡವರು ಹಚ್ಚಿಕೊಂಡಾಗ ಉರಿ ಉರಿಯ ಅನುಭವ ಸಹ ಉಂಟಾಗುವುದು, ಏಕೆಂದರೆ ಬೇಬಿ ಕ್ರೀಮ್‌ಗಳಲ್ಲಿ ಬಳಸಿರುವ ಸುಗಂಧ ವಾಸನೆಯ ದ್ರವದಿಂದ ಆ ರೀತಿ ಉಂಟಾಗಿರುತ್ತದೆ. ಇದು ದೊಡ್ಡವರ ತ್ವಚೆಗೆ ಹೊಂದಿಕೆಯಾಗುವುದಿಲ್ಲ. ಹಾಗೆಯೇ ಮುಖದಲ್ಲಿ ರಂಧ್ರಗಳು ಎದ್ದು ಕಾಣುವಂತೆ ಇದ್ದರೆ ಬೇಬಿ ಪ್ರಾಡೆಕ್ಟ್ ಬಳಸಲೇಬೇಡಿ. ಅವುಗಳು ತ್ವಚೆಯನ್ನು ಕ್ಲೆನ್ಸ್ ಮಾಡುವುದಿಲ್ಲ, ಇದರಿಂದ ರಂಧ್ರಗಳಲ್ಲಿ ಕೊಳೆ ಕೂತು ಬ್ಲ್ಯಾಕ್ ಹೆಡ್ಸ್ ಉಂಟಾಗುವ ಸಾಧ್ಯತೆ ಇದೆ. ಇನ್ನು ಮೊಡವೆ ಇದ್ದರಂತೂ ಬೇಬಿ ಪ್ರಾಡೆಕ್ಟ್ ಬಳಸುವುದರಿಂದ ಮತ್ತಷ್ಟು ತ್ವಚೆ ಹಾಳಾಗಲಿದೆ.
ಸೋಪ್ ಮತ್ತು ಲೋಶನ್ ಬಳಕೆ:
ಬೇಬಿ ಸೋಪ್ ಪರಿಮಳಯುಕ್ತವಾಗಿದ್ದು ಕೋಮಲ ತ್ವಚೆ ನೀಡಿದಂತೆ ಅನಿಸಿದರೂ ಯಾವುದೇ ಪ್ರಯೋಜನ ಇಲ್ಲ. ಲೋಷನ್ ವಿಚಾರದಲ್ಲಿ ಮಗುವಿನ ಲೋಶನ್ ಗಿಂತಲೂ ದೊಡ್ಡವರ ಲೋಶನ್ ಬಳಸುವುದೆ ಉತ್ತಮ ಎನ್ನಬಹುದು. ಒಟ್ಟಿನಲ್ಲಿ ಮಗುವಿನ ಆರೈಕೆಗಾಗಿ ಇರುವ ಕ್ರೀಮ್, ಸೋಪ್, ಲೋಶನ್ ಗಳು ಮಗುವಿಗಾಗಿಯೇ ಬಳಸುವುದು ಉತ್ತಮವಾಗಿದ್ದು ಚರ್ಮದ ವೈದ್ಯರಲ್ಲಿ ಆರೋಗ್ಯ ಸಲಹೆ ಪಡೆದು ಬಳಸಬಹುದು.