ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಉಪ್ಪಿನಕಾಯಿ ಸೇವನೆಯಿಂದ ಆರೋಗ್ಯಕ್ಕಿದೆ ಇಷ್ಟೆಲ್ಲ ಲಾಭ

ಉಪ್ಪಿನಕಾಯಿ ಸೇವನೆಯಿಂದ ಅನೇಕ‌ ಆರೋಗ್ಯ ಲಾಭ ಇದೆ ಎಂಬುದನ್ನು ತಜ್ಞರು ತಿಳಿಸಿದ್ದಾರೆ. ಹುದುಗು ಬರಿಸಿದ ಉಪ್ಪಿನಕಾಯಿಗಳು ನೈಸರ್ಗಿಕ ಪ್ರೋಬಯಾಟಿಕ್‌ಗಳ ಮುಖ್ಯ ಮೂಲವಾಗಿದ್ದು ಇವು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ ಉಪ್ಪಿನಕಾಯಿಯು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಹೆಚ್ಚಳ ಮತ್ತು ಮಾನಸಿಕ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ನಿತ್ಯ ಉಪ್ಪಿನಕಾಯಿ ಸೇವನೆಯಿಂದ ಆರೋಗ್ಯ ಭಾಗ್ಯ

ಸಾಂದರ್ಭಿಕ ಚಿತ್ರ.

Profile Pushpa Kumari May 20, 2025 6:00 AM

ನವದೆಹಲಿ: ಉಪ್ಪಿನಕಾಯಿ ಹೆಸರು ಕೇಳಿದ್ರೆ ಸಾಕು, ಎಲ್ಲರ ಬಾಯಲ್ಲಿ ನೀರೂರುತ್ತದೆ. ಕೆಲವರಿಗಂತೂ ಊಟಕ್ಕೆ ಉಪ್ಪಿನಕಾಯಿ ಬೇಕೆ ಬೇಕು. ಅದರಲ್ಲೂ ಭಾರತೀಯ ಆಹಾರದಲ್ಲಿ ಉಪ್ಪಿನಕಾಯಿಗೆ ವಿಶೇಷ ಸ್ಥಾನವಿದೆ. ಯಾವುದೇ ಶುಭಕಾರ್ಯವಿರಲಿ ಎಲೆಯಲ್ಲಿ ಮೊದಲು ಉಪ್ಪಿನಕಾಯಿ ಬಡಿಸಲೇ ಬೇಕು. ಹೀಗೆ ಊಟದ ಜತೆ ನಂಜಿಕೊಳ್ಳುವ ಉಪ್ಪಿನಕಾಯಿ (Eating Pickles) ಸೇವನೆಯಿಂದ ಅನೇಕ‌ ಆರೋಗ್ಯ ಲಾಭ ಇದೆ ಎಂಬುದನ್ನು ತಜ್ಞರು ತಿಳಿಸಿದ್ದಾರೆ. ಹುದುಗು ಬರಿಸಿದ ಉಪ್ಪಿನಕಾಯಿಗಳು ನೈಸರ್ಗಿಕ ಪ್ರೋಬಯಾಟಿಕ್‌ಗಳ ಮುಖ್ಯ ಮೂಲ ವಾಗಿದ್ದು, ಇದು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ ಉಪ್ಪಿನಕಾಯಿಯು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಹೆಚ್ಚಳ ಮತ್ತು ಮಾನಸಿಕ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಸಾಸಿವೆ ಅಥವಾ ವಿನೆಗರ್‌ನಿಂದ ಮಾಡಿದಂತಹ ಹುದುಗು ಬರಿಸಿದ ಉಪ್ಪಿನಕಾಯಿಗಳು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಈ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಯನ್ನು ಸುಧಾರಿಸಿ ಕರುಳಿನ ಆರೋಗ್ಯವನ್ನು ವೃದ್ದಿ ಮಾಡುತ್ತವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಉಪ್ಪಿನಕಾಯಿಗಳು ಹೆಚ್ಚಾಗಿ ಸಾಸಿವೆ, ಮೆಂತೆ ಮತ್ತು ಇಂಗು ಮುಂತಾದ ಮಸಾಲೆಗಳನ್ನು ಹೊಂದಿರುತ್ತವೆ. ಉಪ್ಪಿನ ಕಾಯಿಯಲ್ಲಿರುವ ಪ್ರೋಬಯಾಟಿಕ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ

ವಿನೆಗರ್ ಆಧಾರಿತ ಉಪ್ಪಿನಕಾಯಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ಉಲ್ಲೇಖ ಮಾಡಿವೆ. ಜರ್ನಲ್ ಆಫ್ ಡಯಾಬಿಟಿಸ್ ರಿಸರ್ಚ್‌ನಲ್ಲಿ ಪ್ರಕಟವಾದ ಅಧ್ಯಯನವು ವಿನೆಗರ್‌ನಂತಹ ಪದಾರ್ಥಗಳು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ ಎಂದು ತಿಳಿಸಿದೆ.

ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ

ಸೌತೆಕಾಯಿ, ವಿವಿಧ ತರಕಾರಿಯಿಂದ ತಯಾರಿಸಿದ ಉಪ್ಪಿನಕಾಯಿ ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿದೆ. ಸ್ನಾಯು ಸೆಳೆತವನ್ನು ತಡೆಗಟ್ಟಲು ಉಪ್ಪಿನಕಾಯಿ ರಸ ಬಹಳ ಉಪಯುಕ್ತ.

ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ

ಉಪ್ಪಿನಕಾಯಿಯಲ್ಲಿರುವ ಅರಿಶಿನ, ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳಂತಹ ಪದಾರ್ಥಗಳು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಯಕೃತ್ ಆರೋಗ್ಯ ರಕ್ಷಣೆ

ನೆಲ್ಲಿಕಾಯಿ, ಗ್ರೂಸ್ಬೆರಿಯಿಂದ ತಯಾರಿಸುವ ಉಪ್ಪಿನಕಾಯಿಯಲ್ಲಿ ಹೆಪಟೊಪ್ರೊಟೆಕ್ಟಿವ್ ಗುಣಲಕ್ಷಣಗಳಿರುತ್ತವೆ. ಹಾಗಾಗಿ ಉಪ್ಪಿನಕಾಯಿ ಸೇವನೆ ಯಕೃತ್ತಿನ ಹಾನಿಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ನೈಸರ್ಗಿಕವಾಗಿ ಹಸಿವು ಹೆಚ್ಚಿಸುತ್ತದೆ

ಉಪ್ಪಿನಕಾಯಿ ಹಸಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮಕ್ಕಳು ಅಥವಾ ವಯಸ್ಕರ ಆಹಾರದಲ್ಲಿ ಕಡಿಮೆ ಆಸಕ್ತಿ ಹೊಂದಿರುವವರಿಗೆ ಇದು ಹೆಚ್ಚು ಉಪಯುಕ್ತ.

ಗಮನಿಸಿ: ಇಷ್ಟೆಲ್ಲ ಆರೋಗ್ಯ ಪ್ರಯೋಜನ ಹೊಂದಿರುವ ಉಪ್ಪಿನಕಾಯಿಯನ್ನು ಮಿತಿಯಲ್ಲಿ ಬಳಸುವುದು ಉತ್ತ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹೀಗಾಗಿ ವಿವೇಚನೆಯಿಂದ ಸೇವಿಸಿ ಎಂದು ತಜ್ಞರು ತಿಳಿಸಿದ್ದಾರೆ.