ಮಕ್ಕಳಲ್ಲಿ ದೃಷ್ಟಿ ದೋಷ ಬರಲು ಕಾರಣ ಏನು? ಇಲ್ಲಿದೆ ಸರಳ ಆಯುರ್ವೇದದ ಪರಿಹಾರ ಕ್ರಮ
ಎಳೆ ಮಕ್ಕಳಿಗೆ ಈ ದೃಷ್ಟಿ ಸಮಸ್ಯೆ ಕಂಡು ಬರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಕಂಡು ಬರುವ ವಿಟಮಿನ್ ಡಿ ಕೊರತೆ, ಆಹಾರದಲ್ಲಿ ಪೋಷಕಾಂಶ ಸರಿಯಾದ ಪ್ರಮಾಣದಲ್ಲಿ ಲಭ್ಯವಾಗದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ಮಕ್ಕಳ ಲಾಲನೆ ಪಾಲನೆ ಮಾಡುವಾಗ ಈ ಎಲ್ಲ ವಿಚಾರದ ಕಡೆ ಗಮನಹರಿಸಬೇಕು ಎಂದು ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯು ರ್ವೇದದ ವೈದ್ಯರಾದ ಡಾ. ಪದ್ಮಾವತಿ ರಾಥೋಡ್ ಅವರು ತಿಳಿಸಿಕೊಟ್ಟಿದ್ದಾರೆ.
(ಸಂಗ್ರಹ ಚಿತ್ರ) -
ಬೆಂಗಳೂರು, ಡಿ. 12: ಇತ್ತೀಚಿನ ದಿನದಲ್ಲಿ ದೃಷ್ಟಿ ದೋಷ ಕಂಡು ಬರುವ ಪ್ರಮಾಣ ಹೆಚ್ಚಾ ಗುತ್ತಲೇ ಇದೆ. ಅದರಲ್ಲೂ ಎಳೆ ಮಕ್ಕ ಳಿಗೆ ಈ ದೃಷ್ಟಿ ಸಮಸ್ಯೆ ಕಂಡು ಬರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಕಂಡು ಬರುವ ವಿಟಮಿನ್ ಡಿ ಕೊರತೆ, ಆಹಾರದಲ್ಲಿ ಪೋಷಕಾಂಶ ಸರಿಯಾದ ಪ್ರಮಾಣದಲ್ಲಿ ಲಭ್ಯವಾಗದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ಮಕ್ಕಳ ಲಾಲನೆ ಪಾಲನೆ ಮಾಡುವಾಗ ಈ ಎಲ್ಲ ವಿಚಾರದ ಕಡೆ ಗಮನಹರಿಸಬೇಕು ಎಂದು ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯುರ್ವೇದದ ವೈದ್ಯರಾದ ಡಾ. ಪದ್ಮಾವತಿ ರಾಥೋಡ್ (Dr. Padmavati Rathod) ಅವರು ತಿಳಿಸಿಕೊಟ್ಟಿದ್ದಾರೆ. ಮಕ್ಕಳಲ್ಲಿ ಉಂಟಾಗುವ ದೃಷ್ಟಿ ಸಮಸ್ಯೆ ಮಕ್ಕಳ ಅರಿವಿಗೆ ಬಾರದಿದ್ದರೂ ಅದನ್ನು ಪೋಷಕರು ಕೂಡ ಪತ್ತೆ ಹಚ್ಚಬಹುದು. ಇವುಗಳಿಗೆ ಸ್ಪೆಕ್ಸ್ ಹಾಕುವುದನ್ನು ಪರಿಹಾರ ಕ್ರಮವಾಗಿ ಪಾಲಿಸುವವರು ಹೆಚ್ಚಿದ್ದಾರೆ ಆದರೆ ಆಯು ರ್ವೇದದಲ್ಲಿ ಇದಕ್ಕೆ ವಿಶೇಷ ಚಿಕಿತ್ಸಾ ವ್ಯವಸ್ಥೆಗಳಿದ್ದು ಮಕ್ಕಳ ದೃಷ್ಟಿ ದೋಷದ ಸಮಸ್ಯೆಯನ್ನು ಪರಿಹಾರ ಮಾಡಲು ಸಾಧ್ಯವಿದೆ ಎಂದು ಅವರು ಈ ಬಗ್ಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಕ್ಕಳಿಗೆ ಸಮೀಪ ದೃಷ್ಟಿ ಮತ್ತು ದೂರದೃಷ್ಟಿ ಎರಡು ತರಹದ ಸಮಸ್ಯೆ ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ. 90ಶೇ. ದಷ್ಟು ಮಕ್ಕಳು ಸಮೀಪ ದೃಷ್ಟಿಯಿಂದ ಬಳಲುತ್ತಿದ್ದ ಅವರಿಗೆ ದೂರದ ವಸ್ತು , ವ್ಯಕ್ತಿ ಎಲ್ಲ ಮಂಜಾಗಿ ಕಾಷಲಿದೆ. ಇನ್ನು 10% ಮಕ್ಕಳು ದೂರದೃಷ್ಟಿ ಸಮಸ್ಯೆ ಯಿಂದ ಬಳಲುತ್ತಿದ್ದು ಅವರಿಗೆ ಹತ್ತಿರದ ವಸ್ತುಗಳು ಕಾಣಿಸಿಕೊಳ್ಳಲಾರದು. ಮಕ್ಕಳು ಕಣ್ಣನ್ನು ಸ್ಕ್ವೀಜ್ ಮಾಡಿ ನೋಡುತ್ತಿದ್ದರೆ ಮತ್ತು ಆಗಾಗ ತಲೆನೋವು ಕಾಣಿಸಿ ಕೊಂಡರೆ ಮಕ್ಕಳಿಗೆ ದೃಷ್ಟಿ ದೋಷ ಉಂಟಾಗಿದೆ ಎಂದು ಪತ್ತೆ ಹಚ್ಚಬಹುದು ಎಂಬ ಬಗ್ಗೆ ಅವರು ಸಲಹೆ ನೀಡಿದ್ದಾರೆ.
ವಿಡಿಯೋ ನೋಡಿ:
ಮಕ್ಕಳ ದೃಷ್ಟಿ ದೋಷ ಹೆಚ್ಚಾಗಲು ಕಾರಣ ಏನು?
*ಇತ್ತೀಚೆಗೆ ಮಕ್ಕಳಿಗೆ ಬಿಸಿಲಲ್ಲಿ ಆಟವಾಡುದಕ್ಕೆ ಪೋಷಕರು ಬಿಡಲಾರರು ಹೀಗಾಗಿ ಮಕ್ಕಳಿಗೆ ವಿಟಮಿನ್ 'ಡಿ' ಕೊರತೆ ಕಂಡು ಬರಲಿದೆ. ಇದರಿಂದಾಗಿ ಮಕ್ಕಳಿಗೆ ದೃಷ್ಟಿ ದೋಷ ಕಂಡು ಬರುವ ಪ್ರಮಾಣ ಹೆಚ್ಚಾಗಿದೆ.
*ಮಕ್ಕಳು ಹೆಚ್ಚಾಗಿ ಮೊಬೈಲ್, ಟಿವಿ ಇತರ ಗ್ಯಾಜೇಟ್ ಅತಿಯಾಗಿ ಬಳಸುವ ಕಾರಣಕ್ಕೂ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಕಂಡು ಬರುವ ಪ್ರಮಾಣ ಹೆಚ್ಚಾಗುತ್ತಿದೆ.
*ಮಕ್ಕಳು ಸೇವಿಸುವ ಆಹಾರದಲ್ಲಿ ಪೋಷಕಾಂಶ ತುಂಬಾ ಕೊರತೆಯಿಂದ ಕೂಡಿರುವುದು. ಸೊಪ್ಪು , ತರಕಾರಿ, ವಿಟಮಿನ್ ಹೊಂದಿದ್ದ ಆಹಾರದ ಬದಲು ಕಲರ್, ಅಂಗಡಿ ತಿಂಡಿ ಇತರ ಸೇವನೆ ಕೂಡ ದೃಷ್ಟಿ ದೋಷ ಉಂಟಾಗಲು ಕಾರಣವಾಗಿದೆ.
*ಅನುವಂಶೀಯ ಕಾರಣಕ್ಕೆ ಅಂದರೆ ಅಜ್ಜ -ಅಜ್ಜಿ, ತಂದೆ -ತಾಯಿಗೆ ದೃಷ್ಟಿ ಸಮಸ್ಯೆ ಇದ್ದರೆ ಅದು ಮಗುವಿಗೂ ಬರುವ ಸಾಧ್ಯತೆ ಇದೆ.
Health Tips: ಚಳಿಗಾಲದಲ್ಲಿ ಸಪೋಟ ಹಣ್ಣಿನ ಆರೋಗ್ಯ ಪ್ರಯೋಜನಗಳು: ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹೃದಯವನ್ನು ಕಾಪಾಡಿ
ಪರಿಹಾರ ಕ್ರಮಗಳೇನು?
*ದೃಷ್ಟಿ ದೋಷ ಕಂಡು ಬಂದಂತಹ ಸಂದರ್ಭದಲ್ಲಿ ಸಮೀಪ ಮತ್ತು ದೂರದೃಷ್ಟಿ ಎರಡಕ್ಕೂ ಕನ್ನಡಕಗಳನ್ನೇ ಹೆಚ್ಚಾಗಿ ವೈದ್ಯರು ಸೂಚಿಸುತ್ತಾರೆ.
*ಇದರ ಹೊರತಾಗಿ ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆ, ಕಿಯಾಕಲ್ಪ ಚಿಕಿತ್ಸೆ, ಆಹಾರದಲ್ಲಿ ರಸಾಯನ ಚಿಕಿತ್ಸೆ ಇತ್ಯಾದಿಗಳು ಕೂಡ ಇವೆ.
*ಕಣ್ಣಿಗೆ ಸಂಬಂಧಿಸಿದ ವಿವಿಧ ಲಎಕ್ಸಸೈಜ್ ಮಾಡುದರಿಂದ ಕೂಡ ದೃಷ್ಟಿ ದೋಷದ ಪಾಂಯ್ಟ್ ಕಡಿಮೆಯಾಗಲಿದೆ.
*ಕಡಿಮೆ ಪ್ರಮಾಣದಲ್ಲಿ ಮೊಬೈಲ್ ಇತರೆ ಗ್ಯಾಜೆಟ್ ಬಳಕೆ ಮಾಡಬೇಕು.
*ಕ್ಯಾರೆಟ್, ಬ್ರಿಟ್ರೋಟ್ ಇತರ ನ್ಯೂಟ್ರಿಶಿಯನ್ ಆಹಾರ ಸೇವಿಸಬೇಕು.
*ನುಗ್ಗೆ ಸೊಪ್ಪನ್ನು ವಾರದಲ್ಲಿ ಒಂದರಿಂದ ಎರಡು ಸಲ ನೀಡಿದರೆ ಅದರಲ್ಲಿರುವ ವಿಟಮಿನ್ ಎ ಯಿಂದ ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.
*ಬೆಟ್ಟದ ನೆಲ್ಲಿಕಾಯಿಯನ್ನು ವಾರದಲ್ಲಿ ಎರಡು ಬಾರಿ ಸೇವಿಸಿದರೆ ಉತ್ತಮ.
*ಎಲ್ಲ ರೀತಿಯ ಆಹಾರ ಇರುವ ಸಮತೋಲಿತ ಆಹಾರ ಸೇವಿಸಬೇಕು. ಹಸಿರು ತರಕಾರಿ, ಸೊಪ್ಪು, ಹಣ್ಣು ಇವುಗಳ ಸೇವನೆ ಮಾಡಬೇಕು.
*ಮಕ್ಕಳಿಗೆ ಪ್ಯಾಕೆಟ್ ಆಹಾರ ನೀಡುವುದನ್ನು ಆದಷ್ಟು ಕಡಿಮೆ ಮಾಡಬೇಕು.
ಮನೆಮದ್ದು ಏನು?
*ದಿನ ನಿತ್ಯ ಕಣ್ಣನ್ನು ವಾಶ್ ಮಾಡಬೇಕು.
*ಎರಡು ಕೈಯನ್ನು ಉಜ್ಜಿಕೊಂಡು ಆ ಶಾಕವನ್ನು ಕಣ್ಣಿನ ಮೇಲೆ ಇಡುವ ಚಟುವಟಿಕೆಗಳನ್ನು ಮಾಡಬೇಕು.
*ಕಣ್ಣಿನ ಎಕ್ಸಸೈಜ್ ಮಾಡುವುದರಿಂದ ಸಮಸ್ಯೆ ಪರಿಹಾರ ಆಗಲಿದೆ.
*ತ್ರಾಟಕ ಎಕ್ಸಸೈಜ್ ಮಾಡುವುದು ಅಂದರೆ ಕ್ಯಾಂಡಲ್ ಅನ್ನು ಇಟ್ಟು ಅದನ್ನು ವೀಕ್ಷಿಸುವ ಒಂದು ಚಟುವಟಿಕೆಯಾಗಿದ್ದು ಅದನ್ನು ಮಾಡಬೇಕು.
ಸಾಮಾನ್ಯ ಚಿಕಿತ್ಸೆ ವಿಧಾನ ಅನುಸರಿಸುವವರಿಗೆ ಹೆಚ್ಚಾಗಿ ವೈದ್ಯರು ಕನ್ನಡಕವನ್ನೇ ಎಲ್ಲ ಕಡೆ ಸಲಹೆ ನೀಡುತ್ತಾರೆ. ಆಯುರ್ವೇದದಲ್ಲಿ ಇದಕ್ಕೆ ನಾನಾ ತರನಾದ ಪರಿಹಾರ ಕ್ರಮ ಇದ್ದು ಅದನ್ನು ನೀವು ಪ್ರಯತ್ನಿಸಿದರೆ 6ತಿಂಗಳಿನಿಂದ ಒಂದು ವರ್ಷದ ಒಳಗೆ ದೃಷ್ಟಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಡಾ. ಪದ್ಮಾವತಿ ಅವರು ಸಲಹೆ ಕೂಡ ನೀಡಿದ್ದಾರೆ.