ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಧ್ಯಾಹ್ನದ ಈ ಅಭ್ಯಾಸಗಳು ನಿಮ್ಮ ತೂಕ ಏರಿಕೆಗೆ ಕಾರಣವಾಗಬಹುದು!

Health Tips; ಕೆಲವರು ಡಯೆಟ್ ಹಾಗೂ ವರ್ಕೌಟ್ ಮಾಡುವ ಮೂಲಕ ತೂಕ ಇಳಿಕೆಗೆ ಪ್ರಯತ್ನಿ ಸುತ್ತಾರೆ. ಆದರೆ ಕೆಲವೊಮ್ಮೆ ನಾವು ಸೇವಿಸುವ ಆಹಾರ ಕೂಡ ತೂಕ ಏರಿಕೆಗೆ ಪ್ರಮುಖ ಕಾರಣ ವಾಗಬಹುದು. ಮಧ್ಯಾಹ್ನದ ಸಮಯದಲ್ಲಿ ಹಸಿವು ಹೆಚ್ಚಾಗಿ ಜಂಕ್ ಫುಡ್ ತಿನ್ನಬೇಕು, ಹೊರಗಿನ ಬಿಸಿ ಬಿಸಿ ಆಹಾರ ಬೇಕು ಎಂದು ಅನಿಸುವುದು ಸಾಮಾನ್ಯ.‌ ಈ ಸಂದರ್ಭದಲ್ಲಿ ನಾವು ಮಾಡುವ ತಪ್ಪುಗಳು ಮೆಟಬಾಲಿಸಂ ಪ್ರಕ್ರಿಯೆಯನ್ನು ನಿಧಾನ ಮಾಡಿ ತೂಕ ಹೆಚ್ಚಾಗಲು ಕಾರಣವಾಗುತ್ತವೆ.

ಮಧ್ಯಾಹ್ನದ ಈ ಹವ್ಯಾಸಗಳು ನಿಮ್ಮ ತೂಕವನ್ನು ಹೆಚ್ಚಿಸಬಹುದು!

ಸಂಗ್ರಹ ಚಿತ್ರ -

Profile
Pushpa Kumari Jun 20, 2026 7:00 AM

ಬೆಂಗಳೂರು ಜೂ.19: ಇತ್ತೇಚೆಗೆ ತೂಕ ಇಳಿಕೆ (Weight Loss) ಮಾಡಬೇಕೆಂದು ಹರಸಾಹಸ ಪಡುತ್ತಿದ್ದವರು ಅನೇಕರು ಇದ್ದಾರೆ. ಕೆಲವರು ಡಯೆಟ್ ಹಾಗೂ ವರ್ಕೌಟ್ ಮಾಡುವ ಮೂಲಕ ತೂಕ ಇಳಿಕೆಗೆ ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ನಾವು ಸೇವಿಸುವ ಆಹಾರ ಕೂಡ ತೂಕ ಏರಿಕೆಗೆ ಪ್ರಮುಖ ಕಾರಣವಾಗಬಹುದು. ಮಧ್ಯಾಹ್ನದ ಸಮಯದಲ್ಲಿ ಹಸಿವು ಹೆಚ್ಚಾಗಿ ಜಂಕ್ ಫುಡ್ ತಿನ್ನಬೇಕು, ಹೊರಗಿನ ಬಿಸಿ ಬಿಸಿ ಆಹಾರ ಬೇಕು ಎಂದು ಅನಿಸುವುದು ಸಾಮಾನ್ಯ.‌ ಈ ಸಂದರ್ಭದಲ್ಲಿ ನಾವು ಮಾಡುವ ತಪ್ಪುಗಳು ಮೆಟಬಾಲಿಸಂ ಪ್ರಕ್ರಿಯೆಯನ್ನು ನಿಧಾನ ಮಾಡಿ ತೂಕ ಹೆಚ್ಚಾಗಲು ಕಾರಣವಾಗುತ್ತವೆ.

ಮಧ್ಯಾಹ್ನ ಊಟ ಬಿಟ್ಟುಬಿಡುವುದು:

ಕೆಲವೊಮ್ಮೆ ಮಧ್ಯಾಹ್ನ ಊಟ ಬಿಡುವುದು ಅಥವಾ ಲೇಟಾಗಿ ಊಟ ಮಾಡುವುದು ತೂಕ ಏರಿಕೆಗೆ ಕಾರಣವಾಗಬಹುದು‌. ಕೆಲವರು ಕ್ಯಾಲೊರಿಗಳನ್ನು ಉಳಿಸುತ್ತದೆ ಎಂದು ಭಾವಿಸಿ ಊಟವನ್ನು ಬಿಟ್ಟು ಬಿಡುತ್ತಾರೆ. ಆದರೆ ಇದು ಅತಿಯಾದ ಹಸಿವಿಗೆ ಕಾರಣವಾಗಬಹುದು.

ಅನಾರೋಗ್ಯಕರ ತಿಂಡಿಗಳು:

ಮಧ್ಯಾಹ್ನದ ಹಸಿವು ಕೆಲವೊಮ್ಮೆ ಅನಾರೋಗ್ಯಕರ ತಿಂಡಿ ಸೇವನೆಗೆ ಕಾರಣವಾಗಬಹುದು. ಚಿಪ್ಸ್, ಕುಕೀಸ್ ಅಥವಾ ಸಕ್ಕರೆ ಪಾನೀಯಗಳಂತಹ ಸಂಸ್ಕರಿಸಿದ ತಿಂಡಿಗಳನ್ನು ಅವಲಂಬಿ ಸುವುದರಿಂದ ಆರೋಗ್ಯ ಕೆಡಬಹುದು. ಹಾಗಾಗಿ ಹೊಟ್ಟೆ ತುಂಬಿಸುವ, ಪೌಷ್ಟಿಕ ಆಹಾರವನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ.

Vastu Tips: ತಪ್ಪಿಯೂ ಅಡುಗೆಮನೆಯಲ್ಲಿ ಇಂತಹ ಕೆಲಸ ಮಾಡಬೇಡಿ; ಆರೋಗ್ಯಕ್ಕೆ ಕುತ್ತು ಬರಬಹುದು

ಗಮನ ಇಲ್ಲದೆ ಆಹಾರ ಸೇವಿಸುವುದು:

ಟಿವಿ ನೋಡುತ್ತ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡುವುದರಿಂದ ಹೆಚ್ಚಿನ ಕ್ಯಾಲೊರಿ ಗಳನ್ನು ಸೇವಿಸುವುದಕ್ಕೆ ಕಾರಣವಾಗಬಹುದು. ಜಾಗರೂಕತೆಯಿಂದ ತಿನ್ನುವುದು ಮತ್ತು ಊಟದ ಮೇಲೆ ಗಮನಹರಿಸುವುದು ಮುಖ್ಯ.

ದೈಹಿಕ ಚಟುವಟಿಕೆ ನಿರ್ಲಕ್ಷಿಸುವುದು:

ಊಟ ಮಾಡಿದ ತಕ್ಷಣ ನಡಿಗೆ ಮಾಡದೆ ಇದ್ದರೆ ನಿಶ್ಚಲತೆಗೆ ಕಾರಣವಾಗಬಹುದು.ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಕುಗ್ಗಿಸಬಹುದು.

ಲಿಕ್ವಿಡ್ ಕ್ಯಾಲೋರಿಗಳ ಸೇವನೆ:

ಮಧ್ಯಾಹ್ನದ ಆಲಸ್ಯವನ್ನು ದೂರ ಮಾಡಲು ಕೆಲವರು ಕಾಫಿ, ಟೀ, ಜ್ಯೂಸ್ ಕುಡಿಯುತ್ತಾರೆ. ಇವುಗಳಲ್ಲಿ ಅತಿ ಹೆಚ್ಚು ಕ್ಯಾಲೋರಿ ಇದ್ದೂ ತೂಕ ಏರಿಕೆಗೆ ಕಾರಣವಾಗಬಹುದು. ಹಾಗಾಗಿ ಮಧ್ಯಾಹ್ನದ ಅವಧಿಯಲ್ಲಿ ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ. ಇದರಿಂದ ಹಸಿವು ಇದ್ದರೂ ಅನಗತ್ಯವಾಗಿ ಆಹಾರ ಸೇವಿಸುವುದನ್ನು ತಪ್ಪಿಸುತ್ತೇವೆ.