#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Health Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವ ಹಣ್ಣುಗಳ ಬಗ್ಗೆ ಗೊತ್ತೇ?

ನಾರು ವಿಫುಲವಾಗಿರುವಂಥ ಯಾವುದೇ ಹಣ್ಣುಗಳು ಜೀರ್ಣಾಂಗಗಳ ಆರೋಗ್ಯಕ್ಕೂ ಒಳ್ಳೆಯದು ಹಣ್ಣುಗಳು ಸಹಜವಾಗಿಯೇ ಬಗೆಬಗೆಯ ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ಜೀವಸತ್ವಗಳಿಂದ ಭರಿತವಾದವು, ದೇಹಾರೋಗ್ಯವೂ ಚೆನ್ನಾಗಿ ಇರುತ್ತದೆ. ಒಂದು ದೊಡ್ಡ ಕಪ್‌ ಪೇರಲೆ ಹಣ್ಣಿನಲ್ಲಿ ಸುಮಾರು ೯ ಗ್ರಾಂ ನಾರು ನಮ್ಮ ದೇಹ ಸೇರುತ್ತದೆ. ಜೀರ್ಣಾಂಗಗಳ ಕೆಲಸವನ್ನು ಸುಲಭ ಮಾಡಿ, ಮಲಬದ್ಧತೆಯ ನಿವಾರಣೆಗೆ ನೆರವಾಗುವ ಸಾಮರ್ಥ್ಯ ಈ ಹಣ್ಣಿಗಿದೆ

ಜೀರ್ಣಕ್ರಿಯೆಗೆ ಬಹಳಷ್ಟು ಉಪಯೋಗಕಾರಿ ಈ ಹಣ್ಣುಗಳು!

digestion fruit

Profile Pushpa Kumari Jan 28, 2025 7:44 AM

ನವ ದೆಹಲಿ: ಹಣ್ಣುಗಳೆಲ್ಲ ನಮ್ಮ ಜೀರ್ಣಾಂಗಗಳ ಕೆಲಸವನ್ನು ಉದ್ದೀಪಿಸುವಂಥವು ಎಂಬುದು ಹೊಸ ವಿಷಯವೇನಲ್ಲ. ಜೀರ್ಣಾಂಗಗಳು ಎಂದರೆ ಕೇವಲ ಹೊಟ್ಟೆ ಮಾತ್ರವೇ ಅಲ್ಲ, ಬಾಯಿಂದ ಪ್ರಾರಂಭವಾಗಿ ಗುದದವರೆಗಿನ ಪೈಪ್‌ಲೈನ್‌ನಂಥ ಸಂಪೂರ್ಣ ನಾಳವನ್ನು ಜೀರ್ಣಾಂಗಗಳೆಂದು ಕರೆಯಲಾಗುತ್ತದೆ. ಅಂದರೆ ಬಾಯಿಂದಲೇ ಪಚನಕಾರಿ ಚಟುವಟಿಕೆಯನ್ನು ಉದ್ದೀಪಿಸುವಂಥ ಕೆಲಸವನ್ನು ಬಹುತೇಕ ಹಣ್ಣುಗಳು ಮಾಡಬಲ್ಲವು. ಅವುಗಳಲ್ಲಿ ಕೆಲವು ಹಣ್ಣುಗಳು(Fruits) ಅತ್ಯಂತ ಪರಿಣಾಮಕಾರಿಯಾಗಿ ಈ ಕೆಲಸವನ್ನು ಮಾಡುತ್ತವೆ. ಯಾವ ಹಣ್ಣುಗಳವು ಮತ್ತು ಹೆಚ್ಚು ಪರಿಣಾಮವೆಂಬುದು ಹೇಗೆ?

ನಾರು ವಿಫುಲವಾಗಿರುವಂಥ ಯಾವುದೇ ಹಣ್ಣುಗಳು ಈ ಸಾಲಿಗೆ ಸೇರುತ್ತವೆ.. ಹಾಗಾಗಿ ನಿತ್ಯವೂ ಇವುಗಳನ್ನು ಆಹಾರದಲ್ಲಿ ಮಿತವಾಗಿ ಸೇರಿಸಿಕೊಂಡರೆ, ಜೀರ್ಣಾಂಗಗಳ ಆರೋಗ್ಯಕ್ಕೂ ಒಳ್ಳೆಯದು ಹಣ್ಣುಗಳು ಸಹಜವಾಗಿಯೇ ಬಗೆಬಗೆಯ ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ಜೀವಸತ್ವಗಳಿಂದ ಭರಿತವಾದವು, ದೇಹಾರೋಗ್ಯವೂ ಚೆನ್ನಾಗಿ ಇರುತ್ತದೆ. ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ನೈಸರ್ಗಿಕ ಸಕ್ಕರೆಯಂಶದ ತಿನಿಸುಗಳು ನೆರವಾಗುತ್ತವೆ.

ಬೆರ್ರಿಗಳು: ಯಾವುದೇ ಬೆರ್ರಿಗಳಿರಬಹುದು, ಅಂದರೆ ಕೇವಲ ಚೆರ್ರಿ, ಸ್ಟ್ರಾಬೆರ್ರಿ, ಬ್ಲೂಬೆರ್ರಿಯಂಥವು ಮಾತ್ರವಲ್ಲ, ನಮ್ಮದೇ ನೆಲ್ಲಿಕಾಯಿಯೂ ಈ ಪಟ್ಟಿಯಲ್ಲಿ ಬಂತು. ಇವೆಲ್ಲವುಗಳಲ್ಲಿ ನಾರಿನಂಶ ಭರಪೂರ ಇದ್ದು, ದೇಹದ ಒಟ್ಟಾರೆ ಆರೋಗ್ಯವನ್ನೂ ಕಾಪಾಡಲು ನೆರವಾಗುತ್ತವೆ. ಕೊಂಚ ಹುಳಿ-ಸಿಹಿ ಮಿಶ್ರಿತ ಹಣ್ಣುಗಳು ಬಾಯಲ್ಲಿನ ಲಾಲಾ ರಸವನ್ನೂ ಹೆಚ್ಚಾಗಿ ಉತ್ಪತ್ತಿ ಮಾಡಿ, ಆಹಾರ ಚೂರ್ಣಿಸುವುದರ ಜೊತೆಗೆ ಜೀರ್ಣಿಸುವ ಕೆಲಸವನ್ನು ಅಲ್ಲಿಂದಲೇ ಪ್ರಾರಂಭಿಸುತ್ತವೆ.

ಪೇರಲೆ ಹಣ್ಣು: ಒಂದು ದೊಡ್ಡ ಕಪ್‌ ಪೇರಲೆ ಹಣ್ಣಿನಲ್ಲಿ ಸುಮಾರು ೯ ಗ್ರಾಂ ನಾರು ನಮ್ಮ ದೇಹ ಸೇರುತ್ತದೆ. ಜೀರ್ಣಾಂಗಗಳ ಕೆಲಸವನ್ನು ಸುಲಭ ಮಾಡಿ, ಮಲಬದ್ಧತೆಯ ನಿವಾರಣೆಗೆ ನೆರವಾಗುವ ಸಾಮರ್ಥ್ಯ ಈ ಹಣ್ಣಿಗಿದೆ. ತರಹೇವಾರಿ ಫ್ಲೆವನಾಯ್ಡ್‌ಗಳು, ಪೊಟಾಶಿಯಂ, ಫೋಲೇಟ್‌, ವಿಟಮಿನ್‌ಗಳನ್ನು ಹೊಂದಿರುವ ಈ ಹಣ್ಣನ್ನು ಯಾವುದೇ ಸಲಾಡ್‌ಗಳಿಗೂ ಪ್ರಯೋಗಿಸಬಹುದು.

ಇದನ್ನು ಓದಿ: Health Tips: ಹುದುಗು ಬರಿಸಿದ ಆಹಾರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

ಅವಕಾಡೊ: ಇತ್ತೀಚಿನ ವರ್ಷಗಳಲ್ಲಿ ಈ ಹಣ್ಣಿನ ಸದ್ಗುಣಗಳು ಪ್ರಚಾರಕ್ಕೆ ಬಂದಿದ್ದು. ಅಲ್ಲಿಯವರೆಗೂ ರುಚಿಯಿಲ್ಲದ ಹಣ್ಣು ಎಂದೇ ಅದನ್ನು ದೂರ ತಳ್ಳಲಾಗಿತ್ತು. ಆದರೆ ಇದೊಂದು ಸದ್ಗುಣಗಳ ಗಣಿಯೆಂದು ತಿಳಿಯುತ್ತಿದ್ದಂತೆ, ಇದೀಗ ಎಷ್ಟೋ ಜನರಿಗೆ ಅಚ್ಚುಮೆಚ್ಚು. ಮಾನೊಸ್ಯಾಚುರೇಟೆಡ್‌ ಮತ್ತು ಪಾಲಿಸ್ಯಾಚುರೇಟೆಡ್‌ ಕೊಬ್ಬುಗಳು ಇದರಲ್ಲಿ ಹೇರಳವಾಗಿದ್ದು, ಅರ್ಧ ಹಣ್ನಿನಲ್ಲಿ ೫ ಗ್ರಾಂ ನಾರು ದೇಹ ಸೇರಿ, ಜೀರ್ಣಕ್ರಿಯೆಯನ್ನು ಸರಾಗ ಗೊಳಿಸುತ್ತದೆ. ತಾಮ್ರ, ಫೋಲೇಟ್‌, ವಿಟಮಿನ್‌ ಕೆ ಮುಂತಾದ ಸತ್ವಗಳ ಜೊತೆಗೆ ಲೂಟೆನ್‌ ಮತ್ತು ಝೆಕ್ಸಾಂಥಿನ್‌ನಂಥ ಉತ್ಕರ್ಷಣ ನಿರೋಧಕಗಳು ಇದರಲ್ಲಿವೆ.