Health Tips: ಹುದುಗು ಬರಿಸಿದ ಆಹಾರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
Health Tips: ಹುದುಗು ಬರಿಸಿದ ಆಹಾರದಲ್ಲಿ ಪ್ರೊಬಯೋಟಿಕ್ ಅಂಶ ಹೆಚ್ಚಾಗಿ ಇರಲಿದ್ದು, ಇದು ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡಲಿದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆ ಇರುವವರು ಪ್ರೊಬಯೋಟಿಕ್ ಅಂಶ ಇರುವ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಬಹಳ ಉತ್ತಮ.
ನವದೆಹಲಿ: ಅತೀ ಆರೋಗ್ಯಕರ ಆಹಾರಗಳಲ್ಲಿ ಹುದುಗು ಬರಿಸಿದ ಆಹಾರ ಕ್ರಮಗಳು (Fermented food) ಕೂಡ ಬಹಳ ಮುಖ್ಯವಾದುದು. ನಾವು ನಾನಾ ಬಗೆಯ ದೋಸೆ ಹಾಗೂ ಇಡ್ಲಿ ಮಾಡುವಾಗ ಹಿಟ್ಟನ್ನು ಹುದುಗು ಬರಿಸುತ್ತೇವೆ.ಈ ಹುದುಗು ಬರಿಸಿರುವ ಹಿಟ್ಟಿನಿಂದ ಮಾಡಿದ ಅಡುಗೆ ರುಚಿ ಸಿಗುವುದು ಅಲ್ಲದೆ ಆರೋಗ್ಯಕ್ಕೂ ಒಳ್ಳೆಯದು ಎಂದು ಆಹಾರ ತಜ್ಞರು ಅಭಿಪ್ರಾಯಪಡುತ್ತಾರೆ.
ಪ್ರೊಬಯೊಟಿಕ್ ಅಂದರೆ ಒಳ್ಳೆಯ ಬ್ಯಾಕ್ಟೀರಿಯಾಗಳಿಂದ ಸಮೃದ್ಧವಾದ ಆಹಾರ. ಇದನ್ನು ಸೇವಿಸಿದರೆ ಆರೋಗ್ಯ ಉತ್ತಮವಾಗಿ ಇರುತ್ತದೆ. ಇದರ ಜತೆ ಜೀರ್ಣಶಕ್ತಿ, ಚಯಾಪಚಯ ಕ್ರಿಯೆ, ಕರುಳಿನ ಕೆಲಸ ಸರಿಯಾಗಿ ನಡೆಯುತ್ತವೆ ಎಂದು ಆಹಾರ ತಜ್ಞೆಯಾದ ದೀಪ ಲಕ್ಷ್ಮೀ ಹೇಳಿದ್ದಾರೆ.
ಹುದುಗು ಬರಿಸಿದ ಆಹಾರ ಸೇವಿಸಿದರೆ ಏನೆಲ್ಲ ಲಾಭ ಇದೆ?
*ಹುದುಗು ಬರಿಸಿದ ಆಹಾರದಲ್ಲಿ ಪ್ರೊಬಯೋಟಿಕ್ ಅಂಶ ಹೆಚ್ಚಾಗಿ ಇರಲಿದ್ದು, ಇದು ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆ ಇರುವವರು ಪ್ರೊಬಯೋಟಿಕ್ ಅಂಶ ಇರುವ ಆಹಾರ ಸೇವಿಸಬೇಕು.
*ಹುದುಗು ಬರಿಸಿ ಹಬೆಯಲ್ಲಿ ಬೇಯಿಸಿದ ಇಡ್ಲಿ, ದೋಸೆ ಮೊದಲಾದವು ಅತಿ ಪೌಷ್ಟಿಕ ಆಹಾರವಾಗಿದ್ದು ಅಗತ್ಯ ಪ್ರಮಾಣದ ಪೋಷಕಾಂಶಗಳನ್ನು ಒದಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
*ನೀವು ಹುದುಗು ಬರಿಸಿದ ಇಡ್ಲಿ ಅಥವಾ ಮೊಸರಿನಂತಹ ಆಹಾರ ಸೇವಿಸಿದರೆ ಉರಿಯೂತವನ್ನು ಕಡಿಮೆಯಾಗುತ್ತದೆ. ಕರುಳು ಮತ್ತು ಮೆದುಳಿನ ಸಂಪರ್ಕ ಮೂಲಕ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.
*ಹುದುಗು ಬರಿಸಿದ ಆಹಾರ ಸೇವಿಸದರೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಯಾವುದೇ ಸಾಮಾನ್ಯ ರೋಗ ಬಾರದಂತೆ ತಡೆಗಟ್ಟುತ್ತದೆ.
*ಅಷ್ಟೇ ಅಲ್ಲ ಹುದುಗು ಬರಿಸಿದ ಆಹಾರ ಪೌಷ್ಟಿಕತೆಯಿಂದ ಕೂಡಿದ್ದು, ಅಗತ್ಯ ಪ್ರಮಾಣದ ಪೋಷಕಾಂಶಗಳನ್ನು ಒದಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
*ಇದು ಜೀರ್ಣಕ್ರಿಯೆ ಮತ್ತು ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸಿ ಬ್ಯಾಕ್ಟೀರಿಯಾದ ಸಮತೋಲನವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.
ಪ್ರೊಬಯೋಟಿಕ್ ಎನ್ನುವುದು ಆಹಾರ ಕ್ರಮಕ್ಕೆ ಮುಖ್ಯವಾಗಿ ಬೇಕಾಗಿದ್ದು, ರಾತ್ರಿ ಅನ್ನವನ್ನು ಮಣ್ಣಿನ ಪಾತ್ರೆಯಲ್ಲಿ ಹಾಕಿಟ್ಟು ಬೆಳಗ್ಗೆ ತಿಂದರೆ ಕೂಡ ಜೀರ್ಣಕ್ರಿಯೆಗೆ ಒಳ್ಳೆಯದು.
ಇದನ್ನು ಓದಿ: Bhagya Lakshmi Serial: ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಹೊಸ ತಿರುವು: ಶ್ರೇಷ್ಠಾ ಬಿಟ್ಟು ಮತ್ತೆ ಮನೆಗೆ ಬಂದ ತಾಂಡವ್
ಮಜ್ಜಿಗೆ, ಮೊಸರು, ಹುದುಗು ಬರಿಸಿದ ದೋಸೆ, ಇಡ್ಲಿ ಇತ್ಯಾದಿಯಲ್ಲಿ ಪೋಷಕಾಂಶಗಳು ದೊರೆತು ಆರೋಗ್ಯವೂ ವೃದ್ಧಿಸಲಿದೆ. ಆದರೆ ಸೋಡಿಯಂ ಹೆಚ್ಚು ಇರುವ ಹುದುಗು ಬರಿಸಿದ ಆಹಾರದ ಅತೀಯಾದ ಸೇವನೆ ಉತ್ತಮವಲ್ಲ ಎಂದು ಆಹಾರ ತಜ್ಞೆ ಎಚ್ಚರಿಕೆ ನೀಡಿದ್ದಾರೆ.