#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Thyroid Disorders: ಗರ್ಭಿಣಿ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ! ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?

ಕೆಲವರಲ್ಲಿ ಮೊದಲಿಗೆ ಥೈರಾಯ್ಡ್‌ ಸಮಸ್ಯೆ ಇಲ್ಲದಿದ್ದರೂ ಗರ್ಭಿಣಿಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುವುದುಂಟು. ಹಾಗಾಗಿ ಥೈರಾಯ್ಡ್ ಸಮಸ್ಯೆಯಿದ್ದಾಗ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡು, ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಬಗ್ಗೆ ನಿಗಾ ಇಟ್ಟರೆ ಹೆಚ್ಚು ತೊಂದರೆಯಾಗುವುದನ್ನು ತಪ್ಪಿಸಬಹುದು. ಹಾಗಾದರೆ ಥೈರಾಯ್ಡ್‌ನಿಂದ ಉಂಟಾಗುವ ಗರ್ಭಧಾರಣೆಗೆ ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದರ ಬಗ್ಗೆ ತಜ್ಞರ ವಿವರ ಇಲ್ಲಿದೆ.

ಗರ್ಭಿಣಿ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ! ಇದರ ಅಪಾಯಗಳೇನು?

Thyroid disorders

Profile Pushpa Kumari Feb 12, 2025 5:00 AM

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಥೈರಾಯಿಡ್ ಸಮಸ್ಯೆಯಿಂದ(Thyroid Disorders) ಬಳಲುತ್ತಿದ್ದಾರೆ. ಥೈರಾಯ್ಡ್‌ ಗ್ರಂಥಿಯ ಕಾರ್ಯದಲ್ಲಿ ವ್ಯತ್ಯಾಸ ಉಂಟಾದಾಗ ಹೈಪೋಥೈರಾಯ್ಡ್ ಅಥವಾ ಹೈಪರ್‌ಥೈರಾಯ್ಡ್‌ನಂಥ ಸಮಸ್ಯೆ ಉಂಟಾಗುತ್ತದೆ. ಅದರಲ್ಲೂ ಗರ್ಭಾ ವಸ್ಥೆಯಲ್ಲಿ ಥೈರಾಯಿಡ್ ಸಮಸ್ಯೆ ಉಂಟಾದರೆ ಸಾಕಷ್ಟು ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಥೈರಾಯಿಡ್ ಮತ್ತು ದೇಹದಲ್ಲಿ ಉತ್ಪಾದನೆಯಾಗುವ ಹಾರ್ಮೋನುಗಳು ಪರಸ್ಪರ ಸಂಬಂಧ ವನ್ನು ಹೊಂದಿರುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು. ಥೈರಾಯ್ಡ್ ಅಸಮತೋಲನವು ಅಂಡೋತ್ಪತ್ತಿ ಅಸ್ವಸ್ಥತೆಗಳು, ಹೆಚ್ಚಿದ ಗರ್ಭಧಾರಣೆಯ ನಷ್ಟ, ಅವಧಿಪೂರ್ವ ಜನನ ಮತ್ತು ಶಿಶುಗಳಲ್ಲಿ ಕಡಿಮೆ ಐಕ್ಯೂಗಳನ್ನು ಉಂಟು ಮಾಡಬಹುದು.

ಕೆಲವರಲ್ಲಿ ಮೊದಲಿಗೆ ಥೈರಾಯ್ಡ್‌ ಸಮಸ್ಯೆ ಇಲ್ಲದಿದ್ದರೂ ಗರ್ಭಿಣಿ ಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುವುದುಂಟು, ಹಾಗಾಗಿ ಥೈರಾಯ್ಡ್ ಸಮಸ್ಯೆಯಿದ್ದಾಗ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡು, ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಬಗ್ಗೆ ನಿಗಾ ಇಟ್ಟರೆ ಹೆಚ್ಚು ತೊಂದರೆಯಾಗುವುದನ್ನು ತಪ್ಪಿಸ ಬಹುದು.ಹಾಗಾದರೆ ಥೈರಾಯ್ಡ್‌ನಿಂದ ಉಂಟಾಗುವ ಗರ್ಭಧಾರಣೆಗೆ ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದರ ಬಗ್ಗೆ ತಜ್ಞರ ವಿವರ ಇಲ್ಲಿದೆ.

ಗರ್ಭಿಣಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಥೈರಾಯ್ಡ್ ಅಸ್ವಸ್ಥತೆಗಳು

ಹೈಪೋಥೈರಾಯ್ಡಿಸಮ್:ಥೈರಾಯ್ಡ್ ಗ್ರಂಥಿಯು ಸಾಕಷ್ಟು ಥೈರಾಯ್ಡ್ ಹಾರ್ಮೋನು ಉತ್ಪಾದಿ ಸದಿದ್ದಾಗ ಈ ಸ್ಥಿತಿಯು ಸಂಭವಿಸುತ್ತದೆ. ಗರ್ಭಾವಸ್ಥೆಯಲ್ಲಿ, ಇದು ಅವಧಿ ಪೂರ್ವ ಜನನ ಗರ್ಭಧಾರಣೆಗೆ ತುಂಬಾ ಸಮಯ ತೆಗೆದು ಕೊಳ್ಳು ವುದು, ಇನ್ನು ಕೆಲವರಿಗೆ ಗರ್ಭಧಾರಣೆಯಾಗುವುದೇ ಇಲ್ಲ, ಒಂದು ವೇಳೆ ಗರ್ಭಧಾರಣೆ ಯಾದರೂ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಆರೋಗ್ಯಪೂರ್ಣ ಮಗು ಪಡೆಯು ಸಾಧ್ಯತೆಯೂ ಕಡಿಮೆ,ಜೊತೆಗೆ ಕಡಿಮೆ ತೂಕದ ಜನನ ಮತ್ತು ಮಗುವಿನ ಬೆಳವಣಿಗೆಯ ಸಮಸ್ಯೆಗಳಂತಹ ತೊಡಕುಗಳಿಗೆ ಕಾರಣವಾಗಬಹುದು.

ಹೈಪರ್‌ ಥೈರಾಯ್ಡಿಸಮ್: ಥೈರಾಯ್ಡ್ ಗ್ರಂಥಿಯು ಹೆಚ್ಚು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಿದಾಗ ಮತ್ತು ನಿಮ್ಮ ಥೈರಾಯ್ಡ್ ಗ್ರಂಥಿಯು ಅತಿಯಾಗಿ ಕ್ರಿಯಾಶೀಲವಾದಾಗ ಹೈಪರ್ ಥೈರಾಯ್ಡಿಸಮ್ ಸಂಭವಿಸುತ್ತದೆ ಇದರಲ್ಲಿ ಅವಧಿಪೂರ್ವ ಹೆರಿಗೆ, ಕಡಿಮೆ ತೂಕದ ಜನನ,ಹೆಚ್ಚಿನ ಹೃದಯ ಬಡಿತ, ಹೆಚ್ಚಿನ ಉಷ್ಣಾಂಶವನ್ನು ಸಹಿಸಿಕೊಳ್ಳದಿರುವುದು, ರಕ್ತದೊತ್ತಡದಲ್ಲಿ ಅಪಾಯಕಾರಿ ಏರಿಕೆ,ಥೈರಾಯ್ಡ್‌ ಸಮಸ್ಯೆ ಒಂದೇ ಸಲಕ್ಕೆ ಹೆಚ್ಚಾಗುವುದು ,ತೀವ್ರ ವಾಕರಿಕೆ ಅಥವಾ ವಾಂತಿ, ಸ್ವಲ್ಪಮಟ್ಟಿಗೆ ನಡುಕ, ನಿದ್ರೆಯಲ್ಲಿ ತೊಂದರೆ ಮತ್ತು ತೂಕ ನಷ್ಟ ಸಮಸ್ಯೆ ಕಾಡಲಿದೆ.

ಗರ್ಭಾವಸ್ಥೆಯ ಥೈರಾಯ್ಡಿಟಿಸ್: ಈ ಸ್ಥಿತಿಯು ಗರ್ಭಾವಸ್ಥೆಯಲ್ಲಿ ಅಥವಾ ಸ್ವಲ್ಪ ಸಮಯದ ನಂತರ ಬೆಳವಣಿಗೆಯಾಗಬಹುದು, ಇದು ಹೈಪೋಥೈರಾಯ್ಡಿಸಮ್ ಅಥವಾ ಹೈಪರ್ ಥೈರಾಯ್ಡಿಸಮ್ ಕಾರಣವಾಗಬಹುದು ಮತ್ತು ತಾಯಿ ಮತ್ತು ಭ್ರೂಣದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.ಗರ್ಭಾವಸ್ಥೆಯಲ್ಲಿ ಥೈರಾಯ್ಡ್‌ ರೋಗಕ್ಕೆ ಚಿಕಿತ್ಸೆಯನ್ನು ನೀಡದಿದ್ದಲ್ಲಿ ಅದು ಅವಧಿಗೆ ಮುನ್ನವೇ ಮಗುವಿನ ಜನನ, ರಕ್ತದೊತ್ತಡದಲ್ಲಿ ತೀವ್ರವಾದ ಗರ್ಭಪಾತ, ಮತ್ತು ಕಡಿಮೆ ತೂಕ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಪ್ರಸವಾನಂತರದ ಥೈರಾಯ್ಡಿಟಿಸ್: ಈ ಅಸ್ವಸ್ಥತೆಯು ಹೆರಿಗೆಯ ನಂತರ ಸಂಭವಿಸಿ ಥೈರಾಯ್ಡ್ ಹಾರ್ಮೋನ್ ಮಟ್ಟದಲ್ಲಿ ಏರುಪೇರುಗಳನ್ನು ಉಂಟುಮಾಡಬಹುದು, ಇದು ಸಾಮಾನ್ಯ ವಾಗಿ ತಾತ್ಕಾಲಿಕ ಹೈಪೋಥೈರಾಯ್ಡಿಸಮ್ ಅಥವಾ ಹೈಪರ್ ಥೈರಾ ಯ್ಡಿಸಮ್ ಕಾರಣವಾಗುತ್ತದೆ. ಇದು ಸ್ತನ್ಯಪಾನ ಮತ್ತು ತಾಯಿಯ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. 

ಇದನ್ನು ಓದಿ: Health Tips: ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಸಿಗಲಿದೆ ಇಷ್ಟೆಲ್ಲ ಆರೋಗ್ಯ ಭಾಗ್ಯ

ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಅಸ್ವಸ್ಥತೆಗಳು: ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ ಉಂಟಾದಾಗ ಹೈಪೋ ಥೈರಾಯ್ಡಿಸಮ್, ಹೈಪರ್ ಥೈರಾಯ್ಡಿಸಮ್ ಪ್ರಕ್ರಿಯೆಗೆ ಅಡ್ಡಿ ಯಾಗಬಹುದು. ಇದರಿಂದ ಥೈರಾಯ್ಡ್ ಅಸ್ವಸ್ಥತೆಗಳು ಹೃದಯ ಸಮಸ್ಯೆಗಳು, ತೀವ್ರ ಆಯಾಸ ಮತ್ತು ರಕ್ತಹೀನತೆ ಸೇರಿದಂತೆ ಗರ್ಭಿಣಿ ಮಹಿಳೆಯರಿಗೆ ಅನೇಕ ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು.