ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟ ಅಖಿಲ್‌ಗಿಂತ ಪತ್ನಿ ಜೈನಬ್‌ 10 ವರ್ಷ ದೊಡ್ಡವರಾ? ಮೊದಲ ಬಾರಿಗೆ ಎಲ್ಲದಕ್ಕೂ ಪ್ರಬುದ್ಧ ಉತ್ತರ ನೀಡಿದ ನಾಗಾರ್ಜುನ ಪುತ್ರ!

'ಲೆನಿನ್' ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟ ಅಖಿಲ್ ಅಕ್ಕಿನೇನಿ, ತಮ್ಮ ಪತ್ನಿ ಜೈನಬ್ ಅವರ ಧರ್ಮ ಹಾಗೂ ಇಬ್ಬರ ನಡುವಿನ 10 ವರ್ಷಗಳ ವಯಸ್ಸಿನ ಅಂತರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಡೆದ ಟ್ರೋಲ್‌ಗಳಿಗೆ ಮೊದಲ ಬಾರಿಗೆ ಪ್ರಬುದ್ಧವಾಗಿ ಉತ್ತರಿಸಿದ್ದಾರೆ.

ಪತ್ನಿ ಜೈನಬ್ ವಯಸ್ಸಿನ ಅಂತರದ‌ ಬಗ್ಗೆ ಟ್ರೋಲ್ಸ್; ನಟ ಅಖಿಲ್ ಹೇಳಿದ್ದೇನು?

-

Avinash GR
Avinash GR Jul 26, 2026 8:13 PM

‘ಲೆನಿನ್’ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟ ಅಖಿಲ್ ಅಕ್ಕಿನೇನಿ, ತಮ್ಮ ವೈಯಕ್ತಿಕ ಜೀವನದ ಮೇಲಿನ ಟ್ರೋಲ್‌ಗಳ ಕುರಿತು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಜೈನಬ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಖಿಲ್, ತಮ್ಮ ಪತ್ನಿಯ ಧರ್ಮ ಹಾಗೂ ಇಬ್ಬರ ನಡುವಿನ 10 ವರ್ಷಗಳ ವಯಸ್ಸಿನ ಅಂತರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಡೆದ ನೆಗಟಿವ್‌ ಕಾಮೆಂಟ್‌ಗಳಿಗೆ ಪ್ರಬುದ್ಧವಾಗಿ ಉತ್ತರಿಸಿದ್ದಾರೆ. ಇತ್ತೀಚೆಗೆ ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂತಹ ಟ್ರೋಲ್‌ಗಳನ್ನು ತಾವಿಬ್ಬರೂ ‘ಆಶೀರ್ವಾದ’ ಎಂದೇ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.

1 ವರ್ಷದ ಟ್ರೋಲ್ ಮುಖ್ಯವೇ? 50 ವರ್ಷಗಳ ಜೀವನ ಮುಖ್ಯವೇ?

ತಮ್ಮ ಮೇಲಿನ ನೆಗೆಟಿವ್ ಕಾಮೆಂಟ್‌ಗಳ ಕುರಿತು ಮಾತನಾಡಿದ ಅಖಿಲ್, "ಸಮಾಜದಲ್ಲಿ ಕೆಲ ದಿನಗಳು ಅಥವಾ ಒಂದು ವರ್ಷ ಬಂದು ಹೋಗುವ ಕಾಮೆಂಟ್‌ಗಳ ಬಗ್ಗೆ ಯೋಚಿಸಬೇಕೇ ಅಥವಾ ಮುಂಬರುವ 50 ವರ್ಷಗಳ ನನ್ನ ದಾಂಪತ್ಯ ಜೀವನದ ಬಗ್ಗೆ ಯೋಚಿಸಬೇಕೇ? ನಾನು ಅತ್ಯಂತ ಪ್ರೈವೇಟ್ ಪರ್ಸನ್. ಮದುವೆಗೆ ಮುಂಚೆಯೇ ನಾವಿಬ್ಬರೂ ಈ ಬಗ್ಗೆ ಸ್ಪಷ್ಟವಾಗಿ ಮಾತನಾಡಿಕೊಂಡಿದ್ದೆವು. ಹಾಗಾಗಿ ಇಂತಹ ಕಾಮೆಂಟ್‌ಗಳು ನನಗೆ ಚರ್ಚಿಸುವ ವಿಷಯವೇ ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ʻನನ್ನ ಆಕ್ಟಿಂಗ್‌ ನೋಡಿ ನನಗೇ ಅಸಹ್ಯ ಎನಿಸಿತ್ತುʼ; ನಟ ಅಖಿಲ್‌ ಅಕ್ಕಿನೇನಿ ಪ್ರಾಮಾಣಿಕ ಮಾತುಗಳಿಗೆ ಬಹುಪರಾಕ್‌

"ನನ್ನ ಪತ್ನಿಗೆ ನಾನು ಮೊದಲೇ, ʻನಾನೊಬ್ಬ ನಟ. ಒಮ್ಮೆ ನೀನು ನನ್ನ ಜೀವನಕ್ಕೆ ಬಂದ ಮೇಲೆ ನೆಗೆಟಿವ್ ಕಾಮೆಂಟ್ಗಳು ಬರುತ್ತವೆ. ಸಿದ್ಧವಾಗಿರು' ಅಂತ ಎಂದೋ ಹೇಳಿದ್ದೆ. ಆಕೆ ಅದನ್ನು ಅರ್ಥಮಾಡಿಕೊಂಡಳು. ಜೀವನದ ಬಗ್ಗೆ ಆಕೆಗೆ ಅಂತಹ ತಿಳುವಳಿಕೆ ಇದೆ. ತುಂಬಾ ಪ್ರಬುದ್ಧವಾಗಿ ಯೋಚಿಸುತ್ತಾಳೆ. ವಯಸ್ಸು, ಧರ್ಮದ ಬಗ್ಗೆ ಮಾಡುವ ಕಾಮೆಂಟ್ಗಳನ್ನು ಎಲ್ಲರೂ ಸಕಾರಾತ್ಮಕವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಆದರೆ ನನ್ನ ಪತ್ನಿ ಎಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಂಡಳು. ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಳು. ಟ್ರೋಲಿಂಗ್ ಅನ್ನೇ ತಾವು ಆಶೀರ್ವಾದವಾಗಿ ಸ್ವೀಕರಿಸಿದೆವು" ಎಂದು ಅಖಿಲ್ ತಿಳಿಸಿದರು.‌

Lenin Event: ಅಖಿಲ್ 'ಲೆನಿನ್' ಸಿನಿಮಾದಲ್ಲಿ ಅದೊಂದು ತಪ್ಪು ಮಾಡಿಬಿಟ್ಟೆ; ನಟ ನಾಗಾರ್ಜುನ

ನನ್ನ ಕಷ್ಟದ ದಿನಗಳ ಲೇಡಿ ಲಕ್ ಜೈನಬ್

ಕಳೆದ ನಾಲ್ಕಾರು ವರ್ಷಗಳಿಂದ ಜೈನಬ್ ತಮ್ಮ ಜೊತೆ ಪ್ರಯಾಣಿಸುತ್ತಿದ್ದು, ಕಷ್ಟದ ಹಂತದಲ್ಲಿ ತಮಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಅಖಿಲ್ ಹೇಳಿದ್ದಾರೆ. "ನನ್ನ ಕಷ್ಟದ ಪರಿಸ್ಥಿತಿಯನ್ನೂ ಆಕೆ ನೋಡಿದ್ದಾಳೆ. ಈಗ ನನ್ನ 'ಲೇಡಿ ಲಕ್' ಆಗಿ ಬದಲಾಗಿದ್ದಾಳೆ. ಒಬ್ಬ ಗಂಡನಾಗಿ ನಾನು ಆಕೆಯ ಪಕ್ಕದಲ್ಲಿ ನಿಲ್ಲಬಹುದು, ಆದರೆ ಸೋಶಿಯಲ್ ಮೀಡಿಯಾ ಟ್ರೋಲ್‌ಗಳನ್ನು ಆಕೆ ಸ್ವತಃ ಎದುರಿಸಿದ ರೀತಿ ನನಗಷ್ಟೇ ಗೊತ್ತು" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸಂಬಂಧಗಳ ಬಗ್ಗೆ ಅಖಿಲ್ ಕಿವಿಮಾತು

ಸಂದರ್ಶನದಲ್ಲಿ ದಾಂಪತ್ಯ ಜೀವನದ ಮಹತ್ವದ ಬಗ್ಗೆ ಮಾತನಾಡಿದ ಅವರು, "ಒಂದು ರಿಲೇಶನ್‌ಶಿಪ್‌ಗೆ ಕಮಿಟ್ ಆದ ನಂತರ ನಮ್ಮ ಸಂಗಾತಿಯೇ ನಮ್ಮ ಮೊದಲ ಆದ್ಯತೆಯಾಗಬೇಕು. ಹಾಗಿಲ್ಲದಿದ್ದರೆ ಗಂಡ-ಹೆಂಡತಿಯ ಮಧ್ಯೆ ಮಾತ್ರವಲ್ಲದೆ ಪೋಷಕರು ಮತ್ತು ಸ್ನೇಹಿತರ ಮಧ್ಯೆಯೂ ಅಂತರ ಬರಲು ಶುರುವಾಗುತ್ತದೆ. ದಂಪತಿಗಳ ಬಾಂಧವ್ಯವನ್ನು 1% ಕೂಡ ನಿರ್ಲಕ್ಷಿಸಬಾರದು, ಏಕೆಂದರೆ ಇದು ಜೀವನವನ್ನೇ ಬದಲಾಯಿಸುವ ಸಂಬಂಧ" ಎಂದು ಹೇಳಿದ್ದಾರೆ.