ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈರಲ್ ಉಸಿರಾಟದ ಸೋಂಕು: ಆರಂಭಿಕ ಹಂತದ ವೈದ್ಯಕೀಯ ಚಿಕಿತ್ಸೆ ಪಡೆಯಲು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರ ಸಲಹೆ

ವೈರಲ್ ಉಸಿರಾಟದ ಸೋಂಕುಗಳು ಚಳಿಗಾಲದಲ್ಲಿ ಸಾಮಾನ್ಯವಾಗಿದ್ದರೂ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ ಎಂದು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಮತ್ತು ಮೊದಲೇ ಆರೋಗ್ಯ ಸಮಸ್ಯೆ ಇರುವವರಲ್ಲಿ ಈ ರೋಗ ಲಕ್ಷಣಗಳು ದೀರ್ಘಕಾಲದವರೆಗೆ ಕಂಡುಬರುತ್ತಿವೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವೈರಲ್ ಉಸಿರಾಟದ ಸೋಂಕು

-

Ashok Nayak
Ashok Nayak Jan 23, 2026 2:20 PM

ಬೆಂಗಳೂರು: ಕಳೆದ ಕೆಲವು ವಾರಗಳಿಂದ ಫೋರ್ಟಿಸ್ ಆಸ್ಪತ್ರೆ ಕನ್ನಿಂಗ್‌ಹ್ಯಾಮ್ ರಸ್ತೆ ಸೇರಿದಂತೆ ಬೆಂಗಳೂರಿನಾದ್ಯಂತ ಹಲವು ಆಸ್ಪತ್ರೆಗಳಲ್ಲಿ ವೈರಲ್ ಉಸಿರಾಟದ ಸೋಂಕು ಗಳ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ಜಾಸ್ತಿಯಾಗುತ್ತಿವೆ. ರೋಗಿಗಳು ನೆಗಡಿ, ಕೆಮ್ಮು, ಜ್ವರ, ಸ್ನಾಯು ನೋವು ಮತ್ತು ಅಸ್ವಸ್ಥತೆಯ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗು ತ್ತಿದ್ದಾರೆ. ಎಲ್ಲಾ ವಯೋಮಾನದವರೂ ಈ ರೀತಿಯ ವೈರಲ್ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದಂತೆ ಹೊರರೋಗಿ ಮತ್ತು ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗ ಭೇಟಿ ನೀಡುವವರ ಸಂಖ್ಯೆಯಲ್ಲಿ ಸ್ಥಿರವಾಗಿ ಏರಿಕೆಯಾಗುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ವೈರಲ್ ಉಸಿರಾಟದ ಸೋಂಕುಗಳು ಚಳಿಗಾಲದಲ್ಲಿ ಸಾಮಾನ್ಯವಾಗಿದ್ದರೂ ಕಳೆದ ವರ್ಷ ದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ ಎಂದು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ವಿಶೇಷ ವಾಗಿ ಮಕ್ಕಳು, ಹಿರಿಯ ನಾಗರಿಕರು ಮತ್ತು ಮೊದಲೇ ಆರೋಗ್ಯ ಸಮಸ್ಯೆ ಇರುವವರಲ್ಲಿ ಈ ರೋಗ ಲಕ್ಷಣಗಳು ದೀರ್ಘಕಾಲದವರೆಗೆ ಕಂಡುಬರುತ್ತಿವೆ.

ಈ ಕುರಿತು ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಇಂಟರ್ನಲ್ ಮೆಡಿಸಿನ್ ವಿಭಾಗದ ಕನ್ಸಲ್ಟೆಂಟ್ ಡಾ.ಜಿ ನಾಸಿರುದ್ದೀನ್ ಮಾತನಾಡಿ, "ಕಳೆದ ಕೆಲವು ವಾರಗಳಿಂದ ಫೋರ್ಟಿಸ್ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಪ್ರತಿದಿನ ಸರಾಸರಿ 5 ರಿಂದ 10 ವೈರಲ್ ಉಸಿರಾಟದ ಸೋಂಕಿನ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಕಳೆದ ವರ್ಷ ಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ರೋಗಿಗಳು ದೀರ್ಘಕಾಲದವರೆಗೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: Drumstick Health Benefits: ತೂಕ ಇಳಿಸುವುದಕ್ಕೆ ನುಗ್ಗೆ ನೆರವಾಗುವುದೇ? ಯಾವ ರೀತಿ ಬಳಸಿದರೆ ಉತ್ತಮ?

ಹೆಚ್ಚಿನ ವೈರಲ್ ಸೋಂಕುಗಳು ತಾನಾಗಿಯೇ ಗುಣವಾಗುತ್ತವೆಯಾದರೂ, ವೈದ್ಯಕೀಯ ಚಿಕಿತ್ಸೆಯಲ್ಲಿ ವಿಳಂಬ, ಸ್ವಯಂ-ಮದ್ದು ತೆಗೆದುಕೊಳ್ಳುವುದು ಮತ್ತು ಆರಂಭಿಕ ಹಂತದ ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷಿಸುವುದರಿಂದ ನ್ಯುಮೋನಿಯಾ, ಅಸ್ತಮಾ ಉಲ್ಬಣ ಗೊಳ್ಳುವುದು ಮತ್ತು ದೀರ್ಘಕಾಲದ ಶ್ವಾಸಕೋಶ ಅಥವಾ ಹೃದಯ ಸಂಬಂಧಿ ಕಾಯಿಲೆ ಗಳು ಉಲ್ಬಣಗೊಳ್ಳುವಂತಹ ಅಪಾಯಗಳಿವೆ. ಜನರು ಮನೆಮದ್ದುಗಳು ಅಥವಾ ಅನಗತ್ಯ ಆಂಟಿಬಯೋಟಿಕ್‌ಗಳನ್ನು ಅವಲಂಬಿಸುವ ಬದಲು, ರೋಗಲಕ್ಷಣಗಳು ಕೆಲವು ದಿನಗಳಿ ಗಿಂತ ಹೆಚ್ಚು ಕಾಲ ಮುಂದುವರಿದರೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯಬೇಕು" ಎಂದು ತಿಳಿಸಿದ್ದಾರೆ.

ವೈರಲ್ ಉಸಿರಾಟದ ಸೋಂಕುಗಳು ಹೆಚ್ಚಾಗಲು ಕಾರಣಗಳು:

● ಹವಾಮಾನದಲ್ಲಿನ ಹಠಾತ್ ಬದಲಾವಣೆ: ಇದು ದೇಹದ ರೋಗನಿರೋಧಕ ಶಕ್ತಿಯ ಮೇಲೆ ಒತ್ತಡ ಉಂಟುಮಾಡುತ್ತದೆ.

● ಗಾಳಿಯ ಸಂಚಾರ ಕಡಿಮೆ ಇರುವ ಕಡೆಗಳಲ್ಲಿ ಜನದಟ್ಟಣೆ: ಸರಿಯಾದ ಗಾಳಿ-ಬೆಳಕಿಲ್ಲದ ಒಳಾಂಗಣ ಪ್ರದೇಶಗಳಲ್ಲಿ ಹೆಚ್ಚು ಜನರು ಸೇರುವುದು.

● ಕಡಿಮೆ ರೋಗನಿರೋಧಕ ಶಕ್ತಿ: ಪೌಷ್ಟಿಕಾಂಶದ ಕೊರತೆ, ಒತ್ತಡ ಅಥವಾ ನಿದ್ರೆಯ ಅಭಾವದಿಂದಾಗಿ ರೋಗನಿರೋಧಕ ಶಕ್ತಿ ಕುಗ್ಗುವುದು.

● ಸೋಂಕಿತ ವ್ಯಕ್ತಿಗಳ ಸಂಪರ್ಕ: ಮನೆ, ಶಾಲೆ ಅಥವಾ ಕೆಲಸದ ಸ್ಥಳಗಳಲ್ಲಿ ಸೋಂಕಿರುವ ವ್ಯಕ್ತಿಗಳಿಂದ ಸೋಂಕು ಹರಡಬಹುದು.

● ಮೊದಲೇ ಕಾಡುವ ಆರೋಗ್ಯ ಸಮಸ್ಯೆಗಳು: ಅಸ್ತಮಾ, ಸಿಒಪಿಡಿ, ಮಧುಮೇಹ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿರುವವರಲ್ಲಿ ಅಪಾಯ ಹೆಚ್ಚು.

● ಪೂರ್ಣವಾಗಿ ಚೇತರಿಕೆ ಹೊಂದಾಡಿರುವುದು: ಹಿಂದಿನ ವೈರಲ್ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖವಾಗದಿರುವುದು.

ಸಾಮಾನ್ಯ ಲಕ್ಷಣಗಳು:

● ಜ್ವರ, ಚಳಿ, ಮೈಕೈ ನೋವು, ಆಯಾಸ, ತಲೆನೋವು ಮತ್ತು ಹಸಿವು ಕಡಿಮೆಯಾಗುವುದು.

● ಗಂಟಲು ನೋವು, ಮೂಗು ಸೋರುವುದು ಅಥವಾ ಮೂಗು ಕಟ್ಟುವುದು.

● ಕಫದೊಂದಿಗೆ ನಿರಂತರ ಕೆಮ್ಮು ಅಥವಾ ಕಫವಿಲ್ಲದ ಕೆಮ್ಮು.

● ಉಸಿರುಕಟ್ಟುವಿಕೆ, ವೀಸಿಂಗ್ ಅಥವಾ ಎದೆ ಬಿಗಿದಂತಾಗುವುದು.

● ಗಂಭೀರ ಪ್ರಕರಣಗಳಲ್ಲಿ ವೇಗವಾಗಿ ಉಸಿರಾಡುವುದು, ಗೊಂದಲದ ಸ್ಥಿತಿ ಅಥವಾ ತುಟಿಗಳು ನೀಲಿ ಬಣ್ಣಕ್ಕೆ ತಿರುಗುವುದು.

ಸೋಂಕಿನ ಅಪಾಯ ಮತ್ತು ಹರಡುವಿಕೆಯನ್ನು ತಡೆಗಟ್ಟಲು ಮಾಡಬಹುದಾದ ಮುನ್ನೆಚ್ಚರಿಕೆಗಳು:

● ನೈರ್ಮಲ್ಯ ಕಾಪಾಡಿ: ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವ ಮೂಲಕ ಉಸಿರಾಟದ ಶಿಸ್ತನ್ನು ಪಾಲಿಸಿ.

● ಜನ ಸಂಪರ್ಕ ತಪ್ಪಿಸಿ: ಅನಾರೋಗ್ಯ ಇರುವವರಿಂದ ದೂರವಿರಿ. ಜನದಟ್ಟಣೆ ಇರುವ ಅಥವಾ ಗಾಳಿಯ ಸಂಚಾರ ಕಡಿಮೆ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ.

● ಗಾಳಿಯ ಸಂಚಾರ: ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಸಾಕಷ್ಟು ಗಾಳಿ ಮತ್ತು ಬೆಳಕು ಇರುವಂತೆ ನೋಡಿಕೊಳ್ಳಿ.

● ಆರೋಗ್ಯಕರ ಜೀವನಶೈಲಿ: ಸಾಕಷ್ಟು ನೀರು ಕುಡಿಯಿರಿ, ಸಮತೋಲಿತ ಆಹಾರ ಸೇವಿಸಿ, ಸರಿಯಾದ ವಿಶ್ರಾಂತಿ ಪಡೆಯಿರಿ ಹಾಗೂ ಧೂಮಪಾನ ಅಥವಾ ಕಲುಷಿತ ಗಾಳಿಯಿಂದ ದೂರವಿರಿ.

● ಸ್ವಯಂ-ಮದ್ದು ಬೇಡ: ವೈದ್ಯರ ಸಲಹೆಯಿಲ್ಲದೆ ಆಂಟಿಬಯೋಟಿಕ್‌ಗಳನ್ನು ಸೇವಿಸ ಬೇಡಿ; ಹೆಚ್ಚಿನ ಅಪಾಯದ ಸಾಧ್ಯತೆ ಇರುವವರು ರೋಗ ಲಕ್ಷಣಗಳು ಕಂಡ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯಿರಿ.

ಯಾವಾಗ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು:

● ನಿರಂತರ ಕಾಡುವ ತೀವ್ರ ಜ್ವರ: ಜ್ವರ ಕಡಿಮೆಯಾಗದೆ ದೀರ್ಘಕಾಲ ಮುಂದುವರಿದರೆ.

● ಉಸಿರಾಟದ ತೊಂದರೆ ಹೆಚ್ಚಾಗುವುದು: ಚಿಕಿತ್ಸೆಯ ಹೊರತಾಗಿಯೂ ಹೆಚ್ಚುತ್ತಿರುವ ಉಸಿರಾಟದ ತೊಂದರೆ, ಎದೆ ನೋವು ಅಥವಾ ಕೆಮ್ಮು ಮತ್ತುವೀಸಿಂಗ್ ಕಾಣಿಸಿಕೊಂಡರೆ.

● ಹಠಾತ್ ಸುಸ್ತು: ಇದ್ದಕ್ಕಿದ್ದಂತೆ ಸುಸ್ತು, ಗೊಂದಲ ಅಥವಾ ತುಟಿ ಮತ್ತು ಬೆರಳುಗಳು ನೀಲಿ ಬಣ್ಣಕ್ಕೆ ತಿರುಗುವುದು.

ವೈರಲ್ ಉಸಿರಾಟದ ಸೋಂಕುಗಳು ಹೆಚ್ಚುತ್ತಿವೆ. ಈ ಸಂದರ್ಭದಲ್ಲಿ ನಾವು ತೆಗೆದು ಕೊಳ್ಳುವ ಸಣ್ಣ ಮುನ್ನೆಚ್ಚರಿಕೆಗಳು ಕೂಡ ದೊಡ್ಡ ಬದಲಾವಣೆ ತರಬಲ್ಲವು ಎಂಬುದನ್ನು ನೆನಪಿಟ್ಟುಕೊಳ್ಳಿ. ರೋಗಲಕ್ಷಣಗಳನ್ನು ಮೊದಲೇ ಗುರುತಿಸಿ. ಜವಾಬ್ದಾರಿಯುತವಾಗಿ ಆರೈಕೆ ಮಾಡಿಕೊಳ್ಳಿ.

ಸಮಯೋಚಿತ ವೈದ್ಯಕೀಯ ಸಲಹೆ ಮತ್ತು ರೋಗ ತಡೆಗಟ್ಟುವ ಸರಳ ಕ್ರಮಗಳು ಕಾಯಿಲೆ ಯ ತೀವ್ರತೆಯನ್ನು ಗಣನೀಯವಾಗಿ ಕಡಿಮೆ ಮಾಡುವುದಲ್ಲದೆ, ಸೋಂಕು ಹರಡುವು ದನ್ನು ತಡೆಯಲು ಸಹಾಯ ಮಾಡುತ್ತವೆ. ಹೆಚ್ಚಿನ ವೈರಲ್ ಉಸಿರಾಟದ ಸೋಂಕುಗಳನ್ನು ಆರಂಭಿಕ ಹಂತದ ಸಮಾಲೋಚನೆ ಮತ್ತು ಪೂರಕ ಆರೈಕೆಯ ಮೂಲಕ, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದೆಯೇ ಪರಿಣಾಮಕಾರಿಯಾಗಿ ಗುಣಪಡಿಸಬಹುದು.