ಬೆಂಗಳೂರು: ದೃಷ್ಟಿ ದೋಷ (Vision Defect) ಎಂಬುದು ಈ ಹಿಂದೆ ಕೇವಲ 40-50 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದಿನ ದಿನಮಾನಗಳಲ್ಲಿ ಚಿಕ್ಕ ಮಕ್ಕಳಲ್ಲೂ ಇದು ಯಥೇಚ್ಛವಾಗಿ ಕಂಡುಬರುತ್ತಿದೆ. ಪುಟ್ಟ ಮಕ್ಕಳೆಲ್ಲ ದಪ್ಪನೆಯ ಕನ್ನಡಕ ಧರಿಸಿ ಓಡಾಡುವುದನ್ನು ನಾವು ನೀವೆಲ್ಲಾ ನೋಡುತ್ತಿದ್ದೇವೆ. ಈ ಬದಲಾವಣೆಗೆ ಪ್ರಮುಖ ಕಾರಣಗಳೇನು ಎಂಬುವುದನ್ನು ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಖ್ಯಾತ ಆಯುರ್ವೇದ ತಜ್ಞರಾದ ಮಲ್ಲಿಕಾರ್ಜುನ ಡಂಬಳ್ ವಿವರಿಸಿದ್ದಾರೆ.
ಆಯುರ್ವೇದ ತಜ್ಞರಾದ ಮಲ್ಲಿಕಾರ್ಜುನ ಡಂಬಳ್ ಅವರ ಪ್ರಕಾರ, ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿ ದೃಷ್ಟಿ ದೋಷ ಹೆಚ್ಚಾಗಲು ಶರೀರದ 'ಆಲೋಚಕ ಪಿತ್ತ' ಅಥವಾ ತೇಜಸ್ಸು ಕುಂದುತ್ತಿರುವುದು ಪ್ರಮುಖ ಕಾರಣ. ಆಯುರ್ವೇದದಲ್ಲಿ ಕಣ್ಣು, ಹೃದಯ ಮತ್ತು ಮೆದುಳನ್ನು ಅತ್ಯಂತ ಹೆಚ್ಚು ತೇಜಸ್ಸು ಹೊಂದಿರುವ ಭಾಗಗಳೆಂದು ಪರಿಗಣಿಸಲಾಗಿದೆ. ಸತ್ತ ಜೀವಿಯ ಕಣ್ಣಿಗೂ ಜೀವಂತ ಜೀವಿಯ ಕಣ್ಣಿಗೂ ಇರುವ ಹೊಳಪಿನ ವ್ಯತ್ಯಾಸವೇ ಈ ತೇಜಸ್ಸು.
ಮಕ್ಕಳಲ್ಲಿ ದೃಷ್ಟಿ ದೋಷಕ್ಕೆ ಕಾರಣಗಳು:
ಅಗ್ನಿಗೆ ಬಲ ನೀಡುವ ಪೌಷ್ಟಿಕ ಆಹಾರದ ಸೇವನೆ ಕಡಿಮೆಯಾಗಿರುವುದು. ಜೀರ್ಣಾಂಗವ್ಯೂಹದ 'ಡಿಯೋಡಿನ್' ಭಾಗದಲ್ಲಿ ಪಿತ್ತ ಅಶುದ್ಧವಾಗುವುದು. ಇದು ಅಶುದ್ಧವಾದಾಗ ಕಣ್ಣಿನ ಆರೋಗ್ಯ ಕ್ಷೀಣಿಸುತ್ತದೆ.
Health Tips: ಅರಿಶಿನದ ಹಾಲಿನ ಸೇವನೆ: ಅತಿಯಾದರೆ ಅಮೃತವೂ ವಿಷ; ಈ ಆರೋಗ್ಯ ಸಮಸ್ಯೆ ಇರುವವರು ಎಚ್ಚರ!
ಆಯುರ್ವೇದ ಚಿಕಿತ್ಸಾ ವಿಧಾನಗಳು:
ಆಯುರ್ವೇದವು ಕೇವಲ ರೋಗಲಕ್ಷಣಗಳಿಗಲ್ಲದೆ, ಸಮಸ್ಯೆಯ ಮೂಲಕ್ಕೆ (ಬೇರಿಗೆ) ಚಿಕಿತ್ಸೆ ನೀಡುತ್ತದೆ. ಪ್ರಮುಖವಾಗಿ 'ನೇತ್ರ ಪಂಚಕರ್ಮ' ಎನ್ನುವ ಐದು ವಿಶೇಷ ಚಿಕಿತ್ಸಾ ವಿಧಾನಗಳ ಮೂಲಕ ಕಣ್ಣಿನ ಆರೋಗ್ಯವನ್ನು ವೃದ್ಧಿಸಬಹುದು. 'ಗುಡ್‌ಗಟ್' ಎಂಬ ಔಷಧ ವಿಧಾನವು ಎಲ್ಲ ರೀತಿಯ ಕಣ್ಣಿನ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ. ಅಲೋಪತಿಯಲ್ಲಿ ರೆಟಿನಾ ಸಮಸ್ಯೆಗಳಿಗೆ ಚಿಕಿತ್ಸೆ ಮಿತವಾಗಿದ್ದರೂ, ಆಯುರ್ವೇದದಲ್ಲಿ ಶ್ವೇತ ಮಂಡಲ, ಕೃಷ್ಣ ಮಂಡಲಗಳ ದೋಷಗಳನ್ನು ಗುರುತಿಸಿ ಅದ್ಭುತ ಚಿಕಿತ್ಸೆ ನೀಡಲು ಸಾಧ್ಯವಿದೆ.
ಶ್ರೀ ಪರಮಹಂಸ ಅಥರ್ವಾಯ ಧಾಮವು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ತನ್ನ ಕೇಂದ್ರಗಳಲ್ಲಿ ಎಲ್ಲ ವಯೋಮಿತಿಯವರಿಗೂ ನೇತ್ರ ಪಂಚಕರ್ಮಗಳ ಮೂಲಕ ಯಶಸ್ವಿ ಚಿಕಿತ್ಸೆ ನೀಡುತ್ತಿದೆ. ದೃಷ್ಟಿ ದೋಷ ಆರಂಭಿಕ ಹಂತದಲ್ಲಿದ್ದಾಗ ಇಂತಹ ಆಯುರ್ವೇದ ಚಿಕಿತ್ಸೆಗಳು ವೇಗವಾಗಿ ಫಲಿತಾಂಶ ನೀಡುತ್ತವೆ.