ಬೆಂಗಳೂರು: ಮಣ್ಣಿನ ಪಾತ್ರೆಯಲ್ಲಿ ಆಹಾರ ತಯಾರಿಸಿ ಸಿದ್ಧಪಡಿಸಿ ಸೇವಿಸುವುದರಿಂದ ಸಾಕಷ್ಟು ಪ್ರಯೋಜನವಿದೆ. ಇದರಲ್ಲಿ ಮುಖ್ಯವಾಗಿ ಅದು ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ (Dr. Suttur Malini). 'ವಿಶ್ವವಾಣಿ ಹೆಲ್ತ್' (Vishwavani Health) ಯುಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಆರೋಗ್ಯವನ್ನು ನಿರ್ಧಾರ ಮಾಡುವಲ್ಲಿ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ಮಡಕೆಯಲ್ಲಿ ಆಹಾರ ತಯಾರಿಸಲಾಗುತ್ತಿತ್ತು. ಅದರಲ್ಲೇ ಸೇವಿಸಲಾಗುತ್ತಿತ್ತು. ಬಳಿಕ ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳು ಬಂದವು. ಆದರೆ ಈಗ ಮತ್ತೆ ಮಡಿಕೆ ಪಾತ್ರೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಈಗ ಮಣ್ಣಿನ ಪಾತ್ರೆಗಳ ಮಹತ್ವದ ಅರಿವು ಮೂಡಿದೆ ಎಂದರು.
ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ:
ನಮ್ಮ ಆರೋಗ್ಯವನ್ನು ನಿರ್ಧಾರ ಮಾಡುವುದು ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು. ದೇಹದಲ್ಲಿ ಎಷ್ಟು ಜೀವಕೋಶಗಳಿವೆಯೋ ಅಷ್ಟೇ ವೈರಾಣುಗಳು ಕೂಡ ಇವೆ. ಇದರಲ್ಲಿ ಪರೋಪಕಾರಿ, ಕೆಟ್ಟದು ಮಾಡುವಂತ ಬ್ಯಾಕ್ಟೀರಿಯಾಗಳು ಕೂಡ ಇವೆ. ಇವುಗಳು ನಮ್ಮ ದೇಹ, ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಬೊಜ್ಜು ಕರಗಿಸುವುದು ಹೇಗೆ? ಏನು ಹೇಳುತ್ತಾರೆ ತಜ್ಞರು?
ಕೆಲವೊಂದು ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ಪರೋಪಕಾರಿ ಜೀವಕೋಶಗಳನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಇವು ಕರುಳಿನ ಆರೋಗ್ಯಕ್ಕೂ ಕೂಡ ಅತಿ ಮುಖ್ಯ. ಅಂತಹ ಆಹಾರಗಳಲ್ಲಿ ಹಿಂದಿನ ದಿನ ಉಳಿದಿರುವ ಅನ್ನವನ್ನು ಮಡಿಕೆಯಲ್ಲಿಟ್ಟು ಮರುದಿನ ಅದಕ್ಕೆ ಮೊಸರು, ಉಪ್ಪು, ಮೆಣಸು ಹಾಕಿ ಸೇವಿಸುವುದು ಕೂಡ ಒಂದು. ಇದು ಅತ್ಯಂತ ಉತ್ಕೃಷ್ಟ ಆಹಾರವಾಗಿದೆ. ಇದು ಕರುಳನ್ನು ಆರೋಗ್ಯಕರವಾಗಿರಿಸುತ್ತದೆ ಎಂದರು.
ಮಣ್ಣಿನ ಮಡಿಕೆಯಲ್ಲಿ ಸಣ್ಣ ಸಣ್ಣ ರಂದ್ರಗಳಿರುತ್ತವೆ. ಇದರ ಮೂಲಕ ಗಾಳಿ ಒಳಗೆ ಹೊರಗೆ ಹೋಗುತ್ತದೆ. ಇದರಿಂದಾಗಿ ಆಹಾರ ಬೇಗನೆ ಹಾಳಾಗುವುದಿಲ್ಲ. ಇದರೊಂದಿಗೆ ಆಹಾರದಲ್ಲಿ ಪ್ರೋಬಯಾಟಿಕ್ ಉತ್ಕೃಷ್ಟವಾಗಿ ಸೇರಿಕೊಳ್ಳುತ್ತದೆ. ಅಲ್ಲದೇ ಮಣ್ಣಿನ ಪಾತ್ರೆಯಲ್ಲಿರುವ ಜಿಂಕ್, ಮೆಗ್ನಿಶಿಯಂ, ಐರನ್ ಕೂಡ ಆಹಾರದಲ್ಲಿ ಸೇರುತ್ತದೆ. ಇದರಿಂದ ಯಾವುದೇ ರೀತಿಯಲ್ಲಿ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಎಂದು ಹೇಳಿದರು.
ದಿನನಿತ್ಯದ ಆಹಾರದಲ್ಲಿ ಪೇರಲ ಹಣ್ಣಿನ ಸೇವನೆ ಏಕಿರಬೇಕು?
ಬೆಳಗ್ಗೆ ಬೇರೆ ಏನೂ ಬೇಡ. ಎಲ್ಲಕ್ಕಿಂತ ಹೆಚ್ಚು ಶ್ರೇಷ್ಟ ಮತ್ತು ಕರುಳು, ದೇಹಕ್ಕೆ ಪೂರಕವಾಗಿರುವ ಮಣ್ಣಿನ ಮಡಿಕೆಯಲ್ಲಿಟ್ಟ ತಂಗಳನ್ನ ಸೇವಿಸುವುದು ಅತ್ಯುತ್ತಮ ಎಂದು ಸುತ್ತೂರು ಮಾಲಿನಿ ತಿಳಿಸಿದರು.