ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನನಿತ್ಯದ ಆಹಾರದಲ್ಲಿ ಪೇರಲ ಹಣ್ಣಿನ ಸೇವನೆ ಏಕಿರಬೇಕು?

Health Tips: ಸಾಮಾನ್ಯವಾಗಿ ನಾವು ಪೇರಳೆ ಹಣ್ಣನ್ನು ಹೆಚ್ಚು ಹೇರಳವಾಗಿ ನಮ್ಮ ಸುತ್ತಮುತ್ತಲೇ ಸಿಗುವ ಕಾರಣ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಇವುಗಳ ಆರೋಗ್ಯ ಲಾಭ ತಿಳಿದರೆ ಖಂಡಿತ ದಿನ ಕ್ಕೊಂದು ಆದರೂ ಸೇವನೆಗೆ ಆಸಕ್ತಿ ವಹೀಸುತ್ತೀರಾ..ರೋಗನಿರೋಧಕ ಶಕ್ತಿಯನ್ನು ಬಲಪಡಿಸು ವುದರಿಂದ ಹಿಡಿದು ಜೀರ್ಣಕ್ರಿಯೆ ಸುಧಾರಿಸುವ ವರೆಗೆ ಅನೇಕ ಲಾಭಗಳನ್ನು ನೀಡುತ್ತವೆ. ಹಾಗಿದ್ರೆ ಯಾವೆಲ್ಲ ಪೋಷಕಾಂಶಗಳ ಆಗರ ಈ ಹಣ್ಣಿನಲ್ಲಿದೆ? ಯಾವುದಕ್ಕೆ ಉಪಯೋಗಕಾರಿ ಎನ್ನುವ ಮಾಹಿತಿ ಇಲ್ಲಿದೆ.

ಪೇರಳೆ ಹಣ್ಣಿನ ಆರೋಗ್ಯ ಲಾಭ ಬಗ್ಗೆ ನಿಮಗೆ ಗೊತ್ತೆ?

ಸಂಗ್ರಹ ಚಿತ್ರ -

Profile
Pushpa Kumari Jul 4, 2026 8:00 AM

ನವದೆಹಲಿ,ಜು.3: ನಮ್ಮ ದಿನ ನಿತ್ಯದ ಆಹಾರ ಕ್ರಮದಲ್ಲಿ ಹಣ್ಣುಗಳ ಸೇವನೆ ಬಹಳಷ್ಟು ಅಗತ್ಯವಾಗಿ ಇರುತ್ತದೆ. ಅದರಲ್ಲೂ ಸಾಮಾನ್ಯವಾಗಿ ನಾವು ಪೇರಳೆ ಹಣ್ಣನ್ನು (Guava benefits) ಹೆಚ್ಚು ಹೇರಳವಾಗಿ ನಮ್ಮ ಸುತ್ತಮುತ್ತಲೇ ಸಿಗುವ ಕಾರಣ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಇವುಗಳ ಆರೋಗ್ಯ ಲಾಭ ತಿಳಿದರೆ ಖಂಡಿತ ದಿನಕ್ಕೊಂದು ಆದರೂ ಸೇವನೆಗೆ ಆಸಕ್ತಿ ವಹೀಸುತ್ತೀರಾ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರಿಂದ ಹಿಡಿದು ಜೀರ್ಣಕ್ರಿಯೆ ಸುಧಾರಿಸುವ ವರೆಗೆ ಅನೇಕ ಲಾಭಗಳನ್ನು ನೀಡುತ್ತವೆ.ಹಾಗಿದ್ರೆ ಯಾವೆಲ್ಲ ಪೋಷಕಾಂಶಗಳ ಆಗರ ಈ ಹಣ್ಣಿನಲ್ಲಿದೆ? ಯಾವುದಕ್ಕೆ ಉಪಯೋಗಕಾರಿ ಎನ್ನುವ ಮಾಹಿತಿ ಇಲ್ಲಿದೆ.

ತೂಕ ನಷ್ಟಕ್ಕೆ ಪರಿಣಾಮಕಾರಿ:

​ಸೀಬೆ ಹಣ್ಣು ಅಥವಾ ಪೇರಳೆ ಹಣ್ಣು ಕಡಿಮೆ ಕ್ಯಾಲೊರಿ ಹಾಗೂ ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಇದಾಗಿದೆ. ಒಂದು ಹಣ್ಣು ನಿಮ್ಮ ದೈನಂದಿನ ಫೈಬರ್ ಅಗತ್ಯಗಳಲ್ಲಿ ಸುಮಾರು 12% ಅನ್ನು ಒದಗಿಸುತ್ತದೆ. ಇದು ಕ್ಯಾಲೊರಿಗಳನ್ನು ನಿಯಂತ್ರಣದಲ್ಲಿಡುವಾಗ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.. ಹಾಗಾಗಿ ತೂಕ ಇಳಿಸಬೇಕು ಎಂದು ಇದ್ದವರು ಈ ಹಣ್ಣಿನ ಸೇವನೆಗೆ ಆಧ್ಯತೆ ನೀಡಿ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಪೇರಲೆಯ ತಿರುಳು ಮತ್ತು ಸಿಪ್ಪೆ ಎರಡೂ ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿವೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಪೇರಲವು ನೈಸರ್ಗಿಕ ಸಂಯುಕ್ತ ಗಳಿಂದ ತುಂಬಿದ್ದು, ಅದು ದೇಹವನ್ನು ಜೀವಕೋಶದ ಹಾನಿಯಿಂದ ತಪ್ಪಿಸಿ ರೋಗನಿರೋಧಕ ವ್ಯವಸ್ಥೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.‌‌ ಹೀಗಾಗಿ ಯಾವುದೇ ಖಾಯಿಲೆಗಳು ಹರಡದಂತೆ ತಡೆಯಬಹುದಾಗಿದೆ.

Health Tips: ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಒಳಿತೇ? ತಜ್ಞರು ಹೇಳೋದೇನು?

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ಜೀರ್ಣಕ್ರಿಯೆಗೆ ರಾಮಬಾಣ ಪೇರಳೆ ಹಣ್ಣು ಆಗಿದೆ. ನಾರಿನಂಶದ ಪ್ರಮಾಣ ಇದರಲ್ಲಿ ಸಮೃದ್ಧವಾಗಿದೆ. ಇದು ಮಲಬದ್ಧತೆಯ ಸಮಸ್ಯೆಗಳನ್ನು ಕಡಿಮೆಮಾಡಿ ಕರುಳಿನ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.

ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ:

ವೈದ್ಯಕೀಯ ಅಧ್ಯಯನವೊಂದು ನಡೆದ ಸಂಶೋಧನೆಯ ಪ್ರಕಾರ ಸೀಬೆ ಹಣ್ಣನ್ನು ಸೇವನೆ ಮಾಡಿದವರಲ್ಲಿ ರಕ್ತದ ಸಕ್ಕರೆ ಮಟ್ಟ ಕಡಿಮೆಯಾಗಿದೆ. ಇದು ದೇಹದಲ್ಲಿ ಸಕ್ಕರೆಯ ಹೀರಿ ಕೊಳ್ಳುವಿಕೆಯನ್ನು ನಿಧಾನಮಾಡಿ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:

​ಸೀಬೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮತ್ತು ನಾರಿನಂಶ ಹೃದಯದ ರಕ್ಷಣೆಗೆ ಬಹಳಷ್ಟು ಒಳಿತು. ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳ ಸಮೃದ್ಧ ಪೂರೈಕೆಯು ಹೃದಯವನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸಲು ಸಹಾಯಕವಾಗುತ್ತದೆ. ಹಣ್ಣಾದ ಸೀಬೆಹಣ್ಣನ್ನು ತಿನ್ನುವುದರಿಂದ ಹೃದಯದ ಆರೋಗ್ಯ ರಕ್ಷಣೆ ಮಾಡಬಹುದು.

​ಚರ್ಮದ ಆರೋಗ್ಯಕ್ಕೆ ಒಳ್ಳೆಯದು:

ಪೇರಳೆಯಲ್ಲಿರುವ ವಿಟಮಿನ್‌ಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳು ನಿಮ್ಮ ಚರ್ಮಕ್ಕೆ ಬಹಳಷ್ಟು ಉಪಯೋಗಕಾರಿಯಾಗಿದೆ‌. ಈ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಸುಕ್ಕುಗಳು ಸೇರಿದಂತೆ ವಯಸ್ಸಾದ ಚಿಹ್ನೆಯನ್ನು ತಡೆಯಬಹುದು.