ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World mental health day: ಮನಸ್ಸೆಂಬ ಯಂತ್ರವನ್ನು ಸುಸ್ಥಿತಿಯಲ್ಲಿಯಿರಿಸಿಕೊಳ್ಳಿ

ನಮಗೆಲ್ಲರಿಗೂ ದೈಹಿಕ ಆರೋಗ್ಯ ಎಷ್ಚು ಮುಖ್ಯವೋ ಅಷ್ಟೇ ಮುಖ್ಯ ಮಾನಸಿಕ ಸ್ವಾಸ್ಥತೆಯೂ ಕೂಡ. ಈ ನಿಲುವುನಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು(WHO, world health organisation) ಪ್ರತಿ ವಷ೯ವೂ 10ನೇ ಅಕ್ಟೋಬರ್ ರಂದು “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಯನ್ನು ಸತತವಾಗಿ ಆಚರಿಸುಕೊಂಡು ಬಂದಿದೆ.

ಬೆಂಗಳೂರು: ಅತೀ ವೇಗವಾಗಿ ಬದಲಾಗುತ್ತಿರುವ ಬದುಕು ಅತೀಯಾದ ಸಮಸ್ಯೆಗಳನ್ನು ಒಡ್ಡಿ ಮಾನವನನ್ನು ಅತೀಯಾದ ಆತಂಕ ಮತ್ತು ಒತ್ತಡಗಳನ್ನು ಎದುರಿಸುವಂತೆ ಮಾಡಿದೆ. ಇಂದಿನ ಪರಿಸ್ಥಿತಿಯಲ್ಲಿ, ಮನಸ್ಸು ಎಂಬ ಯಂತ್ರವನ್ನು ಸುಸ್ಥಿತಿಯಲ್ಲಿಯಿರಿಸಿಕೊಂಡು ಸಮರ್ಪಕವಾಗಿ ಬಳಸಿದರೇ ಮಾತ್ರ ಮಾನಸಿಕ ಸ್ವಾಸ್ಥತೆ ಸಾಧ್ಯ. ಮನೋರೋಗ ಅಂಟಿದ ನಂತರ ಔಷಧಿಯನ್ನು ಹುಡುಕಿಕೊಂಡು ಹೋಗುವ ಬದಲು, ಮೊದಲೇ ಎಚ್ಚೆತುಕೊಂಡು ರೋಗ ಅಂಟಿಕೊಳ್ಳದಂತೆ ನೋಡಿಕೊಳ್ಳುವುದು ಉತ್ತಮ. ಬದಲಾಗುತ್ತಿರುವ ಬದುಕಿನಲ್ಲಿ, ಸ್ಥಿರತೆಯನ್ನು ಕಾಪಾಡಿಕೊಂಡು, ನಮ್ಮ ಮನಸ್ಸನ್ನು ನಿಗ್ರಹಿಸಿ, ನೆಮ್ಮದಿ ಕಂಡುಕೊಳ್ಳುವುದೇ ಪ್ರಸ್ತುತ ಅಗತ್ಯ ಹಾಗೂ ಅನಿವಾರ್ಯತೆಯಾಗಿದೆ(World mental health day).

ನಮಗೆಲ್ಲರಿಗೂ ದೈಹಿಕ ಆರೋಗ್ಯ ಎಷ್ಚು ಮುಖ್ಯವೋ ಅಷ್ಟೇ ಮುಖ್ಯ ಮಾನಸಿಕ ಸ್ವಾಸ್ಥತೆಯೂ ಕೂಡ. ಈ ನಿಲುವುನಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು( WHO, world health organisation) ಪ್ರತಿ ವಷ೯ವೂ 10ನೇ ಅಕ್ಟೋಬರ್ ರಂದು “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಯನ್ನು ಸತತವಾಗಿ ಆಚರಿಸುಕೊಂಡು ಬಂದಿದೆ. ಪ್ರತಿ ವಷ೯ವೂ ಕೂಡ ವಿಶಿಷ್ಟ ಮತ್ತು ವಿಭಿನ್ನವಾದ ಒಂದು ಥೀಮ್ಮನ್ನು ಆಯ್ಕೆಮಾಡಿಕೊಳ್ಳಾಲಾಗುತ್ತದೆ. “ಬಿಕ್ಕಟ್ಚಿನ ಪರಿಸ್ಥಿತಿಯಲ್ಲಿ ಮಾನಸಿಕ ಆರೋಗ್ಯದ ಮಹತ್ವ” ಎನ್ನುವುದು ಈ ವಷ೯ದ ಥೀಮಾಗಿದೆ.

ಮಾನಸಿಕ ಆರೋಗ್ಯದ ಮಹತ್ವ ಮತ್ತು ಮಾನಸಿಕ ಆರೋಗ್ಯವಿಲ್ಲದೆ ಆರೋಗ್ಯವಿಲ್ಲ ಎಂಬುದನ್ನು ವಿಶ್ವ ಮಾನಸಿಕ ಆರೋಗ್ಯದ ದಿನ ಪ್ರಬಲವಾಗಿ ನೆನಪಿಸುತ್ತದೆ. ಈ ವರ್ಷದ ಅಭಿಯಾನವು ಬಿಕ್ಕಟ್ಟಿನ ಪರಿಸ್ಥಿತಿಗಳಿಂದ ಬಳಲುತ್ತಿರುವ ಜನರ ಮಾನಸಿಕ ಆರೋಗ್ಯ ಮತ್ತುಅವರಿಗೆ ನೆರವನ್ನು ನೀಡುವ ಅಗತ್ಯದ ಮೇಲೆ ಒತ್ತನ್ನು ನೀಡುತ್ತದೆ.

ಈ ಸುದ್ದಿಯನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್‌ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ

ಬಿಕ್ಕಟ್ಟಿನ(ತುರ್ತು) ಪರಿಸ್ಥಿತಿಯ ಎಂದರೇನು ?

ತುರ್ತು ಪರಿಸ್ಥಿತಿ ಎಂದರೆ ಬಿಕ್ಕಟ್ಟಿನ ಸಂದಭ೯ಗಳು. ಒಂದು ರೀತಿಯ ವಿಷಮಸ್ಥಿತಿ. ಇದಕ್ಕೆ ಸಾಮಾನ್ಯವಾಗಿ ಕ್ರೈಸಿಸ್ ಸಿಚುಯೇಷನ್ ಎಂದು ಕರೆಯುತ್ತೇವೆ. ಪ್ರಕೃತಿ ವಿಕೋಪಗಳು, ಅಂತರಾಷ್ಟ್ರಿೀಯ ಯುದ್ಧಗಳು, ದಾಳಿಗಳು, ಅಪಘಾತಗಳು ಮತ್ತು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳು ಇತ್ಯಾದಿಗಳನ್ನು ಬಿಕ್ಕಟ್ಚಿನ ಪರಿಸ್ಥಿತಿ ಎನ್ನಬಹುದು.

ಇತ್ತೀಚಿಗಿನ ಫುಲ್ವಾಮದ ಭಯೋತ್ಪಾದಕ ದಾಳಿ, ಉತ್ತರಾಕಾಂಡದ ಮೇಘ ಸ್ಪೋಟ,, ಕೋವಿಡ್ ವೈರಸ್ಸಿನಿಂದ ಬಳಲಿದ ಮತ್ತು ಮೃತಪಟ್ಟ ಕುಟುಂಬಗಳು, ಅಮರನಾಥ್ ಯಾತ್ರೆ ಮತ್ತು ವಿಮಾನ ಅಪಘಾತ ಇತ್ಯಾದಿ ಸಂಗತಿಗಳು ತುತು೯ ಅಥವ ಬಿಕ್ಕಟ್ಚಿನ ಪರಿಸ್ಥಿತಿಯ ಉದಾಹರಣೆಗಳಾಗಿವೆ.

ಈ ರೀತಿಯ ಅಘಾತಗಳ ಸಂದರ್ಭಗಳಲ್ಲಿ ದೈಹಿಕ ಆರೋಗ್ಯ ಮತ್ತು ಭದ್ರತೆ, ಚೇತರಿಕೆಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ. ಇದು ಅವಶ್ಯಕತೆಯೂ ಹೌದು, ಆದರೆ ಇದರಷ್ಟೇ ಅಗತ್ಯವಾದುದು ಮಾನಸಿಕ ಆರೋಗ್ಯ. ಸಂತ್ರಸ್ಥರ ಮಾನಸಿಕ ಆರೋಗ್ಯದ ಬಗ್ಗೆಯೂ ಕೂಡ ಗಮನಹರಿಸುವ ಅಗತ್ಯವಿದೆ.

ಈ ಆಘಾತಗಳು ವ್ಯಕ್ತಿಯ ಮನಸ್ಸಿನ ಮೇಲೆ ಭಾರಿ ಪ್ರಭಾವವನ್ನು ಮತ್ತು ಮಾನಸಿಕ ಯಾತನೆಯನ್ನು ಉಂಟುಮಾಡುತ್ತವೆ. ಇಂತಹ ಪರಿಸ್ಥಿತಿಗಳಲ್ಲಿ ದೈಹಿಕ ಯಾತನೆಗಳು ಮತ್ತು ನಷ್ಟಗಳು ಗಮನವನ್ನು ಸೆಳೆಯುತ್ತವೆ ಆದರೆ ಮಾನಸಿಕ ಯಾತನೆಗಳು ಕಣ್ಣಿಗೆ ಕಾಣದೇ, ಯಾರ ಗಮನವನ್ನು ಸೆಳೆಯದೇ, ನಿಲ೯ಕ್ಷ್ಯಕ್ಕೆ ಒಳಾಗಾಗುತ್ತವೆ. ಹೀಗೆ ನಿಲ೯ಕ್ಷ್ಯಕ್ಕೆ ಒಳಗಾದ ಮಾನಸಿಕ ಯಾತನೆಗಳು, ಸಂತ್ರಸ್ಥರ ಆಂತರಿಕದಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ. ನಿಧಾನವಾಗಿ ವ್ಯಕ್ತಿಯನ್ನು ಮಾನಸಿಕವಾಗಿ ಬಳಲುವಂತೆ ಮಾಡುತ್ತದೆ.. ಒಂದು ವೇಳೆ ದೈಹಿಕವಾಗಿ ಚೇತರಿಸಿಕೆಂಡರೂ, ಮಾನಸಿಕವಾಗಿ ಚೇತರಿಸಿಕೊಳ್ಳುವುದು ಸುಲಭವಲ್ಲ.

ಬಿಕ್ಕಟ್ಚಿನ ಪರಿಸ್ಥಿತಿಯನ್ನು ಅನುಭವಿಸಿರುವಂತಹ ಸಂತ್ರಸ್ಥರ ಮಾನಸಿಕ ಆನಾರೋಗ್ಯದ ಲಕ್ಷಣಗಳು ಹೀಗಿವೆ

ನಿದ್ರಾ ಹೀನತೆ, ಭಯ ಮತ್ತು ಆತಂಕ, ಖಿನ್ನತೆ, ಗೊಂದಲ, ಅವಿಶ್ವಾಸ, ನೆನಪಿನ ಶಕ್ತಿ ಕುಂದುವಿಕೆ, ಏಕಾಗ್ರತೆಯ ಕೊರತೆ ಸಾಮಾನ್ಯವಾಗಿ ಕಂಡು ಬರುವಂತಹದು. ಈ ಲಕ್ಷಣಗಳನ್ನು ಹೊಂದಿರುವ ಸಂತ್ರಸ್ಥರನ್ನು ಆಪ್ತ ಸಮಾಲೋಚನೆ ಮೂಲಕ ಮಾನಸಿಕ ಆಘಾತದಿಂದ ಹೊರತಂದು, ಕಳೆದು ಕೊಂಡ ಅಥವ ಆಗಿರುವ ನಷ್ಟಗಳಿಂದಾದ ಹಾನಿಯನ್ನು ನಿಭಾಯಿಸುವುದಕ್ಕೆ ಮಾರ್ಗದರ್ಶನ ನೀಡುವ ಅಗತ್ಯವಿದೆ. ಇಲ್ಲವಾದ್ದಲ್ಲಿ, ಖಿನ್ನತೆ, ಆತಂಕ, ptsd (ಆಘಾತ ನಂತರದ ಒತ್ತಡದ ಅಸ್ವಸ್ಥತೆ) ಹೀಗೆ ಹಲವಾರು ಮಾನಸಿಕ ಅಸ್ವಸ್ಥತೆಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಪರಿಣಾಮವಾಗಿ ಆತ್ಮ ಹತ್ಯೆ ಕೃತ್ಯಗಳಿಗೂ ಬಲಿಯಾಗಬಹುದು. ಚಟ/ವ್ಯಸನಗಳಿಗೂ ತುತ್ತಾಗಬಹುದು. ಸಮಾಜ ಘಾತಕ ಕೃತ್ಯಗಳನ್ನು ಸಹ ಮಾಡಬಹುದು.

ಸಂತ್ರಸ್ಥರಿಗೆ ಮತ್ತು ಕುಟುಂಬದವರಿಗೆ ಮಾನಸಿಕ ಬೆಂಬಲ ಮತ್ತು ಚಿಕೆತ್ಸೆಯನ್ನು ನೀಡುವುದು ಕೂಡ ಬಹಳ ಮಹತ್ವವಾದ ವಿಚಾರ. ಬಿಕ್ಕಟ್ಟುಗಳ ಸಮಯದಲ್ಲಿ ವ್ಯಕ್ತಿಗಳ ಮಾನಸಿಕ ಯೋಗಕ್ಷೇಮವನ್ನು ಬೆಂಬಲಿಸುವುದು ಕೇವಲ ಮುಖ್ಯವಲ್ಲ - ಇದು ಜೀವಗಳನ್ನು ಉಳಿಸುತ್ತದೆ, ಜನರಿಗೆ ಸಂಕಷ್ಟಗಳನ್ನು ನಿಭಾಯಿಸಲು ಶಕ್ತಿಯನ್ನು ನೀಡುತ್ತದೆ, ಗುಣಮುಖರಾಗಲು ಮತ್ತು ಚೇತರಿಸಿಕೊಳ್ಳಲು ಮತ್ತು ವ್ಯಕ್ತಿಗಳಾಗಿ ಮಾತ್ರವಲ್ಲದೆ ಸಮುದಾಯಗಳಾಗಿ ಪುನರ್ನಿರ್ಮಿಸಲು ಅವಕಾಶವನ್ನು ನೀಡುತ್ತದೆ.

ಈ ಎಲ್ಲಾ ಕಾರಣಗಳಿಂದ, ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಸಮುದಾಯ ಗುಂಪುಗಳು ಸೇರಿದಂತೆ ಎಲ್ಲರೂ ಒಗ್ಗೂಡುವುದು ಅತ್ಯಗತ್ಯ. ಕೈಜೋಡಿಸಿ ಕೆಲಸ ಮಾಡುವ ಮೂಲಕ, ಅತ್ಯಂತ ದುರ್ಬಲರಿಗೆ ಅಗತ್ಯವಿರುವ ಬೆಂಬಲವನ್ನು ನಾವು ಒದಗಿಸಬಹುದು ಮತ್ತು ಎಲ್ಲರ ಯೋಗಕ್ಷೇಮವನ್ನು ಕಾಪಾಡಬಹುದು. ಈ ವಿಶ್ವ ಮಾನಸಿಕ ಆರೋಗ್ಯ ದಿನದಂದು, ಮಾನಸಿಕ ಆರೋಗ್ಯಯುತವಾದ ಸಮಾಜವನ್ನು ಸೃಷ್ಟಿಸುವುದಕ್ಕೆ ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸೋಣ, ವಿಶೇಷವಾಗಿ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ.

ಡಿ. ಆರ್. ಭವ್ಯಾ ವಿಶ್ವನಾಥ್

View all posts by this author