ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mana Santwana: ದುರ್ಗಾ ದೇವಿಯ ಆರಾಧನೆಯಿಂದಾಗುವ ನಮ್ಮ ಮನಸ್ಸಿಗಾಗುವ ಲಾಭಗಳೇನು?

ಸರಸ್ವತಿ, ಲಕ್ಷ್ಮೀ ರೂಪಧಾರಿಯಾದ ಆ ದುರ್ಗಾ ಮಾತೆಯು ಸದ್ಗುಣರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸುವುದಲ್ಲದೇ, ಸಕಲ ಭಕ್ತರಿಗೆ ಕರುಣಾಮಯಿಯು ಹೌದು. ಅಪಾರ ಶಕ್ತಿ, ಮಹಿಮೆ ಮತ್ತು ಧೈರ್ಯ ಒಳ್ಳವಳು. ಇಂತಹ ಮಹಿಮೆಯನ್ನು ಹೊಂದಿರುವ ಆ ದುರ್ಗಾದೇವಿಯ ಆರಾಧನೆಯೇ ಈ ದಸರಾ ಹಬ್ಬದ ಮಹತ್ವ.

ದುರ್ಗಾ ದೇವಿ ಆರಾಧನೆ, ನಮ್ಮ ಮನಸ್ಸು

-

- ಡಿ.ಆರ್. ಭವ್ಯಾ ವಿಶ್ವನಾಥ್

“ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ" ಎಂಬುದು ದುರ್ಗಾಸ್ತುತಿಯ ಒಂದು ಸಾಲು, ಇದು "ರೂಪವನ್ನು ಕೊಡು, ವಿಜಯವನ್ನು ಕೊಡು ಮತ್ತು ಯಶಸ್ಸನ್ನು ಕೊಡು, ಶತ್ರುಗಳನ್ನು ನಾಶಮಾಡು" ಎಂದು ಅರ್ಥೈಸುತ್ತದೆ (Mana Santwana). ಈ ಮಂತ್ರವು ಭಕ್ತರು ದುರ್ಗಾಮಾತೆಯನ್ನು ಸೌಂದರ್ಯ, ವಿಜಯ, ಕೀರ್ತಿ ಕರಣಿಸುವಂತೆ ಮತ್ತು ಶತ್ರುಗಳನ್ನು ನಾಶಮಾಡುವಂತೆ ಪ್ರಾರ್ಥಿಸುತ್ತಾ ಹೇಳುವ ಮಾತು.

ಸರಸ್ವತಿ, ಲಕ್ಷ್ಮೀ ರೂಪಧಾರಿಯಾದ ಆ ದುರ್ಗಾ ಮಾತೆಯು ಸದ್ಗುಣರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸುವುದಲ್ಲದೇ, ಸಕಲ ಭಕ್ತರಿಗೆ ಕರುಣಾಮಯಿಯು ಹೌದು. ಅಪಾರ ಶಕ್ತಿ, ಮಹಿಮೆ ಮತ್ತು ಧೈರ್ಯ ಒಳ್ಳವಳು. ಇಂತಹ ಮಹಿಮೆಯನ್ನು ಹೊಂದಿರುವ ಆ ದುರ್ಗಾದೇವಿಯ ಆರಾಧನೆಯೇ ಈ ದಸರ ಹಬ್ಬದ ಮಹತ್ವ.

ದೇವಿ ಆರಾಧನೆಯ ಮಾನಸಿಕ ಪ್ರಭಾವಗಳು

ದುರ್ಗಾದೇವಿಯ ಆರಾಧನೆಯು ಮನಸ್ಸಿನ ಮೇಲೆ ಅಘಾಧ ಪ್ರಭಾವ ಬೀರುತ್ತದೆ. ಹೇಗೆ ದೇವಿಯು ತನ್ನ ಅಪಾರವಾದ ಶಕ್ತಿಯನ್ನು ಬಳಸಿ ದೇವಲೋಕದ ದೇವಾನ್ ದೇವತೆಯರಿಗೆ ಉಪದ್ರ ನೀಡುತ್ತಿದ್ದ ದುಷ್ಟ ರಾಕ್ಷಸನಾದ ಮಹಿಷಾಸುರನನ್ನು ಸಂಹಾರಿಸಿದಳೋ ಹಾಗೆಯೇ ನಮ್ಮೊಳಗಿರುವ ಮಹಿಷಾಸುರನೆಂಬ ಶತ್ರುವನ್ನು ನಮ್ಮೊಳಗಿರುವ ಶಕ್ತಿ(ದೇವಿ) ಕೂಡ ಸಂಹಾರ ಮಾಡಬಲ್ಲದು. ನಮ್ಮೊಳಗಿರುವ ಮಹಿಷಾಸುರನೆಂದರೆ ನಮ್ಮೊಳಗಿರುವ ಶತ್ರುಗಳು ಅಂದರೆ ನಮ್ಮ ಮನಸ್ಸಿನಲ್ಲಿರುವ ದುಷ್ಟ ಗುಣಗಳಾದ ತೀವ್ರ ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹ, ದ್ವೇಷ, ಭಯ, ಆಲಸ್ಯಗಳು ಮತ್ತು ಅಜ್ಞಾನ. ನಮ್ಮ ಈ ದುಷ್ಟ ಗುಣಗಳು ಮಿತಿಮೀರಿ ನಮ್ಮನ್ನೇ ಆಳಿದಾಗ, ನಾವು ಈ ಗುಣಗಳಿಗೆ ಗುಲಾಮರಾಗುತ್ತೇವೆ. ಪರಿಣಾಮವಾಗಿ ಮಾನಸಿಕ ದೌಬ೯ಲ್ಯ, ಗೊಂದಲ, ಆತಂಕ ಮತ್ತು ಖಿನ್ನತೆಗಳನ್ನು ಎದುರಿಸುವ ಪರಿಸ್ಥಿಗಳು ಸಂಭವಿಸುತ್ತವೆ. ನೆಗೆಟೀವ್ ಆಲೋಚನೆಗಳು ಮತ್ತು ಅತಿಯಾದ ಆಲೋಚನೆಗಳು ಉದ್ಭವವಾಗುತ್ತವೆ.

ದೇವಿ ಆರಾಧನೆಯಿಂದಾಗುವ ಮಾನಸಿಕ ಲಾಭಗಳು

  • ಮನಸಿಕ ಶುದ್ಧೀಕರಣ
  • ಮಾನಸಿಕ ಸ್ಪಷ್ಟತೆ
  • ಮಾನಸಿಕ ಸ್ಥಿರತೆ
  • ಆಂತರಿಕ ಶಾಂತಿ
  • ಮಾರ್ಗದರ್ಶನ
  • ಮನಸ್ಥೈರ್ಯ
  • ಆಧ್ಯಾತ್ಮಿಕ ಬೆಳವಣಿಗೆ
  • ಬಾಂಧವ್ಯಗಳ ಬೆಸುಗೆ
  • ದುಷ್ಟಶಕ್ತಿಗಳ ನಿವಾರಣೆ

ದುರ್ಗಾ ದೇವಿಯ 9 ವಿಶಿಷ್ಟವಾದ ಗುಣಗಳಾದ ಶಕ್ತಿ, ಮನಸ್ಥೈರ್ಯ, ಬುಧ್ಧಿವಂತಿಕೆ, ಜ್ಞಾನ, ನಿರ್ಭೀತಿ, ಛಲ, ಧೃಢ ಸಂಕಲ್ಪ ಮತ್ತು ಕರುಣೆ, ಪ್ರತಿಯೊಂದು ವ್ಯಕ್ತಿಯ ಆಂತರಿಕದಲ್ಲಿ ನೆಲೆಸಿರುತ್ತದೆ. ಸ್ವ ಜಾಗೃತಿ (ನಮ್ಮಲ್ಲಿರುವ ಸ್ವ- ಅರಿವು, ಅಂದರೆ “ನಾನು ಯಾರು” ಎಂಬ ಅರಿವು, ಸ್ವಯಂ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಅರಿವು, ಸದ್ಗುಣ ಮತ್ತು ದುರ್ಗುಣಗಳ ಅರಿವು) ಮತ್ತು ಸ್ಥಿತಪ್ರಜ್ಞತೆ (ಪ್ರಜ್ಞಾಪೂರಕವಾಗಿ ಜೀವಿಸುವುದು) ನಮ್ಮಲ್ಲಿ ಮೂಡಿದಾಗ ನವ ದುರ್ಗೆಯ 9 ಗುಣಗಳು ನಮ್ಮಲ್ಲಿ ಪ್ರತಿಬಿಂಬಿಸಲು ಆರಂಭವಾಗುತ್ತದೆ. ಆಗ, ಆ ಮಹಾನ್ ಶಕ್ತಿಗಳಾದ ನವ ದುರ್ಗೆಯನ್ನು ನಮ್ಮಲ್ಲಿಯೇ ನಾವು ಕಂಡುಕೊಂಡು, ನಮ್ಮಲ್ಲಿರುವ ಶತ್ರುವನ್ನು (ಮಹಿಷಾಸುರ - ನಮ್ಮ ದುಷ್ಟ ಗುಣಗಳು) ನಾವೇ ಸಂಹರಿಸಬಹುದು.

ಈ ಸುದ್ದಿಯನ್ನೂ ಓದಿ: Mana Santwana: ಸೆರೆಮನೆಯಲ್ಲಿ ಕೈದಿಗಳ ಮನಸ್ಥಿತಿ ಹೇಗಿರುತ್ತದೆ?

Vijaya Dashami

ಮಾನಸಿಕ ಸ್ಥಿರತೆ, ಜ್ಞಾನ, ಬುದ್ಧಿವಂತಿಕೆ, ಆಂತರಿಕ ಶಕ್ತಿ, ಮಾನಸಿಕ ಶಾಂತಿ ಮತ್ತು ಏಕಾಗ್ರತೆಯು ಲಭಿಸುತ್ತದೆ. ಹಾಗೆಯೇ ಮಾನಸಿಕ ಒತ್ತಡ, ಆತಂಕ, ಮತ್ತು ಖಿನ್ನತೆಯಿಂದ ಹೊರಬರಬಹುದು. ದುರ್ಗಾ ದೇವಿಯ ಮಂತ್ರಗಳನ್ನು ಪಠಿಸುವುದರಿಂದ ಜ್ಞಾನ ವೃದ್ದಿಯಾಗಿ, ರೋಗಗಳು ನಿವಾರಣೆಯಾಗುತ್ತದೆ, ಕಾರ್ಯಸಿದ್ಧಿ ಪ್ರಾಪ್ತವಾಗುತ್ತದೆ, ಶತ್ರುಗಳನ್ನೂ ಕೂಡ ಮಿತ್ರರಾಗಿ ನೋಡುವ ಸಾಮಾರ್ಥ್ಯ ನಮ್ಮಲ್ಲಿ ಉದ್ಭವವಾಗಿ ಜೀವನದಲ್ಲಿ ಶಾಂತಿ ನೆಲಸುತ್ತದೆ. ಯಶಸ್ಸು ಪ್ರಾಪ್ತವಾಗಿ, ಸಕಲ ಇಷ್ಟಾರ್ಥಗಳು ಈಡೇರುತ್ತವೆ. ದುರ್ಗಾ ದೇವಿಯು ಶಕ್ತಿ ದೇವತೆಯಾಗಿದ್ದು, ಅವಳ ಆರಾಧನೆ ಭಕ್ತರಿಗೆ ಚೈತನ್ಯವನ್ನು ನೀಡುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ. 

ನಮ್ಮ ಮನಸ್ಸನ್ನು ನಿಗ್ರಹಿಸಿ, ಹಿಡಿದಿರುವ ಕಾರ್ಯಗಳನ್ನು ಸಿದ್ಧಿಗೊಳಿಸಿ, ಯಶಸ್ಸು ಗಳಿಸಲು ನವ ದುರ್ಗೆಯರ ಆರಾಧನೆ ನೆರವಾಗುತ್ತದೆ. ದೇವಿಯ ಶಸ್ತ್ರಭ್ಯಾಸಗಳೇ ನಮ್ಮಲ್ಲಿರುವ ಜಾಗೃತಿ (ಅರಿವು), ಜ್ಞಾನ, ಪ್ರೀತಿ, ಸಂಯಮ, ಮನಸ್ಥೈರ್ಯ, ಆತ್ಮ ವಿಶ್ವಾಸ ಮತ್ತು ಮೌಲ್ಯಗಳು. ಇವುಗಳೇ ನಮ್ಮನ್ನು ಶತ್ರುಗಳಿಂದ ಸದಾ ರಕ್ಷಿಸುವ, ಮಾರ್ಗದರ್ಶನ ನೀಡುವ ಮತ್ತು ಯಶಸ್ಸನ್ನು ಕರಣಿಸುವ ದುರ್ಗಾ ಶಕ್ತಿಗಳು.

ಸಣ್ಣ ಪುಟ್ಟ ರಾಕ್ಷಸರು (ನಮ್ಮ ಬದುಕಿನ ಸಣ್ಣ ಪುಟ್ಟ ಹೋರಾಟಗಳು) ಮತ್ತು ದೊಡ್ಡ ರಾಕ್ಷಸರು (ಕಷ್ಟಕರವಾದ ಹೋರಾಟಗಳು) ಬದುಕಿನ ಪ್ರತಿಯೊಂದು ಹಂತದಲ್ಲಿ ಉದ್ಭವಿಸುತ್ತಿರುತ್ತಾರೆ. ಇವರುಗಳನ್ನು ಎದುರಿಸುವ ಮತ್ತು ಸಂಹರಿಸುವ ದುಗಾ೯ ಶಕ್ತಿಯೂ ನಮ್ಮೆಲ್ಲಾರದಾಗಲಿ ಎಂದು ಹಾರೈಸುವೇ.

ಓದುಗರಿಗೆ ವಿಜಯ ದಶಮಿಯ ಶುಭಾಶಯಗಳು