ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Benefits of Writing A Diary: ನಿತ್ಯ ಡೈರಿ ಬರೆದರೆ ಜೀವನದಲ್ಲಾಗುವ ಪವಾಡ ಏನೆಲ್ಲ ನೋಡಿ

Diary Writing: ಪ್ರತಿಯೊಬ್ಬ ವ್ಯಕ್ತಿಯೂ ಒತ್ತಡದ ಜೀವನದಲ್ಲಿ ಬದುಕುತ್ತಿದ್ದಾನೆ. ಕೆಲಸ, ಮನೆ, ವೈಯಕ್ತಿಕ ವಿಚಾರ ಹೀಗೆ ನಾನಾ ಸಮಸ್ಯೆಗಳ ಒತ್ತಡ ಕಾಡುತ್ತದೆ. ಅದರಲ್ಲೂ ಕೆಲವರಿಗೆ ಜೀವನದಲ್ಲಿ ಹೇಳಿಕೊಳ್ಳಲಾಗದ ಘಟನೆಗಳು ನಡೆದಿರುತ್ತವೆ‌. ಅದು ಒಳ್ಳೆಯದು ಅಥವಾ ಕೆಟ್ಟದ್ದೇ ಆಗಿರಬಹುದು‌. ಇದು ಪದೇ ಪದೆ ಕಾಡುತ್ತಿರುತ್ತದೆ. ಇಂತಹ ಒತ್ತಡವನ್ನು ನಾವು ಡೈರಿ ಬರೆದಿಟ್ಟುಕೊಳ್ಳುವ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಪ್ರೊ. ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.

ದಿನ ನಿತ್ಯ ಡೈರಿ ಬರೆದರೆ ಈ ಆರೋಗ್ಯ ಲಾಭ ಸಿಗಲಿದೆ

ಪ್ರೊ. ಸುತ್ತೂರು ಮಾಲಿನಿ -

Profile
Pushpa Kumari Apr 28, 2026 7:00 AM

ಬೆಂಗಳೂರು, ಏ. 28: ಇಂದು ಪ್ರತಿಯೊಬ್ಬ ವ್ಯಕ್ತಿಯೂ ಒತ್ತಡದ ಜೀವನದಲ್ಲಿ ಬದುಕುತ್ತಿದ್ದಾನೆ. ಕೆಲಸ, ಮನೆ, ವೈಯಕ್ತಿಕ ವಿಚಾರ ಹೀಗೆ ನಾನಾ ಸಮಸ್ಯೆಗಳು ಒತ್ತಡ ಹೇರುತ್ತವೆ. ಅದರಲ್ಲೂ ಕೆಲವರ ಜೀವನದಲ್ಲಿ ಹೇಳಿಕೊಳ್ಳಲಾಗದ ಘಟನೆಗಳು ನಡೆದಿರುತ್ತವೆ‌. ಅದು ಒಳ್ಳೆಯದು ಅಥವಾ ಕೆಟ್ಟದ್ದೇ ಆಗಿರಬಹುದು‌. ಇದು ಪದೇ ಪದೆ ಕಾಡುತ್ತಿರುತ್ತದೆ. ಇಂತಹ ಒತ್ತಡವನ್ನು ನಾವು ಡೈರಿ ಬರೆದಿಟ್ಟುಕೊಳ್ಳುವ (Diary Writing) ಮೂಲಕ ಪರಿಹರಿಸಿಕೊಳ್ಳಬಹುದು. ಅಲ್ಲದೆ ನಿತ್ಯವೂ ಡೈರಿ ಬರೆಯುವುದರಿಂದ ಏನೆಲ್ಲ ಬದಲಾವಣೆ ಆಗಲಿದೆ ಎಂದು ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ಗೆ ಪ್ರೊ. ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.

ನಮ್ಮ ಪೂರ್ವಜರು ಹಿಂದಿನಿಂದಲೂ ಅನೇಕ ಅಭ್ಯಾಸ ರೂಢಿಸಿಕೊಂಡು ಬಂದಿದ್ದಾರೆ. ಅದರಲ್ಲೂ ದೇವರ ಸ್ತೋತ್ರಗಳನ್ನು ಬರೆಯುವುದು, ಕೋಟಿ ರಾಮ ನಾಮ ಬರೆಯುವುದು ಹೀಗೆ.‌ ಇದರಿಂದ ಧಾರ್ಮಿಕ ನಂಬಿಕೆ ಜತೆ ಮಾನಸಿಕ ನೆಮ್ಮದಿಯೂ ಗಟ್ಟಿಯಾಗುತ್ತದೆ. ಅದೇ ರೀತಿ ಡೈರಿ ಬರೆಯುವುದು ದಿನ ನಿತ್ಯ ಆಗುವ ಮನಸ್ಸಿನ ಅಘಾತ ಹೊರಹಾಕಲಿರುವ ಪ್ರಮುಖ ಪರಿಹಾರ ಮಾರ್ಗ ಎಂದರು.

ವಿಡಿಯೊ ನೋಡಿ:



ನಮ್ಮ ಮನಸ್ಸಿನಲ್ಲಿದ್ದ ಕೆಲವೊಂದು ಘಟನೆಗಳನ್ನು ಹೊರ ಹಾಕಿದಾಗ ಮಾತ್ರ ಮಾನಸಿಕ ನೆಮ್ಮದಿ ಇರುತ್ತದೆ. ಇಲ್ಲದಿದ್ದಲ್ಲಿ ಇದು ಕಾಡುವ ಸಾಧ್ಯತೆ ಹೆಚ್ಚು. ಇದರಿಂದ ಮಾನಸಿಕ ಕಿರಿಕಿರಿ, ರಕ್ತದೊತ್ತಡ, ಮಧುಮೇಹ ಹೀಗೆ ನಾನಾ ಸಮಸ್ಯೆ ಕಾಡಬಹುದು. ಕಾರ್ಟಿಸೊಲ್ ಪ್ರಮಾಣ ಹೆಚ್ಚಾಗಿ ನಾನಾ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.‌ ಹೀಗಾಗಿ ದಿನನಿತ್ಯ ಡೈರಿ ಬರೆಯುವ ಅಭ್ಯಾಸ ಮಾಡಿಕೊಂಡರೆ ಇದಕ್ಕೆಲ್ಲ ಪರಿಹಾರ ಪಡೆಯಬಹುದು ಎಂದು ವಿವರಿಸಿದರು.

ವ್ಯಾಯಾಮಕ್ಕೂ ಮುನ್ನ ಈ ಹಣ್ಣುಗಳ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ

ದಿನಚರಿ ಬರೆಯುವುದು ಕೇವಲ ಹವ್ಯಾಸವಾಗಿ ಇರದೆ ಅದೊಂದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಹವ್ಯಾಸ ಎನಿಸಿಕೊಂಡಿದೆ. ದಿನ ನಿತ್ಯ ದಿನಚರಿ ಬರೆಯಲು ತೊಡಗಿಸಿಕೊಳ್ಳುವ‌ ಮೂಲಕ ಏಕಾಗ್ರತೆ, ಕೌಶಲ್ಯತೆ, ಸೃಜನಶೀಲತೆ ಹೆಚ್ಚಿಸಿಕೊ‍ಳ್ಳಬಹುದು ಎಂದರು.

ಆರೋಗ್ಯ ಲಾಭವೇನು?

  • ದಿನಚರಿ ಬರೆಯುವುದರಿಂದ ಮೆದುಳಿನ ಎರಡೂ ಭಾಗ ಸಕ್ರಿಯಗೊಂಡು ಆ್ಯಕ್ಟೀವ್ ಆಗುತ್ತದೆ.
  • ದಿನವಿಡೀ ನಡೆದ ಘಟನೆಗಳು ನಮ್ಮನ್ನು ಕಾಡುವ ಬದಲು ಭಾವನೆಗಳನ್ನು ಬರೆದಿಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
  • ಡೈರಿ ಬರೆದಿಡುವುದರಿಂದ ಆತಂಕ ಮತ್ತು ಇತರ ಒತ್ತಡ ಮರೆಮಾಚಬಹುದು.
  • ವೈಯಕ್ತಿಕ ಸಾಧನೆ, ಸರಿಯಾದ ನಿರ್ಣಾಯಕ ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.