ಹೃದಯ, ಮೆದುಳಿನ ರಕ್ಷಣೆ; ಇದಷ್ಟೇ ಅಲ್ಲ ಬಾದಾಮಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನ ಹಲವು
Health Tips: ಡ್ರೈ ಪ್ರೂಟ್ಸ್ ಸೇವನೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗುತ್ತದೆ. ಒಂದೊಂದು ಬೀಜಗಳಲ್ಲಿ ಬೇರೆ ಬೇರೆ ರೀತಿಯ ಆರೋಗ್ಯ ಗುಣಗಳಿವೆ. ಮುಖ್ಯವಾಗಿ ಪೋಷಕಾಂಶದಿಂದ ಕೂಡಿರುವ ಬಾದಾಮಿಯನ್ನು ಹೆಚ್ಚಿನವರು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಹಲವು ಜೀವಸತ್ವಗಳು ಮತ್ತು ಅಗತ್ಯವಾದ ಖನಿಜಗಳು ಇದ್ದು ಬಹಳಷ್ಟು ಆರೋಗ್ಯ ಪ್ರಯೋಜನ ನೀಡುತ್ತವೆ.
ಸಂಗ್ರಹ ಚಿತ್ರ -
ನವದೆಹಲಿ, ಜ. 8: ನಮ್ಮ ಆರೋಗ್ಯದ ರಕ್ಷಣೆಗೆ ನಾವು ಸೇವಿಸುವ ಆಹಾರಗಳು ಕೂಡ ಪ್ರಮುಖವಾಗುತ್ತವೆ. ಮುಖ್ಯವಾಗಿ ತರಕಾರಿ, ಹಣ್ಣು, ಬೀಜಗಳ ಸೇವನೆಗೆ ಆದ್ಯತೆ ನೀಡಬೇಕಾಗುತ್ತದೆ. ಅದರಲ್ಲೂ ಡ್ರೈ ಪ್ರೂಟ್ಸ್ ಸೇವನೆ ಹಲವು ರೀತಿಯ ಆರೋಗ್ಯ ಲಾಭಗಳನ್ನು ನೀಡುತ್ತವೆ. ಒಂದೊಂದು ಬೀಜದಲ್ಲಿ ಬೇರೆ ಬೇರೆ ರೀತಿಯ ಆರೋಗ್ಯ ಗುಣಗಳಿವೆ. ಮುಖ್ಯವಾಗಿ ಪೋಷಕಾಂಶದಿಂದ ಕೂಡಿರುವ ಬಾದಾಮಿಯನ್ನು (Badam) ಹೆಚ್ಚಿನವರು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಹಲವು ಜೀವಸತ್ವಗಳು ಮತ್ತು ಅಗತ್ಯವಾದ ಖನಿಜಗಳು ಇದ್ದು ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ.
ಹೃದಯದ ಆರೋಗ್ಯ ರಕ್ಷಣೆ
ಬಾದಾಮಿ ಹಲವು ರೀತಿಯ ಆರೋಗ್ಯ ಲಾಭವನ್ನು ಹೊಂದಿದ್ದು, ಇದು ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ. ನಿಯಮಿತ ಬಾದಾಮಿ ಸೇವನೆಯು ದೀರ್ಘಕಾಲದ ಉರಿಯೂತ ಮತ್ತು 'ಕೆಟ್ಟ' LDL ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಬಾದಾಮಿಯಲ್ಲಿ ಸಮೃದ್ಧವಾಗಿರುವ 'ಮೊನೊಸಾಚುರೇಟೆಡ್ ಫ್ಯಾಟ್'ಗಳು ಮತ್ತು ವಿಟಮಿನ್ ಇ ಕೊಲೆಸ್ಟ್ರಾಲ್ ಶೇಖರಣೆಯಾಗುವುದನ್ನು ತಡೆಯುತ್ತವೆ
ರಕ್ತದ ಸಕ್ಕರೆ ಮಟ್ಟದ ನಿಯಂತ್ರಣ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಬಾದಾಮಿಯ ಪಾತ್ರವು ಬಹಳಷ್ಟು ಮುಖ್ಯವಾಗಿದೆ. ಬಾದಾಮಿಯಲ್ಲಿ ಮೆಗ್ನೀಸಿಯಮ್ ಅಂಶ ಇದ್ದು, ಇದು ದೇಹದಲ್ಲಿ ಇನ್ಸುಲಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಇದ್ದವರು ಬಾದಾಮಿ ಸೇವನೆ ಮಾಡುವುದು ಉತ್ತಮ.
ಚಳಿಗಾಲದ ಆರೋಗ್ಯಕ್ಕೆ ಕರಿಮೆಣಸು ರಾಮಬಾಣ!
ತೂಕ ನಿರ್ವಹಣೆ
ಬಾದಾಮಿಯ ಸೇವನೆ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಪ್ರೋಟೀನ್ ಮತ್ತು ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಸೇವಿಸುವುದರಿಂದ ಬೇಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಅದರ ಜತೆ ಇದು ಮೆದುಳಿಗೆ ಹಾರ್ಮೋನುಗಳನ್ನು ಪ್ರಚೋದಿಸಲು ಕೂಡ ಸಹಾಯ ಮಾಡುತ್ತದೆ.
ಮೆದುಳಿನ ರಕ್ಷಣೆ
ಹೆಚ್ಚಿನ ಮನೆಗಳಲ್ಲಿ ನೆನೆಸಿದ ಬಾದಾಮಿ ತಿನ್ನುವುದಕ್ಕೆ ಆದ್ಯತೆ ನೀಡುತ್ತಾರೆ. ಇದರಲ್ಲಿರುವ 'ರೈಬೋಫ್ಲಾವಿನ್' ಮತ್ತು 'ಎಲ್-ಕಾರ್ನಿಟೈನ್' ಎಂಬ ಪೋಷಕಾಂಶಗಳು ಮೆದುಳಿನ ಜೀವ ಕೋಶಗಳ ಚಟುವಟಿಕೆಯನ್ನು ಅಭಿವೃದ್ಧಿ ಪಡಿಸುತ್ತದೆ ಮತ್ತು ವಯಸ್ಸಾದಂತೆ ಆಗುವ ಮರೆವಿನ ಕಾಯಿಲೆಯನ್ನು ಕೂಡ ತಡೆಯುತ್ತದೆ.
ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ
ಬಾದಾಮಿಯ ಸಿಪ್ಪೆಯು 'ಪ್ರಿಬಯಾಟಿಕ್' ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ನಮ್ಮ ಕರುಳಿನ ಆರೋಗ್ಯ ರಕ್ಷಣೆ ಮಾಡಿ ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿ ಆಗುವಂತೆ ಸಹಾಯ ಮಾಡುತ್ತದೆ.
ತ್ವಚೆ ಮತ್ತು ಕೂದಲಿನ ಆರೈಕೆ
ಬಾದಾಮಿಯಲ್ಲಿರುವ ವಿಟಮಿನ್ ಇ ಮತ್ತು ತಾಮ್ರದ ಅಂಶವು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಅದರ ಜತೆ ಕೂದಲಿನ ರಕ್ಷಣೆ ಮಾಡಿ ಉದುರುವುದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.