Horror News: ಒಬ್ಬಂಟಿ ಮಹಿಳೆಯ ಮೃತದೇಹವನ್ನೇ ತಿಂದು ಹಾಕಿದ ಆಕೆಯ ಸಾಕು ನಾಯಿಗಳು!
ಪ್ರಪಂಚದಲ್ಲಿ ಏನೇನೋ ವಿಚಿತ್ರ ಮತ್ತು ವಿಕ್ಷಿಪ್ತ ಘಟನೆಗಳು ನಡೆಯುತ್ತಿರುತ್ತವೆ. ಅಂತಹ ಒಂದು ನಂಬಲಸಾಧ್ಯವಾದ ಸಾವಿನ ಸುದ್ದಿ ಇಲ್ಲಿದೆ...

ದುರಂತ ಸಾವಿಗೀಡಾದ ರೊಮೇನಿಯಾದ ಆಡ್ರಿಯಾನ ನಿಯಾಗೊ.

ನವದೆಹಲಿ: ರೊಮೇನಿಯಾ (Romania) ದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ (Horror News) ವರದಿಯಾಗಿದೆ. ತನ್ನ ಫ್ಲ್ಯಾಟ್ ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯೊಳು ಯಾವುದೊ ಕಾರಣದಿಂದ ಸಾವನ್ನಪ್ಪಿದ ಬಳಿಕ ಆಕೆಯ ಎರಡು ಸಾಕು ನಾಯಿಗಳು ಆಕೆಯ ಮೃತದೇಹವನ್ನು ಅರೆಬರೆ ತಿಂದು ಹಾಕಿರುವ ಸ್ಥಿತಿಯಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿದ್ದು ಈ ಸುದ್ದಿ ಇದೀಗ ನೆಟ್ಟಿಗರನ್ನು (Social Media) ಬೆಚ್ಚಿಬೀಳಿಸಿದೆ.
ರೊಮೇನಿಯಾದ ಬುಚಾರೆಸ್ಟ್ (Bucharest) ಎಂಬಲ್ಲಿನ 34 ವರ್ಷದ ಆಡ್ರಿಯಾನ ನಿಯಾಗೊ ಎಂಬ ಯುವತಿಯೇ ಈ ರಿತಿಯಾಗಿ ದುರಂತ ಸಾವೀಗೀಡಾದ ಮಹಿಳೆಯಾಗಿದ್ದಾಳೆ.
ಆಡ್ರಿಯಾನ ಕಳೆದ ಕೆಲವು ದಿನಗಳಿಂದ ಯಾವುದೇ ಫೋನ್ ಕರೆಗಳಿಗೆ ಮತ್ತು ಮೆಸೇಜ್ ಗಳಿಗೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ಮನೆಯವರು ಆಕೆ ವಾಸಿಸುತ್ತಿದ್ದ ಫ್ಲ್ಯಾಟ್ ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ದುರಂತ ಘಟನೆ ಬೆಳಕಿಗೆ ಬಂದಿದೆ.
ಆಡ್ರಿಯಾನ ಫೊನ್ ಕರೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಗಾಬರಿಗೊಂಡು ಆಕೆಯ ಮನೆಯವರು ಆಕೆ ವಾಸಿಸುತ್ತಿದ್ದ ಫ್ಲ್ಯಾಟ್ ಗೆ ಪೊಲೀಸ್ ಹಾಗೂ ಅಗ್ನಿಶಾಮಕ ದಳದವರೊಂದಿಗೆ ಭೇಟಿ ನೀಡಿ, ಆಕೆಯ ಫ್ಲ್ಯಾಟ್ ನ ಬಾಗಿಲನ್ನು ಒಡೆದು ನೋಡಿದಾಗ ಅಲ್ಲಿ ಕಂಡ ದೃಶ್ಯವನ್ನು ನೋಡಿ ಬೆಚ್ಚಿಬಿದ್ದರು!
ಬಾಗಿಲನ್ನು ಮುರಿದು ಒಳ ನುಗ್ಗಿದ ಅಧಿಕಾರಿಗಳು ಮತ್ತು ಮನೆಯವರಿಗೆ ಅಲ್ಲಿ ಮಹಿಳೆಯ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗುತ್ತಾಳೆ. ಇದಕ್ಕಿಂತಲೂ ಶಾಕಿಂಗ್ ವಿಚಾರವೆಂದರೆ ಆಕೆಯ ಮೃತದೇಹ ಅರೆಬರೆ ತಿಂದ ಸ್ಥಿತಿಯಲ್ಲಿತ್ತು! ಮತ್ತು ಈ ಮಹಿಳೆಯ ಮೃತದೇಹದ ಪಕ್ಕದಲ್ಲೇ ಆಕೆಯ ಪ್ರೀತಿಯ ಎರಡು ನಾಯಿಗಳು ಕುಳಿತಿದ್ದವು!
ಮಹಿಳೆ ಮೃತಪಟ್ಟ ಬಳಿಕ ಹಸಿವಿನಿಂದ ಕಂಗೆಟ್ಟ ನಾಯಿಗಳು ತನ್ನೊಡತಿಯ ಮೃತದೇಹವನ್ನೇ ಅರೆಬರೆ ತಿಂದು ಹಾಕಿರಬಹುದೆಂದು ಶಂಕಿಸಲಾಗಿದೆ.
ಮಹಿಳೆಯ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಯಾವುದೇ ಹಿಂಸೆ ನಡೆದ ಕುರುಹುಗಳು ಪತ್ತೆಯಾಗಿಲ್ಲ. ಇದೀಗ ಸಾವಿನ ಕಾರಣವನ್ನು ಪತ್ತೆಹಚ್ಚಲು ಮೃತದೇಹದ ಅಟಾಪ್ಸಿಯನ್ನು ನಡೆಸಲಾಗುತ್ತಿದೆ.
ಇದೀಗ ಆಕೆಯ ಎರಡು ನಾಯಿಗಳನ್ನು ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸೇರಿಸಲಾಗಿದೆ ಮತ್ತು ಮಹಿಳೆಯ ಅಂತ್ಯ ಸಂಸ್ಕಾರವನ್ನು ಭಾವಪೂರ್ಣವಾಗಿ ನಡೆಸಲಾಗಿದೆ.
ಮಹಿಳೆಯ ಸಹೋದರಿ ಫೇಸ್ಬುಕ್ ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದು, ‘ಇನ್ನೊಬ್ಬಳು ದೇವತೆ ಸ್ವರ್ಗಕ್ಕೆ ಹೋಗಿದ್ದಾಳೆ. ನನ್ನ ಸುಂದರ ಸಹೋದರಿ ಅಂಡಾ ಸಶ ಇನ್ನು ನಮ್ಮೊಂದಿಗಿಲ್ಲ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಟೀ-ಕಾಫಿ ಕುಡಿಯುದಕ್ಕೂ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ!
ಪ್ರಾಣಿ ಪ್ರಿಯರ ಮೃತದೇಹವನ್ನು ಅವರ ನೆಚ್ಚಿನ ಸಾಕುಪ್ರಾಣಿಗಳೇ ತಿಂದು ಹಾಕಿರುವ ಘಟನೆ ಇದೇ ಮೊದಲು ನಡೆದಿರುವುದಲ್ಲ. ಹಿಂದೆ 2013ರಲ್ಲಿ, ಇಂಗ್ಲೆಂಡಿನ ಹ್ಯಾಂಪ್ ಶೈರಿನಲ್ಲಿ 56 ವರ್ಷ ಪ್ರಾಯದ ಮಹಿಳೆ ತನ್ನ ಮನೆಯಲ್ಲಿ ಮೃತಪಟ್ಟಿದ್ದಳು, ಈಕೆಯ ಮೃತದೇಹವನ್ನು ಈಕೆ ಸಾಕಿದ್ದ ಬೆಕ್ಕುಗಳೇ ತಿಂದಿದ್ದವು! ಈ ಮಹಿಳೆ ತುಂಬಾ ದಿನಗಳ ಕಾಲ ಮನೆಯಿಂದ ಹೊರಬಾರದೇ ಇದ್ದಾಗ ಮತ್ತು ಆಕೆಯ ಮನೆ ಮುಂದಿದ್ದ ಲೆಟರ್ ಬಾಕ್ಸ್ ತುಂಬಿ ಹೊಗಿದ್ದ ಸಂದರ್ಭದಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿತ್ತು.
ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಮನೆ ಬಾಗಿಲು ಒಡೆದು ಒಳಹೊಕ್ಕ ಸಂದರ್ಭದಲ್ಲಿ ಅಲ್ಲಿ ಮಹಿಳೆಯ ಮೃತದೇಹದ ಜೊತೆ ಕೆಲವು ಬೆಕ್ಕು ಮತ್ತು ನಾಯಿಗಳ ಮೃತದೇಹ ಪತ್ತೆಯಾಗಿತ್ತು ಮತ್ತೆ ಇನ್ನು ಕೆಲವು ಅರೆ ಪ್ರಜ್ಞಾವಸ್ಥೆಯಲ್ಲಿದ್ದವು, ಅವುಗಳನ್ನು ಬಳಿಕ ರಕ್ಷಿಸಲಾಯಿತು.
ಮಹಿಳೆ ಮೃತಪಟ್ಟ ಬಳಿಕ ಬಹಳ ದಿನಗಳವರೆಗೆ ಆಹಾರ ಸಿಗದೇ ಇದ್ದಾಗ ಈ ಸಾಕು ಪ್ರಾಣಿಗಳು ಆ ಮೃತದೇಹವನ್ನು ತಿಂದಿರಬೇಕೆಂದು ಶಂಕಿಸಲಾಗಿತ್ತು.
ಅಪರೂಪದ ಪ್ರಕರಣಗಳಲ್ಲಿ ಬೆಕ್ಕು ಮತ್ತು ನಾಯಿಗಳು ಮನುಷ್ಯರ ಮೃತದೇಹವನ್ನು ತಿನ್ನುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳೂ ಖಚಿತಪಡಿಸಿದ್ದಾರೆ.