ಕೆಲವರು ಓರಾಟಕ್ಕೆ ಏನಾದರೂ ಬೆಲೆ ಇದೆಯಾ?
ಕೆಲವರು ಓರಾಟಕ್ಕೆ ಏನಾದರೂ ಬೆಲೆ ಇದೆಯಾ?
Vishwavani News
October 5, 2019
ಯಾವ ಹೋರಾಟವೇ ಆಗಿರಲಿ, ಅದು ನಿಷ್ಪಕ್ಷಪಾತಿಯಾಗಿದ್ದರೆ ಜನರು ಬೆಂಬಲಿಸುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಏಕಪಕ್ಷೀಯವಾದ ರೋಲ್‌ಕಾಲ್ ಹೋರಾಟಗಳೇ ಜಾಸ್ತಿಯಾಗಿವೆ.
ವಾಟಾಳ್ ಎಂದಾಕ್ಷಣ ನೆನಪಾಗುವುದು ಕಪ್ಪುು ಕನ್ನಡಕ, ಚಿತ್ರ-ವಿಚಿತ್ರ ಅವತಾರಗಳು, ತಲೆಯ ಮೇಲೊಂದು ಕಪ್ಪುು ಟೊಪ್ಪಿಿ, ರಾತ್ರಿಿಯೆಲ್ಲಾಾ ಮನೆಯಲ್ಲಿ ಕುಳಿತು ಬಾಯಿಪಾಠ ಮಾಡಿರುವ ಕನ್ನಡಪರ ಘೋಷಣೆಗಳು. ಈ ಆಸಾಮಿ ಮಾಡಿರುವ ಪ್ರತಿಭಟನೆಗಳಲ್ಲಿ ಅದೆಷ್ಟು ಪ್ರತಿಭಟನೆಗಳು ಯಶಸ್ಸನ್ನು ಕಂಡಿವೆಯೋ, ತಿಳಿದಿಲ್ಲ. ಒಂದು ಸಣ್ಣ ವಿಚಾರ ಸಿಕ್ಕಿಿದರೂ ಸಾಕು, ಇವರು ಬೀದಿಗೆ ಇಳಿದುಬಿಡುತ್ತಾಾರೆ. ಮೈಸೂರು ಬ್ಯಾಾಂಕ್ ವೃತ್ತ ಇವರ ಹಾಟ್‌ಸ್ಪಾಾಟ್. ಎಮ್ಮೆೆ ಮೇಲೆ ನಡೆದು ಹೋಗುವ ರೀತಿ, ತಮಟೆ ಬಾರಿಸುವ ರೀತಿ, ಎತ್ತಿಿನ ಗಾಡಿಯ ಮೇಲೆ ಹೋಗುವ ರೀತಿ.. ಎಲ್ಲವೂ ಚಿತ್ರ ವಿಚಿತ್ರ ಕನ್ನಡಪರ ಪ್ರತಿಭಟನೆಗಳು.
ಈ ಎಲ್ಲ ಪ್ರತಿಭಟನೆಯಲ್ಲಿಯೂ ಇವರ ಮುಖದ ಮೇಲಾಗಲಿ ಅಥವಾ ಅವರು ಧರಿಸುವ ಬಟ್ಟೆೆಯ ಮೇಲಾಗಲಿ ನೋವು, ದುಃಖದ ಭಾವವೇ ಕಾಣುವುದಿಲ್ಲ. ಯಾವುದೇ ಪ್ರತಿಭಟನೆ ಇರಲಿ, ಅಲ್ಲೆೆಲ್ಲ ತುಂಬಾ ಅಚ್ಚುಕಟ್ಟಾಾಗಿ, ಮದುವೆಯ ಗಂಡಿನಂತೆ ತಯಾರಾಗಿ, ಕನ್ನಡಕ ಧರಿಸಿಕೊಂಡು ಪ್ರತಿಭಟನೆಗೆ ಇಳಿಯುತ್ತಾಾರೆ. ಇವರೇನಾದರೂ ಅಪ್ಪಿಿ ತಪ್ಪಿಿ ತಮಿಳುನಾಡಿನಲ್ಲಿ ಹುಟ್ಟಿಿ ಬೆಳೆದು, ಅಲ್ಲಿನ ಭಾಷೆಗಾಗಿ ಇಷ್ಟೆೆಲ್ಲ ಪ್ರತಿಭಟನೆ ಮಾಡಿದ್ದಿದ್ದರೆ, ಪಕ್ಕಾಾ ತಮಿಳುನಾಡಿನ ಮುಖ್ಯಮಂತ್ರಿಿಯಾಗಿಬಿಡುತ್ತಿಿದ್ದರು. ತಮಿಳರಿಗೆ ಉದ್ಧಾಾರ ಆಗದೇ ಇದ್ದರೂ, ಭಾಷೆಯ ವ್ಯಾಾಮೋಹವು ಮಾತ್ರ ಕಡಿಮೆಯಾಗಿಲ್ಲ. ಅಲ್ಲಿನ ರಾಜಕೀಯ ನಾಯಕರುಗಳೆಲ್ಲರೂ ಭಾಷೆಯನ್ನು ಮಾನದಂಡವಾಗಿಸಿಕೊಂಡೇ, ಬಹುದೊಡ್ಡದಾಗಿ ಬೆಳೆದವರು. ಪಾಪ, ವಾಟಾಳ್ ನಾಗರಾಜರಿಗೆ ಜನ ಯಾಕೋ ಮಣೆ ಹಾಕಲೇ ಇಲ್ಲ.
ಅವರು ಕೇವಲ ಹೋರಾಟಗಳಿಂದಲೇ ಪ್ರಸಿದ್ಧರಾದರು. ಆದರೆ ಇತ್ತೀಚೆಗೆ ಜನರು ಅವರ ಹೋರಾಟಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಿಲ್ಲ. ಅವರ ಏಕಪಕ್ಷೀಯ ಹೋರಾಟಗಳು ಜನರಿಗೆ ತಿಳಿದುಹೋಗಿದೆ. ಕೇವಲ ಇವರೊಬ್ಬರೇ ಅಲ್ಲ, ಇತರೆ ಕನ್ನಡ ಪರ ಸಂಘಟನೆಗಳ ಹೋರಾಟಗಳನ್ನು ಅಷ್ಟೇ, ಯಾರೂ ಸಹ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸಾಮಾಜಿಕ ಜಾಲತಾಣಗಳು ಸಕ್ರಿಿಯವಾಗಿರುವುದರಿಂದ ಈ ಹೋರಾಟಗಾರರಿಗೆ ಅಷ್ಟೊೊಂದು ಬೆಲೆ ಇಲ್ಲ. ಯಾವ ಹೋರಾಟವೇ ಆಗಿರಲಿ, ಅದು ನಿಷ್ಪಕ್ಷಪಾತಿಯಾಗಿದ್ದರೆ ಜನರು ಬೆಂಬಲಿಸುತ್ತಾಾರೆ. ಆದರೆ ಇಂದಿನ ದಿನಗಳಲ್ಲಿ ಏಕಪಕ್ಷೀಯವಾದ ರೋಲ್‌ಕಾಲ್ ಹೋರಾಟಗಳೇ ಜಾಸ್ತಿಿಯಾಗಿವೆ. ಈ ಸಂಘಟನೆಗಳ ಹೋರಾಟದ ಪರಿಯನ್ನು ನೋಡಿಯೇ ಅದನ್ನು ಹೇಳಬಹುದು. ಅಷ್ಟರಮಟ್ಟಿಿಗೆ ಸಾಮಾನ್ಯ ಜನರ ಕಣ್ಣು, ಕಿವಿಗಳು ಸಕ್ರಿಿಯವಾಗಿವೆ.
ಕೆಲವು ದಿನಗಳ ಹಿಂದೆ, ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣಾ ಪ್ರಕ್ರಿಿಯೆ ಮುಗಿದಿದೆ. ಜೋಗುಪಾಳ್ಯ ವಾರ್ಡ್‌ನ ಗೌತಮ್ ಕುಮಾರ ಜೈನ್ ಬೆಂಗಳೂರಿನ ನೂತನ ಮೇಯರ್ ಆಗಿ ಬಿಜೆಪಿಯಿಂದ ಆಯ್ಕೆೆಯಾದರು. ಪ್ರತಿ ಬಾರಿಯೂ ಲಿಂಗಾಯತರು, ಒಕ್ಕಲಿಗರು, ಮುಸಲ್ಮಾಾನರು ಅಥವಾ ಹಿಂದುಳಿದ ವರ್ಗದ ಜನರನ್ನು ಮೇಯರ್ ಆಗಿ ಆಯ್ಕೆೆಯಾಗಿದ್ದರು.
ಆದರೆ ಈ ಬಾರಿ ಜೈನರೊಬ್ಬರು ಮೇಯರ್ ಆಗಿ ಆಯ್ಕೆೆಯಾಗಿದ್ದಕ್ಕೆೆ ಎಲ್ಲರಿಗೂ ಅಚ್ಚರಿಯಾಯಿತು. ಜಾತಿ ಸಮೀಕರಣವನ್ನು ನೋಡಿ, ಲೆಕ್ಕಾಾಚಾರ ಹಾಕಿ ಆಯ್ಕೆೆ ಆಗುತ್ತಿಿದ್ದ ಅಭ್ಯರ್ಥಿಗೆ ಈ ಬಾರಿ ಬ್ರೇಕ್ ಬಿದ್ದಿತು. ಜಾತಿ ಜಾತಿಯೆಂದು ಯಾವಾಗಲೂ ಹೊಡೆದಾಡುತ್ತಿಿದ್ದ ರಾಜಕೀಯ ಚದುರಂಗದಾಟಕ್ಕೆೆ ಈ ಬಾರಿ ದೊಡ್ಡದೊಂದು ಟ್ವಿಿಸ್‌ಟ್ ಸಿಕ್ಕಿಿತ್ತು. ಇವರು ಆಯ್ಕೆೆಯಾದ ಮರುಕ್ಷಣವೇ, ಮೈಸೂರು ಬ್ಯಾಾಂಕಿನ ಮುಂದೆ ವಾಟಾಳ್ ಸೈನ್ಯವು ಪ್ರತಿಭಟನೆ ಮಾಡಲು ಶುರು ಮಾಡಿತ್ತು. ಬೆಂಗಳೂರು ಮಾರ್ವಾಡಿಗಳ ಪಾಲಾಗುತ್ತಿಿದೆ, ಇವರಿಂದ ಬೆಂಗಳೂರನ್ನು ರಕ್ಷಿಿಸಿ, ಕನ್ನಡಿಗರನ್ನೇ ಮೇಯರ್ ಮಾಡಿ ಎಂದು ಬೊಬ್ಬೆೆ ಹೊಡೆಯಲು ಈ ಆಸಾಮಿ ಆಗಲೇ ಶುರು ಮಾಡಿದ್ದರು. ಅಂದಹಾಗೆ ಈ ವಾಟಾಳ್ ಸೈನ್ಯ ಈ ಹಿಂದಿನ ಬೆಂಗಳೂರು ಮೇಯರ್‌ಗಳ ಇತಿಹಾಸವನ್ನು ಓದಿಯೇ ಇಲ್ಲವೆನಿಸುತ್ತದೆ ಅಥವಾ ತಿಳಿದಿದ್ದರೂ, ಅದರ ಬಗ್ಗೆೆ ಮಾತನಾಡಿರಲಿಲ್ಲ.
ಸಂಪತ್ ರಾಜ್ ಎಂಬ ಮೇಯರ್ ಈ ಹಿಂದೆ ಇದ್ದರು. ಅವರ ಪತ್ರಿಿಕಾಗೋಷ್ಠಿಿಗಳಲ್ಲಿನ ಕನ್ನಡವನ್ನು ಕೇಳಿದರೆ, ಡಬ್ಬಣ ತೆಗೆದು ಚುಚ್ಚಿಿದಂತಾಗುತ್ತಿಿತ್ತು. ಇಂಥ ಅಪ್ಪಟ ತಮಿಳರನ್ನೇ ಮೇಯರ್ ಮಾಡಿದ ಕೀರ್ತಿ ಬೆಂಗಳೂರಿಗರದ್ದು. ಕಾಂಗ್ರೆೆಸ್ ಸರಕಾರದ ಅಧಿಕಾರದಲ್ಲಿ ತಮಿಳರನ್ನು ಮೇಯರ್ ಮಾಡಿದಾಗ, ಒಂದು ವಾಕ್ಯವನ್ನೂ ಮಾತಾಡದ ವಾಟಾಳ್ ಅಂಡ್ ಟೀಮ್, ಮೊನ್ನೆೆ ಗೌತಮ್ ಕುಮಾರ ಜೈನ್ ಮೇಯರ್ ಆದ ಕೂಡಲೇ ಬೀದಿಗೆ ಇಳಿದುಬಿಟ್ಟರು.
ಈ ಸಂಪತ್ ರಾಜ್‌ರ ಗುರು ಜಾರ್ಜ್‌ರ ಕನ್ನಡವನ್ನು ಕೇಳಿಲ್ಲವೇ? ಅವರೇನು ಪಕ್ಕದ ಮಂಡ್ಯ ಜಿಲ್ಲೆೆಯಿಂದ ಬಂದವರೇ? ಕೇರಳದ ವ್ಯಕ್ತಿಿಯನ್ನು ಎಮ್‌ಎಲ್‌ಎ ಮಾಡಿ, ಸಿದ್ದರಾಮಯ್ಯನ ಸಂಪುಟದಲ್ಲಿ ಗೃಹ ಸಚಿವರನ್ನಾಾಗಿ ಮಾಡಿದರು. ಆಗ ನಮ್ಮ ವಾಟಾಳನ ಕರಿ ಕನ್ನಡಕ ಬೀದಿಯಲ್ಲಿ ಕಾಣಲೇ ಇಲ್ಲ, ಚಿತ್ರ-ವಿಚಿತ್ರ ಪ್ರತಿಭಟನೆಗಳು ನಡೆಯಲೇ ಇಲ್ಲ. ಕಾಂಗ್ರೆೆಸ್‌ನ ಕೆಲವು ಪಡಪೋಸಿಗಳಿಗೆ, ಇಡೀ ಕರ್ನಾಟಕದ ಹಿಡಿತವೇ ಒಬ್ಬ ಮಲಯಾಳಿಯ ಕೈ ಸೇರುತ್ತಿಿದೆಯೆಂದು ಅನಿಸಲೇ ಇಲ್ಲ. ಯಾರೂ ಸಹ ಫೇಸ್‌ಬುಕ್, ಟ್ವಿಿಟರ್‌ನಲ್ಲಿ ಬರೆದುಕೊಳ್ಳಲೇ ಇಲ್ಲ. ಕನ್ನಡ ಸಂಘಟನೆಗಳೂ ಸಹ ಬೀದಿಗೆ ಬಂದು ಪ್ರತಿಭಟಿಸಲಿಲ್ಲ. ಈ ರೀತಿಯ ತಾರತಮ್ಯದ ಹೋರಾಟಗಾರರನ್ನು ಯಾರು ತಾನೇ ನಂಬಿಯಾರು?
ಈಗ ಮಾತ್ರ ಬೆಂಗಳೂರು ಮಾರ್ವಾಡಿಗಳ ಕೈ ಸೇರಿದೆ ಅಂತೆಲ್ಲಾಾ ಬಾಯಿಗೆ ಬಂದಂತೆ ಬೊಗಳಿಕೊಂಡು ತಿರುಗುತ್ತಿಿದ್ದಾಾರೆ. ಆತ್ಮಸಾಕ್ಷಿಿಯಿದ್ದರೆ, ಎಲ್ಲರಿಗೂ ಒಂದೇ ನ್ಯಾಾಯವನ್ನು ನೀಡಬೇಕು. ಅದನ್ನು ಬಿಟ್ಟು ಈ ರೀತಿಯ ತಾರತಮ್ಯ ಮಾಡಿದರೆ, ಜನರು ಉಗಿಯುತ್ತಲೇ ಇರುತ್ತಾಾರೆ.
ಶಾಂತಿನಗರದ ಎಮ್‌ಎಲ್‌ಎ ಹ್ಯಾಾರಿಸ್, ಮಂತ್ರಿಿಯೂ ಆಗಿದ್ದರು. ಆಗ ಈ ವಾಟಾಳ ಹಾಗೂ ಸಂಘಟನೆಗಳಿಗೆ ಬೆಂಗಳೂರು ಕೈ ತಪ್ಪಲೇ ಇಲ್ಲ. ಹ್ಯಾಾರಿಸ್‌ನ ಮಗ ಮೊಹ್ಮದ್ ನಲಪ್ಪಾಾಡ್ ಕನ್ನಡದ ಹುಡುಗ ವಿದ್ವತ್‌ನನ್ನು ಹೊಡೆದಾಗ, ಇದೇ ವಾಟಾಳ್ ಅದೆಷ್ಟು ಪ್ರತಿಭಟನೆ ನಡೆಸಿದರು? ಆಗ ಇವರಿಗೆ ಕನ್ನಡಿಗರ ಅಸ್ಮಿಿತೆಯ ಅರಿವಾಗಲಿಲ್ಲ.
ಬೆಂಗಳೂರಿನಲ್ಲಿ ಅಧಿಕಾರ ಗದ್ದುಗೆ ಏರಿದವರಲ್ಲಿ ರೆಡ್ಡಿಿಗಳಿದ್ದಾಾರೆ, ನಾಯ್ಡುಗಳಿದ್ದಾಾರೆ, ಮುಸಲ್ಮಾಾನರಿದ್ದಾಾರೆ. ಅವರ್ಯಾಾರೂ ಆದಾಗ ಇಲ್ಲದ ಕನ್ನಡದ ಉಳಿವು ಈಗ ಏಕೆ ಬಂತು? ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಗಳೆಲ್ಲವನ್ನು ಆಳುತ್ತಿಿರುವವರು ರೆಡ್ಡಿಿಗಳು ಹಾಗೂ ನಾಯ್ಡುಗಳು ಎಂಬ ಸಾಮಾನ್ಯ ಸಂಗತಿಯ ಅರಿವು ಈ ಆಸಾಮಿಗೆ ಇಲ್ಲವೇ? ಎಷ್ಟು ರೆಡ್ಡಿಿ ಹಾಗೂ ನಾಯ್ಡುಗಳು ಕಟ್ಟಿಿಸಿರುವ ಕಟ್ಟಡಗಳಲ್ಲಿ ಇಂದು ಕನ್ನಡಿಗರು ವಾಸವಿಲ್ಲ ಹೇಳಿ? ಅವರಿಗೆಲ್ಲ ಕೊಡುವ ಸಂದರ್ಭದಲ್ಲಿ ಜಾಗವನ್ನು ಕೊಟ್ಟು, ಈಗ ಕಿರುಚಾಡಿದರೆ ಪ್ರಯೋಜನವಿಲ್ಲ. ನೀವು ಒಂದು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು, ಮೆಟ್ರೋೋ ನಗರಗಳೆಂದರೆ ಹೀಗೆಯೇ ಇರುತ್ತದೆ. ದೆಹಲಿ ಹಾಗೂ ಮುಂಬಯಿ ನಗರಗಳ ಪರಿಸ್ಥಿಿತಿಯೂ ಇದೇ ರೀತಿಯಿದೆ.
ಬೆಳೆಯುತ್ತಿಿರುವ ನಗರಗಳಲ್ಲಿ ಬೇರೆ ರಾಜ್ಯದ, ಬೇರೆ ಧರ್ಮ- ಜಾತಿಯ ಜನರು ಬಂದು ನೆಲೆಸಿ ಬೆಳೆಯುವುದು ಸಹಜ. ಹಾಗಂತ ನಾವು ನಮ್ಮತನವನ್ನು ಬಿಟ್ಟು ಮಾತಾಡಬೇಕೆಂದು ನಾನು ಹೇಳುತ್ತಿಿಲ್ಲ. ಬೇರೆಡೆಯಿಂದ ಬಂದು ಇಲ್ಲಿ ನೆಲೆಸಿರುವವರು ಕನ್ನಡ ಕಲಿಯಲೇಬೇಕು. ತೇಜಸ್ವಿಿ ಸೂರ್ಯ ಮಾರ್ವಾಡಿಗರಿಗೆ ಬೆಂಬಲಿಸಿದ್ದನ್ನು ನಾನು ಖಂಡಿಸಿದ್ದೇನೆ. ಅಲ್ಲಿದ್ದ ವಿಷಯವೇ ಬೇರೆ. ಅಲ್ಲಿನ ಬೋರ್ಡ್‌ಗಳಲ್ಲಿ ಕನ್ನಡದ ಗಂಧವೇ ಇರಲಿಲ್ಲ. ಹಾಗಾಗಿ ನಾನು ಖಂಡಿಸಿದ್ದೇನೆ. ನಮ್ಮಲ್ಲಿ ಇರುವವರು ನಮ್ಮ ನೆಲ, ಜಲ, ಭಾಷೆಗೆ ಗೌರವ ಕೊಡಲೇಬೇಕು. ಗೌರವ ಕೊಟ್ಟಂಥವರನ್ನು ನಾವು ಬೆಂಬಲಿಸುವುದರಲ್ಲಿ ತಪ್ಪಿಿಲ್ಲ.
ಅಷ್ಟಕ್ಕೂ ಗೌತಮ್ ಕುಮಾರ ಜೈನ್ ಹುಟ್ಟಿಿ ಬೆಳೆದಿದ್ದು ಕರ್ನಾಟಕದ ಬಳ್ಳಾಾರಿ ಜಿಲ್ಲೆೆಯ ಸಿರುಗುಪ್ಪದಲ್ಲಿ. ಆತನೂ ಸಹ ಕನ್ನಡಿಗನೇ. ಬೇರೆಡೆಯಿಂದ ವಲಸೆ ಬಂದವರಲ್ಲ. ಜೈನರಲ್ಲಿ ರಾಜಸ್ಥಾಾನದಿಂದ ಬಂದಂಥ ಮಾರ್ವಾಡಿಗಳೇ ಬೇರೆ, ಇಲ್ಲೇ ಹುಟ್ಟಿಿ ಬೆಳೆದಿರುವ ಕನ್ನಡದ ಜೈನರೇ ಬೇರೆ ಎಂಬ ಕನಿಷ್ಠ ಜ್ಞಾಾನವಾದರೂ ಈ ರೋಲ್‌ಕಾಲ್ ಗಿರಾಕಿಗಳಿಗೆ ಇರಬೇಕು. ಪ್ರತಿಭಟಿಸಬೇಕೆಂದರೆ, ಅನ್ಯ ಭಾಷಿಯರು ಯಾರೇ ಆದರೂ ಪ್ರತಿಭಟಿಸಿ ಎಂಬುದು ನನ್ನ ವಾದ. ಇಲ್ಲವಾದರೆ ಜನರಿಗೆ ನೀವೆಲ್ಲ ಮಾಡಿದ್ದು ರೋಲ್‌ಕಾಲ್‌ಗಾಗಿ ಮಾತ್ರ ಎಂದು ಎಲ್ಲರಿಗೂ ತಿಳಿಯುತ್ತದೆ.
ಮಾತುಮಾತಿಗೂ ಗುಜರಾತಿಗಳು ಬಂದು ಕರ್ನಾಟಕವನ್ನು ಆಳುತ್ತಿಿದ್ದಾಾರೆಂದು ಕೆಲವು ತರ್ಲೆೆಗಳು ಹೇಳುತ್ತಿಿರುತ್ತಾಾರೆ. ಹಾಗಾದರೆ ಅಹ್ಮದ್ ಪಟೇಲ್ ಏನು ನಾಗಮಂಗಲದಿಂದ ಬಂದವರೇ? ಅವರೂ ಸಹ ಗುಜರಾತಿಯೇ ಅಲ್ಲವೇ? ಇದೇ ಗುಜರಾತಿಯ ರಾಜ್ಯಸಭೆಯ ಸೀಟನ್ನು ಭದ್ರಪಡಿಸಲು ಕನ್ನಡಿಗ ಡಿ.ಕೆ.ಶಿವಕುಮಾರ ಈಗಲ್‌ಟನ್ ರೆಸಾರ್ಟ್‌ನಲ್ಲಿ ದಿನಗಟ್ಟಲೇ ಕಾಪಾಡಿಕೊಳ್ಳಲಿಲ್ಲವೇ? ಆಗ ಇದೇ ವಾಟಾಳ ಅಂಡ್ ಟೀಮ್ ಏನಾದರೂ ಬೀದಿಗಿಳಿದು ಪ್ರತಿಭಟನೆ ಮಾಡಿದರೆ? ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಹಲವು ಜನರು ಹೊಟ್ಟೆೆಗೆ ಏನು ತಿನ್ನುತ್ತಿಿದ್ದರು? ಆಗ ಗುಜರಾತಿಗಳನ್ನು ಭದ್ರವಾಗಿ ಇರಿಸಿಕೊಂಡವರ ಬಗ್ಗೆೆಯೂ ಯಾರೂ ಚಕಾರವೆತ್ತಲಿಲ್ಲ. ಈಗ ಮಾತ್ರ ಮಾತುಮಾತಿಗೂ ಗುಜರಾತಿಗಳು, ರಾಜಸ್ತಾಾನಿಗಳು ಎಂದು ಬಾಯಿ ಬಡಿದುಕೊಳ್ಳುತ್ತಾಾರೆ.
ರೈಡ್ ಮಾಡಿಸಿರುವುದು ಮಾತ್ರ ಗುಜರಾತಿಯೆಂದು ಬೊಗಳುವ ಇವರು, 45 ಎಮ್‌ಎಲ್‌ಎ ಗುಜರಾತಿಗಳ ಬಗ್ಗೆೆ ಏಕೆ ಮಾತನಾಡುವುದಿಲ್ಲ. ಗುಜರಾತಿನ ಎಮ್‌ಎಲ್‌ಎಗಳನ್ನು ಕಾಪಾಡುವುದರ ಹಿಂದೆಯೂ, ರಾಜಕೀಯ ಇಚ್ಛಾಾಶಕ್ತಿಿಯೇ ಇತ್ತು. ಅಂದು ಇದೇ ಜನರು ಡಿ.ಕೆ.ಶಿವಕುಮಾರರನ್ನು ಹೊಗಳಿದರು. ಅವರ ರಾಜಕೀಯ ಚಾಣಾಕ್ಷತನವನ್ನು ಕೊಂಡಾಡಿದರು. ಇದೇ ಕಾರಣಕ್ಕಾಾಗಿಯೇ ಡಿಕೆಶಿ ಮೇಡಮ್‌ಗೆ ತುಂಬಾ ಹತ್ತಿಿರವಾದರು. ಹೋರಾಟಗಾರರು ಅಂದು ಯಾಕೆ ಪ್ರತಿಭಟಿಸಲಿಲ್ಲವೆಂದರೆ, ಅವರ್ಯಾಾರಿಗೂ ಡಿಕೆಶಿ ವಿರುದ್ಧ ನಿಲ್ಲುವ ತಾಕತ್ತು ಇರಲಿಲ್ಲ. ಈಗ ಗುಬ್ಬಿಿಯ ಮೇಲೆ ಬ್ರಹ್ಮಾಾಸ್ತ್ರವೆಂಬಂತೆ, ಗೌತಮ ಕುಮಾರ ಜೈನ್ ಅವರ ಮೇಲೆ ಮುಗಿಬಿದ್ದಿದ್ದಾಾರೆ.
ಕಾಂಗ್ರೆೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥರು ಅಷ್ಟೇ, ತಮ್ಮ ಕಾರ್ಯಕರ್ತರಿಗೆ ಕೆಲವೊಂದು ಪೋಸ್‌ಟ್‌ಗಳನ್ನು ಹಾಕುವಾಗ, ಮುಂದೇನಾಗುತ್ತದೆಂದು ಯೋಚಿಸಿ, ಹಾಕಲು ಹೇಳಬೇಕು. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ರೀತಿಯಲ್ಲಿ ಇವರೆಲ್ಲರೂ ಪೋಸ್‌ಟ್ ಮಾಡುತ್ತಾಾರೆ. ಅದು ಪುನಃ ವಾಪಸ್ಸು ಅವರಿಗೇ ಬಂದು ಬಡಿಯುತ್ತದೆ. ಇನ್ನು ತಮ್ಮದೇ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆೆಯಾಗಿದ್ದ ರಮ್ಯಾಾ ಅವರನ್ನು ಆ ಸ್ಥಾಾನದಿಂದ ತೆಗೆದುಹಾಕಿ, ಗುಜರಾತಿಯೊಬ್ಬರಿಗೆ ಆ ಹುದ್ದೆೆಯನ್ನು ನೀಡಲಾಗಿದೆ. ಹಾಗಾದರೆ ಅವರ ವಿರುದ್ಧವೂ ಪ್ರತಿಭಟನೆಯನ್ನು ಯಾಕೆ ಮಾಡಲಿಲ್ಲ? ಅಲ್ಲಿನ ಗುಜರಾತಿಗಳು ಇವರ ಕಣ್ಣಿಿಗೆ ಯಾಕೆ ಕಾಣಲಿಲ್ಲ? ಇವರಿಗೆ ಗುಜರಾತಿಗಳೆಂದರೆ, ಮೋದಿ ಹಾಗೂ ಅಮಿತ್ ಶಾ ಕಣ್ಣುಮುಂದೆ ಬರುತ್ತಾಾರೆ, ಇದನ್ನೇ ಬೇಡ ಎಂದಿದ್ದು. ಹೀಗೆ ಮಾಡಲು ಹೋಗಿ ಜನಗಳ ಮಧ್ಯೆೆ ನಗೆಪಾಟಲಿಗೆ ಗುರಿಯಾಗುತ್ತಾಾರೆ.
ಇದೇ ರೀತಿ ಪ್ರತಿಯೊಂದು ನಿರ್ಧಾರಗಳ ಹಿಂದೆಯೂ, ಹಲವು ಕಾರಣಗಳಿರುತ್ತವೆ. ಏನು ಮೈಸೂರು ಬ್ಯಾಾಂಕಿನ ಮುಂದೆ ವಾಟಾಳ ನಾಗರಾಜ ಪ್ರತಿಭಟನೆ ಮಾಡಿದಾಕ್ಷಣ ಮೋದಿ ಹಾಗೂ ಅಮಿತ್ ಶಾ ಓಡಿಬಂದು ಇವರ ಕಾಲಿಗೆ ಬೀಳುವುದಿಲ್ಲ ಬಿಡಿ. ಲಂಡನ್ ಮೇಯರ್ ಆಗಿ ನೀರಜ್ ಪಟೇಲ್ ಆಯ್ಕೆೆಯಾದಾಗ, ಪಟಾಕಿ ಹೊಡೆದು ಸಂಭ್ರಮಿಸಿದವರು ಇದೇ ಜನರು. ನಮ್ಮ ಒಳಗಿನವರೇ ಒಬ್ಬ ಮೇಯರ್ ಆದರೆ ಉರಿ ಉರಿ ಬೀಳುತ್ತಾಾರೆ. ಆಗ ಇವರಿಗೆ ದೊಡ್ಡ ಕನ್ನಡಿಗನ ಸಾಧನೆ ಎಂದೆಲ್ಲಾಾ ನೆನಪಾಗುತ್ತದೆ. ಅದೇ ನಮ್ಮಲ್ಲೇ ಇರುವವರಿಗೆ ಮಣೆ ಹಾಕಲು ಇವರು ತಯಾರಿರುವುದಿಲ್ಲ. ಇದೆಂಥಾ ಕುರುಡು ನ್ಯಾಾಯ?
ಅಮೆರಿಕದ ಚುನಾವಣೆಗಳಲ್ಲಿ ಕನ್ನಡಿಗನೊಬ್ಬ ಸ್ಪರ್ಧಿಸಿದರೆ, ಇವರಿಗೆ ಎಲ್ಲಿಲ್ಲದ ಖುಷಿ. ನಮ್ಮಲ್ಲಿ ಸ್ಪರ್ಧಿಸಿದರೆ, ಮಾತ್ರ ನಮ್ಮವರನ್ನು ಕಂಡರೆ, ನಮ್ಮವರಿಗೆ ಆಗುವುದಿಲ್ಲ. ಈ ಮನಸ್ಥಿಿತಿಯೇ ಬ್ರಿಿಟಿಷರು ನಮ್ಮನ್ನು 200 ವರ್ಷಗಳ ಕಾಲ ಲೂಟಿ ಮಾಡಲು ಸಿಕ್ಕಂತಹ ಅತಿ ದೊಡ್ಡದಾದ ಅಸ್ತ್ರ. ಒಬ್ಬನ ಕಾಲನ್ನು ಮತ್ತೊೊಬ್ಬ ಎಳೆಯುತ್ತಾಾನೆಂಬ ಒಡಕು ತಿಳಿದೇ, ಬ್ರಿಿಟಿಷರು ನಮ್ಮಲ್ಲಿ ಜಗಳ ತಂದಿಟ್ಟು ದೇಶವನ್ನು ತಮ್ಮ ಹತೋಟಿಗೆ ತೆಗೆದುಕೊಂಡರು.
ಇಟಲಿಯಿಂದ ಬಂದಂಥ ಮಹಾತಾಯಿಯನ್ನೇ ಚೆನ್ನಾಾಗಿ ಬಕೆಟ್ ಹಿಡಿದು ಅದೆಷ್ಟು ಕನ್ನಡಿಗರು ಸ್ವಾಾಗತ ಮಾಡಿಲ್ಲ ಹೇಳಿ? ಸೋನಿಯಾ ಗಾಂಧಿಯವರ ಬಳಿ ಇಲಿಗಳಂತೆ ಹೋಗಿ, ನಮ್ಮವರು ಏನು ಕನ್ನಡದಲ್ಲಿ ಮಾತಾಡುತ್ತಾಾರೆಯೇ? ಬೇರೆ ದೇಶದ ಹೆಣ್ಣನ್ನು ನಾಯಕಿಯೆಂದು ಒಪ್ಪಿಿಕೊಂಡು, ಪೋಸ್ಟರ್‌ಗಳಲ್ಲಿ ಅವರ ಚಿತ್ರಗಳನ್ನೇ ಪ್ರಿಿಂಟ್ ಮಾಡಿಸಿ ರಾರಾಜಿಸುತ್ತಿಿರುವವರೆಲ್ಲರೂ ಇಂದು ಗುಜರಾತಿಗಳ ಬಗ್ಗೆೆ ಮಾತಾಡುತ್ತಾಾರೆ. ಊಸರವಳ್ಳಿಿಯ ರೀತಿ ಸಮಯಕ್ಕೆೆ ತಕ್ಕಂತೆ ಬಣ್ಣ ಬದಲಾಯಿಸುವ ಜಾತಿಗೆ ಸೇರುವ ಇಂಥವರ ಮಾತುಗಳನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಾಾರೆಂದು ಭಾವಿಸಿದರೆ, ಅದು ಅವರ ಭ್ರಮೆ. ಹಿಂದೆ ಮುಂದೆ ಸದಾ ಕುಮಾರಸ್ವಾಾಮಿಯವರಂತೆ ಹೊಗಳುಭಟರನ್ನು ಇಟ್ಟುಕೊಂಡರೆ, ಅದೇ ಶಾಸ್ತಿಿ ಎಲ್ಲರಿಗೂ ಆಗುತ್ತದೆ.
ಪ್ರತಾಪ ಸಿಂಹ ಅವರು ‘ಆಕಾಶವನ್ನು ನೋಡಿ ಉಗುಳುವಂಥ ’ ಹೇಳಿಕೆಗಳನ್ನು ಇಂಥವರ ಬಗ್ಗೆೆ ಆಡಬೇಕೇ ಹೊರತು, ದೇಶಭಕ್ತನ ಬಗ್ಗೆೆ ಆಡಬಾರದು. ಇಂಥವರು ತಮ್ಮ ಮುಖವನ್ನೇ ಕನ್ನಡಿಯಲ್ಲಿ ಸರಿಯಾಗಿ ನೋಡಿಕೊಳ್ಳದೇ, ಇನ್ನೊೊಬ್ಬರ ಸೌಂದರ್ಯ ವರ್ಣನೆಗೆ ಇಳಿಯುತ್ತಾಾರೆಂದರೆ, ಇವರಿಗೆ ಸ್ವಂತ ಬುದ್ಧಿಿಯಿರುವುದಿಲ್ಲ ಅಥವಾ ಹೇಳಿದ ಮಾತು ಕೇಳುವುದಿಲ್ಲ. ನಾವೇ ಸರಿ ಎಂಬ ಅಹಂ ಅಷ್ಟೇ.
ಡಿಕೆಶಿ ಪರಿಸ್ಥಿಿತಿಯನ್ನೇ ನೋಡಿ, 45 ಎಮ್‌ಎಲ್‌ಎ ಗಳನ್ನು ಕಾಪಾಡಿ ಅಹ್ಮದ್ ಪಟೇಲ್‌ರ ಬುಡಕ್ಕೆೆ ಬಿದ್ದಿದ್ದ ಬೆಂಕಿಯನ್ನು ಆರಿಸಿ ಕಳುಹಿಸಿ, ಪಕ್ಷಕ್ಕಾಾಗಿ ಅಷ್ಟೆೆಲ್ಲ ದುಡಿದರೂ, ಸೋನಿಯಾ ಗಾಂಧಿ ತಿಹಾರ್ ಜೈಲಿನಲ್ಲಿ ಡಿಕೆಶಿಯನ್ನು ಭೇಟಿ ಮಾಡದೇ ಹಾಗೆಯೇ ಹೊರಟು ಹೋದರು. ತಮಿಳುನಾಡಿನ ಚಿದಂಬರಂ ಅವರನ್ನು ಭೇಟಿಯಾಗಲು ಸಮಯವಿದೆ. ಆದರೆ ಪಕ್ಕದಲ್ಲಿಯೇ ಇದ್ದ ಕನ್ನಡಿಗ, ಕಾಂಗ್ರೆೆಸ್ ಪಕ್ಷದ ನಿಷ್ಠಾಾವಂತ ನಾಯಕನನ್ನು ಭೇಟಿಯಾಗಲಿಲ್ಲ. ವಾಟಾಳ್‌ಗೆ ಯಾಕೆ ಇದು ನೆನಪಾಗಲಿಲ್ಲವೇ? ಸೋನಿಯಾ ವಿರುದ್ಧ ಯಾವುದಾದರೂಂದು ವಿಚಿತ್ರ ಚಳವಳಿ ಮಾಡಬಹುದಿತ್ತಲ್ಲವೇ?
ದುರದೃಷ್ಟವೆಂದರೆ, ಇಷ್ಟೆೆಲ್ಲ ಚಳವಳಿಗಳನ್ನು ವಾಟಾಳ ನಾಗರಾಜ ಹಾಗೂ ಇತರ ಸಂಘಟನೆಗಳು ಮಾಡಿದರೂ ಸಹ ಬೆಂಗಳೂರಿನಲ್ಲಿ ವಲಸಿಗರ ಸಂಖ್ಯೆೆ ದಿನೇದಿನೆ ಏರುತ್ತಲೇ ಇದೆ. ಶೇ.48ರಷ್ಟು ಮಾತ್ರ ಮೂಲ ಕನ್ನಡಿಗರು ಬೆಂಗಳೂರಿನಲ್ಲಿದ್ದಾಾರೆ. ಹಾಗಾದರೆ ಇಷ್ಟು ವರ್ಷ ಇವರು ಮಾಡಿರುವ ಹೋರಾಟವಾದರು ಏನಾಯ್ತು?
ಪ್ರತಿಭಟನೆ ಮಾಡಲು ಬರುವ ಹಲವು ನಾಯಕರುಗಳ ಮಕ್ಕಳೇ ಇಂದು ಇಂಟರ್‌ನ್ಯಾಾಶನಲ್ ಶಾಲೆಗಳಲ್ಲಿ ಓದುತ್ತಿಿದ್ದಾಾರೆ. ಇನ್ನು ಯಾವ ಮುಖ ಇಟ್ಟುಕೊಂಡು ಇಂಥವರ ಮಾತುಗಳನ್ನು ಜನರು ಕೇಳುತ್ತಾಾರೆ ಹೇಳಿ? ನಗು ತರಿಸುವ ಮತ್ತೊೊಂದು ಸಂಗತಿಯೆಂದರೆ, ಮೊನ್ನೆೆಯಷ್ಟೆೆ ದಕ್ಷಿಿಣ ಆಫ್ರಿಿಕಾ ಸರಣಿಯಲ್ಲಿ ಮಯಾಂಕ್ ಅಗರವಾಲ ದ್ವಿಿಶತಕ ಬಾರಿಸಿದಾಗ, ಎಲ್ಲ ಚಾನೆಲ್‌ಗಳಲ್ಲಿಯೂ, ‘ಕನ್ನಡಿಗ ಮಯಾಂಕ್’ ಅಂತಲೇ ಸುದ್ದಿ ಮಾಡಿದರು. ಇವರಿಗೆ ಇಷ್ಟವಾದಾಗ ಇವರೆಲ್ಲರೂ ಕನ್ನಡಿಗರು. ಇಲ್ಲವಾದರೆ ಕನ್ನಡದ ಅಸ್ಮಿಿತೆಯ ಧಕ್ಕೆೆಯ ಬಗ್ಗೆೆಯೇ ಮಾತಾಡುತ್ತಾಾರೆ. ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಓದಿದ ಪಂಕಜ್ ಅಡ್ವಾಾನಿಯ ಸಾಧನೆಯನ್ನು ಕನ್ನಡಿಗನ ಸಾಧನೆ ಎನ್ನಬೇಕಾದರೆ, ಗೌತಮ್ ಕುಮಾರ ಜೈನ್ ಮೇಯರ್ ಆದ ಕೂಡಲೇ ಮರೆತುಹೋಗುತ್ತದೆ.
ವಾಟಾಳ ನಾಗರಾಜಗೆ ಜೈನ ಕವಿಗಳ ಬಗ್ಗೆೆ ಏನು ಗೊತ್ತು? ರನ್ನ, ಪಂಪ ಜೈನರಲ್ಲವೇ? ಬಾಹುಬಲಿಯು ಜೈನರಲ್ಲವೇ? ಅವರು ರಚಿಸಿರುವ ಕಾವ್ಯಗಳು ಇಂದಿಗೂ ಕನ್ನಡದ ಅಸ್ಮಿಿತೆಯಲ್ಲಿ ಅಜರಾಮರವಾಗಿ ಉಳಿದಿವೆ. ತಲೆಬುಡ ತಿಳಿಯದ, ಅರ್ಧಂಬರ್ಧ ಕನ್ನಡದ ಜ್ಞಾಾನವಿಟ್ಟುಕೊಂಡು ಬೀದಿಗಿಳಿಯುವ ಇಂಥ ಹೋರಾಟಗಾರರಿಗೆ ನಮ್ಮಲ್ಲಿನ ಕನ್ನಡಿಗರೇ ಸೊಪ್ಪುು ಹಾಕುವುದಿಲ್ಲ. ಒಂದು ಕಾಲದಲ್ಲಿ ತಾವು ಏನು ಮಾಡಿದರೂ ಸಹ ನಡೆಯುತ್ತಿಿತ್ತು ಎಂದು ತಿಳಿದು, ಈಗಲೂ ಅದನ್ನೇ ಮಾಡಿದರೆ, ಯಾರೂ ಸಹ ತಲೆಕೆಡಿಸಿಕೊಳ್ಳಲಾರರು. ಅದರಲ್ಲಿಯೂ ಬೆಂಗಳೂರಿನಲ್ಲಿ ಫ್ಲೆೆಕ್‌ಸ್‌ಗಳು, ಬ್ಯಾಾನ್ ಆದ ಮೇಲಂತೂ ಫೋಟೊ ಹಾಕಲು ಜಾಗವೇ ಇಲ್ಲದ ಕಾರಣ ಯಾರೂ ಸಹ ಮುಂದೆ ಬಂದು ಕೈ ಎತ್ತುವುದಿಲ್ಲ.
ಇತ್ತೀಚೆಗೆ ಕರ್ನಾಟಕ-ಆಂಧ್ರ ಪ್ರದೇಶ ಗಡಿ ಭಾಗದಲ್ಲಿನ ಮಡಕಶಿರಾ ತಾಲೂಕಿನ ಗ್ರಾಾಮವೊಂದಕ್ಕೆೆ ಆಂಧ್ರಪ್ರದೇಶ ಮುಖ್ಯಮಂತ್ರಿಿ ಜಗನ್ ಮೋಹನ್ ರೆಡ್ಡಿಿಯವರು ಭೇಟಿ ನೀಡಿದರು. ಬೆಳೆನಾಶವಾದ ಅಲ್ಲಿನ ರೈತ ಮಹಿಳೆಗೆ ಸಾಂತ್ವನ ಹೇಳುತ್ತಿಿರುವ ವಿಡಿಯೋ ಒಂದು ವೈರಲ್ ಆಗಿತ್ತು. ವಯಸ್ಸಾಾದ ಆ ಮಹಿಳೆಗೆ ತೆಲುಗು ಬರುವುದಿಲ್ಲ. ಆಕೆ ಕನ್ನಡದಲ್ಲಿಯೇ ಮಾತಾಡುತ್ತಿಿದ್ದಳು. ಆದರೂ ಜಗನ್ ತಾಳ್ಮೆೆಯಿಂದ ಕೇಳಿಸಿಕೊಂಡು ಸರಕಾರದ ಸವಲತ್ತುಗಳಿಂದ ಆಕೆ ವಂಚಿತವಾದ ಬಗ್ಗೆೆ ತಿಳಿದುಕೊಂಡು ಆಕೆಗೆ ಸಹಕರಿಸಿದರು. ಮಾನವೀಯತೆಯಿಂದ ಆಕೆಯನ್ನು ನೋಡಿದರೆ ಹೊರತು ಆಕೆ ಕನ್ನಡ ಮಾತಾಡುತ್ತಾಾಳೆಂದು ಎಲ್ಲಿಯೂ ಆಲಸ್ಯ ಮಾಡಲಿಲ್ಲ. ಇದನ್ನೇನಾದರೂ ವಾಟಾಳ ನಾಗರಾಜ ನೋಡಿ ಒಂದು ಪ್ರಶಂಸೆಯ ಮಾತನಾಡಿದ್ದಾಾರೆಯೇ? ಇಲ್ಲ. ಯಾರೂ ಯಾವ ಪ್ರಶಂಸೆಯ ಮಾತುಗಳನ್ನು ಆಡಲಿಲ್ಲ.
ಕರ್ನಾಟಕದಲ್ಲಿರುವವರು ಕನ್ನಡವನ್ನು ಕಲಿಯಬೇಕು. ಅವರು ಇಲ್ಲೇ ಹುಟ್ಟಿಿ, ಇಲ್ಲೇ ಬೆಳೆದವರಾದರೂ ಸರಿ, ಬೇರೆಡೆಯಿಂದ ಬಂದು ಇಲ್ಲಿ ನೆಲೆಸಿರುವವರಾದರೂ ಸರಿ, ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಬೇಕು. ಈ ವಿಚಾರದಲ್ಲಿ ಯಾರೇ ತಪ್ಪುು ಮಾಡಿದರೂ, ಪ್ರತಿಭಟನೆ ಮಾಡಿದರೆ, ಓರಾಟಗಾರರಿಗೆ ಬೆಲೆಯಿರುತ್ತದೆ. ಕೇವಲ ತಮ್ಮ ಮನಸ್ಸಿಿಗೆ ಬಂದವರ ವಿರುದ್ಧ ಮಾತ್ರ ಓರಾಟ ಮಾಡಿದರೆ, ಯಾರೂ ಬೆಲೆ ಕೊಡುವುದಿಲ್ಲ. ಈ ಹೋರಾಟಗಾರರು, ರಾಜಕೀಯ ನಾಯಕರುಗಳು ಮಾಡುವ ರೀತಿ ವಿಂಗಡಣೆಯನ್ನು ತಮ್ಮ ಮನೆಯಲ್ಲಿನ ಕಸ ವಿಂಗಡಣೆ ಮಾಡಿದ್ದರೆ, ಬೆಂಗಳೂರು ನಗರ ಇಷ್ಟು ಹೊತ್ತಿಿಗೆ ಸ್ವಚ್ಛವಾಗಿರುತ್ತಿತ್ತು.