ದ್ವಿಜಪ್ರಿಯ ಸಂಕಷ್ಟ ಚತುರ್ಥಿ; ಗಣೇಶನಿಗೆ ಪೂಜೆ ಮಾಡುವಾಗ ತಪ್ಪದೇ ಈ ವಸ್ತುಗಳನ್ನು ಅರ್ಪಿಸಿ
Sankashti Chaturthi: ಇಂದು (ಫೆಬ್ರವರಿ 5) ದ್ವಿಜಪ್ರಿಯ ಸಂಕಷ್ಟ ಚತುರ್ಥಿ. ಈ ದಿನ ಗಣೇಶನನ್ನು ಪೂಜಿಸುವುದರಿಂದ ಪೂಜಾಫಲ ದ್ವಿಗುಣವಾಗುತ್ತದೆ ಎಂಬ ನಂಬಿಕೆ ಇದೆ. ಮಾಘ ಮಾಸದ ದ್ವಿಜಪ್ರಿಯ ಸಂಕಷ್ಟ ಚತುರ್ಥಿಯಂದು ಗಣಪತಿ ಪೂಜೆ ಮಾಡಿದರೆ ಪಾಪ ನಿವಾರಣೆ ಆಗಿ ಇಷ್ಟಾರ್ಥಗಳು ಈಡೇರುತ್ತವೆ.
ಗಣೇಶ -
ಬೆಂಗಳೂರು, ಫೆ. 5: ಹಿಂದೂ ಧರ್ಮದಲ್ಲಿ(Hindu Religion) ದ್ವಿಜಪ್ರಿಯ ಸಂಕಷ್ಟ ಚತುರ್ಥಿಗೆ ವಿಶೇಷ ಮಹತ್ವವಿದೆ. ಗಣಪತಿಗೆ ಅರ್ಪಿತವಾದ ದಿನ ಅವನನ್ನು ಪೂಜಿಸಿದರೆ ಪುಣ್ಯ ದ್ವಿಗುಣವಾಗುತ್ತದೆ ಎನ್ನುವ ನಂಬಿಕ ಎಇದೆ. ಧಾರ್ಮಿಕ ನಂಬಿಕೆಯಂತೆ ಎಲ್ಲ ದೇವತೆಗಳಲ್ಲಿ ಮೊದಲ ಪೂಜ್ಯನು ಗಣೇಶನಾಗಿರುವುದರಿಂದ ಯಾವುದೇ ಶುಭ ಕಾರ್ಯಕ್ಕೂ ಮೊದಲು ಗಣಪತಿ ಪೂಜೆ ಮಾಡಲಾಗುತ್ತದೆ.
ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಸಂಕಷ್ಟ ಚತುರ್ಥಿಯನ್ನು ದ್ವಿಜಪ್ರಿಯ ಸಂಕಷ್ಟ ಚತುರ್ಥಿ ಎಂದು ಕರೆಯುತ್ತಾರೆ. ಈ ಪವಿತ್ರ ದಿನದಂದು ಗಣಪತಿ ಪೂಜೆ ಮಾಡಿದರೆ ಪಾಪ ನಿವಾರಣೆಯಾಗುತ್ತದೆ ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.
ಹಾಗೆ ಗಣೇಶನ ಆರ್ಶಿವಾದ ಪಡೆದು ಆತನ ಅನುಗ್ರಹಕ್ಕೆ ಪಾತ್ರರಾಗಲು ಈ ದಿನದಂದು ತಪ್ಪದೇ
ಮೋದಕ ಪ್ರಿಯ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಬಹುದು.
ಗಣೇಶನಿಗೆ ಹಾಲು ಮತ್ತು ದೀಪ ಅರ್ಪಣೆ
ಈ ದಿನ ಗಣಪತಿಯನ್ನು ಪೂಜಿಸಿ, ಮೊದಲು ಹಾಲನ್ನು ಅರ್ಪಿಸಿ. ನಂತರ ಹಸುವಿನ ತುಪ್ಪದ ದೀಪವನ್ನು ಬೆಳಗಿಸಿ ಆರಾಧನೆ ನಡೆಸಬೇಕು.
ಚೆಂಡು ಹೂವು ಮತ್ತು ಬೆಲ್ಲ ಅರ್ಪಣೆ
ಪೂಜೆಯಲ್ಲಿ ಗಣೇಶನಿಗೆ ಚೆಂಡು ಹೂಗಳನ್ನು ಅರ್ಪಿಸಿ, ನಂತರ ಬೆಲ್ಲವನ್ನು ಸಮರ್ಪಿಸಬೇಕು. ಇದರಿಂದ ವಿಘ್ನಗಳು ದೂರವಾಗಿ ಕಾರ್ಯಸಿದ್ಧಿ ಲಭಿಸುತ್ತದೆ ಎಂದು ನಂಬಲಾಗಿದೆ.
ವಜ್ರ ಧಾರಣೆ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ? ಜ್ಯೋತಿಷ್ಯ ಹೇಳುವುದೇನು?
ಮಂತ್ರ ಪಠಣ
ಗಣಪತಿಯ ಮಂತ್ರಗಳನ್ನು ಪಠಿಸಿ, ಕೆಂಪು ಹೂವುಗಳು ಹಾಗೂ ಶ್ರೀಗಂಧವನ್ನು ಅರ್ಪಿಸಬೇಕು. ಶಿವ ಕುಟುಂಬದ ಮೂರ್ತಿಯನ್ನು ಸ್ಥಾಪಿಸುವಾಗ “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸುವುದರಿಂದ ಶತ್ರುಬಾಧೆ ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.
ಕೆಂಪು ಸಿಂಧೂರ ತಿಲಕ
ಗಣೇಶನಿಗೆ ಕೆಂಪು ಬಣ್ಣ ಅತ್ಯಂತ ಪ್ರಿಯ. ಆದ್ದರಿಂದ ಇಂದು ಗಣಪತಿಗೆ ಮೊದಲು ಕೆಂಪು ಸಿಂಧೂರ ತಿಲಕ ಹಚ್ಚಿ, ನಂತರ ಭಕ್ತರು ತಮ್ಮ ಹಣೆಗೆ ಹಚ್ಚಿಕೊಳ್ಳಬೇಕು. ಇದರಿಂದ ಸದಾ ಗಣೇಶನ ಅನುಗ್ರಹ ಲಭಿಸುತ್ತದೆ.
ಶಮಿ ಸಸ್ಯ ಅರ್ಪಣೆ
ಶಮಿ ಸಸ್ಯ ಗಣೇಶನಿಗೆ ಬಹಳ ಪ್ರಿಯ. ಇಂದು ಶಮಿ ಸಸ್ಯವನ್ನು ಅರ್ಪಿಸುವುದರಿಂದ ಮನೆಗೆ ಸಂತೋಷ, ಸಂಪತ್ತು ಮತ್ತು ಶಾಂತಿ ನೆಲೆಸುತ್ತದೆ ಎನ್ನಲಾಗುತ್ತದೆ.
ಅನ್ನ ಅರ್ಪಣೆ
ಪೂಜೆಯಲ್ಲಿ ಅಕ್ಕಿಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಗಣಪತಿಗೆ ಒಣ ಅಕ್ಕಿಯನ್ನು ನೀಡದೇ, ಅನ್ನವನ್ನು ಅರ್ಪಿಸುವುದು ಶುಭಕರ. ಇದರಿಂದ ಗಣೇಶನು ಸಂತುಷ್ಟನಾಗಿ ಭಕ್ತರಿಗೆ ಅಪೇಕ್ಷಿತ ಫಲವನ್ನು ನೀಡುತ್ತಾನೆ.
ತುಪ್ಪ ಮತ್ತು ಬೆಲ್ಲ ದಾನ
ಇನ್ನು ಬುಧವಾರ ಗಣೇಶನಿಗೆ ತುಪ್ಪ ಹಾಗೂ ಬೆಲ್ಲವನ್ನು ಅರ್ಪಿಸುವುದರಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು ಗಣೇಶ ಮೋದಕ ಹಾಗೂ ಗರಿಕೆ ಪ್ರಿಯ ಎಂದು ಎಲ್ಲರಿಗೂ ತಿಳಿದಿದೆ. ಮೇಲೆ ತಿಳಿಸಿದ ವಸ್ತುಗಳೊಂದಿಗೆ ಇವುಗಳನ್ನು ಅರ್ಪಿಸಿದ್ದರೆ ಗಣೇಶ ಸಂತುಷ್ಟ ಆಗುತ್ತಾನೆ.