ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SBI Recruitment 2025: ಬ್ಯಾಂಕ್‌ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್‌; ಎಸ್‌ಬಿಐಯಲ್ಲಿ ಖಾಲಿ ಇದೆ 541 ಪ್ರೊಬೆಷನರಿ ಆಫೀಸರ್‌ ಹುದ್ದೆ

Bank Jobs: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಎಸ್‌ಬಿಐ ದೇಶಾದ್ಯಂತ ಖಾಲಿ ಇರುವ ಪ್ರೊಬೆಷನರಿ ಆಫೀಸರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 541 ಹುದ್ದೆಗಳಿವೆ. ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಜು. 14.

ಎಸ್‌ಬಿಐಯ 541 ಪ್ರೊಬೆಷನರಿ ಆಫೀಸರ್‌ ಹುದ್ದೆಗೆ ಹೀಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ.

Profile Ramesh B Jun 24, 2025 3:26 PM

ಬೆಂಗಳೂರು: ಬ್ಯಾಂಕ್‌ ಉದ್ಯೋಗ ಹೊಂದಬೇಕು ಎನ್ನುವ ನಿಮ್ಮ ಕನಸು ನನಸಾಗುವ ದಿನ ಹತ್ತಿರದಲ್ಲೇ ಇದೆ (Bank Jobs). ಹೌದು, ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಎಸ್‌ಬಿಐ (State Bank of India) ದೇಶಾದ್ಯಂತ ಖಾಲಿ ಇರುವ ಪ್ರೊಬೆಷನರಿ ಆಫೀಸರ್‌ ಹುದ್ದೆಗಳ (Probationary Officer) ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 541 ಹುದ್ದೆಗಳಿವೆ (SBI Recruitment 2025). ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು (Job Guide). ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಜು. 14.

ವಿದ್ಯಾರ್ಹತೆ

ಎಸ್‌ಬಿಐ ಅಧಿಸೂಚನೆ ಪ್ರಕಾರ ದೇಶದ ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರು. ಮೆಡಿಕಲ್‌, ಎಂಜಿನಿಯರಿಂಗ್‌, ಸಿಎ ಇತ್ಯಾದಿ ವಿದ್ಯಾರ್ಹತೆಯವರೂ ಅಪ್ಲೈ ಮಾಡಬಹುದು.

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 21 ವರ್ಷ ಮತ್ತು ಗರುಷ್ಠ ವಯಸ್ಸು 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಇನ್ನು ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಪ್ರಿಲಿಮಿನರಿ, ಮುಖ್ಯ ಪರೀಕ್ಷೆ, ಸೈಕೋಪೆಟ್ರಿಕ್‌ ಟೆಸ್ಟ್‌, ಗುಂಪು ಚಟುವಟಿಕೆ ಮತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ ಬೆಳಗಾವಿ, ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರವಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 48,480 ರೂ. - 85,920 ರೂ. ಮಾಸಿಕ ವೇತನ ದೊರೆಯಲಿದೆ.

ಪ್ರಿಮಿಲರಿ ಟೆಸ್ಟ್‌ ಇಂಗ್ಲಿಷ್‌ ಭಾಷೆ, ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌, ರೀಸನಿಂಗ್‌ ಎಬಿಲಿಟಿ ಪ್ರಶ್ನೆಗಳನ್ನು ಒಳಗೊಂಡಿದೆ. ಮೈನ್‌ ಟೆಸ್ಟ್‌ನಲ್ಲಿ ರೀಸನಿಂಗ್‌ & ಕಂಪ್ಯೂಟರ್‌ ಆಪ್ಟಿಟ್ಯೂಡ್‌, ಡೇಟಾ ಅನಾಲಿಸಿಸ್‌ & ಇಂಟರ್‌ಪ್ರೆಟೇಷನ್‌, ಜನರಲ್‌ ಅವೇರ್‌ನೆಸ್‌ / ಎಕಾನಮಿ / ಬ್ಯಾಂಕಿಂಗ್‌ ನಾಲೆಡ್ಜ್‌, ಇಂಗ್ಲಿಷ್‌ ಭಾಷೆಯ ಪ್ರಶ್ನೆಗಳಿರುತ್ತವೆ.

ಈ ಸುದ್ದಿಯನ್ನೂ ಓದಿ: SBI Recruitment 2025: ಬರೋಬ್ಬರಿ 2,964 ಹುದ್ದೆಗಳ ಭರ್ತಿಗೆ ಮತ್ತೊಮ್ಮೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ

SBI Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
    (
    https://ibpsonline.ibps.in/sbipomay25/)
  • ಹೆಸರು ನೋಂದಾಯಿಸಿ.
  • ಲಾಗಿನ್‌ ಆಗಿ.
  • ಎಚ್ಚರಿಕೆಯಿಂದ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: sbi.co.inಕ್ಕೆ ಭೇಟಿ ನೀಡಿ.