ಮೈಕ್ರೋಸಾಫ್ಟ್ ʼಹಾರ್ಡ್ʼ ಶಾಕ್
ಭಾರತೀಯ ಉದ್ಯೋಗಿಗಳಿಗೆ ಮುಂದಿನ ದಾರಿಯನ್ನು ನಿರ್ಧರಿಸಲು ಕಂಪನಿ ಡಿ.1ರ ಗಡುವು ನೀಡಲಾ ಗಿದೆ. ನಿವೃತ್ತಿ ಹೊಂದುವವರಿಗೆ ಹಲವು ರೀತಿಯ ನೆರವನ್ನು ನೀಡುವುದಾಗಿ ಕಂಪನಿ ಘೋಷಿಸಿದೆ. ಎಐ (ಕೃತಕ ಬುದ್ಧಿಮತ್ತೆ) ಮೂಲಸೌಕರ್ಯ ಮತ್ತು ಕ್ಲೌಡ್ ತಂತ್ರಜ್ಞಾನಗಳಲ್ಲಿ ಮೈಕ್ರೋಸಾಫ್ಟ್ ಲಕ್ಷಾಂತರ ಕೋಟಿ ರು.ಗಳನ್ನು ಹೂಡಿಕೆ ಮಾಡುತ್ತಿದೆ.
-
ಬೆಂಗಳೂರು: ಜಾಗತಿಕ ಐಟಿ ದೈತ್ಯ ಕಂಪನಿ ಮೈಕ್ರೋಸಾಫ್ಟ್ ಕಂಪನಿಯು ತನ್ನ ಉದ್ಯೋಗಿ ಗಳಿಗೆ ಭಾರೀ ಆಘಾತ ನೀಡಿದೆ. ಭಾರತ, ಅಮೆರಿಕ, ಬ್ರಿಟನ್ ಮತ್ತು ಕೆನಡಾದಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಸುಮಾರು 60000 ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಯೋಜನೆ ಯನ್ನು ಪ್ರಕಟಿಸಿದೆ. ಮೈಕ್ರೋಸಾಫ್ಟ್ ಜಾಗತಿಕವಾಗಿ 2.23 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಅದರಲ್ಲಿ ಶೇ.27ರಷ್ಟು ಉದ್ಯೋಗಿಗಳು ಕೆಲಸ ಬಿಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಭಾರತೀಯ ಉದ್ಯೋಗಿಗಳಿಗೆ ಮುಂದಿನ ದಾರಿಯನ್ನು ನಿರ್ಧರಿಸಲು ಕಂಪನಿ ಡಿ.1ರ ಗಡುವು ನೀಡಲಾಗಿದೆ. ನಿವೃತ್ತಿ ಹೊಂದುವವರಿಗೆ ಹಲವು ರೀತಿಯ ನೆರವನ್ನು ನೀಡುವುದಾಗಿ ಕಂಪನಿ ಘೋಷಿಸಿದೆ. ಎಐ (ಕೃತಕ ಬುದ್ಧಿಮತ್ತೆ) ಮೂಲಸೌಕರ್ಯ ಮತ್ತು ಕ್ಲೌಡ್ ತಂತ್ರಜ್ಞಾನಗಳಲ್ಲಿ ಮೈಕ್ರೋಸಾಫ್ಟ್ ಲಕ್ಷಾಂತರ ಕೋಟಿ ರು.ಗಳನ್ನು ಹೂಡಿಕೆ ಮಾಡುತ್ತಿದೆ.
ಭಾರತದಲ್ಲಿ 2 ಲಕ್ಷ ಕೋಟಿ ರು. ಗಳನ್ನು (20.5 ಬಿಲಿಯನ್ ಡಾಲರ್) 2025 ರಿಂದ 2029ರ ನಡುವೆ ಹೂಡಿಕೆ ಮಾಡುತ್ತೇವೆ. 2030ರೊಳಗಾಗಿ ಎಐನಲ್ಲಿ ಕೌಶಲ್ಯ ಹೊಂದಿರುವ 2 ಕೋಟಿ ವ್ಯಕ್ತಿಗಳನ್ನು ಸಿದ್ಧಪಡಿಸುವ ಗುರಿ ಹೊಂದಿದ್ದೇವೆಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ
ನಿವೃತ್ತಿ ಪ್ಯಾಕೇಜ್ ಏನು?: ಕಂಪನಿ ಎಐನಲ್ಲಿ ಭಾರೀ ಹೂಡಿಕೆ ಮಾಡುತ್ತಿದೆ. ವೆಚ್ಚ ನಿರ್ವಹಣೆ ಮತ್ತು ಉದ್ಯೋಗಿಗಳನ್ನು ಮರುಹಂಚಿಕೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಆಮಿ ಕೋಲ್ಮನ್ ಇಮೇಲ್ನಲ್ಲಿ ತಿಳಿಸಿದ್ದಾರೆ. ಕಂಪನಿಯಿಂದ ಹೊರಹೋಗಲು ನಿರ್ಧರಿಸುವ ಉದ್ಯೋಗಿಗಳಿಗೆ ಆರ್ಥಿಕ ನೆರವು ಹಾಗೂ ವೃತ್ತಿಜೀವನದ ಮುಂದಿನ ಹಂತಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುವುದಾಗಿ ಸಂಸ್ಥೆ ತನ್ನ ಬ್ಲಾಗ್ನಲ್ಲಿ ತಿಳಿಸಿದೆ.
ಉದ್ಯೋಗಿಯು ಪೂರ್ಣಗೊಳಿಸಿದ ಪ್ರತಿ ಸೇವಾ ವರ್ಷಕ್ಕೆ ಒಂದು ತಿಂಗಳ ಮೂಲ ವೇತನ ನೀಡಲಾಗುತ್ತದೆ. ಆರೋಗ್ಯ ವಿಮೆಯೂ ಸಿಗಲಿದೆ. ವೃತ್ತಿ ಪರಿವರ್ತನೆಗೆ ಅಗತ್ಯವಾದ ನೆರವು ಒಳಗೊಂಡಿರುವುದಾಗಿ ತಿಳಿದುಬಂದಿದೆ. ಭಾರತದಲ್ಲಿ ಮೈಕ್ರೋ ಸಾಫ್ಟ್ ಸುಮಾರು 23 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಆದರೆ, ಈ ಯೋಜನೆಯಡಿ ದೇಶದಲ್ಲಿ ಎಷ್ಟು ಮಂದಿ ಅರ್ಹರಾಗಿ ದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಜಾಗತಿಕವಾಗಿ ಸುಮಾರು 60 ಸಾವಿರ ಉದ್ಯೋಗಿಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಮೈಕ್ರೋಸಾಫ್ಟ್ʼನಲ್ಲಿ ಉದ್ಯೋಗಿಗಳ ಹುದ್ದೆ ಹಾಗೂ ಹಿರಿತನವನ್ನು ಆಧರಿಸಿ ಆಂತರಿಕ ಉದ್ಯೋಗ ಶ್ರೇಣಿಗಳನ್ನು ನಿರ್ಧರಿಸಲಾಗುತ್ತದೆ. ಕಂಪನಿಯಿಂದ ಹೊರಗಿನ ಅವಕಾಶಗಳನ್ನು ಪರಿಗಣಿಸು ತ್ತಿರುವ ಉದ್ಯೋಗಿಗಳಿಗೆ ಹೆಚ್ಚಿನ ಆಯ್ಕೆ ಮತ್ತು ಸ್ವಾತಂತ್ರ್ಯ ಒದಗಿಸುವುದು ಈ ಸೀಮಿತ ಅವಧಿಯ ಯೋಜನೆಯ ಉದ್ದೇಶವಾಗಿದೆ ಎಂದು ಕೋಲ್ಮನ್ ಹೇಳಿದ್ದಾರೆ. ಈ ಯೋಜನೆಯು ಅರ್ಹ ಉದ್ಯೊ ಗಿಗಳಿಗೆ ಅಗತ್ಯ ನೆರವಿನೊಂದಿಗೆ ಕಂಪನಿಯಿಂದ ಹೊರ ಹೋಗುವ ಅವಕಾಶ ನೀಡಲಿದೆ.
ಜೊತೆಗೆ, ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಉದ್ಯೋಗಿಗಳ ಸಂಖ್ಯೆಯನ್ನು ಹೊಂದಿಸಿ ಕೊಳ್ಳ ಲು ಆಯ್ದ ವಿಭಾಗಗಳಿಗೆ ಸಹಕಾರಿಯಾಗಲಿದೆ ಎಂದು ಕೋಲ್ಮನ್ ವಿವರಿಸಿದ್ದಾರೆ. ಕಂಪನಿಯ ಎಲ್ಲ ವಿಭಾಗಗಳಲ್ಲಿಯೂ ಈ ಯೋಜನೆಯನ್ನು ಒಂದೇ ರೀತಿಯಲ್ಲಿ ಜಾರಿಗೊಳಿಸು ವುದಿಲ್ಲ ಎಂದು ಮೈಕ್ರೋ ಸಾಫ್ಟ್ ಸ್ಪಷ್ಟಪಡಿಸಿದೆ. ಆಯಾ ವಿಭಾಗಗಳ ವ್ಯವಹಾರ ಆದ್ಯತೆ ಆಧರಿಸಿ ಯೋಜನೆಯ ಅನುಷ್ಠಾನ ನಿರ್ಧಾರವಾಗಲಿದೆ
ಏಕೆ ಕೊಕ್?
ಮೈಕ್ರೋಸಾಫ್ಟ್ ಎಐನಲ್ಲಿ ಭಾರೀ ಹೂಡಿಕೆ ಮಾಡುತ್ತಿದೆ. ವೆಚ್ಚ ನಿರ್ವಹಣೆ ಮತ್ತು ಉದ್ಯೋಗಿ ಗಳನ್ನು ಮರುಹಂಚಿಕೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
ನಿವೃತ್ತಿ ಪ್ಯಾಕೇಜ್
ಕಂಪನಿಯಿಂದ ಹೊರಹೋಗಲು ನಿರ್ಧರಿಸುವ ಉದ್ಯೋಗಿಗಳಿಗೆ ಆರ್ಥಿಕ ನೆರವು ಹಾಗೂ ವೃತ್ತಿಜೀವನದ ಮುಂದಿನ ಹಂತಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡಲಾಗುತ್ತದೆ. ಉದ್ಯೋಗಿಯು ಪೂರ್ಣಗೊಳಿಸಿದ ಪ್ರತಿ ಸೇವಾ ವರ್ಷಕ್ಕೆ ಒಂದು ತಿಂಗಳ ಮೂಲವೇತನ ನೀಡಲಾಗುತ್ತದೆ. ಆರೋಗ್ಯ ವಿಮೆಯೂ ಸಿಗಲಿದೆ. ವೃತ್ತಿ ಪರಿವರ್ತನೆಗೆ ಅಗತ್ಯವಾದ ನೆರವು ಒಳಗೊಂಡಿರುವುದಾಗಿ ತಿಳಿದುಬಂದಿದೆ.