ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SDA, FDA Recruitment 2026: ವಿವಿಧ ಇಲಾಖೆಗಳಲ್ಲಿ ಭರ್ಜರಿ ನೇಮಕಾತಿಗೆ KEA ಅಧಿಸೂಚನೆ; 5,431 ಎಸ್‌ಡಿಎ, ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ

Kea Recruitment 2026: ವಿವಿಧ ಇಲಾಖೆಗಳ ಉಳಿಕೆ ಮೂಲ ವೃಂದಕ್ಕೆ ಸಂಬಂಧಿಸಿದಂತೆ 2,163 ಎಫ್‌ಡಿಎ ಹಾಗೂ 2,070 ಎಸ್‌ಡಿಎ ಹಾಗೂ‌ ಕಲ್ಯಾಣ ಕರ್ನಾಟಕ ವೃಂದದ 563 ಎಫ್‌ಡಿಎ ಹಾಗೂ 635 ಎಸ್‌ಡಿಎ ಹುದ್ದೆಗಳಿಗೆ ಕೆಇಎಯಿಂದ ಅರ್ಜಿ ಆಹ್ವಾನಿಸಲಾಗಿದೆ. ಪರೀಕ್ಷೆಗಳನ್ನು 2027ರ ಜನವರಿ 8, 9 , 10, 16 ಮತ್ತು 17ರಂದು ನಡೆಸುವುದಾಗಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

5,431 ಎಸ್‌ಡಿಎ, ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ; KEA ಅಧಿಸೂಚನೆ

-

Prabhakara R
Prabhakara R Oct 29, 2026 11:06 PM

ಬೆಂಗಳೂರು: ರಾಜ್ಯ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯ ಸರ್ಕಾರದ ಒಟ್ಟು 33 ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 5,431 ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವೀತಿಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ (SDA, FDA Recruitment 2026) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಗುರುವಾರ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ ಮೂಲಕ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ. ಈ ಹುದ್ದೆಗಳಲ್ಲಿ ಪದವಿ ಮತ್ತು ಪಿಯುಸಿ ಹಂತದ ಇತರ ಹುದ್ದೆಗಳೂ ಸೇರಿವೆ. ಅ.30ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರಂಭವಾಗಲಿದ್ದು ನವೆಂಬರ್ 25 ಕೊನೆ ದಿನವಾಗಿ ನ.26ರೊಳಗೆ ಶುಲ್ಕ ಪಾವತಿಸಬೇಕು.

ಉಳಿಕೆ ಮೂಲ ವೃಂದಕ್ಕೆ ಸಂಬಂಧಿಸಿದಂತೆ 2,163 ಎಫ್‌ಡಿಎ ಹಾಗೂ 2,070 ಎಸ್‌ಡಿಎ ಹಾಗೂ‌ ಕಲ್ಯಾಣ ಕರ್ನಾಟಕ ವೃಂದದ 563 ಎಫ್‌ಡಿಎ ಹಾಗೂ 635 ಎಸ್‌ಡಿಎ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳನ್ನು 2027ರ ಜನವರಿ 8, 9 , 10, 16 ಮತ್ತು 17ರಂದು ನಡೆಸುವುದಾಗಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

​ಪ್ರಮುಖ ದಿನಾಂಕಗಳು

  • ​ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 30, 2026
  • ​ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 25, 2026
  • ​ಶುಲ್ಕ ಪಾವತಿಗೆ ಅಂತಿಮ ದಿನಾಂಕ: ನವೆಂಬರ್ 26, 2026
  • ​ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕಗಳು: 2027ರ ಜನವರಿ 8, 9, 10, 16 ಮತ್ತು 17

ಉಳಿಕೆ ಮೂಲವೃಂದದ ಎಸ್‌ಡಿಎ ಹುದ್ದೆಗಳ ವಿವರ

WhatsApp Image 2026-10-29 at 11.25.21 PM

WhatsApp Image 2026-10-29 at 11.26.00 PM

SDA, FDA ಉಳಿಕೆ ಮೂಲವೃಂದದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://cetonline.karnataka.gov.in/kea/gpcfdasdarpc2026

SDA, FDA ಕೆಕೆ ವೃಂದದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://cetonline.karnataka.gov.in/kea/gpcfdasdakk2026



ಉಳಿಕೆ ಮೂಲವೃಂದದ ಎಫ್‌ಡಿಎ ಹುದ್ದೆಗಳ ವಿವರ

WhatsApp Image 2026-10-29 at 11.30.01 PM

WhatsApp Image 2026-10-29 at 11.30.28 PM

ಕೆಕೆ ವೃಂದದ ಎಫ್‌ಡಿಎ ಹುದ್ದೆಗಳ ವಿವರ

WhatsApp Image 2026-10-29 at 11.33.43 PM

WhatsApp Image 2026-10-29 at 11.33.58 PM

WhatsApp Image 2026-10-29 at 11.34.16 PM

ಕೆಕೆ ವೃಂದದ ಎಸ್‌ಡಿಎ ಹುದ್ದೆಗಳ ವಿವರ

WhatsApp Image 2026-10-29 at 11.36.30 PM

WhatsApp Image 2026-10-29 at 11.36.38 PM

WhatsApp Image 2026-10-29 at 11.37.10 PM