BIS Recruitment 2025: ಬಿಐಎಸ್‌ನಲ್ಲಿದೆ 160 ಹುದ್ದೆ; ಹೀಗೆ ಅಪ್ಲೈ ಮಾಡಿ
Job Guide: ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಆಶ್ರಯದಲ್ಲಿರುವ ಅಂಗಸಂಸ್ಥೆ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 160 ಕನ್ಸಲ್‌ಟೆಂಟ್ ಹುದ್ದೆ ಇದ್ದು, ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 9.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಆಶ್ರಯದಲ್ಲಿರುವ ಅಂಗಸಂಸ್ಥೆ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (Bureau of Indian Standards) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BIS Recruitment 2025). ಒಟ್ಟು 160 ಕನ್ಸಲ್‌ಟೆಂಟ್ ಹುದ್ದೆ ಇದ್ದು, ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು (Job Guide). ದೇಶದ ಎಲ್ಲಿ ಬೇಕಾದರೂ ಕಾರ್ಯನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 9.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಕನ್ಸಲ್‌ಟೆಂಟ್ ಹುದ್ದೆ ಇದಾಗಿದ್ದು, ಬಿಐಎಸ್ ಅಧಿಸೂಚನೆ ಪ್ರಕಾರ ದೇಶದ ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಲ್ಲಿ ಬಿಎನ್‌ವೈಎಸ್, ಬಿ.ಎಸ್‌ಸಿ, ಪದವಿ, ಬಿ.ಇ ಅಥವಾ ಬಿ.ಟೆಕ್, ಎಂ.ಎಸ್‌ಸಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ ಮತ್ತು ಅರ್ಜಿ ಶುಲ್ಕ
ಅಭ್ಯರ್ಥಿಗಳ ಗರಿಷ್ಠ ವಯಸ್ಸು 65 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 75,000 ರೂ. ಮಾಸಿಕ ವೇತನ ದೊರೆಯಲಿದೆ ಎಂದು ಅಧಿಸೂಚನೆ ತಿಳಿಸಿದೆ.
ಗಮನಿಸಿ
ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಗಮನಿಸಬೇಕಾದ ಅಂಶಗಳು:
- ಹುದ್ದೆಯ ಕಾಲಾವಧಿ: ಗುತ್ತಿಗೆ ಆಧಾರದಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತಿದ್ದು, ಕಾಲಾವಧಿ 1 ವರ್ಷ.
- ಉದ್ಯೋಗದ ಸಮಯ: ಬೆಳಗ್ಗೆ 9 ಗಂಟೆಯಿಂದ ಸಂಜೆ 5:30. ಬಯೋಮೆಟ್ರಿಕ್ ಮೂಲಕ ಹಾಜರಾತಿ ಲೆಕ್ಕ ಹಾಕಲಾಗುತ್ತದೆ.
- ವಾರದ ರಜೆ ಅಲ್ಲದೆ ವರ್ಷಕ್ಕೆ ಒಟ್ಟು 12 ರಜೆ ಇರುತ್ತದೆ.
- ರಾಜೀನಾಮೆ ಕೊಟ್ಟು 30 ದಿನಗಳ ಕಾಲ ನೋಟಿಸ್ ಪಿರಿಯಡ್ ಇರುತ್ತದೆ.
- ಬ್ಯೂರೋ ಫಾರ್ ದಿ ಫಾರ್ಮುಲೇಷನ್ ಫಾರ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಮತ್ತು ವಿಭಾಗ ಮಂಡಳಿ, ವಿಭಾಗೀಯ ಸಮಿತಿ, ಉಪಸಮಿತಿ, ಸಮಿತಿ ಮತ್ತು ಇತರ ಯಾವುದೇ ಸಮಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.
BIS Recruitment 20250 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: NGEL Recruitment 2025: ಎಂಜಿನಿಯರಿಂಗ್ ಪದವೀಧರರಿಗೆ ಗುಡ್‌ನ್ಯೂಸ್; NGELನಲ್ಲಿದೆ 182 ಹುದ್ದೆ
ಅರ್ಜಿ ಸಲ್ಲಿಸುವ ವಿಧಾನ
* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://www.services.bis.gov.in/php/BIS_2.0/)
* ಹೆಸರು ನೋಂದಾಯಿಸಿ.
* ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
* ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ ವಿಳಾಸ: bis.gov.inಗೆ ಭೇಟಿ ನೀಡಿ.