CISF Recruitment 2025: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿದೆ 1,161 ಹುದ್ದೆ; 10ನೇ ತರಗತಿ ಪಾಸಾದವರು ಅಪ್ಲೈ ಮಾಡಿ
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಖಾಲಿ ಇರುವ ಬರೋಬ್ಬರಿ 1,161 ಹುದ್ದೆಗಳ ಭರ್ತಿಗೆ ಪುರುಷ/ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾನ್ಸ್‌ಟೇಬಲ್/ಟ್ರೇಡ್ಸ್‌ಮ್ಯಾನ್ ಹುದ್ದೆ ಇದಾಗಿದ್ದು, 10ನೇ ತರಗತಿ ಪಾಸಾದವರು ಅಪ್ಲೈ ಮಾಡಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಏ. 3.


ಬೆಂಗಳೂರು: ಒಂದೊಳ್ಳೆ ಉದ್ಯೋಗಕ್ಕಾಗಿ ಹುಟುಕಾಟ ನಡೆಸುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (Central Industrial Security Force)ಯಲ್ಲಿ ಖಾಲಿ ಇರುವ ಬರೋಬ್ಬರಿ 1,161 ಹುದ್ದೆಗಳ ಭರ್ತಿಗೆ ಪುರುಷ/ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ (CISF Recruitment 2025). ಕಾನ್ಸ್‌ಟೇಬಲ್/ಟ್ರೇಡ್ಸ್‌ಮ್ಯಾನ್ (Constable/Tradesmen) ಹುದ್ದೆ ಇದಾಗಿದ್ದು, 10ನೇ ತರಗತಿ ಪಾಸಾದವರು ಅಪ್ಲೈ ಮಾಡಬಹುದು (Job Guide). ಉದ್ಯೋಗದ ಸ್ಥಳ: ಭಾರತದಾದ್ಯಂತ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಏ. 3.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಕಾನ್ಸ್‌ಟೇಬಲ್/ಕುಕ್ - 493 ಹುದ್ದೆ
ಕಾನ್ಸ್‌ಟೇಬಲ್/ಚಮ್ಮಾರ - 9 ಹುದ್ದೆ
ಕಾನ್ಸ್‌ಟೇಬಲ್/ಟೈಲರ್ - 23 ಹುದ್ದೆ
ಕಾನ್ಸ್‌ಟೇಬಲ್/ಬಾರ್‌ಬರ್ - 199 ಹುದ್ದೆ
ಕಾನ್ಸ್‌ಟೇಬಲ್/ವಾಷರ್ ಮ್ಯಾನ್ - 262 ಹುದ್ದೆ
ಕಾನ್ಸ್‌ಟೇಬಲ್/ಸ್ವೀಪರ್ - 152 ಹುದ್ದೆ
ಕಾನ್ಸ್‌ಟೇಬಲ್/ಪೇಂಟರ್ - 2 ಹುದ್ದೆ
ಕಾನ್ಸ್‌ಟೇಬಲ್/ಕಾರ್ಪೆಂಟರ್ - 9 ಹುದ್ದೆ
ಕಾನ್ಸ್‌ಟೇಬಲ್/ಎಲೆಕ್ಟ್ರಿಷಿಯನ್ - 4 ಹುದ್ದೆ
ಕಾನ್ಸ್‌ಟೇಬಲ್/ಮಾಲಿ - 4 ಹುದ್ದೆ
ಕಾನ್ಸ್‌ಟೇಬಲ್/ವೆಲ್ಡರ್ - 1 ಹುದ್ದೆ
ಕಾನ್ಸ್‌ಟೇಬಲ್/ಚಾರ್ಜ್ ಮೆಕ್ - 1 ಹುದ್ದೆ
ಕಾನ್ಸ್‌ಟೇಬಲ್/ಎಂಪಿ ಅಟೆಂಡೆಂಟ್ - 2 ಹುದ್ದೆ
ಅಧಿಸೂಚನೆ ಪ್ರಕಾರ ದೇಶದ ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಅಲ್ಲಿ ಸಲ್ಲಿಕೆಗೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 23 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ ಅಭ್ಯರ್ಥಿಗಳು 100 ರೂ. ಚಲನ್ ಅಥವಾ ಆನ್‌ಲೈನ್ ಮೂಲಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ.ಮಾಜಿ ಯೋಧರು/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ಆಯ್ಕೆ ವಿಧಾನ
ಫಿಸಿಕಲ್ ಎಫಿಶಿಯೆನ್ಸಿ ಟೆಸ್ಟ್ (PET), ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ (PST), ದಾಖಲಾತಿ ಪರಿಶೀಲನೆ, ಟ್ರೇಡ್ ಟೆಸ್ಟ್, ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
CISF Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: IDBI Bank Recruitment 2025: ಐಡಿಬಿಐ ಬ್ಯಾಂಕ್‌ನಲ್ಲಿದೆ 650 ಹುದ್ದೆ; ಮಾ. 1ರಿಂದ ಅಪ್ಲೈ ಮಾಡಿ
ಅರ್ಜಿ ಸಲ್ಲಿಸುವ ವಿಧಾನ
* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://cisfrectt.cisf.gov.in
* ಹೆಸರು ನೋಂದಾಯಿಸಿ.
* ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
* ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
* ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ ವಿಳಾಸ: cisf.gov.inಗೆ ಭೇಟಿ ನೀಡಿ.