Narayana Yaji Column: ನಗುವಿನೊಳಗಿನ ಬದುಕು
ಶಿರಸಿಯೇ ಇರಲಿ, ತಾಷ್ಕೆಂಟೇ ಇರಲಿ ಮನುಷ್ಯ ತಾನೇ ಸೃಸ್ಟಿಸಿಕೊಂಡ ಬಲೆಯಲ್ಲಿ ಬಿದ್ದು ಗೊಂದಲ ವನ್ನುಂಟುಮಾಡಿಕೊಳ್ಳುತ್ತಾನೆ. ಪನ್ ಮತ್ತು ವಿಟ್‌ಗಳನ್ನು ಇನ್ನೊಬ್ಬರನ್ನು ಹೀಗೆಯೆಳೆಯಲು ಅವರು ಬಳಸಿಕೊಳ್ಳುವುದಿಲ್ಲ; ಅದಕ್ಕೆ ಕಾರಣವನ್ನು “ಪತ್ರಕರ್ತನ ವಿನೋದಾ ವಳಿಯ ಹಾವಳಿ"ಯಲ್ಲಿ ವಿವರಿಸಿದ್ದಾರೆ.
-
ನಾರಾಯಣ ಯಾಜಿ
ಸಮಗ್ರವಾಗಿ ಹೇಳಬೇಕೆಂದರೆ ‘ಹಾಸಿಗೆಯ ಹಾಸ್ಯ ವಿಲಾಸ’ ಸಂಕಲನವು, ಲಲಿತಪ್ರಬಂಧ ಪರಂಪರೆಯಲ್ಲಿ ಒಂದು ಸಮಕಾಲೀನ, ಸಂವೇದನಾಶೀಲ ಲೇಖನಗಳ ಗುಚ್ಛವಾಗಿದೆ.
ಲಲಿತ ಪ್ರಬಂಧಗಳ ಸಂಕಲನ “ಹಾಸಿಗೆಯ ಹಾಸ್ಯ ವಿಲಾಸ" ಇದು, ಲೇಖಕರ ವ್ಯಕ್ತಿತ್ವದಂತೆಯೇ, ಲವಲವಿಕೆಯಿಂದ ಕೂಡಿದೆ. ಈ ಕೃತಿಯಲ್ಲಿ ಒಟ್ಟೂ 23 ಪ್ರಬಂಧ ಸಂಕಲನಗಳಿವೆ. ತಲೆಬರಹ ನೋಡಿದ ಕೂಡಲೇ ಇದೊಂದು ಅಶ್ಲೀಲ ಸಾಹಿತ್ಯವಿರಬಹುದೆನೋ ಎನ್ನುವಂತೆ ಇದ್ದರೂ ಇದು ಹಾಸಿಗೆಯ ಪುರಾಣವಲ್ಲ; ಬದುಕಿನ ಜಂಜಡದಲ್ಲಿ ಬಳಲಿ ಹಾಸಿಗೆಯ ಮೇಲೆ ಉರುಳಿದಾಗ ಕೈಗೆತ್ತಿ ಕೊಂಡು ಓದಿ ಮನಸ್ಸನ್ನು ಪ್ರಫುಲ್ಲಗೊಳಿಸಿ, ಕನಸಿನ ಲೋಕಕ್ಕೊಯ್ಯುವ ಲಲಿತ ಪ್ರಬಂಧ ಸಂಕಲ್ಪ.
ಪತ್ರಿಕಾಕರ್ತರೂ ಆಗಿರುವ ಲೇಖಕರಿಗೆ ಸಮಾಜದ ಓರೆಕೋರೆಗಳನ್ನೂ, ಬವಣೆಗಳನ್ನೂ ಹತ್ತಿರ ದಿಂದ ನೋಡುವ ಅವಕಾಶ ದೊರಕಿತ್ತು. ವಿಧಾನ ಸೌಧದ ಮೂಲೆ ಮೂಲೆಯೂ ಪರಿಚಿತ, ಜೊತೆಗೆ ಜಗತ್ತನ್ನು ಸುತ್ತುವ ಅವಕಾಶಗಳು ಇವೆಲ್ಲವೂ ಅವರ ಬದುಕಿನ ಹಾದಿಯಲ್ಲಿ ಸಂಗ್ರಹಿಸಿದ ಅನುಭವಗಳು.
ಇದನ್ನೂ ಓದಿ: Narayana Yaji Column: ಚಿನ್ನದ ಬೆಲೆ ಏರುತ್ತಿದೆ ಏಕೆ ?
ಶಿರಸಿಯೇ ಇರಲಿ, ತಾಷ್ಕೆಂಟೇ ಇರಲಿ ಮನುಷ್ಯ ತಾನೇ ಸೃಸ್ಟಿಸಿಕೊಂಡ ಬಲೆಯಲ್ಲಿ ಬಿದ್ದು ಗೊಂದಲವನ್ನುಂಟುಮಾಡಿಕೊಳ್ಳುತ್ತಾನೆ. ಪನ್ ಮತ್ತು ವಿಟ್‌ಗಳನ್ನು ಇನ್ನೊಬ್ಬರನ್ನು ಹೀಗೆಯೆಳೆ ಯಲು ಅವರು ಬಳಸಿಕೊಳ್ಳುವುದಿಲ್ಲ; ಅದಕ್ಕೆ ಕಾರಣವನ್ನು “ಪತ್ರಕರ್ತನ ವಿನೋದಾ ವಳಿಯ ಹಾವಳಿ"ಯಲ್ಲಿ ವಿವರಿಸಿದ್ದಾರೆ.
ಇವರ ವಿನೋದವೆನ್ನುವುದು ಪ್ರತಿಷ್ಠಿತ ಕ್ಲಬ್‌ಗಳ ಮೀಟಿಂಗಿನಲ್ಲಿ ಬರುವ ಲಾಸ್ಟ್ ಲಾಫ್ʼಗಳಲ್ಲ. ಅಂತಹ ಪ್ರಸಂಗಗಳಲ್ಲಿ ಅಡಕಳ್ಳಿಯವರು ಸಂಯಮದ ಗಡಿಯೊಳಗೇ ಓದುಗರಿಗೆ ದಾಟಿಸುತ್ತಾರೆ. ಇದೇ ಲೇಖನದ "ಮೂತ್ರಾದೇಶ" ಎನ್ನುವಲ್ಲಿ ಗಮನಿಸಬಹುದು.
ಸರಳವಾದ ವಿಷಯಗಳನ್ನು ಗಂಭೀರ ಸಮಸ್ಯೆಯೇನೋ ಎನ್ನುವಂತೆ ವರ್ತಿಸುವ ಅನೇಕ ಸಂಗತಿ ಗಳನ್ನು ಇವರು ಸಹಜವಾಗಿ ವಿನೋದದೆಡೆಗೆ ತಿರುಗಿಸಿಬಿಡುತ್ತಾರೆ. ಲಲಿತಪ್ರಬಂಧದ ಪರಂಪರೆ ಯನ್ನು ಗಮನಿಸಿದರೆ, ಹಾಸ್ಯ ಎಂದರೆ ಸಾಮಾನ್ಯವಾಗಿ ವ್ಯಂಗ್ಯ ಅಥವಾ ಉಪದೇಶದ ಘರಾಣೆ ಯಲ್ಲಿ ನಿಲ್ಲುವ ಪ್ರವೃತ್ತಿ ಕಾಣುತ್ತದೆ. ಆದರೆ ಈ ಕೃತಿಯಲ್ಲಿ ಅಡಕಳ್ಳಿ ಆ ಪರಂಪರೆಯನ್ನು ಒಡೆದು, ಪನ್‌ಗಳ ಮೂಲಕ ನವಿರಾದ ನಗಿಸುವುದು ಸಹಜಧರ್ಮ ಎನ್ನುವಂತೆ ಬರೆಯುತ್ತಾರೆ. ಮೊಸರನ್ನದ ಕುರಿತು ಅನೇಕರು ಬರೆದಿದ್ದಾರೆ.
ಆದರೆ ಇವರ “ಮೊಸರನ್ನ ಬದುಕಿನ ಸುಪ್ರಸನ್ನ" ದಲ್ಲಿ ಭಾರತದ ಮೋಸರೇ ಪಾಶ್ಚಾತ್ಯ ರಾಷ್ಟ್ರ ಗಳಲ್ಲಿ ಯೋಗರ್ಟ್ ಆಗಿರಬೇಕೆನ್ನುವುದನ್ನು ಹೇಳುತ್ತಲೇ ಜಪಾನಿನಲ್ಲಿ ತಿರುಮಲೇಶ ಭಟ್ಟರು ಮೊಸರನ್ನ ಭಟ್ಟರಾದ ವಿಷಯವನ್ನು ವಿವರಿಸುವಾಗ, ಹಾಸ್ಯವಾಗದೇ ಭಾರತದಲ್ಲಿ ಕೆಲವೊಂದು ಜನಾಂಗದವರು ಊಟದ ಕೊನೆಗೆ ಮೊಸರು ಅನಿವಾರ್ಹವೆನ್ನುವ ರಿವಾಜಿಗೆ ಬಂಧಿತರಾಗಿರುವ ನೆನಪು ಬರುತ್ತದೆ.
ಕುಂದಾಪುರದಲ್ಲಿನ ಹೋಟೇಲಿನಲ್ಲಿ ಮೊಸರಿಗೆ ಸಕ್ಕರೆ ಕೊಡಲಾಗುವುದಿಲ್ಲ ವೆನ್ನುವುದಕ್ಕೆ ನೀಡುವ ಕಾರಣ ಬೇಸಿಗೆಯಲ್ಲಿ ಕಾಫಿಗೆ ಗಿರಾಕಿ ಇರುವುದಿಲ್ಲ ಎನ್ನುವ ವಾಸ್ತವ ಚಿತ್ರಣ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯ ಹೊಸ ತಂತ್ರವನ್ನು ವಿವರಿಸುವ ಪಾಠ ಅಗಬಹುದು.
ಅವರ ಬರಹದಲ್ಲಿ ನಗು ಒತ್ತಾಯಪೂರ್ವಕ ವಾಗಿಲ್ಲ; ಅದು ಪರಿಸ್ಥಿತಿಯಿಂದ ಸಹಜವಾಗಿ ಹುಟ್ಟು ತ್ತದೆ. ಓದುಗ ನಗುವಾಗಲೇ, ನಗುತ್ತಿರುವ ವಿಷಯವೇ ತನ್ನ ಬದುಕಿನ ಭಾಗವೆಂಬ ಅರಿವು ಮೂಡು ತ್ತದೆ. “ಮೊಬೈಲ್ ಮಹಿಮೆ" ಮತ್ತು “ಎಮ್ಮೆ ನಮ್ಮಯ ಹೆಮ್ಮೆ" ಮೊದಲಾದ ಲೇಖನಗಳಲ್ಲಿ ಕಾಣಬಹುದು.
‘ಹಾಸಿಗೆಯ ಹಾಸ್ಯವಿಲಾಪದಲ್ಲಿ’ ಸಮಾಜದ ಓರೆಕೋರೆಗಳನ್ನು ಎತ್ತಿತೋರುವಾಗ ಅವುಗಳನ್ನು ಬದುಕಿನ ಸಹಜ ಭಾವ ಎನ್ನುವಂತೆ ಚಿತ್ರಿಸುತ್ತಾರೆ. ಇದು ನಮ್ಮದೇ ಅನುಭವವ ಆಗಿರಬಹುದು ಎನ್ನುವಷ್ಟು ಸಹಜವಾಗಿ ಪದಗಳ ಹರಿವಿದೆ. ಗುಂಡು ಪಾರ್ಟಿಗಳಲ್ಲಿ ಕಠಿಣವಾದ ಇಂಗ್ಲೀಷ ಸಹ ಓತಪ್ರೋತವಾಗಿ ಬರುತ್ತದೆ ಎನ್ನುವ ಮಾತುಗಳು, ಪ್ರವಾಸ ವಿಪರ್ಯಾಸ ಇವೆಲ್ಲ ನಗೆಬುಗ್ಗೆಯನ್ನು ಚಿಮ್ಮಿಸುವ ಬರಹಗಳು.
ರೈಲಿನಲ್ಲಿ ಹೋಗುವಾಗ ಸಹಜವಾದ ಇಸ್ಪೀಟಿನಾಟವನ್ನು ವಿಮಾನಿನಲ್ಲಿಯೂ ಆಡಲು ಹೋಗಿ ಗಗನಸಖಿಯಿಂದ ಬೈಸಿಕೊಂಡ ಘಟನೆ, ವಿದೇಶಗಳಲ್ಲಿ ಬಚ್ಚಲಿನಲ್ಲಿ ನಮ್ಮಲ್ಲಿಯ ಹಾಗೇ ಬಕೆಟ್, ಚಂಬು ಇರಿಸುವುದಿಲ್ಲ ಅದರ ಕುರಿತು ಬರೆದ ಘಟನೆ ಭಿನ್ನ ಸಂಸ್ಕೃತಿಯಲ್ಲಿ ಸ್ವಚ್ಛತೆಯ ಪರಿಕಲ್ಪನೆ ಹೇಗೆ ಬದಲಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.
ಇಂತಹುದೇ ಸಂದರ್ಭ ಮೊದಲ ಬಾರಿಗೆ ದುಬಾಯಿಯಲ್ಲಿ ನನಗೆ ಎದುರಾದಾಗ ಚೊಂಬು ಇಲ್ಲದಿ ದ್ದರೂ ರೂಮಿನಲ್ಲಿಟ್ಟಿದ್ದ ಗ್ಲಾಸು ನೆರವಾದ ವಿಷಯ ನೆನಪಿಗೆ ಬಂದು ನಗುತಡೆದು ಕೊಳ್ಳಲಾಗ ಲಿಲ್ಲ. ಇದು ಓದಿದ ನಂತರ ಮುಚ್ಚಿ ಇಡುವ ಪುಸ್ತಕವಲ್ಲ; ಓದುಗನ ದಿನನಿತ್ಯದ ಅನುಭವಗಳ ಜೊತೆ ಮೌನವಾಗಿ ಮೆಲಕುಹಾಕುವ ಬರಹಗಳ ಸಂಕಲನ. ಹಾಗಂತ ಮನರಂಜನೆಯ ಲಲಿತ ಪ್ರಬಂಧಗಳ ಗುಚ್ಛವಲ್ಲ; ಅದು ಇಂದಿನ ಬದುಕಿನ ಅಸಂಗತತೆಗಳನ್ನು ತೋರಿಸುವ ಸಂವೇದನೆ ಯೂ ಆಗಿದೆ.