ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NED: ನೆದರ್ಲೆಂಡ್ಸ್‌ ವಿರುದ್ದದ ಪಂದ್ಯಕ್ಕೆ ಭಾತತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

India vs Netherlands Match Preview: ಆರಂಭಿಕ ಮೂರು ಪಂದ್ಯಗಳನ್ನು ಗೆದ್ದು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ಕ್ಕೆ ಪ್ರವೇಶ ಮಾಡಿರುವ ಭಾರತ ತಂಡ, ಎ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯ ಫೆಬ್ರವರಿ 18 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI -

Profile
Ramesh Kote Feb 17, 2026 10:45 PM

ಅಹಮದಾಬಾದ್‌: ಸತತ ಮೂರು ಪಂದ್ಯಗಳನ್ನು ಗೆದ್ದು 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಸೂಪರ್‌-8ಕ್ಕೆ ಈಗಾಗಲೇ ಅರ್ಹತೆ ಪಡೆದಿರುವ ಭಾರತ ತಂಡ, ಫೆಬ್ರವರಿ 18 ರಂದು ಬುಧವಾರ ನೆದರ್ಲೆಂಡ್ಸ್‌ ವಿರುದ್ಧ ಎ ಗುಂಪಿನ ತನ್ನ ಕೊನೆಯ ಪಂದ್ಯವನ್ನು(IND vs NED) ಆಡಲು ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವಣ ಈ ಪಂದ್ಯ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೂಪರ್‌-8ರ ಪಂದ್ಯಕ್ಕೆ ಭಾರತ (India) ತಂಡ, ಈ ಹಣಾಹಣಿಯಲ್ಲಿ ಅಭ್ಯಾಸವನ್ನು ನಡೆಸಲಿದೆ. ಅಲ್ಲದೆ ಬೆಂಚ್‌ ಆಟಗಾರರಿಗೆ ಈ ಪಂದ್ಯದಲ್ಲಿ ಅವಕಾಶ ನೀಡಬಹುದು.

ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ, ತನ್ನ ಮೊದಲನೇ ಪಂದ್ಯದಲ್ಲಿ ಯುಎಸ್‌ಎ ವಿರುದ್ದ, ಎರಡನೇ ಪಂದ್ಯದಲ್ಲಿ ನಮೀಬಿಯಾ ಎದುರು ಹಾಗೂ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿಯಾಗಿ ಗೆದ್ದಿತ್ತು. ಆ ಮೂಲಕ ಸೂಪರ್‌-8ಕ್ಕೆ ಅರ್ಹತೆ ಪಡೆದಿತ್ತು. ಆದರೆ, ಎದುರಾಳಿ ನೆದರ್ಲೇಂಡ್ಸ್‌ ತಂಡ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿದ್ದು, ಭಾರತವನ್ನು ಮಣಿಸಿ ಟೂರ್ನಿಯ ಅಭಿಯಾನವನ್ನು ಮುಗಿಸಲು ಎದುರು ನೋಡುತ್ತಿದೆ.

T20 World Cup 2026: ಭಾರತ ತಂಡದ ಸೂಪರ್‌-8ರ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ!

ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ ರಿಪೋರ್ಟ್‌

ಇಲ್ಲಿನ ಪಿಚ್‌ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಈ ಅಂಗಣದ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ಬ್ಯಾಟ್‌ ಬೀಸಬಹುದು. ಇದು ದೊಡ್ಡ ವಿಸ್ತೀರ್ಣದ ಅಂಗಣವಾಗಿದ್ದು, ಬ್ಯಾಟ್ಸ್‌ಮನ್‌ಗಳು ಗ್ಯಾಪ್‌ಗಳನ್ನು ಸುಲಭವಾಗಿ ನೋಡಿ ರನ್‌ ಗಳಿಸಬಹುದು. ಹಾಗಾಗಿ ಬೌಲರ್‌ಗಳು ಲೈನ್‌ ಅಂಡ್‌ ಲೆನ್ತ್‌ ಅನ್ನು ಸರಿಯಾಗಿ ನಿರ್ವಹಿಸಬೇಕು. ಕಳಪೆ ಎಸೆತಗಳನ್ನು ಹಾಕಿದರೆ, ಬ್ಯಾಟ್ಸ್‌ಮನ್‌ ಬೌಂಡರಿ ಹಾಗೂ ಸಿಕ್ಸರ್‌ ಬಾರಿಸಬಹುದು. ಈ ಪಂದ್ಯದಲ್ಲಿ ಟಾಸ್‌ ಗೆದ್ದ ತಂಡದ ನಾಯಕ ಚೇಸಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

T20 World Cup: ಆಸ್ಟ್ರೇಲಿಯಾ ಕನಸು ಭಗ್ನ, ಸೂಪರ್‌-8ಕ್ಕೆ ಪ್ರವೇಶಿಸಿದ ಜಿಬಾಬ್ವೆ!

ಪಂದ್ಯದ ವಿವರ

ಭಾರತ vs ನೆದರ್ಲೆಂಡ್ಸ್‌

2026ರ ಐಸಿಸಿ ಟಿ20 ವಿಶ್ವಕಪ್‌

ದಿನಾಂಕ: ಫೆಬ್ರವರಿ 18, 2026

ಸಮಯ: ಸಂಜೆ 07:00

ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಮುಖಾಮುಖಿ ದಾಖಲೆ

ಆಡಿರುವ ಒಟ್ಟು ಪಂದ್ಯಗಳು: 01

ಭಾರತದ ಗೆಲುವು: 01

ನೆದರ್ಲೆಂಡ್ಸ್‌ ಗೆಲುವು: 00

T20 World Cup: ಅಫ್ಘಾನಿಸ್ತಾನ ಔಟ್‌, ಕೆನಡಾ ವಿರುದ್ಧ ಗೆದ್ದು ಸೂಪರ್‌-8ಕ್ಕೆ ಪ್ರವೇಶಿಸಿದ ನ್ಯೂಜಿಲೆಂಡ್‌!

ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI

ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್‌ ಬುಮ್ರಾ

ನೆದರ್ಲೆಂಡ್ಸ್‌ ತಂಡದ ಸಂಭಾವ್ಯ ಪ್ಲೇಯಿಂಗ್‌ XI

ಮೈಕಲ್‌ ಲೆವಿಟ್‌, ಮ್ಯಾಟ್‌ ಓ ಡೌಡ್‌, ಬಾಸ್‌ ಡಿ ಲೀಡೆ, ಕಾಲಿನ ಅಕಿರ್ಮನ್‌, ಸ್ಕಾಟ್‌ ಎಡ್ವರ್ಡ್ಸ್‌ (ನಾಯಕ, ವಿಕೆಟ್‌ ಕೀಪರ್‌), ಝ್ಯಾಕ್‌ ಲಯನ್‌, ಲೋಗನ್‌ ವ್ಯಾನ್‌ ಬೀಕ್‌, ಆರ್ಯನ್‌ ದತ್‌, ರೊಲಾಫ್‌ ವ್ಯಾನ್‌ ಡೆರ್‌ ಮೆರ್ವೆ, ಕೈಲ್‌ ಕ್ಲೀಯನ್‌, ಫ್ರೆಡ್‌ ಕ್ಲಾಸೆನ್‌