Oracle Lays Off: ಬರೋಬ್ಬರಿ 12,000 ಸಿಬ್ಬಂದಿಗೆ ಗೇಟ್ ಪಾಸ್ ನೀಡಿದ ಟೆಕ್ ದೈತ್ಯ ಕಂಪನಿ ಒರಾಕಲ್; ಮತ್ತೊಂದು ರೌಂಡ್ ಉದ್ಯೋಗ ಕಡಿತ ಸಾಧ್ಯತೆ
ಅಮೆರಿಕ ಮೂಲದ ಒರಾಕಲ್ ಕಂಪನಿ ಭಾರತದಲ್ಲಿ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದ್ದು, ಇನ್ನೂ ಒಂದು ತಿಂಗಳೊಳಗೆ ಮತ್ತೊಂದು ಲೇಆಫ್ ಸುತ್ತು ನಡೆಯುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ 30,000 ಉದ್ಯೋಗಿಗಳಿಗೂ ಪರಿಣಾಮ ಬಿದ್ದಿದೆ. ಇದಲ್ಲದೆ, ಮುಂದಿನ ಒಂದು ತಿಂಗಳೊಳಗೆ ಮತ್ತೊಂದು ಹಂತದ ಲೇಆಫ್ ನಡೆಯುವ ಸಾಧ್ಯತೆ ಇದೆ ಎಂದು ಕಂಪನಿಯ ಆಂತರಿಕ ಮೂಲಗಳು ತಿಳಿಸಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಏ. 1: ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಒರಾಕಲ್ (Oracle) ಸುಮಾರು 20,000ರಿಂದ 30,000 ಉದ್ಯೋಗಗಳನ್ನು ಕಡಿತಗೊಳಿಸಲು (Lays Off) ಯೋಜಿಸುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈ ನಿರ್ಧಾರದಿಂದ ಜಾಗತಿಕ ಮಟ್ಟದಲ್ಲಿ ಉದ್ಯೋಗಿಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಕಂಪನಿಯ ಒಳಗಿನ ಬದಲಾವಣೆಗಳು ಮತ್ತು ವೆಚ್ಚ ಕಡಿತ ಕ್ರಮಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಈ ಪೈಕಿ ಭಾರತದಲ್ಲಿ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಸಾಧ್ಯತೆ ಇದೆ.
ಹೌದು, ಅಮೆರಿಕ ಮೂಲದ ಪ್ರಮುಖ ಐಟಿ ಸಂಸ್ಥೆಯಾದ ಒರಾಕಲ್ (Oracle) ತನ್ನ ಕಾರ್ಯಾಚರಣೆಯನ್ನು ಮರುಸಂಘಟಿಸುವ ಹೆಸರಿನಲ್ಲಿ ಭಾರಿ ಮಟ್ಟದ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ವರದಿಗಳ ಪ್ರಕಾರ, ಬೆಂಗಳೂರು ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇದಲ್ಲದೆ, ಮುಂದಿನ ಒಂದು ತಿಂಗಳೊಳಗೆ ಮತ್ತೊಂದು ಹಂತದ ಲೇಆಫ್ ನಡೆಯುವ ಸಾಧ್ಯತೆ ಇದೆ ಎಂದು ಕಂಪನಿಯ ಆಂತರಿಕ ಮೂಲಗಳು ತಿಳಿಸಿದೆ.
ಜಾಗತಿಕ ಮಟ್ಟದಲ್ಲೂ ಉದ್ಯೋಗ ಕಡಿತ
ಈ ಉದ್ಯೋಗ ಕಡಿತ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಾಗತಿಕ ಮಟ್ಟದಲ್ಲಿ ಒರಾಕಲ್ ಈಗಾಗಲೇ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಭಾರತದಲ್ಲೇ ಕಂಪನಿಯು ಸುಮಾರು 30,000 ಸಿಬ್ಬಂದಿಯನ್ನು ಹೊಂದಿದ್ದು, ಅವರಲ್ಲಿ ಸುಮಾರು ಶೇಕಡಾ 40ರಷ್ಟು ಸಿಬ್ಬಂದಿ ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಒರಾಕಲ್ ಮಾತ್ರ ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ.
ಆ್ಯಪಲ್ ಕಂಪನಿ ಉದ್ಯೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ಏನಿದೆ?
ಸಂಸ್ಥೆಯೊಳಗಿನ ಸಾಂಸ್ಥಿಕ ಬದಲಾವಣೆಗಳ ಹಿನ್ನೆಲೆ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರ ಭಾಗವಾಗಿ ಕೆಲವ ಉದ್ಯೋಗಿಗಳು ಅಗತ್ಯವಿಲ್ಲದಂತಾಗಿವೆ (Redundant) ಎಂದು ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ ಸಂಸ್ಥೆ ಹೀಗೆ ತಿಳಿಸಿದೆ.
ಲೇಆಫ್ ಆದ ಉದ್ಯೋಗಿಗಳಿಗೆ ಕೊಟ್ಟ ಸೌಲಭ್ಯಗಳು:
ಪ್ರತಿ ವರ್ಷ ಸೇವೆಗೆ 15 ದಿನಗಳ ಸಂಬಳ
- 1 ತಿಂಗಳ ನೊಟೀಸ್ ಪಿರಿಡ್ ಪೇ
- 2 ತಿಂಗಳ ಹೆಚ್ಚುವರಿ ಸಂಬಳ
ಲೀವ್ ಎನ್‌ಕ್ಯಾಶ್‌ಮೆಂಟ್ ಮತ್ತು ಗ್ರ್ಯಾಚ್ಯುಟಿ ನೀಡುವುದಾಗಿ ತಿಳಿಸಿದ್ದು, ಈ ಸೌಲಭ್ಯಗಳು ಸ್ವಯಂ ರಾಜೀನಾಮೆ ನೀಡುವವರಿಗೆ ಮಾತ್ರ ಲಭ್ಯ.
ಇನ್ನು ಈ ಬೆಳವಣಿಗೆ ಕುರಿತು ಒರಾಕಲ್‌ನ ಮಾಜಿ ಉದ್ಯೋಗಿ ಮೆರುಗು ಶ್ರೀಧರ್ ಅವರ ಪ್ರಕಾರ, 16 ಗಂಟೆಗಳ ಕೆಲಸದ ಸಮಯದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಅಮೆರಿಕದ ಕಠಿಣ ಕಾನೂನುಗಳ ಪರಿಣಾಮವಾಗಿ ಅಲ್ಲಿನ ಉದ್ಯೋಗಿಗಳ ಮೇಲೂ ಪರಿಣಾಮ ಬಿದ್ದಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಇದು ಒರಾಕಲ್ ಕಂಪನಿಯ ಇತಿಹಾಸದಲ್ಲೇ ಅತಿ ದೊಡ್ಡ ಉದ್ಯೋಗ ಕಡಿತ ಎನ್ನಲಾಗುತ್ತಿದೆ.
ಅಮೆಜಾನ್‌ನಿಂದಲೂ ಭಾರಿ ಉದ್ಯೋಗ ಕಡಿತ
ಅಮೆಜಾನ್ ಕಳೆದ ಮೂರೇ ತಿಂಗಳಲ್ಲಿ ಎರಡು ಬಾರಿ ಉದ್ಯೋಗ ಕಡಿತ ಮಾಡಿದ್ದು, ಕಳೆದ ವರ್ಷ (2025) ಅಕ್ಟೋಬರ್‌ನಲ್ಲಿ 14,000 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈಗ 2026ರ ಜನವರಿಯಲ್ಲಿ ಮತ್ತೆ 16,000 ಜನರನ್ನು ತೆಗೆದುಹಾಕುವ ಮೂಲಕ ಕೇವಲ ಮೂರು ತಿಂಗಳಲ್ಲಿ ಒಟ್ಟು 30,000 ಉದ್ಯೋಗ ಕಡಿತದ ಗುರಿಯನ್ನು ತಲುಪಿದೆ.