ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Punjab and Sind Bank: ಪಂಜಾಬ್-ಸಿಂಧ್ ಬ್ಯಾಂಕ್‌ನಲ್ಲಿದೆ 750 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆ; ಹೀಗೆ ಅಪ್ಲೈ ಮಾಡಿ

Punjab and Sind Bank Recruitment 2025: ಸಾರ್ವಜನಿಕ ವಲಯದ ಪಂಜಾಬ್-ಸಿಂಧ್ ಬ್ಯಾಂಕ್ಖಾಲಿ ಇರುವ 750 ಲೋಕಲ್ ಬ್ಯಾಂಕ್ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 4.

ಪಂಜಾಬ್-ಸಿಂಧ್ ಬ್ಯಾಂಕ್‌ನಲ್ಲಿದೆ 750 ಹುದ್ದೆ

ಸಾಂದರ್ಭಿಕ ಚಿತ್ರ -

Ramesh B Ramesh B Sep 1, 2025 9:11 PM
  • ಆರ್.ಕೆ. ಬಾಲಚಂದ್ರ

ದೆಹಲಿ: ಸಾರ್ವಜನಿಕ ವಲಯದ ಪಂಜಾಬ್-ಸಿಂಧ್ ಬ್ಯಾಂಕ್ (Punjab and Sind Bank) ಲೋಕಲ್ ಬ್ಯಾಂಕ್ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ (Punjab and Sind Bank Recruitment 2025). ಒಟ್ಟು 750 ಹುದ್ದೆಗಳು ಖಾಲಿ ಇದ್ದು, ಇವುಗಳಲ್ಲಿ 65 ಹುದ್ದೆಗಳನ್ನು ಕರ್ನಾಟಕಕ್ಕೆ ಮೀಸಲಿಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 4 (Job Guide). ಗಮನಿಸಿ: ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿ ಪರಿಣತಿ ಹೊಂದಿದವರಿಗೆ (Bank Jobs) ಮಾತ್ರ ಈ ಉದ್ಯೋಗ ನೀಡಲಾಗುತ್ತದೆ.

ವಿದ್ಯಾರ್ಹತೆಗಳೇನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಲೆ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್‌ ಅಥವಾ ಯಾವುದೇ ವಿಭಾಗದಲ್ಲಿ ಭಾರತ ಸರಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ನಿಗದಿತ ಪದವಿ ಹೊಂದಿರುವುದು ಕಡ್ಡಾಯ.

ಈ ಸುದ್ದಿಯನ್ನೂ ಓದಿ: Intelligence Bureau Recruitment 2025: ಗುಪ್ತಚರ ಇಲಾಖೆಯಲ್ಲಿದೆ 394 ಹುದ್ದೆ; ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ

ಕೆಲಸದ ಅನುಭವ

ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್ / ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ನಲ್ಲಿ ಅಧಿಕಾರಿ ವರ್ಗದಲ್ಲಿ 18 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಕೆಲಸದ ಅನುಭವ ಇರಬೇಕು. ಅದರೆ NBFCಗಳು, ಸಹಕಾರಿ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಪಾವತಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಅಥವಾ ಫಿನ್ಟೆಕ್‌ಗಳಲ್ಲಿ ಪಡೆದ ಅನುಭವವನ್ನು ಪರಿಗಣಿಸಲಾಗುವುದಿಲ್ಲ. ಸಿಬಿಲ್ ಸ್ಕೋರ್ ಅಗತ್ಯ: ಸಾಲ ಮರುಪಾವತಿಯಲ್ಲಿ ಡೀಫಾಲ್ಟ್ ದಾಖಲೆ ಹೊಂದಿರುವ / ಕ್ರೆಡಿಟ್ ಕಾರ್ಡ್ ಬಾಕಿ ಹೊಂದಿರುವ ಮತ್ತು / ಅಥವಾ ಸಿಬಿಲ್ ಅಥವಾ ಇತರ ಬಾಹ್ಯ ರೇಟಿಂಗ್ ಏಜೆನ್ಸಿಗಳಿಂದ ವ್ಯತಿರಿಕ್ತ ವರದಿ ಲಭ್ಯವಿರುವ ಅಭ್ಯರ್ಥಿಗಳು ನೇಮಕಾತಿಗೆ ಅರ್ಹರಲ್ಲ.ಕನಿಷ್ಠ ಸಿಬಿಲ್ ಸ್ಕೋರ್ 650 ಇರಬೇಕು.

ವಯೋಮಿತಿ ಎಷ್ಟು?

ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ಮತ್ತು ಗರಿಷ್ಠ 30 ವರ್ಷ. ನಿಗದಿಪಡಿಸಿದ ಗರಿಷ್ಠ ವಯೋಮಿತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳ ಆಯ್ಕೆಗೆ ಅಕ್ಟೋಬರ್‌ನಲ್ಲಿ ಪರೀಕ್ಷೆ ನಡೆಸುವುದಾಗಿ ಬ್ಯಾಂಕ್ ತಿಳಿಸಿದೆ. ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಗೆ 120 ಅಂಕ ನಿಗದಿಯಾಗಿದೆ. ಪರೀಕ್ಷೆಯಲ್ಲಿ ಇಂಗ್ಲಿಷ್ ಲಾಂಗ್ವೇಜ್, ಬ್ಯಾಂಕಿಂಗ್ ನಾಲೆಡ್ಜ್, ಜನರಲ್ ಅವೇರ್ನೆಸ್, ಎಕಾನಮಿ ಮತ್ತು ಕಂಪ್ಯೂಟರ್ ಅಪ್ಟಿಟ್ಯೂಡ್‌ಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು (120ರಲ್ಲಿ) 70 ಅಂಕಗಳಿಗೆ ಮತ್ತು ಅಭ್ಯರ್ಥಿಗಳ ಸಂದರ್ಶನದ ಅಂಕಗಳನ್ನು (50ರಲ್ಲಿ) 30 ಅಂಕಗಳಿಗೆ ಪರಿವರ್ತಿಸಲಾಗುತ್ತದೆ.

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿ?

ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ಸೇರಿದಂತೆ ದೇಶದಾದ್ಯಂತ ಪರೀಕ್ಷೆಗಳು ನಡೆಯಲಿವೆ.

ಅರ್ಜಿ ಶುಲ್ಕವೆಷ್ಟು?

ಎಸ್‌ಸಿ, ಎಸ್‌ಟಿ, ವಿಶೇಷ ಚೇತನ ಅಭ್ಯರ್ಥಿಗಳಿಗೆ ಇಂಟಿಮೇಷನ್ ಫೀ ಮತ್ತು ಜಿಎಸ್‌ಟಿ ಸೇರಿ 100 ರೂ. ಉಳಿದೆಲ್ಲ ವರ್ಗದ ಅಭ್ಯರ್ಥಿಗಳು 850 ರೂ. ಶುಲ್ಕ ಪಾವತಿಸಬೇಕು.

ವೇತನ ಶ್ರೇಣಿ ಎಷ್ಟು?

48,480 ರೂ. - 85,920 ರೂ. ಆರಂಭಿಕ ವೇತನ ಇರಲಿದ್ದು ಹಾಗೂ ಇತರ ಭತ್ಯೆಗಳನ್ನು ನಿಯಮಾನುಸಾರ ನೀಡಲಾಗುತ್ತದೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅನ್ವಯವಾಗುವ ಜಂಟಿ ಟಿಪ್ಪಣಿಯ ಪ್ರಕಾರ, LBOA JMGS-Iಗಾಗಿ ಆರಂಭಿಕ ವೇತನ ಶ್ರೇಣಿಯಲ್ಲಿ + ವೇತನ ಶ್ರೇಣಿಯಲ್ಲಿ 3 ಹೆಚ್ಚಳದಲ್ಲಿ ಸೇರಿರುತ್ತವೆ.

ನಿರೀಕ್ಷಣಾ ಅವಧಿ ಎಷ್ಟು?

ನೇಮಕಗೊಂಡವರಿಗೆ ಆರು ತಿಂಗಳ ನಿರೀಕ್ಷಣಾ ಅವಧಿ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಒಟ್ಟು ಸಂಬಳದ ಮೊತ್ತದಷ್ಟು ಸೇವಾ ಬಾಂಡ್ ಅನ್ನು ಮೂರು ವರ್ಷಗಳಿಗೆ ಕಡ್ಡಾಯವಾಗಿ ನೀಡಬೇಕು.

ನೆನಪಿಡಿ

ಪರೀಕ್ಷೆಗೆಚಸಂಬಂಧಿಸಿದಂತೆ ಪ್ರವೇಶ ಪತ್ರವನ್ನು ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಮಾತ್ರವಲ್ಲ, ಇ-ಮೇಲ್ ಮೂಲಕವೂ ಅಭ್ಯರ್ಥಿಗಳಿಗೆ ಕಳಿಸಲಾಗುತ್ತದೆ. ಒಮ್ಮೆ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿದ ಬಳಿಕ ಬದಲಾಯಿಸಲು ಸಾದ್ಯವಿಲ್ಲ. ನೇಮಕಗೊಂಡವರು SMGS-IVA ಬಡ್ತಿ ಪಡೆಯಬೇಕಾದರೆ ಆಯಾ ರಾಜ್ಯದಲ್ಲಿ ಕನಿಷ್ಠ 12 ವರ್ಷ ಸೇವೆ ಸಲ್ಲಿಸಿರಬೇಕು. ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಬೇಕಾದ ಜಾಲತಾಣ: https://punjabandsindhbank.co.in/ಗೆ ಭೇಟಿ ನೀಡಿ.