ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lieutenant Governor in Chandigarh: ಚಂಡೀಗಢಕ್ಕೆ ಲೆಫ್ಟಿನೆಂಟ್‌ ಗವರ್ನರ್ ನೇಮಕಕ್ಕೆ ಕೇಂದ್ರದ ಅಸ್ತು ; ಪಂಜಾಬ್‌ ಸರ್ಕಾರ ವಿರೋಧ

Article 240 in Chandigarh: ಸಂವಿಧಾನದ 240ನೇ ವಿಧಿಯ ವ್ಯಾಪ್ತಿಗೆ ಚಂಡೀಗಢವನ್ನು ತರುವ ಕೇಂದ್ರದ ಪ್ರಯತ್ನದ ಬಗ್ಗೆ ಭಾರಿ ರಾಜಕೀಯ ವಿವಾದ ಭುಗಿಲೆದ್ದಿದ್ದು, ಪಂಜಾಬ್‌ ವಿರೋಧ ವ್ಯಕ್ತಪಡಿಸಿದೆ. , ಈ ವಿಧಿ ರಾಷ್ಟ್ರಪತಿಗಳಿಗೆ ಕೇಂದ್ರಾಡಳಿತ ಪ್ರದೇಶಕ್ಕೆ ನೇರವಾಗಿ ನಿಯಮಗಳನ್ನು ರೂಪಿಸಲು ಅಧಿಕಾರ ನೀಡುತ್ತದೆ.

ಚಂಡೀಗಢಕ್ಕೆ 240 ನೇ ವಿಧಿ ಜಾರಿಗೆ ಕೇಂದ್ರದ ಮಸೂದೆ; ಭಾರೀ ವಿರೋಧ

ಭಗವಂತ್‌ ಮಾನ್‌ ಹಾಗೂ ಮೋದಿ -

Vishakha Bhat
Vishakha Bhat Nov 23, 2025 11:38 AM

ಚಂಡೀಗಢ: ಸಂವಿಧಾನದ 240ನೇ (Article 240) ವಿಧಿಯ ವ್ಯಾಪ್ತಿಗೆ ಚಂಡೀಗಢವನ್ನು ತರುವ ಕೇಂದ್ರದ ಪ್ರಯತ್ನದ ಬಗ್ಗೆ ಭಾರಿ ರಾಜಕೀಯ ವಿವಾದ (Lieutenant Governor in Chandigarh) ಭುಗಿಲೆದ್ದಿದ್ದು, ಪಂಜಾಬ್‌ ವಿರೋಧ ವ್ಯಕ್ತಪಡಿಸಿದೆ. , ಈ ವಿಧಿ ರಾಷ್ಟ್ರಪತಿಗಳಿಗೆ ಕೇಂದ್ರಾಡಳಿತ ಪ್ರದೇಶಕ್ಕೆ ನೇರವಾಗಿ ನಿಯಮಗಳನ್ನು ರೂಪಿಸಲು ಅಧಿಕಾರ ನೀಡುತ್ತದೆ. ಪ್ರಸ್ತುತ, ಪಂಜಾಬ್ ರಾಜ್ಯಪಾಲರು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿರುವ ಚಂಡೀಗಢದ ಆಡಳಿತಾಧಿಕಾರಿಯಾಗಿದ್ದಾರೆ. ಡಿಸೆಂಬರ್ 1 ರಿಂದ ಪ್ರಾರಂಭವಾಗುವ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ 2025 ಅನ್ನು ಪರಿಚಯಿಸಲು ಕೇಂದ್ರ ಯೋಜಿಸಿದೆ.

ಆಡಳಿತರೂಢ ಆಮ್‌ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಮತ್ತು ಅಕಾಲಿ ದಳ ಎರಡೂ ಕೇಂದ್ರದ ಕ್ರಮವನ್ನು ಟೀಕಿಸಿದ್ದು, ಇದನ್ನು "ಪಂಜಾಬ್ ವಿರೋಧಿ" ಎಂದು ಕರೆದಿವೆ. ನಮ್ಮ ರಾಜ್ಯದ ಹಳ್ಳಿಗಳನ್ನು ಪಂಜಾಬ್‌ಗೆ ಮಾತ್ರ ಸೇರಿದೆ. ನಮ್ಮ ಹಕ್ಕನ್ನು ನಾವು ಹಾಗೆ ಜಾರಿಕೊಳ್ಳಲು ಬಿಡುವುದಿಲ್ಲ. ಅದಕ್ಕಾಗಿ ನಾವು ಅಗತ್ಯವಿರುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ' ಎಂದು ಮಾನ್ ಹೇಳಿದ್ದಾರೆ.

ಏನಿದು ಆರ್ಟಿಕಲ್ 240 ?

240 ನೇ ವಿಧಿಯು (ಎ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು; (ಬಿ) ಲಕ್ಷದ್ವೀಪ (ಸಿ) ದಾದ್ರಾ ಮತ್ತು ನಗರ ಹವೇಲಿ; (ಡಿ) ದಮನ್ ಮತ್ತು ಡಿಯು ಮತ್ತು (ಇ) ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಶಾಂತಿ, ಪ್ರಗತಿ ಮತ್ತು ಉತ್ತಮ ಸರ್ಕಾರಕ್ಕಾಗಿ ನಿಯಮಗಳನ್ನು ರಚಿಸಬಹುದು ಎಂದು ಹೇಳುತ್ತದೆ. ಇದು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ನಿರ್ದಿಷ್ಟ ಅಧಿಕಾರವನ್ನು ನೀಡುತ್ತದೆ. ಈ ಅಧಿಕಾರವು ತಮ್ಮದೇ ಆದ ಶಾಸಕಾಂಗ ಸಭೆಗಳನ್ನು ಹೊಂದಿರದ ಪ್ರದೇಶಗಳಿಗೆ ವಿಶೇಷವಾಗಿ ಮಹತ್ವದ್ದಾಗಿದೆ. ಭಾರತೀಯ ಸಂವಿಧಾನದ 240 ನೇ ವಿಧಿಯ ಮೂಲಕ ರಾಷ್ಟ್ರಪತಿಗಳು ಸಂಸತ್ತಿನ ಕಾಯಿದೆಗಳನ್ನು ತಿದ್ದುಪಡಿ ಮಾಡಲು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಯಮಗಳನ್ನು ಜಾರಿಗೆ ತರಲು ಸಂಪೂರ್ಣ ಅಧಿಕಾರದೊಂದಿಗೆ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬದಲಾಯಿಸಲು ಅಥವಾ ರದ್ದುಗೊಳಿಸಲು ವ್ಯಾಪಕ ಅಧಿಕಾರವನ್ನು ಚಲಾಯಿಸಬಹುದು.

Pak Spy Agent: ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ; ಪಂಜಾಬ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿಯ ಬಂಧನ

1966 ರಲ್ಲಿ ಹರಿಯಾಣವನ್ನು ಪಂಜಾಬ್‌ನಿಂದ ಬೇರ್ಪಡಿಸಿದ ನಂತರ ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶವಾಗಿ ರಚಿಸಲಾಯಿತು. ಇದು ಹರಿಯಾಣ ಮತ್ತು ಪಂಜಾಬ್‌ಗೆ ಜಂಟಿ ರಾಜಧಾನಿಯಾಗಿದ್ದು, ಆಡಳಿತಾಧಿಕಾರಿಯಿಂದ ಆಡಳಿತ ನಡೆಸಲ್ಪಡುತ್ತದೆ. ಪ್ರಸ್ತುತ, ಪಂಜಾಬ್‌ನ ರಾಜ್ಯಪಾಲರು ಚಂಡೀಗಢದ ಆಡಳಿತಾಧಿಕಾರಿಯಾಗಿದ್ದಾರೆ. ಪಂಜಾಬ್‌ನ ರಾಜಕೀಯ ನಾಯಕರು ಚಂಡೀಗಢವು ರಾಜ್ಯಕ್ಕೆ ಸೇರಿದ್ದು ಎಂದು ಬಹಳ ಹಿಂದಿನಿಂದಲೂ ಹೇಳುತ್ತಿದ್ದಾರೆ ಮತ್ತು ಹರಿಯಾಣಕ್ಕೆ ಪ್ರತ್ಯೇಕ ರಾಜಧಾನಿಯನ್ನು ಒತ್ತಾಯಿಸುತ್ತಿದ್ದಾರೆ.

ಭಗವಂತ್‌ ಮಾನ್‌ ವಿರೋಧ

ಕೇಂದ್ರದ ಕ್ರಮವನ್ನು ಟೀಕಿಸಿದ ಮುಖ್ಯಮಂತ್ರಿ ಭಗವಂತ್ ಮಾನ್, ಬಿಜೆಪಿ ಸರ್ಕಾರ ಪಂಜಾಬ್ ರಾಜಧಾನಿಯನ್ನು "ಕಿತ್ತುಕೊಳ್ಳಲು ಪಿತೂರಿ ನಡೆಸುತ್ತಿದೆ" ಎಂದು ಹೇಳಿದ್ದಾರೆ. ಚಂಡೀಗಢವು ರಾಜ್ಯದ ಅವಿಭಾಜ್ಯ ಅಂಗವಾಗಿತ್ತು, ಇದೆ ಮತ್ತು ಯಾವಾಗಲೂ ಉಳಿಯುತ್ತದೆ ಎಂದು ಅವರು ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಈ ಕ್ರಮ ಪಂಜಾಬ್‌ನ ಗುರುತಿನ ಮೇಲಿನ ದಾಳಿಯಾಗಿದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.