SBI Recruitment 2026: ಎಸ್‌ಬಿಐಯಿಂದ 1,500 ಹುದ್ದೆಗಳಿಗೆ ನೇಮಕಾತಿ: ಅಪ್ಲೈ ಮಾಡುವ ವಿಧಾನ ಇಲ್ಲಿದೆ
Job Guide: ಎಸ್‌ಬಿಐಯ 2026ರ ಸಾಲಿನ ಪ್ರೊಬೇಷನರಿ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಒಟ್ಟು 1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 588, ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ 234, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 144, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 144 ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 390 ಹುದ್ದೆ ಮೀಸಲಿಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 8.
ಸಾಂದರ್ಭಿಕ ಚಿತ್ರ -
- ಆರ್. ಕೆ. ಬಾಲಚಂದ್ರ
ದೆಹಲಿ, ಜೂ. 22: ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಂಪರ್ ಕೊಡುಗೆ ನೀಡಿದೆ. 2026ರ ಸಾಲಿನ ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಒಟ್ಟು 1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ (Job Guide). ಒಟ್ಟು ಹುದ್ದೆಗಳ ಪೈಕಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 588, ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ 234, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 144, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 144 ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 390 ಹುದ್ದೆಗಳನ್ನು ಮೀಸಲಿಡಲಾಗಿದೆ. ಜುಲೈ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
ಹುದ್ದೆಗಳ ಹೋಲಿಕೆ: ಕಳೆದ ವರ್ಷ vs ಈ ವರ್ಷ
ಕಳೆದ ವರ್ಷ (2025ರಲ್ಲಿ) ಎಸ್‌ಬಿಐ ಕೇವಲ 541 ಪಿಒ ಹುದ್ದೆಗಳಿಗೆ ಮಾತ್ರ ಅಧಿಸೂಚನೆ ಹೊರಡಿಸಿತ್ತು. ಆದರೆ ಈ ಬಾರಿ ಹುದ್ದೆಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಒಟ್ಟು 1,500 ಹುದ್ದೆಗಳಿಗೆ (1446 ರೆಗ್ಯುಲರ್ + 54 ಬ್ಯಾಕ್‌ಲಾಗ್) ನೇಮಕಾತಿ ನಡೆಯುತ್ತಿದೆ. ಇದು ಅಭ್ಯರ್ಥಿಗಳಿಗೆ ಸಿಕ್ಕಿರುವ ಸುವರ್ಣಾವಕಾಶ.
ಮುಂಬೈಯಂತಹ ಮೆಟ್ರೋ ಸಿಟಿಯಲ್ಲಿ ಸಂಬಳ ಎಷ್ಟು?
ಎಸ್‌ಬಿಐ ಪಿಒ ಹುದ್ದೆಯ ಆಕರ್ಷಣೆಯೇ ಅದರ ಸಂಬಳ ಮತ್ತು ಸವಲತ್ತುಗಳು. 2026ರ ಹೊಸ ಅಧಿಸೂಚನೆಯಂತೆ ಆರಂಭಿಕ ಮೂಲ ವೇತನವನ್ನು (Basic Pay) ₹56,480ಕ್ಕೆ ಹೆಚ್ಚಿಸಲಾಗಿದೆ. ಮುಂಬೈಯಂತಹ ಪ್ರಮುಖ ಮೆಟ್ರೋ ನಗರಗಳಲ್ಲಿ ಪೋಸ್ಟಿಂಗ್ ಸಿಕ್ಕರೆ, ಅಲ್ಲಿನ ಲೀಸ್ಡ್ ವಸತಿ ಸೌಕರ್ಯ ಮತ್ತು ಇತರೆ ಭತ್ಯೆಗಳು (DA, CCA, HRA) ಸೇರಿ ವಾರ್ಷಿಕ ಸಿಟಿಸಿ (CTC) ಅಂದಾಜು ₹21.97 ಲಕ್ಷ ಆಗಲಿದೆ (ಕಳೆದ ವರ್ಷ ಇದು ₹20.43 ಲಕ್ಷ ಇತ್ತು). ಅಂದರೆ ಮಾಸಿಕ ಒಟ್ಟು ಗಳಿಕೆ ಸುಮಾರು ₹1.83 ಲಕ್ಷ ದಾಟಲಿದ್ದು, ಎಲ್ಲ ಕಡಿತಗಳ ನಂತರ ಕೈಗೆ ಸಿಗುವ ಇನ್-ಹ್ಯಾಂಡ್ ಸಂಬಳವೇ ₹84,000ದಿಂದ ₹86,000 ಇರಲಿದೆ.
ಪರೀಕ್ಷಾ ಮಾದರಿ ಮತ್ತು ಬದಲಾವಣೆಗಳು
ಈ ಬಾರಿಯ ಅಧಿಸೂಚನೆಯಲ್ಲಿ ಮುಖ್ಯವಾಗಿ ಡಿಸ್ಕ್ರಿಪ್ಟಿವ್ ಟೆಸ್ಟ್ (Descriptive Test) ಮಾದರಿಯಲ್ಲಿ ಬದಲಾವಣೆಗಳನ್ನು ತರಲಾಗಿದ್ದು, ಇಮೇಲ್ ರೈಟಿಂಗ್ (Email Writing) ಮತ್ತು ಪ್ರಬಂಧ ರಚನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.ಅಂಕಗಳನ್ನು 50 ರಿಂದ 30 ಕ್ಕೆ ಇಳಿಸಲಾಗಿದೆ. ಜೊತೆಗೆ ಆಧಾರ್ ವೆರಿಫಿಕೇಶನ್ ಕಡ್ಡಾಯಗೊಳಿಸಲಾಗಿದೆ. ಸಾಮಾನ್ಯ (UR/EWS) ಅಭ್ಯರ್ಥಿಗಳಿಗೆ ಗರಿಷ್ಠ ಪ್ರಯತ್ನಗಳ ಸಂಖ್ಯೆಯನ್ನು 4 ರಿಂದ 6 ಕ್ಕೆ ಹಾಗೂ OBC ಅಭ್ಯರ್ಥಿಗಳಿಗೆ 7 ರಿಂದ 9ಕ್ಕೆ ನಿಗದಿಪಡಿಸಲಾಗಿದೆ (SC/ST ಗೆ ಯಾವುದೇ ಮಿತಿಯಿಲ್ಲ). 2026ರಲ್ಲಿ Mainsನಲ್ಲಿ appearance ಆದಾಗ ಮಾತ್ರ attempt count.
ಬಳ್ಳಾರಿ ಡಿಸಿಸಿ ಬ್ಯಾಂಕ್‌ನಲ್ಲಿ 82 ಹುದ್ದೆಗಳ ಭರ್ತಿ
ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷಾ ಸಮಯ
ಪ್ರಿಲಿಮಿನರಿ ಪರೀಕ್ಷೆ (ಒಟ್ಟು 1 ಗಂಟೆ - 100 ಅಂಕಗಳು)
- ಇಂಗ್ಲಿಷ್ ಭಾಷೆ: 40 ಪ್ರಶ್ನೆಗಳು, 20 ನಿಮಿಷ
- ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್: 30 ಪ್ರಶ್ನೆಗಳು, 20 ನಿಮಿಷ
- ರೀಸನಿಂಗ್ ಎಬಿಲಿಟಿ: 30 ಪ್ರಶ್ನೆಗಳು, 20 ನಿಮಿಷ
(ಗಮನಿಸಿ: ಪ್ರಿಲಿಮ್ಸ್‌ನಲ್ಲಿ ಯಾವುದೇ ಸೆಕ್ಷನಲ್ ಕಟ್-ಆಫ್ ಇರುವುದಿಲ್ಲ.ಇದು ನಿಮಗೆ ಅನುಕೂಲ. ಕಾರಣ ಸಹಜವಾಗಿ ಇಂಗ್ಲಿಷ್‌ನಲ್ಲಿ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಸಹಾಯಕ).
ಮೇನ್ಸ್ ಪರೀಕ್ಷೆ (ಒಟ್ಟು 3 ಗಂಟೆ 30 ನಿಮಿಷ - 230 ಅಂಕಗಳು)
- ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್: 40 ಪ್ರಶ್ನೆಗಳು, 50 ನಿಮಿಷ, 60 ಅಂಕಗಳು
- ಡೇಟಾ ಅನಾಲಿಸಿಸ್ ಮತ್ತು ಇಂಟರ್‌ಪ್ರಿಟೇಷನ್: 30 ಪ್ರಶ್ನೆಗಳು, 45 ನಿಮಿಷ,60 ಅಂಕಗಳು.
- ಜನರಲ್/ಎಕಾನಮಿ/ಬ್ಯಾಂಕಿಂಗ್ ಅವೇರ್ನೆಸ್: 60 ಪ್ರಶ್ನೆಗಳು, 45 ನಿಮಿಷ,60 ಅಂಕಗಳು.
- ಇಂಗ್ಲಿಷ್ ಭಾಷೆ (ಅಬ್ಜೆಕ್ಟಿವ್): 40 ಪ್ರಶ್ನೆಗಳು, 40 ನಿಮಿಷ,20 ಅಂಕಗಳು.
- ಇಂಗ್ಲಿಷ್ ಡಿಸ್ಕ್ರಿಪ್ಟಿವ್ ಟೆಸ್ಟ್ (Letter/Email & Essay): 3 ಪ್ರಶ್ನೆಗಳು,30 ಅಂಕಗಳು, 30 ನಿಮಿಷ
(ಗಮನಿಸಿ: ಮೆನ್ಸ್ ನಲ್ಲಿ ಸೆಕ್ಷನಲ್ ಕಟ್-ಆಫ್ ಇದೆ).
ಕೊನೆಯಲ್ಲಿ ಗುಂಪು ಚರ್ಚೆಗೆ(20) ಹಾಗೂ ಸಂದರ್ಶನಕ್ಕೆ (30) ಅಂಕಗಳನ್ನು ನಿಗದಿಪಡಿಸಲಾಗಿದೆ.
ನಿರೀಕ್ಷಿತ ಕಟ್-ಆಫ್ ಮತ್ತು ಇತರ ವಿವರಗಳು
ಕಳೆದ ಬಾರಿ ಸಾಮಾನ್ಯ (General) ಕೆಟಗರಿಯ ಪ್ರಿಲಿಮ್ಸ್ ಕಟ್-ಆಫ್ 61.75 ಆಗಿತ್ತು (OBC: 60.50, SC: 55.00, ST: 49.00). ಈ ಬಾರಿ ಹುದ್ದೆಗಳ ಸಂಖ್ಯೆ (1500) ಹೆಚ್ಚಿರುವುದರಿಂದ ಕಟ್-ಆಫ್ ಅಂಕಗಳು ಕಠಿಣತೆ ಹಾಗೂ ಸ್ಪರ್ಧೆಯ ಆಧಾರದ ಮೇಲೆ 58 ರಿಂದ 63ರ ಆಸುಪಾಸಿನಲ್ಲಿ ಇರುವ ಸಾಧ್ಯತೆಯಿದೆ.
ನೆನಪಿರಲಿ: ತಪ್ಪು ಉತ್ತರಗಳಿಗೆ 1/4 ರಷ್ಟು ನೆಗೆಟಿವ್ ಅಂಕಗಳಿರುತ್ತವೆ. ಮೂರನೇ ಹಂತದಲ್ಲಿ ಸೈಕೋಮೆಟ್ರಿಕ್ ಟೆಸ್ಟ್, ಗ್ರೂಪ್ ಎಕ್ಸಸೈಸ್ ಮತ್ತು ಸಂದರ್ಶನ ನಡೆಯಲಿದೆ.
ಪಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಿಳಿದುಕೊಳ್ಳಬೇಕಾದ ಇನ್ನುಳಿದ ಪ್ರಮುಖ ತಾಂತ್ರಿಕ ವಿವರಗಳು ಮತ್ತು ಅರ್ಹತೆಯ ಮಾನದಂಡಗಳು ಇಲ್ಲಿವೆ:
ಶೈಕ್ಷಣಿಕ ಅರ್ಹತೆ
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು.
- ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ: ಸದ್ಯ ಪದವಿಯ ಕೊನೆಯ ವರ್ಷ ಅಥವಾ ಸೆಮಿಸ್ಟರ್‌ನಲ್ಲಿರುವ ಅಭ್ಯರ್ಥಿಗಳೂ ಸಹ ಪ್ರೊವಿಜನಲ್ ಆಗಿ ಅರ್ಜಿ ಸಲ್ಲಿಸಬಹುದು. ಆದರೆ, ಸಂದರ್ಶನಕ್ಕೆ ಆಯ್ಕೆಯಾದರೆ 30 ಸೆಪ್ಟೆಂಬರ್ 2026 ರ ಒಳಗಾಗಿ ಪದವಿ ಪೂರ್ಣಗೊಳಿಸಿರುವ ಅಧಿಕೃತ ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯ.
ವಯೋಮಿತಿ-1 ಏಪ್ರಿಲ್ 2026ಕ್ಕೆ ಅನ್ವಯಿಸುವಂತೆ
- ಕನಿಷ್ಠ ವಯಸ್ಸು: 21 ವರ್ಷ-ಗರಿಷ್ಠ ವಯಸ್ಸು: 30 ವರ್ಷ.
- ಅಭ್ಯರ್ಥಿಗಳು 02.04.1996ಕ್ಕಿಂತ ಮುಂಚೆ ಮತ್ತು 01.04.2005ಕ್ಕಿಂತ ತಡವಾಗಿ ಜನಿಸಿರಬಾರದು.
ವಯೋಮಿತಿ ಸಡಿಲಿಕೆ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ (NCL) ಅಭ್ಯರ್ಥಿಗಳಿಗೆ 3 ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ
- ಸಾಮಾನ್ಯ (General), ಒಬಿಸಿ (OBC) ಮತ್ತು ಇಡಬ್ಲ್ಯುಎಸ್ (EWS) ಅಭ್ಯರ್ಥಿಗಳಿಗೆ: ₹750
- ಎಸ್‌ಸಿ (SC), ಎಸ್‌ಟಿ (ST) ಮತ್ತು ವಿಶೇಷಚೇತನ (PwBD) ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ (Nil).
ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು
ಪೂರ್ವಭಾವಿ ಪರೀಕ್ಷೆ ಬೆಳಗಾವಿ, ಬೆಂಗಳೂರು, ಧಾರವಾಡ/ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಮುಖ್ಯ ಪರೀಕ್ಷೆಗೆ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ/ಧಾರವಾಡದಲ್ಲಿ ನಡೆಯಲಿದೆ.
ಪರೀಕ್ಷಾ ಪೂರ್ವ ತರಬೇತಿ
ಪರಿಶಿಷ್ಟ ಜಾತಿ/ಪಂಗಡ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಬ್ಯಾಂಕ್ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಗೆ ನಿಗದಿ ಪಡಿಸಿದ ಕೇಂದ್ರಗಳಲ್ಲೇ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯಲಿಚ್ಚಿಸುವವರು ಆನ್‌ಲೈನ್ ಮೂಲಕ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆ ನಡೆಯುವ ಮೊದಲೇ ಜುಲೈನಲ್ಲಿ ಈ ತರಬೇತಿ ನೀಡಲಾಗುತ್ತದೆ ಎಂದು ಎಸ್‌ಬಿಐ ಪ್ರಕಟಿಸಿದೆ.
ಸೇವಾ ಬಾಂಡ್ ಮತ್ತು ತರಬೇತಿ
- ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ಪ್ರೊಬೇಷನರಿ ಅವಧಿಯನ್ನು ಪೂರೈಸಬೇಕಾಗುತ್ತದೆ
- ನೇಮಕಾತಿ ಸಮಯದಲ್ಲಿ ಬ್ಯಾಂಕಿನೊಂದಿಗೆ ₹2 ಲಕ್ಷ ಮೊತ್ತದ ಸೇವಾ ಬಾಂಡ್ ಸಹಿ ಮಾಡಬೇಕಾಗುತ್ತದೆ. ಕನಿಷ್ಠ 3 ವರ್ಷಗಳ ಅವಧಿಗಿಂತ ಮುಂಚಿತವಾಗಿ ಕೆಲಸ ಬಿಟ್ಟರೆ ಈ ಮೊತ್ತವನ್ನು ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.
ಬರೋಬ್ಬರಿ 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಬೇಕಾಗುವ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆ ತಪ್ಪಿಸಲು ಈ ಕೆಳಗಿನವುಗಳನ್ನು ಮೊದಲೇ ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ:
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿ (ಕಪ್ಪು ಶಾಯಿಯಲ್ಲಿ).
- ಎಡಗೈ ಹೆಬ್ಬೆರಳಿನ ಗುರುತು.
- ಹ್ಯಾಂಡ್-ರಿಟನ್ ಡಿಕ್ಲರೇಷನ್: ಬಿಳಿ ಹಾಳೆಯ ಮೇಲೆ ಅಭ್ಯರ್ಥಿಯೇ ಸ್ವತಃ ಇಂಗ್ಲಿಷ್‌ನಲ್ಲಿ ನಿಗದಿತ ಪ್ರತಿಯನ್ನು ಬರೆದು ಸ್ಕ್ಯಾನ್ ಮಾಡಬೇಕು.
ಅರ್ಜಿ ಸಲ್ಲಿಸಲು ವೆಬ್‌ಸೈಟ್: www.sbi.bank.in
ಪರೀಕ್ಷಾ ದಿನಾಂಕಗಳು: ಪ್ರಿಲಿಮ್ಸ್ - 2026ರ ಆಗಸ್ಟ್, ಮೇನ್ಸ್ - 2026ರ ಸೆಪ್ಟೆಂಬರ್.
ಇನ್ನಷ್ಟು ಉದ್ಯೋಗದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.