ವೈಎಸ್ ಎಸ್ / ಎಸ್ ಆರ್ ಎಫ್ ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥ ಸ್ವಾಮಿ ಶ್ರೀ ಶ್ರೀ ಚಿದಾನಂದ ಗಿರಿಯವರಿಂದ ಸ್ಪೂರ್ತಿದಾಯಕ ಪ್ರವಚನ
ನಾವು ಈಗ ಮಾನವನ ವಿಕಸನದ ಏರುಗತಿಯಲ್ಲಿದ್ದೇವೆ. ಯುವ ಪೀಳಿಗೆಯು ಈ ಪ್ರಪಂಚವನ್ನು ಉನ್ನತ ಮಟ್ಟದ ಪ್ರಜ್ಞೆಯ ಕಾಲದೆಡೆಗೆ ಕರೆದೊಯ್ಯುತ್ತದೆ. ಕ್ರಿಯಾ ಯೋಗದಂತಹ ಪುರಾತನ ವಿಜ್ಞಾ ನಗಳು ಈ ಪರಿವರ್ತನಾ ಯುಗದಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸುತ್ತವೆ" ಎಂದು ಸ್ವಾಮೀಜಿ ಹೇಳಿದರು
ಅರಮನೆ ಮೈದಾನದಲ್ಲಿ 2000ಕ್ಕಿಂತಲೂ ಅಧಿಕ ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ ವೈಎಸ್ ಎಸ್ / ಎಸ್ ಆರ್ ಎಫ್ ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥ ಶ್ರೀ ಶ್ರೀ ಚಿದಾನಂದ ಗಿರಿಯವರು ಕ್ರಿಯಾ ಯೋಗವು ಮಾನವನ ವಿಕಸನಕ್ಕೆ ಒಂದು ಪರಿಣಾಮಕಾರಿ ವೈಜ್ಞಾನಿಕ ವಿಜ್ಞಾನ ವಾಗಿದೆ ಎಂಬುದರ ಬಗ್ಗೆ ಒಂದು ಸ್ಪೂರ್ತಿದಾಯಕ ಪ್ರವಚನ ನೀಡಿದರು.
ಅತ್ಯಧಿಕವಾಗಿ ಮಾರಾಟವಾಗುತ್ತಿರುವ ಮೇರುಕೃತಿ 'ಯೋಗಿಯ ಆತ್ಮಕಥೆಯ' ಲೇಖಕರಾದ, ಜಗದ್ವಿಖ್ಯಾತ ಗುರುಗಳಾದ ಶ್ರೀ ಪರಮಹಂಸ ಯೋಗಾನಂದರ ಕಾರ್ಯಗಳ ಅಂತರ್ ದೃಷ್ಟಿಯನ್ನು ಸ್ವಾಮೀಜಿ ಸಭಿಕರೊಡನೆ ಹಂಚಿಕೊಂಡರು. ಪಶ್ಚಿಮದಲ್ಲಿ 'ಯೋಗ ಪಿತಾಮಹ' ಎಂದು ಪ್ರಖ್ಯಾತ ರಾದ ಯೋಗಾನಂದರು ತಮ್ಮ ಈ ಮೂಲ ಕಾರ್ಯದ ಮೂಲಕ ಲಕ್ಷಾಂತರ ಅನ್ವೇಷಕ ರನ್ನು ಭಾರತದ ಈ ಪುರಾತನ ವಿಜ್ಞಾನಕ್ಕೆ ಪರಿಚಯಿಸಿದರು.
ಇದನ್ನೂ ಓದಿ: Ganesh Bhatta Column: ರಥಸಪ್ತಮಿ: ಸೂರ್ಯನ ಮಹತ್ವವನ್ನು ಸಾರುವ ಪರ್ವ
"ನಾವು ಈಗ ಮಾನವನ ವಿಕಸನದ ಏರುಗತಿಯಲ್ಲಿದ್ದೇವೆ. ಯುವ ಪೀಳಿಗೆಯು ಈ ಪ್ರಪಂಚವನ್ನು ಉನ್ನತ ಮಟ್ಟದ ಪ್ರಜ್ಞೆಯ ಕಾಲದೆಡೆಗೆ ಕರೆದೊಯ್ಯುತ್ತದೆ. ಕ್ರಿಯಾ ಯೋಗದಂತಹ ಪುರಾತನ ವಿಜ್ಞಾನಗಳು ಈ ಪರಿವರ್ತನಾ ಯುಗದಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸುತ್ತವೆ" ಎಂದು ಸ್ವಾಮೀಜಿ ಹೇಳಿದರು. ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗಕ್ಕಾಗಿ ಹಿಮಾಲಯದ ಅಮರ ಗುರುಗಳಾದ ಮಹಾವತಾರ್ ಬಾಬಾಜಿ ಕ್ರಿಯಾ ಯೋಗವನ್ನು ಮತ್ತೆ ಹೇಗೆ ಬಳಕೆಗೆ ತಂದರು ಎಂಬುದನ್ನು ಸ್ವಾಮೀಜಿ ವಿವರಿಸಿದರು.
"'ಕ್ರಿಯಾ ಯೋಗ'ವು ಧರ್ಮ ಮತ್ತು ಜಾತಿಯ ಬೇಧಭಾವವಿಲ್ಲದೆ ಎಲ್ಲ ಮನುಷ್ಯರೂ ಅಭ್ಯಾಸ ಮಾಡಬಹುದಾದ ಖಚಿತ ವಿಜ್ಞಾನವಾಗಿದೆ. ಮನುಷ್ಯನಲ್ಲಿ ಅಂತರ್ನಿಹಿತವಾಗಿರುವ ದಿವ್ಯ ಆಂತ ರಿಕ ಮೂಲದೊಡನೆ ನೇರ ಸಂಪರ್ಕವನ್ನೇರ್ಪಡಿಸುತ್ತಾ, ಕ್ರಿಯಾ ಯೋಗವು ಮೇಲ್ ಸ್ತರದ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ ಮತ್ತು ಆಂತರಿಕ ಶಾಂತಿಯ ಮೂಲವಾಗುತ್ತದೆ ಮತ್ತು ಎಲ್ಲ ಮಾನವೀಯ ಕಷ್ಟಗಳಿಗೆ ವಿಷಹಾರಿಯಾಗುತ್ತದೆ" ಎಂದು ಸ್ವಾಮೀಜಿ ನುಡಿದರು.
ಶ್ರೀ ಶ್ರೀ ಪರಮಹಂಸ ಯೋಗಾನಂದರ ಬೋಧನೆಗಳು ಹಾಗೂ ಅವರ ಸಂಸ್ಥೆಯ ಬಗ್ಗೆ ಒತ್ತು ನೀಡುತ್ತಾ ಸ್ವಾಮೀಜಿ, "ಕ್ರಿಯಾ ಯೋಗವು ಎಲ್ಲ ರಾಷ್ಟ್ರಗಳಲ್ಲೂ ಪ್ರಸರಿಸುತ್ತದೆ ಮತ್ತು ಜಗತ್ತಿನ ಬದಲಾವಣೆಗೆ ಸಹಾಯ ಮಾಡುತ್ತದೆ" ಎಂದು ಹೇಳಿದರು.