ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟ್ರಾಫಿಕ್ ಕಿರಿಕಿರಿ ನಡುವೆ ಮನ ತಣಿಸುವ ಸೌಂದರ್ಯದ ಗಣಿ: ಹೂ ರಾಶಿಗೆ ಮನಸೋತ ಬೆಂಗಳೂರಿಗರು

Viral News: ಬೆಂಗಳೂರಿನ ಸೌಂದರ್ಯ ಬಗ್ಗೆ ಯುವತಿಯೊಬ್ಬರು ಪೋಸ್ಟ್ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನಗರದಾದ್ಯಂತ ಮೋಡ ವಾತಾವರಣ, ಲಘುವಾದ ಸೂರ್ಯನ ಬಿಸಿಲು ಮತ್ತು ರಸ್ತೆಯ ಪಕ್ಕದಲ್ಲಿ ಅರಳಿ ನಿಂತಿರುವ ಗುಲಾಬಿ ಬಣ್ಣದ ಹೂವುಗಳು ನಿಜವಾಗಿಯೂ ಸ್ವರ್ಗ ಎಂದು ಅವರು ಬರೆದುಕೊಂಡಿದ್ದಾರೆ.‌

ಸಿಲಿಕಾನ್ ಸಿಟಿಯಲ್ಲಿ ಕಣ್ಮನ ಸೆಳೆವ ದೃಶ್ಯ: ರಸ್ತೆ ಮಧ್ಯೆ ಅರಳಿದ ಹೂ

ಸಿಲಿಕಾನ್ ಸಿಟಿಯ ಕಣ್ಮನ ಸೆಳೆದ ದೃಶ್ಯ -

Profile
Pushpa Kumari Mar 3, 2026 8:00 AM

ಬೆಂಗಳೂರು, ಮಾ. 3: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಇಲ್ಲಿನ ಟ್ರಾಫಿಕ್ ಸಮಸ್ಯೆಯೊಂದು ಬಿಟ್ಟರೆ ಇಲ್ಲಿನ ವಾತಾವರಣವನ್ನು ಅನೇಕರು ಇಷ್ಟ ಪಡುತ್ತಾರೆ. ಐಟಿ ಕಂಪನಿಗಳು, ಕೆಫೆಗಳು, ಆಕರ್ಷಣೆಯ ಸ್ಥಳಗಳು ಇಲ್ಲಿ ಗಮನ ಸೆಳೆಯುತ್ತವೆ. ಇದೀಗ ಬೆಂಗಳೂರಿನ ಸೌಂದರ್ಯದ ಬಗ್ಗೆ ಯುವತಿಯೊಬ್ಬರು ಪೋಸ್ಟ್ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನಗರದಾದ್ಯಂತ ಮೋಡ ವಾತಾವರಣ, ಲಘುವಾದ ಸೂರ್ಯನ ಬಿಸಿಲು ಮತ್ತು ರಸ್ತೆಯ ಪಕ್ಕದಲ್ಲಿ ಅರಳಿ ನಿಂತಿರುವ ಗುಲಾಬಿ ಬಣ್ಣದ ಹೂವುಗಳು ನಿಜವಾಗಿಯೂ ಸ್ವರ್ಗ ಎಂದು ಅವರು ಬರೆದುಕೊಂಡಿದ್ದಾರೆ.‌

ಬೆಂಗಳೂರು ಎಂದಾಗ ಹೆಚ್ಚಿನವರು ಟ್ರಾಫಿಕ್ ಬಗ್ಗೆಯೇ ಮಾತನಾಡುತ್ತಾರೆ‌.‌ ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಪೋಸ್ಟ್ ಬೆಂಗಳೂರಿನ ಅದ್ಬುತ ಸೌಂದರ್ಯವನ್ನು ಪರಿಚಯಿಸಿದೆ. ಯುವತಿ ನಗರದ ಸೌಂದರ್ಯ ಬಣ್ಣಿಸುವ ಮೂರು ಛಾಯಾ ಚಿತ್ರಗಳನ್ನು ಹಂಚಿ ಕೊಂಡಿದ್ದಾರೆ. ಚಿತ್ರಗಳು ಸ್ಪಷ್ಟ ನೀಲಿ ಆಕಾಶ, ಗುಲಾಬಿ ಹೂವುಗಳು, ಸೌಮ್ಯವಾದ ಬಿಸಿಲು ಮತ್ತು ಬೀದಿಗಳಲ್ಲಿ ಕಂಡು ಬಂದ ರೋಮಾಂಚಕ ಹಸಿರು ಬಣ್ಣವನ್ನು ತೋರಿಸಿವೆ.

ವೈರಲ್‌ ಪೋಸ್ಟ್‌ ಇಲ್ಲಿದೆ:

ಬೆಂಗಳೂರಿಗೆ ಹೊಸದಾಗಿ ಬಂದಿರುವ ಆಂಚಲ್ ಎನ್ನುವ ಯುವತಿ ನಗರದ ಸೌಂದರ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ʼʼನಾನು ಇಲ್ಲಿ ಭೇಟಿ ನೀಡಿದಾಗ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಅನೇಕರು ಹೇಳಿದ್ದಾರೆ‌. ಆದರೆ ನಾನು ಇಲ್ಲಿಗೆ ಬಂದ ವಾರದ ಮೊದಲೇ ನಗರವು ಈ ರೀತಿ ಬದಲಾಗುತ್ತದೆ ಎಂದು ಯಾರೂ ಹೇಳಿರಲಿಲ್ಲʼʼ ಹೇಳಿದ್ದಾರೆ.

ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!

ನಗರದಾದ್ಯಂತ ಹರಡಿರುವ ನೀಲಿ ಆಕಾಶ, ಮೃದುವಾದ ಸೂರ್ಯನ ಬಿಸಿಲು ಮತ್ತು ರಸ್ತೆಗಳ ಇಕ್ಕೆಲಗಳಲ್ಲಿ ಅರಳಿ ನಿಂತಿರುವ ಗುಲಾಬಿ ಬಣ್ಣದ ಹೂವುಗಳು ಆಕರ್ಷಕವಾಗಿದೆ. ಪ್ರತಿ ವರ್ಷ ಯುಗಾದಿಗೆ ಮುಂಚಿತವಾಗಿ ಸಾವಿರಾರು ಗುಲಾಬಿ ಟ್ರಂಪೆಟ್ ಮರಗಳಲ್ಲಿ ಹೀವು ಇಲ್ಲಿ ಅರಳುತ್ತವೆ. ಇದು ಇಲ್ಲಿನ ನಗರವನ್ನು ಗುಲಾಬಿ ಭೂದೃಶ್ಯವನ್ನಾಗಿ ಪರಿವರ್ತಿಸುತ್ತವೆ.

ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು ಅನೇಕ ಬಳಕೆದಾರರು ಬೆಂಗಳೂರಿನ ಟ್ರಾಫಿಕ್ ತುಂಬಾ ಕಿರಿಕಿರಿ ಎನಿಸಿಕೊಂಡರಲೂ ಹವಾಮಾನವು ಹಿತವಾಗಿರುತ್ತದೆ ಎಂದು ಒಪ್ಪಿಕೊಂಡಿದ್ದಾರೆ. ಒಬ್ಬರು ಇದು ನಿಜವಾದ ಬೆಂಗಳೂರಿನ ಸೌಂದರ್ಯ ಎಂದು ಕಮೆಂಟ್ ಮಾಡಿದ್ದಾರೆ.