ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಮತ್ತೊಂದು ಶಾಕ್‌; ನಂದಿನಿ ತುಪ್ಪ, ಬೆಣ್ಣೆ ಬೆಲೆ ಹೆಚ್ಚಳ: ನಾಳೆಯಿಂದಲೇ ಜಾರಿ

Nandini Ghee Price: ಕರ್ನಾಟಕ ಹಾಲು ಮಹಾಮಂಡಳವು ದಿಢೀರ್ ಆಗಿ ನಂದಿನಿ ತುಪ್ಪ ಮತ್ತು ಬೆಣ್ಣೆ ದರ ಹೆಚ್ಚಿಸಿದೆ. ಒಂದು ಕೆ.ಜಿ. ತುಪ್ಪಕ್ಕೆ 15 ರುಪಾಯಿ ಏರಿಕೆಯಾಗಿದ್ದರೆ, ಕೆ.ಜಿ. ಬೆಣ್ಣೆ ಬರೋಬ್ಬರಿ 50 ರುಪಾಯಿ ದುಬಾರಿಯಾಗಿದೆ. ಹೊಸ ದರ ಶುಕ್ರವಾರವೇ (ಜುಲೈ 24) ಜಾರಿ ಬರಲಿದೆ .

ಸಾಂದರ್ಭಿಕ ಚಿತ್ರ

ಬೆಂಗಳೂರು, ಜು. 23: ಈಗಾಗಲೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಕರ್ನಾಟಕ ಹಾಲು ಮಹಾಮಂಡಳವು (KMF) ಮತ್ತೊಂದು ಆಘಾತ ನೀಡಿದೆ. ದಿಢೀರ್ ಆಗಿ ನಂದಿನಿ ತುಪ್ಪ ಮತ್ತು ಬೆಣ್ಣೆ ದರ ಹೆಚ್ಚಿಸಿದೆ (Nandini Ghee Price). ಒಂದು ಕೆ.ಜಿ. ತುಪ್ಪಕ್ಕೆ 15 ರುಪಾಯಿ ಏರಿಕೆಯಾಗಿದ್ದರೆ, ಕೆ.ಜಿ. ಬೆಣ್ಣೆ ಬರೋಬ್ಬರಿ 50 ರುಪಾಯಿ ದುಬಾರಿಯಾಗಿದೆ. ಹೊಸ ದರ ಶುಕ್ರವಾರವೇ (ಜುಲೈ 24) ಜಾರಿ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ತುಪ್ಪದ ಬೆಲೆ ಇಳಿಸುವ ಮೂಲಕ ಸಿಹಿ ಸುದ್ದಿ ನೀಡಿದ್ದ ಕೆಎಂಎಫ್‌ ಇದೀಗ ದರ ಏರಿಕೆಯ ಬರೆ ಎಳೆದಿದೆ. ಈ ಬಗ್ಗೆ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ಹೊಸ ದರ ಜಾರಿಗೆ ಬಂದ ಬಳಿಕ 1 ಕೆ.ಜಿ. ತುಪ್ಪ 700 ರುಪಾಯಿಯಿಂದ 715 ರುಪಾಯಿಗೆ ಹೆಚ್ಚಳವಾಗಲಿದೆ. 610 ರೂಪಾಯಿ ಇದ್ದ 1 ಕೆ.ಜಿ. ಬೆಣ್ಣೆ ದರ ಇನ್ನುಮುಂದೆ 660 ರುಪಾಯಿಗೆ ಮಾರಾಟವಾಗಲಿದೆ. ಈ ಪರಿಷ್ಕೃತ ದರ ಜುಲೈ 24ರಿಂದಲೇ ಅನ್ವಯವಾಗಲಿದೆ. ಬೆಲೆ ಏರಿಕೆ ಹೋಟೆಲ್‌, ಬೇಕರಿ ಖಾದ್ಯ, ಸಿಹಿ ತಿನಿಸುಗಳ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಲೆ ಇಳಿಕೆ ಮಾಡಿದ್ದ ಕೆಎಂಎಫ್‌

ಕೇಂದ್ರ ಸರ್ಕಾರ ಜಿಎಸ್‌ಟಿ (GST) ಕಡಿತಗೊಳಿಸಿದ ಬೆನ್ನಲ್ಲೇ ಕೆಎಂಎಫ್ 2025ರ ಸೆಪ್ಟೆಂಬರ್ 22ರಂದು ನಂದಿನಿ ಹಾಲಿನ ಕೆಲವು ಉತ್ಪನ್ನಗಳ ದರ ಇಳಿಕೆ ಮಾಡಿತ್ತು. ಹಾಲು ಮತ್ತು ಮೊಸರು ಹೊರತುಪಡಿಸಿ ತುಪ್ಪ, ಬೆಣ್ಣೆ, ಪನೀರ್‌, ಚೀಸ್‌ ಇತ್ಯಾದಿಗಳ ಬೆಲೆ ಇಳಿಸಿತ್ತು.

ತುಪ್ಪ, ಬೆಣ್ಣೆ ಬೆಲೆ ಇಳಿಕೆ ಹಿಂದೆಯೇ ನಂದಿನಿ ದೇಸಿ ಹಾಲಿನ ದರ ಏರಿಕೆ

1 ಕೆ.ಜಿ. ತುಪ್ಪದ ಬೆಲೆ 650 ರುಪಾಯಿಯಿಂದ 610 ರುಪಾಯಿಗೆ ಇಳಿಕೆಯಾಗಿತ್ತು. ಇನ್ನು ಅರ್ಧ ಕೆ.ಜಿ. ಬೆಣ್ಣೆ ಹಳೆಯ ದರ 306 ರುಪಾಯಿಯಿಂದ 286 ರುಪಾಯಿಗೆ ಕುಸಿದಿತ್ತು.1 ಕೆ.ಜಿ. ಪನೀರ್ 425 ರುಪಾಯಿಯಿಂದ 408 ರುಪಾಯಿಗೆ ಬಂದಿತ್ತು. 70 ರುಪಾಯಿ ಇದ್ದ 1 ಲೀಟರ್ ಗುಡ್ ಲೈಫ್ ಹಾಲಿನ ದರವನ್ನು 68 ರುಪಾಯಿಗೆ ಪರಿಷ್ಕರಿಸಲಾಗಿತ್ತು. ಚೀಸ್ 480 ರುಪಾಯಿಯಿಂದ 450 ರುಪಾಯಿಗೆ ಇಳಿದಿತ್ತು. ಜಿಎಸ್‌ಟಿ ಇಳಿಕೆ ಅನ್ವಯ ಒಂದಷ್ಟು ಉತ್ಪನ್ನಗಳ ದರ ಇಳಿಸಿದ್ದಾಗಿ ಕೆಎಂಎಫ್‌ ಹೇಳಿತ್ತು. ಆದರೆ ಅದಾದ ಬಳಿಕ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ನವೆಂಬರ್‌ನಲ್ಲಿ ದಿಢೀರ್ ದರ ಏರಿಕೆ ಮಾಡಿತ್ತು. ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್​ಗೆ 90 ರುಪಾಯಿ ಏರಿಸಲಾಗಿತ್ತು. ಆ ಮೂಲಕ 1 ಲೀಟರ್ ನಂದಿನಿ ತುಪ್ಪ 610 ರುಪಾಯಿಯಿಂದ 700 ರುಪಾಯಿಗೆ ಹೆಚ್ಚಾಗಿತ್ತು.

ಇನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕಾಏಕಿ ದೇಸಿ ಹಾಲಿನ ಬೆಲೆ ಏರಿಕೆಯಾಗಿತ್ತು. 1 ಲೀಟರ್​ ಹಾಲಿ​ಗೆ 40 ರುಪಾಯಿ ಏರಿಕೆ ಮಾಡಲಾಗಿತ್ತು. ಆ ಮೂಲಕ 1 ಲೀಟರ್​ ದೇಸಿ ಹಾಲು ಬೆಲೆ 120 ರುಪಾಯಿಗೆ ತಲುಪಿತ್ತು.

ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್; ನಂದಿನಿ ತುಪ್ಪದ ದರ ಪ್ರತಿ ಲೀಟರ್​ಗೆ 90 ರೂಪಾಯಿ ಏರಿಕೆ

image

ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ನಮ್ಮನ್ನು ಕೆಎಂಎಫ್‌ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆಯನ್ನು ಭಾರಿ ಹೆಚ್ಚಿಸಿದೆ. ಕೂಡಲೇ ಈ ನಿರ್ಧಾರವನ್ನು ಮರುಪರಿಶೀಲಿಸಿ ಬೆಲೆ ಏರಿಕೆ ಹಿಂಪಡೆಯಬೇಕು.

-ನಿಶಾಂತ್‌, ಗ್ರಾಹಕ, ಬೆಂಗಳೂರು

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author