ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೆಎಂಎಫ್‌ನಿಂದ ಗುಡ್‌ ನ್ಯೂಸ್‌; 10ರೂ. ಸಿಗುತ್ತೆ, ನಂದಿನಿ ಹಾಲು, ಮೊಸರು

ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (ಕೆಎಂಎಫ್) ರಾಜ್ಯದ ಸಾಮಾನ್ಯ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ್ದು, ಬೆಲೆ ಏರಿಕೆಯ ನಡುವೆ ಕಂಗಾಲಾಗಿದ್ದ ಸಾಮಾನ್ಯ ಜನರಿಗೆ ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಮೊಸರು ಇನ್ಮುಂದೆ ಕೇವಲ 10 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

ಕೆಎಂಎಫ್‌ನಿಂದ ಗುಡ್‌ ನ್ಯೂಸ್‌; 10ರೂ. ಸಿಗುತ್ತೆ, ನಂದಿನಿ ಹಾಲು, ಮೊಸರು

ಸಂಗ್ರಹ ಚಿತ್ರ -

Vishakha Bhat
Vishakha Bhat Jan 25, 2026 11:15 AM

ಬೆಂಗಳೂರು: ಹಾಲಿನ ದರದ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ (KMF Nandini) ಕೆಎಂಎಫ್ ಗುಡ್‌ನ್ಯೂಸ್ ನೀಡಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (ಕೆಎಂಎಫ್) ರಾಜ್ಯದ ಸಾಮಾನ್ಯ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ್ದು, ಬೆಲೆ ಏರಿಕೆಯ ನಡುವೆ ಕಂಗಾಲಾಗಿದ್ದ ಸಾಮಾನ್ಯ ಜನರಿಗೆ ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಮೊಸರು ಇನ್ಮುಂದೆ ಕೇವಲ 10 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಾಂಕೇತಿಕವಾಗಿ ಹಾಲಿನ ಸಣ್ಣ ಪ್ಯಾಕೆಟ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಈ ನೂತನ ಯೋಜನೆಯ ಮೂಲಕ ಕೆಎಂಎಫ್ ಗ್ರಾಹಕ ಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಕೆಎಂಎಫ್ ಹತ್ತು ರೂಪಾಯಿ ಬೆಲೆಗೆ ಕೇವಲ ಹಾಲು ಮಾರಾಟ ಮಾಡೋಕೆ ಮಾತ್ರ ಮುಂದಾಗಿದ್ದಲ್ಲ. ಇದರ ಜೊತೆಗೆ 10 ರೂಪಾಯಿಗೆ ಮೊಸರು ಕೂಡ ಗ್ರಾಹಕರಿಗೆ ಸಿಗಲಿದೆ. 160 ML ಪಾಕೆಟ್ ಹಾಲು 10 ರೂಪಾಯಿಗೆ ಲಭ್ಯವಾಗಲಿದ್ದು, ಜೊತೆಗೆ 140 ML ಪಾಕೆಟ್ ಮೊಸರು 10 ರೂಪಾಯಿಗೆ ಸಿಗಲಿದೆ. ಈ ಮೊದಲು 200 ML ಹಾಲಿನ ಪಾಕೆಟ್, ಮೊಸರು ಸಿಗ್ತಾ ಇತ್ತು, ಈಗ 160 ML, 140ML ಪಾಕೆಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಹಾಲು, ಮೊಸರಿನ ಪ್ಯಾಕೆಟ್‌ಗಳೊಂದಿಗೆ ಮಾವಿನ ಲಸ್ಸಿ, ಸ್ಟ್ರಾಬರಿ ಲಸ್ಸಿ ಕೂಡ ಗ್ರಾಹಕರಿಗೆ ಸಿಲಿದೆ. 15 ರೂಪಾಯಿಗೆ ಮಾವಿನ ಲಸ್ಸಿ, ಸ್ಟ್ರಾಬರಿ ಲಸ್ಸಿ ಲಭ್ಯವಾಗಲಿದ್ದು, ಶೀಘ್ರದಲ್ಲೇ ಎಲ್ಲಾ ನಂದಿನಿ ಮಳಿಗೆಗಳಿಗೆ ಹತ್ತು ರೂಪಾಯಿ ಹಾಲು, ಮೊಸರು ಸರಬರಾಜು ಆಗಲಿದೆ.

ಕೆಎಂಎಫ್‌ನ‌ ಹೊಸ ಉತ್ಪನ್ನಗಳಾದ ಗುಡ್ ಲೈಫ್ ತುಪ್ಪ, ಪನೀರ್, ಪ್ರೊ ಮಿಲ್ಕ್, ಪ್ರೋ ಬಯಟಿಕ್ ಮೊಸರು ಸೇರಿ ಇತರೆ ಆರೋಗ್ಯಪೂರ್ಣ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿ, ಶುಭ ಹಾರೈಸಿದೆ. ತನ್ನ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ನಂದಿನಿ‌ ಉತ್ಪನ್ನಗಳಿಗೆ ಇಂದು ದೇಶ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ.

ಸಂಕ್ರಾಂತಿ ಬಳಿಕ ಕಾದಿದೆ ಹಾಲಿನ ದರ ಏರಿಕೆ ಶಾಕ್‌; ಸುಳಿವು ಕೊಟ್ಟ ಕೆಎಂಎಫ್‌

ಗ್ರಾಹಕರ ಆರೋಗ್ಯವನ್ನು ಸಹ ಗಮನದಲ್ಲಿಟ್ಟುಕೊಂಡು ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಏಕೈಕ ಸಂಸ್ಥೆ ನಮ್ಮ‌ ನಾಡಿನ ಕೆಎಂಎಫ್ ( ನಂದಿನಿ ) ಎನ್ನಲು ನನಗೆ ಹೆಮ್ಮೆಯಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಶಾಸಕರಾದ‌ ನಂಜೇಗೌಡ, ಅಶೋಕ್‌ ಕುಮಾರ್ ರೈ ಸೇರಿ‌ ಹಲವು ಪ್ರಮುಖರು ಈ ಸಂದರ್ಭದಲ್ಲಿ‌ ಉಪಸ್ಥಿತರಿದ್ದರು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.