ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಅಪ್ಪು ಸ್ಪೋರ್ಟ್ಸ್ ಕ್ಲಬ್

ಸ್ಥಳೀಯ ಅಪ್ಪು ಸ್ಪೋರ್ಟ್ಸ್ ಕ್ಲಬ್ ಚಿಕ್ಕಬಳ್ಳಾಪುರ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಅಪ್ಪು ಸ್ಪೋರ್ಟ್ಸ್ ಕ್ಲಬ್ ಕಬಡ್ಡಿ ತಂಡದ ತರಬೇತುದಾರ ರಾಘವೇಂದ್ರ ಅವರು ಮಾತನಾಡುತ್ತಾ ಹತ್ತು ವರ್ಷಗಳ ನಂತರ ನಮ್ಮ ತಾಲೂಕಿನ ಕಬಡ್ಡಿ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಯಲ್ಲಿ ವಿಜೇತರಾಗುವ ಮೂಲಕ ತಾಲೂಕಿನ ಕ್ರೀಡಾ ಪ್ರೇಮಿಗಳಲ್ಲಿ ಹರ್ಷವನ್ನು ಉಂಟು ಮಾಡಿದ್ದಾರೆ.

ಕಬಡ್ಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಅಪ್ಪು ಸ್ಪೋರ್ಟ್ಸ್ ಕ್ಲಬ್

-

Ashok Nayak
Ashok Nayak Dec 20, 2025 2:15 AM

ಗೌರಿಬಿದನೂರು: ಸ್ಥಳೀಯ ಅಪ್ಪು ಸ್ಪೋರ್ಟ್ಸ್ ಕ್ಲಬ್ ಚಿಕ್ಕಬಳ್ಳಾಪುರ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ: Pro Kabaddi: ಟೈಟಾನ್ಸ್‌ಗೆ ಶರಣಾದ ಬುಲ್ಸ್​; 2ನೇ ಎಲಿಮಿನೇಟರ್‌ನಲ್ಲಿ ಪಾಟ್ನಾ ಸವಾಲು

ಅಪ್ಪು ಸ್ಪೋರ್ಟ್ಸ್ ಕ್ಲಬ್ ಕಬಡ್ಡಿ ತಂಡದ ತರಬೇತುದಾರ ರಾಘವೇಂದ್ರ ಅವರು ಮಾತನಾಡುತ್ತಾ ಹತ್ತು ವರ್ಷಗಳ ನಂತರ ನಮ್ಮ ತಾಲೂಕಿನ ಕಬಡ್ಡಿ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾಗುವ ಮೂಲಕ ತಾಲೂಕಿನ ಕ್ರೀಡಾ ಪ್ರೇಮಿಗಳಲ್ಲಿ ಹರ್ಷವನ್ನು ಉಂಟು ಮಾಡಿದ್ದಾರೆ.

ವಿಜೇತ ತಂಡದ ನಾಯಕ ಹೇಮಂತ್,ಆಟಗಾರರಾದ ಮಿಥುನ್ ,ಮುದಾಸೀರ್, ಪ್ರವೀಣ್, ಡ್ಯಾನೀಯಲ್, ನಿತಿನ್, ಯಶವಂತ್, ಚಂದು ಅವರುಗಳನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಅಪ್ಪು ಸ್ಪೋರ್ಟ್ಸ್ ಕ್ಲಬ್ ಕಬಡ್ಡಿ ತಂಡ ರಾಜ್ಯ ಮತ್ತು ರಾಷ್ಟ ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ತಾಲೂಕಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.