ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಯೋಗ ಗುರು ವಚನಾನಂದ ಶ್ರೀಗಳ ಸಹೋದರ ರಸ್ತೆ ಅಪಘಾತದಲ್ಲಿ ಸಾವು

Road Accident: ಅಶೋಕ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ನಾಯಿ ದಿಡೀರನೆ ಅಡ್ಡಬಂದ ಪರಿಣಾಮ ಘಟನೆ ಸಂಭವಿಸಿದೆ. ಬೈಕ್‌ ಪಲ್ಟಿಯಾಗಿ ಅಶೋಕ ಅವರು ರಸ್ತೆಗೆ ಚಿಮ್ಮಿಬಿದ್ದಿದ್ದು, ಮೃತಪಟ್ಟಿದ್ದಾರೆ. ಮೃತ ಅಶೋಕ ತಾಯಿ, ಮಡದಿ, ಮೂವರು ಹೆಣ್ಣುಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಯೋಗ ಗುರು ವಚನಾನಂದ ಶ್ರೀಗಳ ಸಹೋದರ ರಸ್ತೆ ಅಪಘಾತದಲ್ಲಿ ಸಾವು

ಮೃತ ಅಶೋಕ ಗೌರಗೊಂಡ

ಹರೀಶ್‌ ಕೇರ ಹರೀಶ್‌ ಕೇರ Jul 3, 2025 11:17 AM

ಬೆಳಗಾವಿ: ಹರಿಹರ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ಹಾಗೂ ಶ್ವಾಸಯೋಗ ಸಂಸ್ಥೆಯ ವಚನಾನಂದ ಶ್ರೀಗಳ (Vachanananda swamiji) ಪೂರ್ವಾಶ್ರಮದ ಸಹೋದರ ರಸ್ತೆ ಅಪಘಾತದಲ್ಲಿ (Road Accident) ಸಾವನ್ನಪ್ಪಿದ್ದಾರೆ. ಬೆಳಗಾವಿ (belagavi) ಜಿಲ್ಲೆ ಅಥಣಿ ತಾಲೂಕಿನ ತಾವಂಶಿ ಗ್ರಾಮದ ಅಶೋಕ ಗೌರಗೊಂಡ ಬುಧವಾರ ತಡರಾತ್ರಿ ತಾಲೂಕಿನ ಭರಮೋಕೋಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಅಶೋಕ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ನಾಯಿ ದಿಡೀರನೆ ಅಡ್ಡಬಂದ ಪರಿಣಾಮ ಘಟನೆ ಸಂಭವಿಸಿದೆ. ಬೈಕ್‌ ಪಲ್ಟಿಯಾಗಿ ಅಶೋಕ ಅವರು ರಸ್ತೆಗೆ ಚಿಮ್ಮಿಬಿದ್ದಿದ್ದು, ಮೃತಪಟ್ಟಿದ್ದಾರೆ. ಮೃತ ಅಶೋಕ ತಾಯಿ, ಮಡದಿ, ಮೂವರು ಹೆಣ್ಣುಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಅವರು ಸಾಮಾಜಿಕ ಕಳಕಳಿಯವರಾಗಿದ್ದು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ತಾವಂಶಿ ಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ.

ಕಾರು ಮರಕ್ಕೆ ಡಿಕ್ಕಿ, ಗರ್ಭಿಣಿ ರುಂಡ ಕತ್ತರಿಸಿ ಸಾವು

ಕೋಲಾರ : ಕೋಲಾರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಮರಕ್ಕೆ ಕಾರು ಡಿಕ್ಕಿಯಾಗಿ ಅದರಲ್ಲಿದ್ದ ಗರ್ಭಿಣಿಯ ರುಂಡ ಕತ್ತರಿಸಿಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೋಲಾರದ ಮಾಲೂರಿನಭಾವನಹಳ್ಳಿ ರಸ್ತೆಯ ಪುರ ಗೇಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗರ್ಭಿಣಿ ಅರ್ಚನಾ ಅವರನ್ನು ಅವರ ಮಾವ ನಾರಾಯಣಸ್ವಾಮಿ ಅವರ ಗ್ರಾಮ ಕೊರಚನೂರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಎದುರಿಗೆ ವೇಗವಾಗಿ ಬಂದ ಲಾರಿ ತಪ್ಪಿಸಲು ಹೋಗಿ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ.

ಪರಿಣಾಮ ಕಾರಿನಲ್ಲಿದ್ದ ಅರ್ಚನಾ ದೇಹದಿಂದ ರುಂಡ ಹಾಗೂ ಎಡಗೈ ಭಾಗ ಪ್ರತ್ಯೇಕವಾಗಿದೆ. ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Road Accident: ದೊಡ್ಡಬಳ್ಳಾಪುರದಲ್ಲಿ ಕಾರು ಅಪಘಾತ, ನಾಲ್ವರು ಸಾವು