Viral Video: ಬೈಕ್‍ನಲ್ಲಿದ್ದ ಚೀಲ ಎತ್ತಿಕೊಂಡ ಮಂಗ; 80,000 ರೂ. ಸುರಿದು ಕಪಿಚೇಷ್ಟೆ: ಸಿಕ್ಕವರಿಗೆ ಸೀರುಂಡೆ
Monkey Snatches Bag of Cash: ಕೋತಿಯ ಕಪಿಚೇಷ್ಟೆಯಿಂದ ವ್ಯಕ್ತಿಯೊಬ್ಬರು ತೊಂದರೆಗೊಳಗಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ದಾಖಲೆಗಳ ಜತೆ 80,000 ನಗದನ್ನು ಬೈಕ್‌ನಲ್ಲಿ ಚೀಲದಲ್ಲಿಟ್ಟಿದ್ದರು. ಇದನ್ನು ಕಸಿದುಕೊಂಡ ಕಪಿಯು ಮರದಲ್ಲಿ ಕುಳಿತು ಕೆಳಕ್ಕೆ ಎಸೆದಿದೆ.

-

ಲಖನೌ: ಕೋತಿಯೊಂದು ಬೈಕ್‌ನಿಂದ ಹಣ ತುಂಬಿದ ಚೀಲವನ್ನು ಹೊರತೆಗೆದು ಮರದ ಮೇಲೆ ಹತ್ತಿದೆ. ನಂತರ ಕೋತಿ ಹಣವನ್ನು ಕೆಳಗೆ ಎಸೆಯಲು ಪ್ರಾರಂಭಿಸಿತು. ಜನರು ಬಿಡುತ್ತಾರೆಯೇ? ಮುಗಿಬಿದ್ದು ಹಣವನ್ನು ಸಂಗ್ರಹಿಸಿದ್ದಾರೆ. ಉತ್ತರ ಪ್ರದೇಶದ (Uttar Pradesh) ಔರೈಯಾದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಮರದಿಂದ 500 ರೂ. ನೋಟುಗಳು ಬೀಳುತ್ತಿರುವುದನ್ನು ಮತ್ತು ಅದರ ಕೆಳಗೆ ಜನರು ಹಣವನ್ನು ಸಂಗ್ರಹಿಸುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ಮಂಗಳವಾರ (ಆಗಸ್ಟ್ 26) ಮಧ್ಯಾಹ್ನ ಬಿಧುನಾ ತಾಲೂಕು ಕಚೇರಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ದೋದಾಪುರ ಗ್ರಾಮದ ರೋಹಿತಾಶ್ ಚಂದ್ರ ಎಂಬ ಖಾಸಗಿ ಶಿಕ್ಷಕ ತನ್ನ ವಕೀಲರೊಂದಿಗೆ ತಾಲೂಕು ಕಚೇರಿಗೆ ನೋಂದಣಿ ಪೂರ್ಣಗೊಳಿಸಲು ಬಂದಿದ್ದರು. ಬೈಕ್‌ನ ಡಿಕ್ಕಿ ಒಳಗೆ ಒಂದು ಚೀಲದಲ್ಲಿ 80,000 ರೂ. ಇಡಲಾಗಿತ್ತು. ಈ ವೇಳೆ ಕೋತಿ ಚೀಲವನ್ನು ತೆಗೆದುಕೊಂಡು ಮರವನ್ನು ಹತ್ತಿದೆ.
ವಿಡಿಯೊ ವೀಕ್ಷಿಸಿ:
औरैया-तहसील परिसर में बंदर ले उड़ा किसान का बैग, पेड़ पर बैठकर बंदर ने कर दी नोटों की बारिश की
— भारत समाचार | Bharat Samachar (@bstvlive) August 26, 2025
बाइक की डिग्गी से बंदर ने निकाला था बैग, लोगों ने जमकर लूटे नोट, वीडियो हुआ वायरल, औरैया की बिधूना तहसील परिसर का मामला#Auraiya #Monkey #ViralVideo #ThiefMonkey #BikeBag #RuralNews… pic.twitter.com/d7hQeuOvTb
ಮರ ಹತ್ತಿದ ನಂತರ ಕೋತಿ ಚೀಲವನ್ನು ಪರಿಶೀಲಿಸಿದೆ. ಚೀಲದೊಳಗೆ ಯಾವುದೇ ಆಹಾರ ಸಿಗದಿದ್ದಾಗ, ಅದು ನೋಟುಗಳನ್ನು ಗಾಳಿಯಲ್ಲಿ ಎಸೆಯಲು ಪ್ರಾರಂಭಿಸಿತು. ಸ್ಥಳದಲ್ಲಿದ್ದ ಜನರು ಹಣವನ್ನು ದೋಚಲು ಧಾವಿಸಿದರು. ಇದರಿಂದ ಗೊಂದಲಕ್ಕೊಳಗಾದ ರೋಹಿತಾಶ್, ಹಣ ಹೆಕ್ಕಲು ಮುಂದಾದರು. ಈ ವೇಳೆ ಜನಸಮೂಹವೇ ಸ್ಥಳದಲ್ಲಿ ನೆರೆಯಿತು. 52,000 ರೂಪಾಯಿ ಮಾತ್ರ ಪಡೆಯಲು ಸಾಧ್ಯವಾಯಿತು. ಕೆಲವರು ಹಣ ನೀಡಿದರೆ, ಇನ್ನೂ ಕೆಲವರು ಹಣವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಕೆಲವು ಹರಿದುಹೋಗಿವೆ. ಹೀಗಾಗಿ 28,000 ರೂಪಾಯಿಯನ್ನು ಅವರು ಕಳೆದುಕೊಳ್ಳಬೇಕಾಯಿತು.
ಈ ಪ್ರದೇಶವು ಬಹಳ ಸಮಯದಿಂದ ಮಂಗಗಳ ಕಾಟವನ್ನು ಎದುರಿಸುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕಪಿಗಳು ಚೀಲಗಳು, ಕಾಗದಗಳು ಮತ್ತು ಪ್ರಮುಖ ದಾಖಲೆಗಳನ್ನು ಕಸಿದುಕೊಳ್ಳುತ್ತವೆ. ಅವು ಕೆಲವೊಮ್ಮೆ ದಾಖಲೆಗಳನ್ನು ಹಾನಿಗೊಳಿಸುತ್ತವೆ ಮತ್ತು ತಾಲೂಕು ಕಚೇರಿಗೆ ಭೇಟಿ ನೀಡುವ ಜನರಿಗೆ ತೊಂದರೆಯನ್ನುಂಟುಮಾಡುತ್ತವೆ ಎಂದಿದ್ದಾರೆ.
ಇದನ್ನೂ ಓದಿ: Assault: ನಾಯಿ ಕಾಣೆಯಾಗಿದ್ದಕ್ಕೆ ಕಾನ್‌ಸ್ಟೇಬಲ್ ಮೇಲೆ ಹಲ್ಲೆ