ಬೈಲಹೊಂಗಲ: ಸಮೀಪದ ಆನಿಗೋಳ ಗ್ರಾಮದಲ್ಲಿ ಮಾ ಭಾರತಿ ಸೇವಾ ಫೌಂಡೇಶನ್ (ರಿ) ಆನಿಗೋಳ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ(Former MLA Jagadish Metagudda) ರಕ್ತದಾನ ಮಾಡುವುದರಿಂದ ಪ್ರತಿಯೊಬ್ಬರು ಒಂದು ಜೀವಕ್ಕೆ ಆಸರೆಯಾದಂತೆ, ತಾವುಗಳು ರಕ್ತದಾನ ಮಾಡುತ್ತಿರುವುದು ಅವಿಸ್ಮರಣೀಯ. ತಾವು ಮಾಡುತ್ತಿರುವ ಈ ಮಹತ್ಕಾರ್ಯದಿಂದ ಈ ಭಾಗದ ಹಲವಾರು ರೋಗಿಗಳಿಗೆ, ಬಾಣಂತಿಯರಿಗೆ ವಿವಿಧ ತೆರನಾದ ಚಿಕಿತ್ಸೆಗಳಿಗೆ ಉಚಿತವಾಗಿ ರಕ್ತ ದೊರೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಜೊತೆಗೆ ಮಾ ಭಾರತಿ ಸೇವಾ ಪೌಂಡೇಶನ್ ಅಧ್ಯಕ್ಷ ಸುನೀಲ ಮರಕುಂಬಿ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ, ಸಸಿ ನೆಡುವ ಕಾರ್ಯಗಳನ್ನು ಜೊತೆಗೆ, ಈ ಸಂಸ್ಥೆಯು ಎಲ್ಲ ರೀತಿಯಿಂದಲೂ ಸಮಾಜ ಪೂರಕ ಚಟುವಟಿಕೆಗಳಲ್ಲಿ ಸೇವೆ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಇದನ್ನೂ ಓದಿ: Bailahongala News: ನರೇಂದ್ರ ಮೋದಿಜಿ ಹುಟ್ಟುಹಬ್ಬದ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಸುನೀಲ ಮರಕುಂಬಿ ಈಗಿನ ಪರಿಸ್ಥಿತಿಯಲ್ಲಿ ರಕ್ತದ ಅಭಾವ ಸಾಕಷ್ಟು ಇರುವುದರಿಂದ ಇದನ್ನು ಮನಗಂಡು ಜೊತೆಗೆ ಶೈಕ್ಷಣಿಕ ವಾಗಿ ಸಹಕಾರ ಮಾಡುವ ಹಾಗೂ ಪರಿಸರ ಕಾಳಜಿ ಉದ್ದೇಶವನ್ನು ಇಟ್ಟುಕೊಂಡು ನಮ್ಮ ಬಳಗ ಇಂತಹ ಸಮಾಜ ಮುಖಿ ಕಾರ್ಯಗಳನ್ನು ಕಳೆದ 13 ವರ್ಷಗಳಿಂದ ಮಾಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.
ಅಟಲ್ ಜೀ ಅವರ 101ನೇ ಜನ್ಮ ದಿನೋತ್ಸವಕ್ಕೆ 101ಜನ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಉದ್ಯಮಿ ವಿಜಯ ಮೆಟಗುಡ್ಡ. ಪುರಸಭೆ ಸದಸ್ಯ ಗುರು ಮೆಟಗುಡ್ಡ, ಬಿಜೆಪಿ ಮಂಡಲ ಅಧ್ಯಕ್ಷ ಸುಭಾಷ ತುರಮರಿ, ಗುರುಪಾದ ಕಳ್ಳಿ, ನಾಗೇಶ ಫಕ್ಕಿರನ್ನವರ, ಸಂತೋಷ ಹಡಪದ, ಮಂಜು ಮಳಗಿ , ನಾಗೇಶ ಮರಕುಂಬಿ, ರಮೇಶ ಯರಗಟ್ಟಿ, ಶಿವಾನಂದ ಬಡ್ಡಿಮನಿ, ಶಂಕರ ಚೌಡನ್ನವರ, ನಾಗಪ್ಪ ತೋಟಗಿ, ಲಕ್ಕಪ್ಪ ಕಾರಗಿ, ಬಸವರಾಜ ನಂಜನ್ನವರ, ಶ್ರೀಶೈಲ ಗಡೆಪ್ಪನವರ, ಆತ್ಮಾನಂದ ಅಬ್ಬಾಯಿ, ವಿಠ್ಠಲ ಬಡಿಗೇರ, ಅಮಿತ ಹೊಸಮನಿ, ಪ್ರಮೋದ ಪೂಜೇರ, ಮಡಿವಾಳಪ್ಪ ಧೂಳಪ್ಪನವರ, ಅಮೃತ ಹೊಸಮನಿ, ಕೆ ಎಲ್ ಇ ಸಂಸ್ಥೆಯ ರಕ್ತ ಭಂಡಾರದ ವೈದ್ಯರು, ಸಿಬ್ಬಂದಿ, ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಮುಖಂಡರು ಕಾರ್ಯಕರ್ತರು ಆನಿಗೋಳ ಗ್ರಾಮಸ್ಥರು ವಿವಿಧ ಹಳ್ಳಿಗಳಿಂದ ರಕ್ತದಾನಿಗಳು, ಹಾಗೂ ಹಲವಾರು ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.